ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

ಒಟ್ಟಾರೆ ಕವಿತೆ

ಕವಿತೆಯಲಿ ಪದ ಅವಿತಿತೋ
ಪದಗಳಲಿ ಕವಿತೆ ಸಿಲುಕಿತೋ
ಒಟ್ಟಾರೆ ಕವಿತೆಯಾಯಿತು

ಭಾವದಲಿ ಹರಿಯಿತೋ
ವಿಭಾವದಲಿ ಸಂಚರಿಸಿತೋ
ಕವಿತೆ ನೆಲೆಯಾಯಿತು

ವೇದನೆ ಹೊರಹಾಕಿತೋ
ಸಂವೇದನೆಯು ಜೊತೆಗೂಡಿತೋ
ಒಟ್ಟಾರೆ ಪದ ವೇದ್ಯವಾಯಿತು

ಅಲಂಕಾರದಲಿ ಶೃಂಗರಿಸಿತೋ
ಛಂದಸ್ಸಿನಲಿ ಲಯಗೊಂಡಿತೋ
ಒಟ್ಟಾರೆ ಪದ್ಯವಾಯಿತೋ

ವ್ಯಾಕರಣದಲಿ ಹೊಳೆಯೊತೋ
ಲಹರಿಯಲಿ ತೇಲಿಹೋಯಿತೋ
ಒಟ್ಟಾರೆ ಕವಿತೆ ಹೃದ್ಯವಾಯಿತು

ಅನುಭವ ಭಾವವಾಗಿ
ಅನುಭಾವ ಗಾನವಾಗಿ
ಸತ್ಯ ಶಿವ ಸುಂದರತೆಯ
ಸಾಕಾರವಾಯಿತೊ
ಒಟ್ಟಾರೆ
ಆಶಯಗಳ ಕವಿತೆಯಾಯಿತೊ
ಕವಿತೆ
ವಾಸ್ತವದ ಕನ್ನಡಿಯಾಯಿತು..!!

———————————-

ಅನಸೂಯ ಜಹಗೀರದಾರ

About The Author

1 thought on “ಅನಸೂಯ ಜಹಗೀರದಾರ ಕವಿತೆ-ಒಟ್ಟಾರೆ ಕವಿತೆ”

Leave a Reply

You cannot copy content of this page

Scroll to Top