ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-47 ತಂಗವೇಲುವಿನೊಂದಿಗೆ ಬಂಡೆಯ ಸಮೂಹವನ್ನು ನೋಡುತ್ತ ಕೊರಕಲು ದಾರಿಯಲ್ಲಿ ಫರ್ಲಾಂಗು ಮುಂದೆ ಸಾಗಿದ ಶಂಕರನಿಗೆ ಆ ರಸ್ತೆಯ ಅಂತ್ಯದಿಂದ ಸುಮಾರು ನೂರು ಗಜ ದೂರದಲ್ಲಿ ಎರಡು, ಮೂರು ಶತಮಾನಗಳಷ್ಟು ಹಳೆಯದಾದ ತುಂಡುಪ್ಪರಿಗೆಯ ಮನೆಯೊಂದು ಕಾಣಿಸಿತು. ಅದನ್ನು ಕಂಡ ತಂಗವೇಲು, ‘ಸಂಗರಣ್ಣ ಅದೇ ಮನೆ ಸುಘೇಂದ್ರಯ್ಯನವರ್ದು…!’ ಎಂದು ಗೆಲುವಿನಿಂದ ತೋರಿಸಿದ. ಆದ್ದರಿಂದ ಶಂಕರ ಅಲ್ಲೇ ಒಂದು ಕಡೆ ಕಾರು ನಿಲ್ಲಿಸಿ ಇಳಿದವನು ಕಾರನ್ನೊಮ್ಮೆ ಬೇಸರದಿಂದ ದಿಟ್ಟಸಿದ. ತನ್ನ ಹೊಚ್ಚ ಹೊಸ ಕಾರು ಆ ಕೊರಕಲು ರಸ್ತೆಯ ಒರಟು ಕಲ್ಲುಗಳ ಮೇಲೆ ಹರಿದು ಓಲಾಡುತ್ತ ನಿಮಿಷಕ್ಕೊಮ್ಮೆ ಎಗರಿ ಬೀಳುತ್ತ ಬರುತ್ತಿದ್ದಾಗಲೇ ಅವನ ಹೊಟ್ಟೆಯೊಳಗೆ ಅವಲಕ್ಕಿ ಕುಟ್ಟಿದಂಥ ಹಿಂಸೆಯಾಗುತ್ತಿತ್ತು. ಈಗ ಅದಕ್ಕೆ ಮೆತ್ತಿಕೊಂಡಿದ್ದ ಧೂಳನ್ನೂ ಕಂಡವನು, ‘ಥೂ! ಥೂ! ಎಂಥ ಸಾವು ಮಾರಾಯ ಇದು. ಹೊಸ ಕಾರಿಡೀ ಧೂಳುಮಯವಾಗಿಬಿಟ್ಟಿದೆ ನೋಡು…!’ ಎಂದು ತಂಗವೇಲುವೇ ಅದಕ್ಕೆ ಕಾರಣ ಎಂಬಂತೆ ಸಿಡುಕಿದ. ಅದಕ್ಕವನು ‘ಹ್ಹಿಹ್ಹಿಹ್ಹಿಹ್ಹಿ…! ಊರಿಗೆ ಹೋಗಿ ಗ್ಯಾರೇಜಿಗೆ ಬಿಟ್ಟರಾಯ್ತು ಸಂಗರಣ್ಣಾ…!’ ಎಂದು ಹಲ್ಲು ಗಿಂಜಿ ಮುಂದೆ ನಡೆದ. ಆಗ ಶಂಕರನಿಗೆ ಮತ್ತಷ್ಟು ಉರಿಯಿತು. ಆದರೂ ವಿಧಿಯಿಲ್ಲದೆ ಅವನನ್ನು ಹಿಂಬಾಲಿಸಿದ.    ಇಬ್ಬರೂ ಸುರೇಂದ್ರಯ್ಯನ ಮನೆಯಂಗಳಕ್ಕೆ ಬಂದು ನಿಂತರು. ‘ಸಾವುಗಾರ್ರೇ… ಸಾವುಗಾರ್ರೇ…!’ ಎಂದು ತಂಗವೇಲು ಧ್ವನಿಯೆತ್ತಿ ಕೂಗಿದ. ಶಂಕರ ಆ ಮನೆಯನ್ನೂ ಸುತ್ತಲಿನ ವಠಾರವನ್ನೂ ಗಮನಿಸತೊಡಗಿದ. ಒಂದುಕಾಲದಲ್ಲಿ ನೂರಾರು ಮಂದಿ ಅವಿಭಕ್ತವಾಗಿ ಬಾಳಿ ಬದುಕಿದ ಮನೆಯದು ಎಂಬುದು ಅದನ್ನು ಕಟ್ಟಿದ ಶ್ರೀಮಂತ ಕಲಾತ್ಮಕತೆಯಿಂದಲೇ ತಿಳಿಯುತ್ತಿತ್ತು. ಆದರೆ ಈಗ ಆ ಮನೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರವೇ ಬದುಕಿದ್ದು, ಅದರ ಹೆಚ್ಚಿನ ಭಾಗಗಳು ಶಿಥಿಲಗೊಂಡು ಒಂದೆರಡು ಭಾಗದ ಗೋಡೆಗಳು ಕುಸಿದುಬಿದ್ದಿದ್ದವು. ಸುತ್ತಲಿನ ತೆಂಗು, ಅಡಿಕೆ ತೋಟ ಮತ್ತು ಹೊಲಗದ್ದೆಗಳು ದುಡಿಯುವವರಿಲ್ಲದೆ ಹಡಿಲು ಬಿದ್ದು ದಶಕಗಳೇ ಕಳೆದಂತಿದ್ದವು. ನೆಟ್ಟಗೆ ನಿಲ್ಲಲಾಗದ ಮುದಿ ನಾಯಿಗಳೆರಡು ತಮ್ಮ ದುರ್ಬಲ ದೊಂಡೆಗಳಿಂದ ಊಳಿಡುವಂತೆ ಕರ್ಕಶವಾಗಿ ಬೊಗಳಿದವು, ಅಪರಿಚಿತರ ಸುಳಿವನ್ನು ಮನೆಯವರಿಗೆ ತಿಳಿಸಿ ತಮ್ಮ ಕೆಲಸವಾಯಿತೆಂಬಂತೆ ಮರಳಿ ಕಣ್ಣುಮುಚ್ಚಿ ಮುದುಡಿಕೊಂಡವು.  