ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಬಾಗೇಪಲ್ಲಿ

The Turtle Story Creates Unique Brand Identity for Shoonya - World Brand  Design Society

ಏನು ಹುಡುಕುತ್ತಿರುವೆ ಅದು ಶೂನ್ಯ
ಹುಡುಕಿ ಬಳಲುವೆ ಆಗಲಾರೆ ಮಾನ್ಯ

ಸೊನ್ನೆಯ ಒಳಹೊಕ್ಕರೆ ಪದ್ಮವ್ಯೂಹ
ಆಗ ಕರೆಯ ಬಹುದೇನೋ! ನಿನ್ನ
ಅನ್ಯ

ದಿವ್ಯಾತ್ಮ ನೀಹಾರಿಕೆಗೆ ಏರ ಬಹುದು
ನಿನ್ನ ಮನಸ್ಸು ಬುದ್ಧಿ ಮೋಹ ಜನ್ಯ

ಆತ್ಮಶಕ್ತಿಯನು ವೃದ್ಧಿಸಿಕೋ ಯೋಗದಿಂ
ಮೋಕ್ಷದ ಮಾತಿರಲಿ ನಿನ್ನ ಜನ್ಮ ಧನ್ಯ

ತೃಣಮಪಿ ನ ಚಲತಿ ಎಂದು ಕೂರದಿರು
ಕೃಷ್ಣಾ ಬೆಲೆ ಕಟ್ಟಲಾಗದ್ದು ರಾಮ ಧಾನ್ಯ


About The Author

Leave a Reply

You cannot copy content of this page

Scroll to Top