ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಪರೂಪ

ಕಾಡಜ್ಜಿ ಮಂಜುನಾಥ

ಸತ್ಯನಿಷ್ಠೆಯ
ಜನರು ಅಪರೂಪ;
ಸಮಾಜದಲ್ಲಿ !!

ಸುಳ್ಳಿನಾಟದಿ
ವೇಷವ ಧರಿಸಿದ;
ದುರುಳರಿಲ್ಲಿ !!

ನಯವಂಚಿಸಿ
ಮೋಸ ಮಾಡುವ ಮೌನ;
ಹದ್ದುಗಳಿಲ್ಲಿ!!

ಬಣ್ಣ ಬಣ್ಣದ
ಮಾತಿನ ಶರಗಳ
ಚುಚ್ಚುವರಿಲ್ಲಿ !!

ಕಾಯಕ ಬಿಟ್ಟು
ಪರವಿಷಯ ಕುಟ್ಟೋ
ನಾಯಕರಿಲ್ಲಿ !!

ಕುರ್ಚಿ ಮೋಹದ
ಮದವೇರಿದ ಕಪ್ಪು
ನರಿಗಳಿಲ್ಲಿ !!

ಕಾಯಕ ನಿಷ್ಠೆ
ತೋರುವ ಅಪರೂಪ
ಜನರು ಇಲ್ಲಿ !!


About The Author

Leave a Reply

You cannot copy content of this page

Scroll to Top