ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಹಿಳೆ

ಪಲ್ಲವಿ ಪ್ರಸನ್ನ.

ಇಳೆಯಂತೆ ಸಹನೆಯನು ತಳೆಯುವಳು ಮಹಿಳೆ
ಬಳುವಳಿಯು ಬದುಕಿನಲಿ ಸಿರಿಯಂತೆ ಇವಳು
ಒಳಿತನ್ನೆ ಬಯಸುವಳು ಜೀವನದ ರಥದಲ್ಲಿ
ಗಳಗಳನೆ ಅಳುತಲಿ ನೋವನ್ನು ಮರೆಯುವಳು

ಮಿತಿಯನರಿಯುತ ಬದುಕಿನಲಿ ಹಿತವಾಗಿ ಬೆರೆತು
ಅತಿಯೆನಿಸೊ ಅಕ್ಕರೆಯ ಸುರಿವವಳು ಮಹಿಳೆ
ಸತಿಯಾಗಿ ಜೊತೆಯಲ್ಲಿ ಸಹಗೀತ ಸ್ವರದಂತೆ
ಗತಕಾಲ ನೆನಪುಗಳ ಕರೆಸುವಳು ಮುದದಲ್ಲಿ

ಬೀರಿದ ಹೂವಿನ ಮೇಲೆ ಸುರಿದ ಗಂಧವು ಹೆಣ್ಣು
ತೆರೆಯ ಹಿಂದಿನ ನೋವ ಮರೆಸುವ ಕಣ್ಣು
ಕರುಣೆಯಲಿ ಕರಪಿಡಿದು ಸುರಿಸುವಳು ಮಮತೆಯನು
ಅರಿಯುತಲಿ ಎಲ್ಲರೊಳು ಬೆರೆಯುವಳು ವರವಾಗಿ

ಕಾಳಜಿಯ ನೋಟದಲಿ ಕಷ್ಟಗಳ ಕಳೆವವಳು
ತಾಳುತಲಿ ಗೆಲ್ಲುವಳು ಅನುರಾಗ ಸುಧೆಯೊಲವ
ಆಳಂತೆ ದುಡಿದರು ಅರಸಿ ಮನೆ ಮನದಲ್ಲಿ
ಕೀಳಾಗಿ ಕಾಣದಿರಿ ಬಾಳಿನಲಿ ಬಲ ಇವಳು

ಭಾವನೆಯ ಭರಣಿಯಲಿ ಸಂಯಮವೇ ತಿನಿಸು
ಬೇವಿನಲಿ ಸಿಹಿಯನ್ನು ತುಂಬಿಸುವ ಮನಸು
ಸಾವನ್ನೇ ಗೆಲ್ಲುವ ಸಿರಿಮೊಗದ ರೂಪವು
ಸವಿ ಮಾತು ಜೊತೆಯಿರಲು ಭವಿತವ್ಯ ನನಸು

ಮಗುವಾಗಿ ತಾಯಾಗಿ ಅಕ್ಕನಾ ತೆರದಿ
ನಗು ನಗುತ ಬಳುಕುವಳು ತೆನೆಯೊಳಗಿನಾ ರೀತಿ
ಸಿಗಲಾರದಿ ಬಂಧ ಮುಗಿಲೆಲ್ಲ ಹುಡುಕಿದರೂ
ಮಿಗಿಲಿಹುದು ವಾತ್ಸಲ್ಯ ಸಂಯಮದ ಕವಿತೆ


ಪಲ್ಲವಿ ಪ್ರಸನ್ನ.

About The Author

2 thoughts on “ಮಹಿಳಾ ದಿನದ ವಿಶೇಷ”

Leave a Reply

You cannot copy content of this page

Scroll to Top