ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಧಾ ಪಾಟೀಲ

ಜೀವನ ಚಕ್ರ

ಜೀವನಚಕ್ರವಿದು
ಸಂಘರ್ಷದ ಹಾದಿಯೊ
ಅರ್ಥಗರ್ಭಿಥವಾದ ಪಯಣವೊ
ಪರಿಜ್ಞಾನವುಳ್ಳ ಬಾಳುವೆಯೊ
ಪರಿಪಕ್ವವಾದ ತಿರುಳೊ

ಜೀವನ ಚಕ್ರವಿದು
ಪರಿಣಿತಿವುಳ್ಳ ಚಲನಶೀಲತೆಯೊ
ಸಂಭ್ರಮಿಸುವ ಸಮಾಗಮವೊ
ವಿಜಯೋತ್ಸವದ ರಣದುಂದುಭಿಯೊ
ಒಂದೂ ಅರಿಯೆ ನಾನು

ಜೀವನ ಚಕ್ರವಿದು
ಅಪರಿಚಿತ ಗಮ್ಯವೊ
ನಲುಮೆಯ ತಾಣವೊ
ಚೇತೋಹಾರಿ ವಿಹಾರವೊ
ನಿಸರ್ಗದತ್ತ ವರವೊ

ಜೀವನ ಚಕ್ರವಿದು
ಸರಿಗಮಪದದ ನಿನಾದವೊ
ಕೌತುಕದ ಸನ್ನಿವೇಶವೊ
ದೇವರು ಕೊಟ್ಟ ದೇಣಿಗೆಯೊ
ಪ್ರಶ್ನೆಗಳು ಪುಟಿದೇಳುತ್ತಿವೆ ಮನದಲ್ಲಿ
ನನ್ನೀ ಹೃದಯದಲ್ಲಿ, ಕನವರಿಕೆಯಲ್ಲಿ
ನನ್ನ ಅಣುಅಣುವಿನಲ್ಲಿ


ಸುಧಾ ಪಾಟೀಲ

About The Author

Leave a Reply

You cannot copy content of this page

Scroll to Top