ಸ್ವಲ್ಪಹೊತ್ತಿನಲ್ಲಿ ಬಣ್ಣ ಮಾಸಿದ ಕಾವಿ ಲುಂಗಿಯುಟ್ಟಿದ್ದ, ಐವತ್ತೈದರ ಆಸುಪಾಸಿನ ಡೊಳ್ಳು ಹೊಟ್ಟೆಯ ಕಂದು ಮೈಬಣ್ಣದ ದಢೂತಿ ವ್ಯಕ್ತಿಯೊಬ್ಬರು ಹಳೆಯ ಬೈರಾಸೊಂದನ್ನು ಹೆಗಲಿಗೇರಿಸಿಕೊಂಡು ಬಾಯಿ ತುಂಬ ಎಲೆಯಡಿಕೆ ಜಗಿಯುತ್ತ ಪಡಸಾಲೆಗೆ ಬಂದರು. ಅಂಗಳದಲ್ಲಿ ನಿಂತಿದ್ದ ಇಬ್ಬರನ್ನೂ ಆಪಾದಮಸ್ತಕ ದಿಟ್ಟಿಸಿದವರು ಅಲ್ಲೇ ಗೋಡೆಯ ಹೊರ ಮೂಲೆಗೆ ವೀಳ್ಯದೆಂಜಲನ್ನು ಪಿಚಕ್ಕನೇ ಉಗುಳುತ್ತ ತಂಗವೇಲುವಿನ ಗುರುತು ಹಿಡಿದರು. ‘ಓಹೋ, ತಂಗವೇಲುವಾ ಮಾರಾಯಾ…ಬನ್ನಿ ಬನ್ನಿ ಒಳಗೆ ಬನ್ನಿ. ಎಷ್ಟು ಕಾಲವಾಯ್ತಾ ನಿನ್ನನ್ನು ನೋಡಿ…! ಆವತ್ತೊಮ್ಮೆ ಬಂದು ಹೋದವನದ್ದು ಮತ್ತೆ ಪತ್ತೆಯೇ ಇಲ್ಲ ನೋಡು…!’ ಎಂದು ನಗುತ್ತ ಅಂದವರು, ‘ಹೌದೂ ಇವರು ಯಾರು ಸಾಹುಕಾರ್ರು…?’ ಎಂದು ಶಂಕರನೆಡೆಗೆ ದಿಟ್ಟಿಸುತ್ತ ಗತ್ತಿನಿಂದ ಕೇಳಿದರು. ಅವರು, ‘ಸಾಹುಕಾರ್ರು…!’ ಎಂದಾಕ್ಷಣ ಶಂಕರನ ದೇಹವು ತಾನಿದ್ದುದಕ್ಕಿಂತಲೂ ಕೆಲವಿಂಚು ಎತ್ತರಕ್ಕೆ ಸೆಟೆದುನಿಂತಿತು. ‘ಹ್ಹೆಹ್ಹೆಹ್ಹೆ… ಏನು ಮಾಡುವುದು ಸಾವುಗಾರ್ರೇ ಗಿರಾಕಿ ಸಿಗಬೇಕಲ್ಲ…!’ ಎಂದ ತಂಗವೇಲು ಶಂಕರನತ್ತ ತಿರುಗಿ, ‘ಇವರು ನಮ್ಮ ಧಣಿ ಸಂಗರಣ್ಣ ಅಂತ. ದೊಡ್ಡ ಬಿಲ್ಡರ್ರು ಮತ್ತು ಭಾರೀ ದೊಡ್ಡ ಗುಳ (ಕುಳ) ಸಾವುಗಾರ್ರೇ!’ ಎಂದು ನಗುತ್ತ ಹೇಳಿ ತಾನೂ ಅವನನ್ನು ಉಬ್ಬಿಸಿದ. ಶಂಕರ ತಂಗವೇಲುವಿನೆಡೆಗೂ ಮೆಚ್ಚುಗೆಯ ನಗು ಹರಿಸಿದ. ಅಷ್ಟು ತಿಳಿದ ಸುರೇಂದ್ರಯ್ಯ ಶಂಕರನಿಗೆ ಗೌರವದಿಂದ ನಮಸ್ಕರಿಸಿ ಕುಳಿತುಕೊಳ್ಳಲು ಹಳೆಯ ಕುಸುರಿ ಚಿತ್ತಾರವಿದ್ದ ಕುರ್ಚಿಯನ್ನು ತೋರಿಸಿದವರು, ಕೆಲಸದವಳನ್ನು ಕೂಗಿ ಕರೆದು ಕಾಫಿ ತರಲು ಸೂಚಿಸಿ ಅವರೊಂದಿಗೆ ಮಾತುಕತೆಗಿಳಿದರು. ತಂಗವೇಲುವೇ ಮೊದಲು ಮಾತಾಡಿದ. ‘ಸಾವುಗಾರ್ರೇ, ನಮ್ಮ ಶರವಣನ ದಯೆಯಿಂದ ನಿಮ್ಮ ಹಿರಿಯರಾಸೆ ಕೈಗೂಡುವ ಕಾಲ ಬಂದೇಬಿಟ್ಟಿತು ನೋಡಿ. ಸಂಗರಣ್ಣನಿಗೆ ನಿಮ್ಮ ಬಂಡಿಗಲ್ಲು ಬೇಕಂತೆ!’ ಎಂದವನು, ‘ಮುಂದಿನದ್ದನ್ನು ನೀವೇ ಮಾತಾಡಿಕೊಳ್ಳಿ!’ ಎಂಬಂತೆ ಶಂಕರನ ಮುಖ ನೋಡಿದ. ಆದ್ದರಿಂದ ಶಂಕರ ಮೊದಲು ಏಕನಾಥ ಗುರೂಜಿಯವರನ್ನೂ ಮತ್ತವರ ಜ್ಯೋತಿಷ್ಯದ ಶಕ್ತಿಯನ್ನೂ ಹೊಗಳುತ್ತ ಅವರನ್ನು ಪರಿಚಯಿಸಿದ. ಬಳಿಕ ಅವರೀಗ ನಿರ್ಮಿಸಲು ಹೊರಟಿರುವ ದೇವಸ್ಥಾನದ ವಿಚಾರವನ್ನು ಅವರಿಗೆ ವಿವರಿಸಿ, ‘ಗುರೂಜಿಯವರದ್ದು ಇದೊಂದು ದೊಡ್ಡ ಸಾಧನೆಯಾಗಲಿದೆ ಸುರೇಂದ್ರಯ್ಯನವರೇ. ಅದರಿಂದ ನಮ್ಮೂರಿಗೂ ಬಹಳ ಒಳ್ಳೆಯದಾಗಲಿದೆ. ಹಾಗಾಗಿ ಆವೊಂದು ಉತ್ತಮ ಕೆಲಸಕ್ಕೆ ನಿಮ್ಮ ಬಂಡೆಗಳು ನಮಗೆ ಬೇಕು. ಕೊಡಬಹುದಾ…?’ ಎಂದು ಗಂಭೀರವಾಗಿ ಕೇಳಿದ. ಅವನ ಮಾತು ಕೇಳಿದ ಸುರೇಂದ್ರಯ್ಯನಿಗೆ ತಾವು ಕುಳಿತ ನೆಲದಡಿಯಲ್ಲೇ ಕೊಪ್ಪರಿಗೆಯೆದ್ದಷ್ಟು ಸಂತೋಷವಾಯಿತು. ಆದರೂ ತೋರಿಸಿಕೊಳ್ಳದೆ ಕೆಲವು ಕ್ಷಣ ಗಂಭೀರವಾಗಿ ಯೋಚಿಸುವಂತೆ ನಟಿಸಿದರು. ಬಳಿಕ, ‘ಬಂಡೆಯನ್ನೇನೋ ಕೊಡಬಹುದು ಸಾವುಕಾರ್ರೇ…, ಆದರೆ ನಮ್ಮ ಹಿರಿಯರದ್ದೊಂದು ಸಣ್ಣ ಆಸೆಯಿದೆ. ಏನೆಂದರೆ ನಮ್ಮ ಬಂಡೆಯಿಂದ ಕಟ್ಟುವ ದೇವಸ್ಥಾನದಲ್ಲಿ ಯಾವುದಾದರೂ ಒಂದು ದೈವದ ಅಥವಾ ದೇವರ ಮೂರ್ತಿಯು ಇದೇ ಶಿಲೆಯಿಂದ ಕೆತ್ತನೆಯಾಗಿ ಅಲ್ಲಿ ಪೂಜೆಗೊಳ್ಳಬೇಕು ಎಂಬುದು. ನಿಮ್ಮ ಗುರೂಜಿಯವರು ಇದಕ್ಕೆ ಒಪ್ಪುತ್ತಾರಾ…?’ ಎಂದು ಅನುಮಾನದಿಂದ ಪ್ರಶ್ನಿಸಿದರು.    ಅಷ್ಟು ಕೇಳಿದ ಶಂಕರನಿಗೆ ಪಕ್ಕನೆ ಏನೂ ತೋಚಲಿಲ್ಲ. ಆದ್ದರಿಂದ, ‘ಈ ವಿಷಯವನ್ನು ಮಾತ್ರ ನಾನು ಗುರೂಜಿಯವರೊಡನೆ ಕೇಳಿಯೇ ಹೇಳಬೇಕಾಗುತ್ತದೆ ಸುರೇಂದ್ರಯ್ಯ!’ ಎಂದವನು, ‘ಹೌದು, ನಿಮ್ಮ ಹಿರಿಯ ಆ ಆಸೆಗೆ ಕಾರಣವೇನು?’ ಎಂದ ಕುತೂಹಲದಿಂದ. ಅದನ್ನೇ ನಿರೀಕ್ಷಿಸುತ್ತಿದ್ದ ಸುರೇಂದ್ರಯ್ಯ, ‘ಆ ಕಥೆಯನ್ನು ನಿಮಗೆ ಸ್ವಲ್ಪ ಹೇಳಬೇಕು ನೋಡಿ. ಆದರೆ ಅದಕ್ಕಿಂತ ಮೊದಲು ಆ ಬಂಡೆಗಳ ವಿಶೇಷವನ್ನೂ ಹೇಳುತ್ತೇವೆ ಕೇಳಿ. ನಮ್ಮ ಮುತ್ತಜ್ಜನ ಕಾಲದಿಂದಲೋ ಅಥವಾ ಅವರ ಮುತ್ತಜ್ಜದಿಂದಿರ ಕಾಲದಿಂದಲೋ ಎಂಬುದು ಸರಿಯಾಗಿ ಗೊತ್ತಿಲ್ಲ, ಒಟ್ಟಾರೆ ಅಷ್ಟೊಂದು ಪ್ರಾಕಿನಿಂದಲೂ ಆ ಬಂಡೆಕಲ್ಲು ನಮ್ಮ ಜಾಗದಲ್ಲಿತ್ತಂತೆ. ಆದರೆ ಆವಾಗ ಕೇವಲ ಒಂದೇ ಬಂಡೆಯಿದ್ದದ್ದು ಕಾಲಕ್ರಮೇಣ ಬೆಳೆಯುತ್ತ ಹೋಯಿತಂತೆ. ಒಮ್ಮೆ ರಾತ್ರೋರಾತ್ರಿ ಎರಡು ಭಾಗವಾಗಿಬಿಟ್ಟಿತಂತೆ! ಅಷ್ಟಾಗಿ ಕೆಲವು ವರ್ಷಗಳ ನಂತರ ಮತ್ತೆ ಮೂರು ಭಾಗವಾಗಿದ್ದು ಬರಬರುತ್ತ ಮತ್ತಷ್ಟು ಸೀಳಿ, ಒಡೆದುಕೊಳ್ಳುತ್ತ ಬಂದದ್ದು ಒಂದೊಂದು ಬಂಡೆಗೂ ಒಂದೊಂದು ಪ್ರಾಣಶಕ್ತಿ ಬಂದು ಬಂಡೆಗಳ ದೊಡ್ಡದೊಂದು ಸಂಸಾರವೇ ಆಗಿಬಿಟ್ಟಿತಂತೆ. ಹೀಗಾಗಿ ಆ ಬಂಡೆಗಳ ನಡುವೆ ಪಿಲಿಚೌಂಡಿ ಮತ್ತು ಪಂಜುರ್ಲಿ ದೈವಗಳು ಬಂದು ನೆಲೆಸಿದ್ದಾವೆ ಎಂದೊಮ್ಮೆ ನಮ್ಮ ಹಿರಿಯರಿಗೆ ‘ದೈವದರ್ಶನ’ ಸೇವೆಯಲ್ಲಿ ತಿಳಿದು ಬಂದಿತಂತೆ. ಅಷ್ಟು ತಿಳಿದ ಅವರು ಆ ಶಕ್ತಿಗಳನ್ನು ಭಯಭಕ್ತಿಯಿಂದ ಈ ಮನೆಗೆ ಕರೆದುಕೊಂಡು ಬಂದು ನೆಲೆಗೊಳಿಸಿ ಕಾಲಕಾಲಕ್ಕೆ ಅವುಗಳನ್ನು ವೈಭವದಿಂದ ಪೂಜಿಸಿಕೊಂಡು ಬಂದರು. ಆ ಶಕ್ತಿಗಳು ನೆಲೆಯಾಗಿದ್ದಂಥ ಆ ಬಂಡೆಗಳಿಗೂ ದೈವಶಕ್ತಿ ಇರುತ್ತದೆ. ಹಾಗಾಗಿ ಅದರದ್ದೊಂದು ತುಂಡು ಕಲ್ಲಾದರೂ ದೈವ, ದೇವರ ಮೂರ್ತಿಯಾಗಿ ಪೂಜೆಯಾಗಬೇಕೆನ್ನುವುದು ನಮ್ಮ ಹಿರಿಯರ ಸಂಕಲ್ಪ!’ ಎಂದು ಸುರೇಂದ್ರಯ್ಯ ವಿವರಿಸಿದರು. ‘ಓಹೋ ಹೀಗಾ ವಿಷಯ…? ಹಾಗಾದರೆ ಅವರು ಸರಿಯಾಗಿಯೇ ಯೋಚಿಸಿದ್ದಾರೆ ಬಿಡಿ!’ ಎಂದು ಶಂಕರ ಅವರ ಮಾತನ್ನು ಸಮರ್ಥಿಸಿದ. ‘ಆ ಬಂಡೆಗಳಿಗೆ ನಾವು ಹೇಳುತ್ತಿದ್ದ ರೇಟಿಗಿಂತಲೂ ಎರಡರಷ್ಟು ಹೆಚ್ಚು ಕೊಟ್ಟು ಅದನ್ನು ಕೊಳ್ಳಲು ಇಲ್ಲಿನ ತುಂಬಾ ಜನ ಕ್ರಷರ್ ಮಾಲಿಕರು ಬಹಳ ವರ್ಷಗಳಿಂದ ಬಂದು ಹೋಗುತ್ತಲೇ ಇದ್ದಾರೆ ಸಾಹುಕಾರ್ರೇ. ಮೊನ್ನೆ ಮೊನ್ನೆಯಷ್ಟೇ ನಮಗೆ ಬಹಳ ಪರಿಚಯವಿದ್ದ ಇಲ್ಲಿನೊಬ್ಬ ದೊಡ್ಡ ಉದ್ಯಮಿ ರವೀಂದ್ರಯ್ಯ ಅಂತ ಬಂದಿದ್ದರು. ಆದರೆ ನಾವು ಅವರಿಗೂ ‘ಸದ್ಯ ಮಾರುವ ಯೋಚನೆಯಿಲ್ಲ. ಇದ್ದರೆ ಹೇಳುತ್ತೇವೆ!’ ಎಂದು ಕಳುಹಿಸಿದ್ದೆವು. ಈ ಸಲ ಬಹುಶಃ ನಿಮ್ಮ ಮೂಲಕವೇ ನಮ್ಮ ಹಿರಿಯರ ನಂಬಿಕೆಯು ಈಡೇರುವ ಕಾಲ ಬಂದಿದೆ ಅಂತ ತೋರುತ್ತದೆ!’ ಎಂದು ಸುರೇಂದ್ರಯ್ಯ ನಗುತ್ತ ಹೇಳಿದರು. ‘ಆಯ್ತು ಸುರೇಂದ್ರಯ್ಯನವರೇ, ಈ ವಿಷಯ ಗುರೂಜಿಯವರಲ್ಲಿ ಮಾತಾಡಿ ಒಪ್ಪಿಸುವ ಜವಾಬ್ದಾರಿ ನನ್ನದು. ಈಗ ವ್ಯವಹಾರದ ಮಾತಾಡುವ. ನೀವು ಸರಿಯಾದ ಒಂದು ರೇಟು ಹೇಳಿದರೆ ಒಳ್ಳೆಯದಿತ್ತು!’ ಎಂದ ಶಂಕರ. ಆಗ ಸುರೇಂದ್ರಯ್ಯ ಮತ್ತೆ ಗಂಭೀರವಾದವರು ಕೆಲವು ಕ್ಷಣದ ಬಳಿಕ, ‘ನೋಡಿ ಸಾಹುಕಾರ್ರೇ, ನಾವು ಬಂಡೆ ಮಾರಿ ಅದರಿಂದಲೇ ಬದುಕಲು ಹೊರಟವರೇನಲ್ಲ. ಅದನ್ನೀಗಲೇ ಹೇಳಿ ಬಿಡುತ್ತೇವೆ. ಯಾಕೆಂದರೆ ನಮ್ಮ ಹಿರಿಯರು ಬಿಟ್ಟು ಹೋದ ಆಸ್ತಿಯೇ ನಮ್ಮ ಇನ್ನೆರಡು, ಮೂರು ತಲೆಮಾರಿಗಾಗುವಷ್ಟಿದೆ. ಆದರೂ ಆ ಬಂಡೆಗಳನ್ನು ಮಾರಲು ಒಂದು ಮುಖ್ಯ ಕಾರಣವಿದೆ. ನಮ್ಮ ಈ ಮನೆಯನ್ನೂ ಇದರ ಅವಸ್ಥೆಯನ್ನೂ ನೀವು ಗಮನಿಸಿರಬಹುದು. ಅರಮನೆಯಂಥ ಇದನ್ನು ರಿಪೇರಿ ಮಾಡಿಸುವುದೆಂದರೆ ಸಣ್ಣ ಮಾತೇನಲ್ಲ. ಆ ಬಂಡೆಗಳನ್ನು ಮಾರಿ ಈ ಮನೆಯನ್ನು ಈಗ ಇರುವ ರೀತಿಯಲ್ಲೇ ಚಂದ ಮಾಡಿ ರಿಪೇರಿ ಮಾಡಿಸಿ ಇನ್ನೊಂದಷ್ಟು ವರ್ಷ ಇದರ ವೈಭವವನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮ ತಂದೆಯವರ ಮತ್ತು ನಮ್ಮಿಚ್ಛೆಯೂ ಹೌದು! ಅದಕ್ಕೆ ಒಂದು ಅಂದಾಜಿನ ಪ್ರಕಾರ ಒಂದು ಕೋಟಿಯತನಕ ಖರ್ಚು ಬೀಳಬಹುದು. ನಮ್ಮ ಬಂಡೆಗೂ ನೀವು ಅಷ್ಟೇ ಕೊಟ್ಟರೆ ಸಾಕು!’ ಎಂದು ಸಲೀಸಾಗಿ ಅಂದರು. ಆದರೆ ಶಂಕರನಿಗೆ ಅದೇನೂ ಅಷ್ಟೊಂದು ದೊಡ್ಡ ಮೊತ್ತವೆಂದು ಅನ್ನಿಸಲಿಲ್ಲ. ಆದರೆ ಅವನು ಒಂದು ಹುಲ್ಲು ಕಡ್ಡಿಯನ್ನು ಕೂಡಾ ಹತ್ತು ಬಾರಿ ಚೌಕಾಶಿ ಮಾಡದೆ ಕೊಂಡುಕೊಳ್ಳುವ ಜಾಯಮಾನದವನಲ್ಲ. ಆದ್ದರಿಂದ, ‘ಓ ದೇವರೇ…! ನೀವೆಂಥದು ಮಾರಾಯ್ರೇ ಒಟ್ಟಾರೆ ಒಂದು ರೇಟು ಹೇಳಿ ಬಿಡುವುದಾ…? ಛೇ! ಛೇ! ಅದು ಸಿಕ್ಕಾಪಟ್ಟೆ ಜಾಸ್ತಿಯಾಯಿತು ಬಿಡಿ. ಅಷ್ಟೆಲ್ಲ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ಆ ದೇವಸ್ಥಾನವನ್ನು ಕಟ್ಟುವುದಕ್ಕೆ ನಾವು ಕೂಡಾ ನಾಗದೇವರ ಭಕ್ತಾದಿಗಳಿಂದಲೇ ಹಣವನ್ನು ಒಟ್ಟು ಮಾಡುವವರು ಸುರೇಂದ್ರಯ್ಯ! ಅಂಥ ಪವಿತ್ರವಾದ ದುಡ್ಡನ್ನು ನಮಗೆ ಖುಷಿ ಬಂದ ಹಾಗೆ ಖರ್ಚು ಮಾಡಲಿಕ್ಕಾಗುತ್ತದಾ ಹೇಳಿ…? ನೀವು ಕೂಡಾ ಅದೇ ದೃಷ್ಟಿಯಿಂದ ಒಂದಷ್ಟು ಕಡಿಮೆ ಮಾಡಿ ಹೇಳಬೇಕು ನೋಡಿ!’ ಎಂದು ಖಡಕ್ಕಾಗಿ ಹೇಳಿದ. ಅವನ ಮಾತಿನ ವರಸೆಯನ್ನು ಕೇಳಿದ ಸುರೇಂದ್ರಯ್ಯ ಒಳಗೊಳಗೇ ಬೆಚ್ಚಿದವರು, ಛೇ, ಛೇ!…ವ್ಯಾಪಾರವೆಲ್ಲಿ ಕೈತಪ್ಪುತ್ತದೋ…? ಎಂದುಕೊಂಡು ಮತ್ತಷ್ಟು ಯೋಚಿಸುವಂತೆ ನಟಿಸಿದರು. ಕೊನೆಯಲ್ಲಿ, ‘ಆಯ್ತು ಸಾಹುಕಾರ್ರೇ, ನೀವು ಆ ನಾಗನ ಹೆಸರು ಹೇಳಿದ ಮೇಲೂ ನಾವು ನಮ್ಮ ಹಿಡಿದ ಮುಷ್ಟಿ ಬಿಚ್ಚದಿದ್ದರೆ ಅರ್ಥ ಉಂಟಾ ಹೇಳಿ? ಇಬ್ಬರಿಗೂ ಚರ್ಚೆ ಬೇಡ. ಒಂದೇ ಮಾತು, ನಾವು ಹೇಳಿದ ಮೊತ್ತದಲ್ಲಿ ಐದು ಲಕ್ಷ ಕಡಿಮೆ ಮಾಡುತ್ತೇವಷ್ಟೇ. ತೊಂಬತ್ತೈದಕ್ಕೆ ವ್ಯಾಪಾರ ಮುಗಿಸಿಬಿಡುವ ಏನಂತೀರಾ…?’ ಎಂದು ನಗುತ್ತ ಅಂದರು.    ಅಷ್ಟಕ್ಕೆ ಶಂಕರನ ಮುಖದಲ್ಲೂ ನಗು ಮೂಡಿತು. ಅಲ್ಲಿಗೆ ವ್ಯವಹಾರದ ಮಾತುಕಥೆಯೂ ಮುಗಿಯಿತು. ತಂಗವೇಲುವೂ ಖುಷಿಯಾದ. ಆದರೆ ಅವನು, ವ್ಯಾಪಾರ ಹೇಗೂ ಕುದುರಿತು. ಆದರೆ ಇನ್ನು ಇವರಿಬ್ಬರ ಕಡೆಯಿಂದ ತನಗೆಷ್ಟೆಷ್ಟು ಕಮಿಷನ್ ಸಿಗುತ್ತದೋ…? ಎಂಬ ಆತಂಕದಿಂದ ಚಡಪಡಿಸಿದ. ಅದನ್ನು ಗಮನಿಸಿದ ಸುರೇಂದ್ರಯ್ಯ, ‘ತಂಗವೇಲು, ನೀನು ಮಂಡೆಬಿಸಿ ಮಾಡಬೇಡ ಮಾರಾಯ. ನಿಮ್ಮ ಕಡೆಯಿಂದ ಹಣ ನಮಗೆ ಸಂದಾಯವಾಗುತ್ತಲೇ ನಿನ್ನ ಕಮಿಷನ್ನೂ ನಿನ್ನ ಕೈ ಸೇರುತ್ತದೆ!’ ಎಂದಾಗ ತಂಗವೇಲು ಗೆಲುವಾದವನು, ‘ಹಾಗಾದರೆ ನಿಮ್ಮದು ಯಾವಾಗ ಶಂಗರಣ್ಣಾ…?’ ಎಂಬಂತೆ ಅವನನ್ನು ದಿಟ್ಟಿಸಿದ. ಆದರೆ ಅಷ್ಟರಲ್ಲಿ ಶಂಕರ ತಟ್ಟನೆ ಅವನಿಂದ ಮುಖ ತಿರುಗಿಸಿ ಎದ್ದು ಕಾರಿನತ್ತ ಹೋದವನು ಗುರೂಜಿಯವರ ಪ್ರಸಾದವನ್ನೂ ಮತ್ತು ಒಂದು ಲಕ್ಷ ರೂಪಾಯಿಯನ್ನೂ ತಂದು, ‘ತಗೊಳ್ಳಿ ಸುರೇಂದ್ರಯ್ಯ, ಇದು ಗುರೂಜಿಯವರು ಕೊಟ್ಟ ಪ್ರಸಾದ. ಮತ್ತಿದು ಅಡ್ವಾನ್ಸು. ಉಳಿದ ಹಣವನ್ನು ಬಂಡೆ ಕಡಿದು ಮುಗಿದ ಕೂಡಲೇ ಚುಕ್ತಾ ಮಾಡುತ್ತೇವೆ. ಅದಕ್ಕೊಂದು ಅಗ್ರಿಮೆಂಟು ಕೂಡಾ ಮಾಡಿಕೊಳ್ಳುವ!’ ಎಂದು ಗತ್ತಿನಿಂದ ಅಂದವನು, ಠಸ್ಸೆ ಪೇಪರನ್ನು ಅವರ ಮುಂದಿಟ್ಟ. ಒಂದು ಲಕ್ಷವನ್ನು ನೋಡಿದ ಸುರೇಂದ್ರಯ್ಯ ತಾವು ಕಾಣುತ್ತಿರುವುದು ಕನಸೋ ನನಸೋ…? ಎಂಬ ಅನುಮಾನಕ್ಕೆ ಬಿದ್ದು ನೋಟಿನ ಕಂತೆಯನ್ನೊಮ್ಮೆ ನಯವಾಗಿ ಮುಟ್ಟಿ ನೋಡಿದವರು, ಶಂಕರನ ಪತ್ರಕ್ಕೆ ಅವನು ತೋರಿಸಿದಲ್ಲಿ ಸಹಿ ಎಳೆದು ಅವರನ್ನು

Read Post »

ಕಾವ್ಯಯಾನ

ಕಾವ್ಯ ಸಂಗಾತಿ ಎದೆಗೊಳದ ಸ್ಪೂರ್ತಿ ಪುಷ್ಪಾ ಮಾಳ್ಕೊಪ್ಪ ಎದೆಗೊಳದಿ ತುಂತುಂಬಿತುಳುಕಿರಲು ಗೈವಛಲಚಿಮ್ಮದಿಹುದೇ ಸ್ಪೂರ್ತಿ ಚಿಲುಮೆಯಾಗಿ |ಧೈರ್ಯವೂ ಜೊತೆಗಿರಲುಗೆಲುವು ಬೆಂಬಿಡದಿಲ್ಲಿಹಿಂದೆ ಸರಿಯುವುದು ಹಿನ್ನಡೆಯು ಇಲ್ಲಿ || ಮೂಡಿರಲು ಮನದಲ್ಲಿಕನಸ ಕಾಮನಬಿಲ್ಲುಮುದ ನೀಡಿಹುದು ಬಾನ ಚಿತ್ತಾರ ನೋಡಾ |ಶಕ್ತಿ ಯುಕ್ತಿಯು ನರನ ನಾಡಿಯಲಿ ಹರಿದಿರಲುಸರಿದಿಹುದು ಪಕ್ಕದಲಿ ಕಪ್ಪು ಮೋಡಾ || ಓಟದಲಿ ಸರಿಸಮಕೆ ಯಾರಿಲ್ಲ ಮೀರಿಸಲುಮೇಘಾಳಿಗಳೆ ನಾಚಿ ಸ್ಥಬ್ಧವಾಗಿಹವು |ವಿಕಲಾಂಗನಲ್ಲನಿವ ಸಕಲ ಬಲ ಸಂಪೂರ್ಣಮಾದರಿಯು ಮನುಜಕುಲಕೆ ಚಣಚಣವು || ಆಂತರ್ಯದಾಶಯವೆಲ್ಲಹೊಮ್ಮಿಹೊರಪುಟಿದಿಹುದುಬಿಂಬಬಿಂಬದ ತುಂಬಅಚ್ಚಳಿಯದೆ |ನಾ ಮುಂದೆ ತಾಮುಂದೆನುವ ಪಾದಗಳೋಟಗುರಿಯ ರೇಖೆಯು ಸನಿಸನಿಹಬರದೆ ||

Read Post »

ಕಾವ್ಯಯಾನ, ಗಝಲ್

ಕಾವ್ಯ ಸಂಗಾತಿ ಗಜಲ್ ಪ್ರಕಾಶಸಿಂಗ್ ರಜಪೂತ್ ಜೀವಿಗೆ ನೋವಿನಾ ಅಭ್ಯಾಸ ಬೇಕುಜೀವನಕ್ಕೆ ತನ್ನದೇ ಇತಿಹಾಸ ಬೇಕು ಊಟದಾ ಅತಿರೇಕ ರೋಗಕ್ಕೆ ಮೂಲವೋದೇಹಕ್ಕೆ ಅದಕ್ಕಾಗಿ ಉಪವಾಸ ಬೇಕು ಕಣ್ಣಲ್ಲಿ ಹೊಸತನದ ಬಯಕೆ ನಿತ್ಯವಿಲ್ಲಿದೇಹಕ್ಕೆ ಆಕರ್ಷಿಸುವ ವಿನ್ಯಾಸ ಬೇಕು ನಿತ್ಯವೆ ಜಗದಿ ಬದಲಾವಣೆಯ ಬಯಕೆಅರಳಲು ಮನ ಹೂವಿಗೆ ಮಧುಮಾಸ ಬೇಕು ಬಿಸಿಲುಗಾಳಿಯ ಮಧ್ಯೆ ತೃಷೆಯು ತಣಿಸಲುಮಳೆಯಲಿ ಮನ ನೆನೆಯುವ ಉಲ್ಲಾಸ ಬೇಕು ಆಶಾ ಚಕ್ರದಿ ತಿರುಗಿ ಸೋತಿದ ಚಾಂಚಲ್ಯಕೆ“ಪ್ರಕಾಶ”ಕೊನೆಯ ಘಟ್ಟಲಿ ಸನ್ಯಾಸ ಬೇಕು

