ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಚೆಲುವಿ(ವೆ)-ನ ಒಲವು

ವಸಂತ ವಿ. ಬೆಕ್ಕೇರಿ

ನನ್ನ ಒಲುಮೆಗೆ ನಿನ್ನ ಚಲುವೇ ಕಾರಣ
ಹೊಳೆಯುವುದೆನಗೆ ನಿತ್ಯನೂತನ !

ಬಾ ಸಖಿ ಬೃಂದಾವನಕ್ಕೆ ರಾಧೆ ಹಾಗೆ ನೀನು
ಅಲ್ಲಿ ಮೋಹನ ಸುಧೆಯ ನುಡಿಯು ನಾನು
ಹುಣ್ಣುಮೆ ಬೆಳಕಿನ ತಂಗಾಳಿ ಕಿರಣ ನೀನು
ಅಲ್ಲಿ ಪ್ರೇಮ ಚಂದ್ರನೇ ನಾನಾಗಿರುವೇನು!

ನನ್ನ ಒಲುಮೆಯ ಗುಟ್ಟು ತಿಳಿಸುವೆ
ನಿನ್ನ ವಿರಹ ಬೆಗೆಯ ತಣಿಸುವೆ
ಸ್ವರ್ಗವೊ-ನರಕವೊ ನಾ ಜೋತೆಗಿರುವೆ
ನೂರಾರು ಜನ್ಮಕೂ ನಿನ್ನೇ ಬಯಸುವೆ !

ಜೀವ-ಜೀವ ರಸಾಯನ ನಿನ್ನ ಒಲವು
ಭಾವ-ಭಾವನೆಗೆ ಬೆಸುಗೆ ಈ ಚಲುವು
ಕನಸುಗಾರನಿಗೆ ಸಾಕೀ ಚಲುವಿನ ಒಲವು
ಬದುಕಿನ ಸೊಗಸಿಗೆ ಒಲುವೇ ಬಲವು !

ನಿನ್ನ ಚಲುವೇ ನನ್ನ ಒಲವು
ನಿನ್ನ ಒಲವೇ ನನ್ನ ಗೆಲವು
ಜಗವು ಚಲುವಿನ ಆಗರವು
ಚಲುವಿನಲ್ಲಿ ತುಂಬಿರಲಿ ಒಲವು!


About The Author

2 thoughts on “ವಸಂತ ವಿ. ಬೆಕ್ಕೇರಿ-ಚೆಲುವಿ(ವೆ)-ನ ಒಲವು”

Leave a Reply

You cannot copy content of this page

Scroll to Top