ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯುಗಾದಿ ವಿಶೇಷ

ಮಂಜುಳಾ ಪ್ರಸಾದ್

ಕೂಡಿ ಆಡಿ

ಯುಗದ ಆದಿ ಯುಗಾದಿಯು
ಮರಳಿ ಮರಳಿ ಬಂದಿದೆ
ಮಾವು ಚಿಗುರು ಹಚ್ಚ ಹಸಿರು
ಕಣ್ಮನವ ತುಂಬಿದೆ.

ಮುಗಿಲೇರಿದೆ ಹರ್ಷವು
ಮಾತಾಗಿದೆ ಮೌನವು,
ನಳನಳಿಸಿದೆ ನಿಸರ್ಗವು
ಭುವಿಯಾಗಿದೆ ಸ್ವರ್ಗವು,

ಗಿಡಮರದಿ ಕನಸು ಚಿಗುರಿ
ಭಾವವರಳಿ ಮರಳಿದೆ.
ಹಾಡು ಹಕ್ಕಿ ರೆಕ್ಕೆ ಪುಕ್ಕ
ಬಿಚ್ಚಿ ಹಾರಿ ಕುಣಿದಿದೆ.

ತುಂಬಿ ತುಳುಕೋ ಚೆಂದಕೆ
ತುಂಬು ಮನವು ಸೋತಿದೆ,
ಯುಗಾದಿಯ ಸಂಭ್ರಮವು
ಅರಳಿ ಮರಳಿ ಚಿಗುರಿದೆ.

ಏನು ಚೆಂದ ಎಂಥ ಅಂದ
ಪ್ರಕೃತಿಯ ಸೊಬಗಿದು,
ಈ ಸೊಬಗನು ನೋಡಲದುವೆ
ಕಣ್ಗಳೆರಡು ಸಾಲದು.

ವರುಷದಲ್ಲಿ ಬರುವುದೊಮ್ಮೆ
ಹೊಸತನವ ತರುವುದು
ಹರುಷ ಚಿಮ್ಮಿ ಹೊಮ್ಮಲೊಮ್ಮೆ
ಹಲವು ಚಿಂತೆ ಮರೆವುದು.

ಉದುರಿದೆಲೆಯ ಬೋಳು ಮರದಿ
ಕ್ಷಣದಿ ಚಿಗುರು ಮೂಡುತಿರಲು
ಬತ್ತಿ ಹೋದ ಬಾಳಿನಲ್ಲೂ
ಜೀವಸೆಲೆಯು ಹೊಮ್ಮಲಿ


About The Author

5 thoughts on “”

Leave a Reply

You cannot copy content of this page

Scroll to Top