ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಅವಳೊಂದು

ಹಗಲಲೂ ಮಿನುಗುವ ತಾರೆ;
ಹೃದಯವ ಕದಿಯುವ ನೀರೆ!!

ಅವಳೊಂದು,
ಪ್ರೀತಿಯ ಹರಿಸುವ ಕಡಲು;
ಕಾರುಣ್ಯವ ಸುರಿಸುವ ಮುಗಿಲು!!

ಅವಳೊಂದು,
ಕಷ್ಟಗಳ ದಹಿಸುವ ಉರುವಲು;
ಖುಷಿಯನು ಬಡಿಸುವ ಮಹಲು!!

ಅವಳೊಂದು,
ಬೆವರಲಿ ಬೇಯುವ ಕಲ್ಲಿದ್ದಿಲು;
ಹಸಿವಲು ನಗುವ ಹೊನಲು!!

ಅವಳೊಂದು,
ತಾಳ್ಮೆಯ ಕಲಿಸುವ ಗುರು;
ತಪ್ಪಿಗೂ ಶಿಕ್ಷಿಸುವ ಸದ್ಗುರು!!

ಅವಳೊಂದು,
ದಬ್ಬಾಳಿಕೆಯ ಎದುರಿಸುವ ಜ್ವಾಲೆ;
ಕ್ಷಮಿಸುವ ಕರುಣೆಯ ಮಾಲೆ!!

ಅವಳೊಂದು,
ಜಗವನು ಸೃಷ್ಟಿಸುವ ತಾಯೆ;
ಮನುಕುಲವ ಕಾಯುವ ಮಾಯೆ!!

———–

About The Author

1 thought on “ಕಾಡಜ್ಜಿ ಮಂಜುನಾಥ ಕವಿತೆ-ಅವಳೊಂದು”

Leave a Reply

You cannot copy content of this page

Scroll to Top