ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಿಂಗಮ್ಮ ಭಾವಿಕಟ್ಟಿ

ತನಗಗಳು

೧
ಈ ಹೂಗಳ ರಫ್ತಿಗೆ
ನೆದರ್ಲ್ಯಾಂಡ್ಸ್ ಮೊದಲು
ವಿಶ್ವ ನಕಾಶೆಯಲ್ಲಿ
ಭಾರತ ಹದಿನಾಲ್ಕು

೨
ಪ್ರೇಮದ ಈ ಭಾಷೆಗೆ
ಹೂವ ರಾಯಭಾರತ್ವ
ಕೊಲಂಬಿಯಾ ಗೆ ಗೊತ್ತು
ಹೂ ಮನದ ಮಹತ್ವ

೩
ನಾಲ್ಕು ಸಾವಿರಕ್ಕಿಂತ
ಹೆಚ್ಚು ಪ್ರಭೇದ ಉಂಟು
ಆರ್ಕಿಡ್ ಹೂವಿನಿಂದ
ದೇಶ ದೇಶದ ನಂಟು

೪
ಭಾರತೀಯ ಸಂಸ್ಕೃತಿ
ಪ್ರತಿಬಿಂಬವೇ ಸೀರೆ
ಅದೆಷ್ಟೇ ಒಟ್ಟಿದ್ದರೂ
ಬೇಡವೆಂದಾಳೆ ನೀರೆ

೫
ತಮಿಳುನಾಡಿನ ತಾಣ
‘ವೇದಾರಣ್ಯಂ’ ಪಟ್ಟಣ
ಉಪ್ಪು ತಯಾರಿಕೆಗೆ
ಹೆಸರುವಾಸಿಯಂತೆ

೬
ಮೊದಲ ಸತ್ಯಾಗ್ರಹಿ
ಕೈಕೇಯಿ ಮಹಾರಾಣಿ
ಸಮಯ ಸಾಧಕರೇ
ಜಾಣ ರಾಜಕಾರಣಿ


About The Author

Leave a Reply

You cannot copy content of this page

Scroll to Top