ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡೋ.ನಾ.ವೆಂಕಟೇಶ

ಬಾಗಿಲುಗಳ ಬಯಲು

ಇಲ್ಲಿ ನನ್ನೂರಲ್ಲಿ
ಬಾಗಿಲುಗಳಿಗೆ ಕೊಂಡಿಯೇ ಇಲ್ಲ
ತೆರೆದಾಗ ಬಯಲು
ಮುಚ್ಚಿದ್ದಾಗ ರಹಸ್ಯ ಬಯಲು

ಅಲ್ಲಿ ಈ ಊರಲ್ಲಿ
ಬಾಗಿಲ ಕಣ್ಣಲ್ಲಿ ಕಣ್ಣಿಟ್ಟು
ಕಚ್ಚಿದಾಗಷ್ಟೆ ತೆರೆವ ಬಾಗಿಲು

ಕಿಸೆಯಿಂದ ತೆರೆದ ಕಾರ್ಡು
ಹಾಕಿ ತಕ್ಷಣ ತಿರುಗಾಡಿಸಿದಾಗಷ್ಟೆ
ಮೈ ತಳೆವ ಬಾಗಿಲು

ಮುಚ್ಚಿದ್ದ ಬಾಗಿಲೊಳಗೆ
ಮಾಡಿದ್ದ ಗರ್ಭ
ಮುಗಿವಷ್ಟರಲ್ಲೆ ತೆರೆದ
ಬಾಗಿಲು!!

ಹೀಗೇ-
ಮೊನ್ನೆ ಕೋಣಾರ್ಕಕ್ಕೆ
ಹೋದಾಗ ಕೀಲಿ ಕೈ ಕಳೆದು ಅಲ್ಲಿ
ದಿನವೆಲ್ಲ ಶಿಲಾ ಕನ್ನಿಕೆಯರ ಸಹವಾಸ
ರಾತ್ರಿಯ ನೀಲಿ ಬೆಳಕಿನಲ್ಲಿ
ವನವಾಸ

ಬಾಗಿಲು ಮತ್ತದರ ಸ್ಥಿತಿ
ಮುಚ್ಚಿದ್ದು ತೆರೆದಿದ್ದು ತಿಳಿಯದ ಗತಿ
ತ್ರಿಶಂಕು
ತ್ರಿಭಂಗ !!


About The Author

14 thoughts on “ಡಾ ಡೋ.ನಾ.ವೆಂಕಟೇಶ ಕವಿತೆ-ಬಾಗಿಲುಗಳ ಬಯಲು”

  1. Dr K B SuryaKumar

    ಕೊಣಾರ್ಕದ ದೇವಾಲಯದ ಬಾಗಿಲನ್ನು, ಮುಚ್ಚಿದರೆ ಕಣ್ಣಿಗೆ ಕಾಣುವ ಪ್ರಪಂಚವೇ ಬೇರೆ … ಕೀಲಿ ಕೈ ಕಳೆದರೆ, ಭ್ರಮಾ ಲೋಕದಲ್ಲಿ ತೆಲ ಬಹುದು
    ಮತ್ತೊಂದು ಉತ್ತಮ ಕವನ

  2. D N Venkatesha Rao

    ಧನ್ಯವಾದಗಳು ಸೂರ್ಯ .ಒಂಥರಾ surreal ಅಂತ ನನಗೆ ಅನಿಸಿದ್ದು

    Thanks Surya

  3. ವೆಂಕಣ್ಣಾ ,”ಬಾಗಿಲುಗಳ ಬಯಲು” ಕವಿತೆ ಬಹಳ
    ಸುಂದರವಾಗಿದೆ.

    1. D N Venkatesha Rao

      ಧನ್ಯವಾದಗಳು ಮಂಜಣ್ಣ
      ನನಗೆ ಗೊತ್ತು ನಿಮ್ಮೆಲ್ಲರ ಪ್ರಶಂಸೆ ಅಭಿಮಾನ ಅನನ್ಯ ಅಂತ!

Leave a Reply

You cannot copy content of this page

Scroll to Top