ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಧುರಾ ಮೂರ್ತಿ

ಬುದ್ಧನಂತಾಗಲಿಲ್ಲ..!!

ದೊಡ್ಡ ವೃಕ್ಷದ ಕೆಳಗೆ ಕುಳಿತು
ಬೋಧಿ ವೃಕ್ಷವೆಂದು ತಿಳಿದು
ಮೌನಿಯಾಗುತ ಯತ್ನಿಸಿದರೂ
ಭೋಗದಾಸೆ ಮರೆಯಾಗಲೇ ಇಲ್ಲ

ಸಂಸಾರದ ಮೋಹ ತೊರೆಯಲು
ಮನದ ಕಲ್ಮಶಗಳೆಲ್ಲ ತೊಳೆಯಲು
ಅಧ್ಯಾತ್ಮದೆಡೆ ಗಮನ ಹರಿಸಿದರೂ
ಆಸೆಗಳ ತ್ಯಾಗ ಪೂರ್ತಿಯಾಗಲಿಲ್ಲ

ಬಂಧನಗಳ ಪಾಶಕೆ ಸಿಲುಕಿಯೂ
ಪ್ರಯತ್ನಿಸುತ್ತಲೇ ಇರುವೆ ನಿರಂತರ
ದೇಹದೊಳಗಿನ ನನ್ನನರಿಯಲು
ಸಕಲವನೂ ತ್ಯಜಿಸಿ ನಡೆಯಲು

ಎಲ್ಲ ಮರೆತು ವಿರಾಗಿಯಾಗುತ
ಮನಸ್ಸಿನ ಸ್ಥಿರತೆ ಕಾಯ್ದುಕೊಳ್ಳಲು
ಬಯಸಿದರೂ ಮತ್ತೆ ಚಂಚಲತೆ
ಖಾವಿ ಬಟ್ಟೆ ತೊಡಲಾಗಲೇ ಇಲ್ಲ

ನಿನ್ನ ಮುಗುಳ್ನಗುವಿನ ರಹಸ್ಯ
ತಮವ ತೊರೆಯುವ ಬೋಧನೆ
ನನ್ನಿಂದ ಅರಿಯಲಾಗಲೇ ಇಲ್ಲ
ಆಸಕ್ತಿಯಿದ್ದರೂ ನಿನ್ನಂತಾಗಲಿಲ್ಲ..!!


About The Author

3 thoughts on “ಮಧುರಾ ಮೂರ್ತಿ ಕವಿತೆ-ಬುದ್ಧನಂತಾಗಲಿಲ್ಲ..!!”

Leave a Reply

You cannot copy content of this page

Scroll to Top