Read Post »

ಅಂಕಣ ಸಂಗಾತಿ, ಗಜಲ್ ಲೋಕ

ಅಂಕಣ ಸಂಗಾತಿ ಗಜಲ್ ಲೋಕ ರಜಪೂತರ ಗಜಲ್ ನಾದದಲ್ಲೊಂದು ಸುತ್ತು … ಹಾಯ್…. ಏನು ಯೋಚಿಸ್ತಾ ಇದ್ದೀರಾ, ಇಂದು ಯಾವ ವಾರ ಎಂದೋ…? ನಾನು ಓರ್ವ ಗಜಲ್ ಗೋ ಅವರ ಪರಿಚಯದೊಂದಿಗೆ ಬಂದಿದ್ದೇನೆ ಎಂದರೆ ಇಂದು ‘ಗುರುವಾರ’ ಎಂದಲ್ಲವೇ…!! ಶುಭೋದಯ, ನನ್ನ ಎಲ್ಲ ಕಸ್ತೂರಿ ಕನ್ನಡದ ಹೃದಯಗಳಿಗೆ ಈ ಮಲ್ಲಿನಾಥನ ಮಲ್ಲಿಗೆಯಂತ ನಮಸ್ಕಾರಗಳು.  “ಆ ಹೆಜ್ಜೆಗಳ ಸದ್ದನ್ನು ನಾವು ಬಹಳ ಮೊದಲೇ ತಿಳಿಯುತ್ತೇವೆ ಹೇಯ್ ಜೀವನವೇ..ನಾವು ನಿನ್ನನ್ನು ದೂರದಿಂದಲೇ ಗುರುತಿಸುತ್ತೇವೆ”                          –ಫಿರಾಕ್ ಗೋರಖಪುರಿ            ‘ಜೇನು’ ಎಂದ ತಕ್ಷಣವೇ ನಮ್ಮ ಬಾಯಿಯು ಒದ್ದೆಯಾಗುತ್ತದೆ, ಅಲ್ಲವೆ..! ನಾವು ಜೇನು ಸವಿಯೋದು ರುಚಿಗಾಗಿಯಾದರೂ ಅದರ ಫಲ ಮಾತ್ರ ರುಚಿಯ ಆಚೆಗೆ ಇದೆ! ಆ ಜೇನಿನ ಮಕರಂದವು ನಮ್ಮ ದೇಹವನ್ನು ಪ್ರವೇಶಿಸಿ ರಕ್ತದ ಉತ್ಪತ್ತಿಗೆ ಕಾರಣವಾಗುತ್ತದೆ, ನಮ್ಮ ಸದೃಢ ಆರೋಗ್ಯಕ್ಕೆ ಬುನಾದಿಯಾಗುತ್ತದೆ. ಇದರಂತೆಯೇ ಸಾಹಿತ್ಯದಿಂದ ಮನೋರಂಜನೆ ದೊರೆಯುತ್ತದೆ ಎಂಬುದು ಮೇಲ್ನೋಟಕ್ಕೆ ದಿಟವೆನಿಸಿದರೂ ಸಾಹಿತ್ಯದ ಕರಾಮತ್ತು ಮನೋರಂಜನೆಯನ್ನು ದಾಟಿಕೊಂಡು ವ್ಯಕ್ತಿಯ ವ್ಯಕ್ತಿತ್ವದ ವಿಕಾಸಕ್ಕೆ, ಸಂಸ್ಕಾರಕ್ಕೆ ತಳಪಾಯ ಹಾಕುತ್ತದೆ, ಹಾಕುತ್ತಿದೆ ಕೂಡ! ಕಾಂತೆಯಂತೆ ಸಂತೈಸುತ್ತದೆ, ತಾಯಿಯಂತೆ ಜೋಗುಳವಾಡುತ್ತದೆ, ಇವಾಗಲೂ ಇದನ್ನೆ ಮಾಡುತ್ತಿದೆ! ಪ್ರತಿ ಭಾಷೆಯ ಬೇರುಗಳಲ್ಲಿ ಅಕ್ಷರದ ಅಕ್ಷಯ ಪಾತ್ರೆ ಇದೆ.‌ ಇದು ಮನುಕುಲಕ್ಕೆ ಬೆಂಗಾವಲಾಗಿ, ಜ್ಯೋತಿಯಾಗಿ ಬೆಳಕನ್ನು ನೀಡಿದೆ, ನೀಡುತ್ತಿದೆ. ಕನ್ನಡದ ಹಣತೆಯು ಹಲವರ ಬೌದ್ಧಿಕ ಚಲನೆಯಿಂದ ದೇದಿಪ್ಯಮಾನವಾಗಿ ಪ್ರಕಾಶಿಸುತ್ತಿದೆ. ಇದಕ್ಕೆ ಅನ್ಯ ಭಾಷೆಯ ಸಾಹಿತ್ಯ ರೂಪಗಳು ತೈಲದಂತೆ ಸಾಥ್ ನೀಡುತ್ತಿವೆ. ಅಂತಹ ತೈಲಗಳಲ್ಲಿ ‘ಗಜಲ್’ ಗೆ ವಿಶಿಷ್ಟವಾದ ಸ್ಥಾನವಿದೆ. ಆಧ್ಯಾತ್ಮಿಕ ನೆಲೆಯಲ್ಲಿ ಜಗುಲಿ ಮೇಲೆ ರಂಗೋಲಿ ಹಾಕುತಿದೆ, ಜೊತೆ ಜೊತೆಗೆ ರಸೋಯಿ ಕೋಣೆಯಲ್ಲಿ ಅನ್ನಪೂರ್ಣೆಯಾಗಿಯೂ ಕಾರ್ಯ ನಿರ್ವಹಿಸುತಿದೆ. ಈ ನೆಲೆಯಲ್ಲಿ ಇಡೀ ಮನುಕುಲಕ್ಕೆ ದಾರಿ ದೀಪವಾಗಿದೆ. ಕನ್ನಡದಲ್ಲಿ ಇಂದು ಅಸಂಖ್ಯಾತ ಗಜಲ್ ಗೋ ಇದ್ದಾರೆ. ಅವರುಗಳಲ್ಲಿ ಉತ್ತಮ ಗಜಲ್ ಗೋ ಹಾಗೂ ಸುಶ್ರಾವ್ಯ ಕಂಠಾಧಿಪತಿಯಾದ ವಿಜಯಪುರದ ಶ್ರೀ ಪ್ರಕಾಶ್ ಸಿಂಗ್ ರಜಪೂತ್ ಅವರು ಪ್ರಮುಖರು.        