ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಜ್ಜನ ಊರುಗೋಲು

ವಿಷ್ಣು ಆರ್. ನಾಯ್ಕ

ನನ್ನಜ್ಜನ
ಊರುಗೋಲು
ಮೂಲೆಯಲ್ಲಿ
ಇಂದಿಗೂ ಜೋಪಾನ.‌‌.
ಅದರೆಡೆ
ದೃಷ್ಟಿಯಿಟ್ಟಾಗ
ಕಣ್ಣ ಕಂಪನ..
ನೂರಾರು ಭಾವಗಳ ಸಮ್ಮಿಲನ..
ಅದು ಇಟ್ಟ ಹೆಜ್ಜೆಗಳು…
ಜೀವಿತದಲ್ಲಿ ಕಂಡ ಅನುಭವ..
ಅದರ ಗಾಯಗಳು..
ರೂಪು ಕಳೆದುಕೊಂಡ ಮೊಗ..
ಇತಿಹಾಸವನ್ನು
ಸಾಕ್ಷೀಕರಿಸುತ್ತದೆ
ಹೇಳಿದಂತಾಗುತ್ತದೆ
ಅದು ಮತ್ತೆ ಮತ್ತೆ ಅನುರಣನ…
ಇಡುವ ಹೆಜ್ಜೆಗಳು ಜೋಪಾನ…

ಅದು
ನಾನಿಡುವ ಪ್ರತಿ ಹೆಜ್ಜೆಗೂ
ಎಚ್ಚರವಾಗಿ…
ಸುಖಕ್ಕೆ ಪ್ರೋತ್ಸಾಹಿಸುವ  ತಾಯಾಗಿ..
ದುಃಖಕ್ಕೆ ಸಂತೈಸುವ ಹಿರಿ ಜೀವವಾಗಿ..
ನನ್ನ ಕಾಯುವ ಕಣ್ರೆಪ್ಪೆಯಾಗಿ…
ದೋಷ ತಿದ್ದುವ ಧರ್ಮರೂಪಿಯಾಗಿ..
ಬದುಕ ಪ್ರೀತಿಸುವ ಸಂವೇದನೆಯಾಗಿ..
ಎಂದಂದಿಗೂ ಇದೆ ನನ್ನಂತರಂಗದ
ಕಣ್ಣಾಗಿ…

ಅಜ್ಜ ನಡೆದ ನಡಿಗೆ
ಕೇಳಿಸುತ್ತದೆ
ಆಗಾಗ….
ಅವರ ಮಾತಿನ ಮೊರೆತ
ಹೆಜ್ಜೆಯ ದೀಂಗುಣಿತ…
ಅದೇ ಸದ್ದು , ಊರುಗೋಲು
ಟಕ್..ಟಕ್…ಟಕ್….
ಪೂರ್ವಜರ ಇತಿಹಾಸದ ಅನಾವರಣ
ಅದು ಅನುಭವದ ಪಾಕಶಾಲೆ
ಎಷ್ಟು ಮೊಗೆದರೂ ಮುಗಿಯದ
ಸಂಪತ್ತಿನ ಕೊಪ್ಪರಿಗೆ
ಹರೆಯದಿಂದ ಮರೆವಿನವರೆಗೆ…
ನಮಿಸುವೆ ನನ್ನನ್ನೇ ನಾ ನೋಡುವ
ಪೂಜ್ಯ ‘ಕನ್ನಡಿ’ಗೆ..


About The Author

4 thoughts on “ವಿಷ್ಣು ಆರ್. ನಾಯ್ಕಕವಿತೆ-ಅಜ್ಜನ ಊರುಗೋಲು”

  1. ಅಜ್ಜನ ಊರುಗೋಲು…ಊರೂರು ಸುತ್ತಿ ಗಳಿಸಿದ ಅನುಭವದ ಅನುಭಾವದ ನಡೆ ನುಡಿ ನಮ್ಮೆಲ್ಲರಿಗೂ ಆದರ್ಶ ಕವನ ತುಂಬಾ ಚೆನ್ನಾಗಿದೆ!ಸರ್ ❤️

  2. Arunkumar Habbbu

    ಅಜ್ಜನ ಕೋಲು ಅವರ ಜೊಎಗಿನ ನಿಮ್ಮ ಪ್ರೀತಿಯ ಒಡನಾಟದ ಸಂಕೇತ. ತುಂಬಾ ಮನೋಜ್ಞವಾಗಿ ಮೂಡಿಬಂದಿದೆ.

Leave a Reply

You cannot copy content of this page

Scroll to Top