ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇವಳೆಂದರೆ…

ಜಯಶ್ರೀ.ಭ.ಭಂಡಾರಿ.

ಇವಳೆಂದರೆ ಅಂಗಾಂಗ ವರ್ಣಿಸುವದಲ್ಲ
ಇವಳೆಂದರೆ ಜಾಹೀರಾತಿನ‌ ಸರಕಲ್ಲ

ಇವಳೆಂದರೆ ಶೃಂಗಾರದ ಬೊಂಬೆಯಲ್ಲ
ಇವಳೆಂದರೆ ವರದಕ್ಷಿಣೆಯ ದಾಳವಲ್ಲ

ಇವಳೆಂದರೆ ವೆಶ್ಯಾವಾಟಿಕೆಗೆ ತಳ್ಳುವುದಲ್ಲ
ಇವಳೆಂದರೆ ದೌರ್ಜನ್ಯ ಎಸಗುವುದಲ್ಲ.

ಇವಳೆಂದರೆ ಅತ್ಯಾಚಾರದಿ ಕೊಲ್ಲುವುದಲ್ಲ.
ಇವಳೆಂದರೆ ಹಾಡುಹಗಲೇ ಅಪಹರಿಸುವುದಲ್ಲ.

ಇವಳೆಂದರೆ ಆಸಿಡ್ ದಾಳಿ ಎರಚುವದಲ್ಲ.
ಇವಳೆಂದರೆ ಬಾಲ್ಯವಿವಾಹಕೆ ದೂಡುವುದಲ್ಲ

ಇವಳೆಂದರೆ ಕತ್ತಲೆ ಕೂಪದಿ ನರಳಿಸುವುದಲ್ಲ.
ಇವಳೆಂದರೆ ಹೀನಾಯವಾಗಿ ಬೈಯುವುದಲ್ಲ.

ಇವಳೆಂದರೆ ಕೇವಲ ಕೆಲಸ ಮಾಡುವ ಆಳಲ್ಲ.
ಇವಳೆಂದರೆ ಶಿಕ್ಷಣದಿ ವಂಚಿತೆಯನ್ನಾಗಿಸುವುದಲ್ಲ..

ಇವಳೆಂದರೆ ಬೀದಿಯಲ್ಲಿ ಮಾನ ಹರಾಜಾಕುವುದಲ್ಲ
ಇವಳೆಂದರೆ ಭೋಗದ ವಸ್ತುವನ್ನಾಗಿಸುವುದಲ್ಲ.

ಇವಳೆಂದರೆ ಮರ್ಯಾದೆ ಹತ್ಯೆಗೆ ಗುರಿಯಾಗಿಸುವುದಲ್ಲ 
ಇವಳೆಂದರೆ ವೃದ್ಧಾಶ್ರಮಕ್ಕೆ ದೂಡಿ ದೂರಾಗಿಸುವದಲ್ಲ.

ಇವಳೆಂದರೆ ಜನಾಂಗದ ಜನನಿ ಮನುಕುಲದ ಕಣ್ಮಣಿ.
ಇವಳೆಂದರೆ ತ್ರೀ ಮೂರ್ತಿಗಳನ್ನು ತೊಟ್ಟಿಲಲ್ಲಿ ತೂಗಿದಾಕೆ.

ಆದಾಗ್ಯೂ ಇವಳಿಗೇಕಿಷ್ಟು ನೋವು, ಆತಂಕ,.ಕಷ್ಟ ‌‌‌‌‌‌‌‌‌‌‌‌‌‌‌‌‌‌‌‌‌‌‌ಹೇಳುವಿರಾ…. ಬಲ್ಲವರು….


ಜಯಶ್ರೀ.ಭ.ಭಂಡಾರಿ.

About The Author

3 thoughts on “ಮಹಿಳಾ ದಿನದ ವಿಶೇಷ”

  1. Rajendra Patil

    ಇವಳೆಂದರೆ ಆಸಿಡ್ ದಾಳಿ ಎರಚುವುದಲ್ಲ

    ಸರಿಯಾದ ವಾಕ್ಯವಲ್ಲ

    ಇವಳೆಂದರೆ ಆಸಿಡ್ ದಾಳಿ ಮಾಡುವುದಲ್ಲ

    ಸರಿಯಾದುದು

  2. ಶಿವಾನಂದ್ ಪೂಜಾರಿ ಸಾಹಿತಿಗಳು

    ಪ್ರಸ್ತುತ ಉತ್ತಮವಾದ ಕಾವ್ಯ

Leave a Reply

You cannot copy content of this page

Scroll to Top