ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪರಿಹಾರವುಂಟೇ…?

ಹೆಚ್.ಮಂಜುಳಾ.

A Rainbow Vibrant Coloured Shattered Glasss Mosaic Background

ಗೆಳೆಯಾ ಉಂಟೇ ಈ ನಮ್ಮ ಸಮಸ್ಯೆಗೆ ಪರಿಹಾರವು….?
ನೀ ಹೇಳುವೆ ನಾನೂ ಹೇಳುವೆ
ಜಾತಿ ಎರಡೇ ಎಂದು, ಆದರೆ… ಆದರೆ..ಗೆಳೆಯ…
ಜಾತಿ ಜಾತಿಯ ದೃವಗಳು ಎಂದಾದಾವು ಒಂದು…?!

ಗೆಳತಿ ಉಂಟೇ ಈ ನಮ್ಮ ಚಿಂತೆಗೆ
ಸಾಂತ್ವನವು?
ನೀ ಹೇಳುವೆ ನಾನೃ ಹೇಳುವೆ ಗಂಡಿಗೆ ಸಮಾನರು ನಾವು ಅಬಲೆಯರಲ್ಲ, ಆದರೇ….
ಆದರೆ… ಗೆಳತಿ ಬೆಂಬತ್ತಿದೆಯಲ್ಲ
ಪ್ರಾಣಕ್ಕಿಂತಲೂ ಮಾನರಕ್ಷಣೆಯ ಭಯ!

ಮೇಲು ಕೀಳು ಜಾತಿ ಧರ್ಮಗಳ ಡಂಗೂರದಲ್ಲಿ ಕಿವುಡಾದ ಮನುಜರೇ….!
ಹೇಳಿ ನೀವು ಮನಸ್ಸುಳ್ಳವರೇ…
ಮಿಡಿಯುವ ತುಡಿಯುವ ಹೃದಯ ಎಲ್ಲೀ..?!
ಜಿಡ್ಡಿನಿಂದ ಜಡ್ಡುಗಟ್ಟಿದ ಜಡತ್ವದ ಆಳವಾದ ಆಲದ ಬಿಳಲುಗಳಾಗಿದ್ದೀರಿ,
ಹೊಸತನಕ್ಕೆ….
ಎಂದೂ ಹೃದಯ ತೆರೆಯಲಾರಿರಿ:
ಪರಿಹಾರವೆಲ್ಲಿಯದು ಇಂಥ ಬದುಕಿಗೆ..
ಅನೀತಿ ಅಮಾನವೀಯತೆಗೆ..‌‌.?!

ಹೇಳಿ ಪರಿಹಾರವುಂಟೇ…??!!


About The Author

Leave a Reply

You cannot copy content of this page

Scroll to Top