ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ರಾಧಿಕಾ ವಿ ಗುಜ್ಜರ್

ಸಿನೆಮಾ ಸುತ್ತ

ಕತ್ತಲಲ್ಲೇ ನಡೆದು ಪ್ರವೇಶಿಸಬೇಕು
ಬೆಳ್ಳಿಪರದೆಯ ಮಾಯಾಲೋಕಕೆ
ಗಾಂಧಿ ಸೀಟೋ, ಬಾಲ್ಕನಿಯೋ
ಕಾಸಿಗೆ ತಕ್ಕ ಕಜ್ಜಾಯ ಬೆನ್ನಿಗೆ

ಮೂಲೆಯ ಆಸನವದೋ ಪ್ರೇಮಿಗಳು
ಪಾತರಗಿತ್ತಿಯರ ಹಿಂದೆ ಪಡ್ಡೆಗಳು
ಮುಂದಿನ ಆಸನಕೆ ಕಾಲು ಚಾಚಿದವರು
ಮೊಬೈಲಲ್ಲಿ ಮಗ್ನನಿಲ್ಲೊಬ್ಬ ಪರದೆಯೆದುರು !!

ಕಾಣುವುದು ಕೇಳುವುದೆಲ್ಲವೊಂದೆ
ಮತ್ತೇಕೆ ಕೇಕೆ, ಸಿಳ್ಳೆ, ಚಪ್ಪಾಳೆ
ನೋಡು, ಕೇಳು, ವಸ್ತು ಅರ್ಥೈಸಿಕೊ
ನಿಶ್ಶಬ್ದ ಕುಳಿತರಷ್ಟೇ ಏಕಾಗ್ರತೆ

ಕಥಾ ವಿಹಾರ ಗುಣಗ್ರಾಹಿಗಳಿಗೆ
ಮಾತ್ರ ಮನೋರಂಜನೆ ಹೆಚ್ಚಿನವರಿಗೆ
ಲೋಪ-ದೋಷವರಸೋ ಜಾಣರೊಂದೆಡೆ
ಕೇವಲ ಕಾಲಹರಣದ ಸಾಮಾನ್ಯರೊಂದೆಡೆ

ಸಿಗರೇಟ್ ಹಚ್ಚಿ ಹೊಗೆಯುಗುಳಿ
ಪಾಪ್ಕಾರ್ನ್ ಕುರುಕಲು ಚಿಪ್ಸ್ ಕುರುಕಿ
ಕಾಫಿ ಟೀ ಬಾಟಲಿಗಳ ಜೂಸು
ಎರಡು ಗಂಟೆಗೆ ಹತ್ತಾರು ಸರಕು

ಹತ್ತಿಪ್ಪತ್ತೀ ರೀಲುಗಳಲ್ಲಡಗಿದೆ
ಎ, ಯು, ಕ್ಲಾಸ್, ಮಾಸ್ ಪಟ್ಟಿ
ಪರದೆಯ ನೆರಳು-ಬೆಳಕು ಮೋಡಿಗೆ
ಸಮ್ಮೋಹಿತರಾಗಿ ತಾವೇ ಪಾತ್ರಧಾರಿ

ನಾಟ್ಯ, ಸಾಹಿತ್ಯ, ಸಂಭಾಷಣೆ, ಸಂಗೀತ
ಪ್ರಸಾಧನ, ವಿನ್ಯಾಸ, ನಿರ್ದೇಶನ, ನಿರ್ಮಾಣ
ತಾಂತ್ರಿಕತೆ, ಪ್ರಚಾರ, ಗಲ್ಲಾಪೆಟ್ಟಿಗೆ ಎಣಿಕೆ
ಪರದೆಯ ಹಿಂದಿದೆ ಭೂರಿ ಉದ್ದಿಮೆ

ಕಟೌಟಿಟ್ಟು ಅಭಿಮಾನಿಗಳ ಕದರು
ಅಭಿಮಾನ ಒಬ್ಬರಿಗಾಯ್ತೆ ಸೀಮಿತವು !!
ಕಲಾ ಕೃಷಿಯಿದು ಮೇರು ಗೌರವವು
ಸಾವಿರಾರು ಕೈಗಳೆಳೆದ ಯಶಸ್ಸಿನ ತೇರು

ಬದುಕು ಹೀಗೆಯೇ ಒಂದು ಚಲನಚಿತ್ರ
ನಮಗಿರುವುದು ರಂಗದಾಯ್ಕೆ ಮಾತ್ರ
ಪರದೆಯ ಹಿಂದೆ ಕೈಕೆಸರಾಗಿಸಿ ದುಡಿಮೆ
ಮುಂದೆ ಥಳುಕಿನಬ್ಬರದ ನಟನೆ, ವೀಕ್ಷಣೆ


About The Author

10 thoughts on “ರಾಧಿಕಾ ವಿ ಗುಜ್ಜರ್ ಕವಿತೆ-ಸಿನೆಮಾ ಸುತ್ತ”

    1. ರಾಧಿಕಾ ವಿ ಗುಜ್ಜರ್

      ತಮ್ಮ ಪ್ರೋತ್ಸಾಹಕ್ಕೆ ಶರಣು

  1. ರಘುರಾಂ

    ‘..ನಮಗಿರುವುದು ರಂಗದಾಯ್ಕೆ ಮಾತ್ರ..’
    ತುಂಬ ಚೆನ್ನಾಗಿದೆ.

  2. ಸಿನಿಮಾ ನೋಡಿ ಬಹಳ ಕಾಲವಾಗಿದೆ. ಇಂದು ನಿಮ್ಮ ಕವನ ಸಿನಿಮಾ ಥಿಯೇಟರ್ ಗೆ ಕರೆದುಕೊಂಡು ಹೋಯಿತು. ಅಭಿನಂದನೆಗಳು
    ರವೀಂದ್ರನಾಥ

  3. ರಾಜನ್

    ತುಂಬಾ ಸುಂದರ‌ ಕವಿತೆ. ಚಿಕ್ಕ ವಯಸ್ಸಿನಲ್ಲಿ ಹೋಗುತ್ತಿದ್ದ ಸಿನಿಮಾಗಳ ನೆನಪು ಮರುಕಳಿಸಿತು.
    ರಾಜನ್

  4. Saraswathi Nataraj

    ಇಡೀ ಸಿನಿಮಾ ನಿರ್ಮಾಣ, ಪ್ರದರ್ಶನದ ವೀಕ್ಷಕರು ಮನೋಭಾವ ದ ವಿವರ ಅಡಕವಾದ ಕವನ.‌ ಚೆನ್ನಾಗಿದೆ.

    1. ರಾಧಿಕಾ ವಿ ಗುಜ್ಜರ್

      ಪ್ರೋತ್ಸಾಹಕ್ಕೆ ಧನ್ಯವಾದಗಳು ಗೆಳತಿ

Leave a Reply

You cannot copy content of this page

Scroll to Top