ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ವಾಣಿ ಯಡಹಳ್ಳಿಮಠ

ನೀ ಅಂದ್ರ ನನಗೇನಂತ
ಹೆಂಗ್ ಹೇಳ್ಲಿ ?
ನೀ ಇಲ್ದ ಹಗಲ , ಹೊಳಪಿಲ್ಲ್ದ ಬೆಳಕಿನಂಗಂತ
ಹೆಂಗ್ ಹೇಳ್ಲಿ ?

ಇದ್ದುದು ಇದ್ದಂಗ ಹೇಳ್ತದ
ಈ ಕನ್ನಡಿ ,
ಇದ್ರಾಗ ನೋಡದಾಗೆಲ್ಲ , ಮುಖ ನಿಂದ್ ಕಾಣಸ್ತದಂತ
ಹೆಂಗ್ ಹೇಳ್ಲಿ ?

ಹೂವಿನಂದ ನೋಡಿ
ಮಂದಿ ಮನ್ಸ್ ಹಸರಾಗ್ತದ
ನೀ ನಕ್ಕಾಗಷ್ಟ , ನಾ ಅರಳತಿನಿಂತ
ಹೆಂಗ್ ಹೇಳ್ಲಿ ?

ಯಾರ್ ಕಷ್ಟ ಯಾರುನೂ ನೋಡ್ದ
ಈ ಜಗದಾಗ ,
ನೋವು ನಿಂಗಾದ್ರ, ಜೀವ ನಂದ್ ಮರಗತೈತಿಂತ
ಹೆಂಗ್ ಹೇಳ್ಲಿ ?

ಅದೆಂತದರ ಪ್ರೀತಿಯದ
‘ವಾಣಿ’ ಇದು
ನಿನ್ ಹೆಸ್ರ ಹೇಳ್ದ ನನ್ ಉಸ್ರಿಲ್ಲಾಂತ
ಹೆಂಗ್ ಹೇಳ್ಲಿ ?


About The Author

Leave a Reply

You cannot copy content of this page

Scroll to Top