ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಕ್ಷತಾ ಜಗದೀಶ

ಭಾವಲಹರಿ

ತೇಲುವ ನಾವೆ ನಿಲ್ಲದಿರು ನೀನು
ಅಗಾಧ ಕಡಲಿನ‌ ಮೇಲೆ
ಸಾಗುತಿರಲಿ ಪಯಣ
ಸಪ್ತಸಾಗರದಾಚೆ…
ಅಪರಿಮಿತ ಪ್ರೇಮದ ಕಡಲಿನಿಚೆ…

ಭಾವ ತರಂಗದ ಅಲೆಗಳಿಗೆ ಇಂದೆಕೋ
ಮೌನದ ಬೇಲಿಯೇ ಬಿಸಣಿಕೆ ಮಾಡಿದೆ ಮನವೇಕೋ….
ಸಾಗುವ ನೌಕೆಯೇ ನಿಲ್ಲದಿರು
ಏಕಾಂತ ಧ್ಯಾನದಲಿ..
ಅವಿಸ್ಮರಣೀಯವಾಗಿ ಕಾಡಿದೆ
ನೆನಪುಗಳ‌ ಹೆಜ್ಜೆಗುರುತು
ಸಾಗುವ ದೋಣಿಗೆ
ದಡ ತಡೆಹಿಡಿದ ಹಾಗೆ….

ಸೈರಣೆಗೆ ಹೊಂಚು ಹಾಕಿದ ಮಿಂಚು
ಸೌರಭವ ಪಸರಿಸುವುದೇ
ಸಂಜೆ ಮಲ್ಲಿಗೆ‌ಕಂಪು…
ಬಯಕೆಯ ದಡವದು
ಕಾದಾಡುತಿದೆ ನಾವೆಯೊಡನೆ
ಎಳೆದಾಟ….
ಸ್ತಬ್ಧವಾಗದಿರಲಿ ನರ್ತಿಸುವ
ಕಡಲ ಗೆಜ್ಜೆ ಸದ್ದಿನ ಕಳೆ….
ಸುವರ್ಣ ಕನಸುಗಳಿಗೆ
ತಂಪೆರಗಲಿ ಮುಸ್ಸಂಜೆ
ಸೋನೆಮಳೆ….

ಬಿಸಿ ಗಾಳಿಯು ತಂಪೆರಗುವುದು
ನೆಮ್ಮದಿಯ ಹೊರೆ
ಹಡಗು ತುಂಬಿರಲು…
ಸಾಗಲಿ ಸಾರ್ಥಕ ಭಾವದಲಿ
ಚಲಿಸುವ ಬಾಳ ನೌಕೆ
ಸುಖ ದುಃಖ ದ ಅಲೆಗಳ ಮೇಲೆ
ಕಡಲ ದಡದ‌ ಜೊತೆಗೆ
ಆನಂದದ ಭಾವಲಹರಿ‌ಯಾಗಿ……


About The Author

Leave a Reply

You cannot copy content of this page

Scroll to Top