ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ನಯನ. ಜಿ. ಎಸ್

ತಥ್ಯ ಮಿಥ್ಯಗಳ ನಡು ನಡುವೆ ತರಗುಟ್ಟಿ ಅನೂಹ್ಯವಾಗುತಿದೆ ಜೀವನ
ಹಿತ ಸಂವೇದನಾ ರಾಹಿತ್ಯದಲಿ ಮರಗಟ್ಟಿ ಶೂನ್ಯವಾಗುತಿದೆ ಜೀವನ

ಕಾಂಚನದಿ ಜೀಕುವ ಅಸುವಿನ ಮ್ಲಾನ ವದನಕೆ ಗುರುತುಗಳು ವಿರಳ
ಸಹ್ಯಭಾವಗಳ ವಿರಹದಿ ಕಂಬನಿಯ ಕದತಟ್ಟಿ ಗೋಳಿಡುತಿದೆ ಜೀವನ

ಬೆಸುಗೆಗಳ ಬೇಡಿಗೆ ಹಿಡಿದ ತುಕ್ಕು ಹೃನ್ಮನವನು ಇರಿಯುತಿದೆ ಗಾಲಿಬ್
ತುಂಬು ಬಸಿರಿಗೆ ನಿತ್ಯಪ್ರಸವದ ಹಣೆಪಟ್ಟಿಕಟ್ಟಿ ನೋವುಣುತಿದೆ ಜೀವನ

ಹರಕಲು ಜೇಬಿನ ಆಸ್ತಿಯಾಗಿವೆ ಉಜ್ವಲ ತತ್ವಗಳು ಬಾಳಿನ ಬೀದಿಯಲ್ಲಿ
ಅಲ್ಲಲ್ಲಿ ಮೆರೆಯುವ ಸ್ವೇಚ್ಛೆಯನು ದುರುಗುಟ್ಟಿ ಮೌನವಾಗುತಿದೆ ಜೀವನ

ಪ್ರೀತಿ ಬಲುಮೆಯ ಸುಧೆಯಲಿ ಹರ್ಷಿಸುತ್ತಿದ್ದರಷ್ಟೇ ಸಂಪನ್ನಳು ನಯನ
ಕ್ಷಣಗಳ ಯುಗ್ಮಾಭಾಸದಲೂ ಭರವಸೆಯ ಸೌಧಕಟ್ಟಿ ಸಾಗುತಿದೆ ಜೀವನ


About The Author

1 thought on “ಗಜಲ್”

Leave a Reply

You cannot copy content of this page

Scroll to Top