ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮೊಂಡ ಧೈರ್ಯವ ತೋರಿರಿ

ನರಸಿಂಗರಾವ ಹೇಮನೂರ

ಏಳಿರೇಳಿರಿ ಎದ್ದು ನಿಲ್ಲಿರಿ
ಮೊಂಡ ಧೈರ್ಯವ ತೋರಿರಿ
ಭ್ರಷ್ಟ ಭಂಡರ ಭಾರಿ ಹಗರಣಗಳನು
ಬಯಲಿಗೆ ಎಳೆಯಿರಿ

ಸಾಕು ಮೈದಿದ್ದಿನ್ನು ಮೈವರ
ಮೈಯ್ಯ ಸೊಕ್ಕನು ಮುರಿಯಿರಿ
ಎಷ್ಟು ತಿಂದರು ಇನ್ನು ಬೇಡುವ
ಹೊಟ್ಟೆಬಾಕರ ತುಳಿಯಿರಿ

ಬಡವ ಬಲ್ಲಿದರೆಲ್ಲರನು
ಸದೆಬಡಿವ ನೀಚರ ಸುಲಿಯಿರಿ
ದುಡಿಯದೆ ದುಡಿವವರ ಗಳಿಕೆಗೆ
ಕೈ ಚಾಚುವವರನು ಜರೆಯಿರಿ

ಎಲ್ಲದಕು ಎಲ್ಲೆಡೆಯು ಕಾಡುವ
ಕಳ್ಳರನ್ನು ಕಾಡಿರಿ
ಲಂಚವಿಲ್ಲದೆ ಕೆಲಸ ಮಾಡದ
ವಂಚಕರಿಗೆ ಬಲೆ ಬೀಸಿರಿ

ಭ್ರಷ್ಟರೆಲ್ಲಿಯೇ ಇರಲಿ
ಯಾವುದೆ ಕಾರ್ಯತಂತ್ರವ ಮಾಡಲಿ
ಜನರು ಕೆಲಸಕೆ ಮುನ್ನ
ಲಂಚ ಕೊಡದಿರಲೆಚ್ಚರಿಸಿರಿ.


About The Author

Leave a Reply

You cannot copy content of this page

Scroll to Top