ಶಿಶುಪಾಲಸಿಂಗ್ ರಘುನಾಥಸಿಂಗ್ ರಜಪೂತ್ ಹಾಗೂ ಶ್ರೀಮತಿ ಶಶಿಕಲಾಬಾಯಿ ದಂಪತಿಗಳ ಮುದ್ದಿನ ಮಗುವಾಗಿ ಶ್ರೀ ಪ್ರಕಾಶ್ ಸಿಂಗ್ ರಜಪೂತ್ ಅವರು 1954ರ ಅಕ್ಟೋಬರ್ 24 ರಂದು ಜನಿಸಿದ್ದಾರೆ. ಡಿಪ್ಲೋಮಾ ಇನ್ ಇಲೆಕ್ಟ್ರೀಕಲ್ ಇಂಜಿನಿಯರಿಂಗ್ ಶಿಕ್ಷಣ ಪೂರೈಸಿ ತಮ್ಮನ್ನು ತಾವು ಓರ್ವ ವ್ಯಾಪಾರಿಯಾಗಿ ತೊಡಗಿಸಿಕೊಂಡಿರುವ ಶ್ರೀಯುತರು ಪ್ರವೃತ್ತಿಯಿಂದ ಬಹುಭಾಷಾ ಕವಿಗಳು ಹಾಗೂ ಗಾಯಕರು ಆಗಿ ಸಾಂಸ್ಕೃತಿಕ ಲೋಕದಲ್ಲಿ ಚಿರಪರಿಚಿತರಾಗಿದ್ದಾರೆ.‌ ಕನ್ನಡ, ಹಿಂದಿ, ಇಂಗ್ಲೀಷ್, ಮರಾಠಿ, ಗುಜರಾತಿ ಹಾಗೂ ಉರ್ದು ಭಾಷೆಗಳನ್ನು ಬಲ್ಲವರಾಗಿದ್ದು, ಈ ಭಾಷೆಗಳಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ವಿಶೇಷವಾಗಿ ಭಾಷಾಂತರ ಕಾರ್ಯದಲ್ಲಿ ನಿರತರಾಗಿರುವ ರಜಪೂತ್ ರವರು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು.. ಮುಂತಾದ ಶರಣರ ವಚನಗಳನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ.‌ ಹೆಸರಾಂತ ಹಿಂದಿ, ಉರ್ದು ಕವಿಗಳ 80 ಗಜಲ್ ಗಳನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಹರಿವಂಶರಾಯ ಬಚ್ಚನ್ ಅವರ ‘ಮಧುಶಾಲಾ’ ಕೃತಿಯನ್ನು ಕನ್ನಡ ಮತ್ತು ಮರಾಠಿ ಭಾಷೆಗೆ ಅನುವಾದಿಸಿದ್ದಾರೆ.‌ ಕಬೀರ್ ದಾಸ್, ರಹೀಮ್, ತುಳಸಿದಾಸರ ದೋಹೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇದರೊಂದಿಗೆ ಹಲವಾರು ಹಿಂದಿ ಕವಿಗಳ ಕಾವ್ಯವನ್ನು ಕನ್ನಡ ಅಂಗಳದಲ್ಲಿ ಬಿತ್ತನೆ ಮಾಡಿದ್ದಾರೆ.‌ ಇನ್ನೂ 2014ರಲ್ಲಿ “ಬಾಳಿನ ರಾಗ” ಎಂಬ 54 ಗಜಲ್ ಗಳ ಸಂಕಲನವನ್ನು ಪ್ರಕಟಿಸಿದ್ದಾರೆ. ಶಾರದೆಯ ಆರಾಧಕರಾದ ಶ್ರೀಯುತರು ಹಲವಾರು ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಸಕ್ರೀಯರಾಗಿದ್ದು, ವಿವಿಧ ಸಾಹಿತ್ಯ ಸಮ್ಮೇಳನಗಳು, ಕವಿಗೋಷ್ಠಿ, ಗಜಲ್ ಮುಶಾಯಿರಾ ದಂತಹ ಮಧುರ ಕ್ಷಣಗಳಲ್ಲಿ ತಮ್ಮ ನೆನಪುಗಳನ್ನು ಶಾಶ್ವತಗೊಳಿಸಿಕೊಂಡಿದ್ದಾರೆ. ಆಕಾಶವಾಣಿ, ದೂರದರ್ಶನ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ನಾಡಿನ ಜನರಿಗೆ ರಂಜಿಸಿದ್ದಾರೆ. ಹತ್ತು ಹಲವಾರು ಸಂಘ ಸಂಸ್ಥೆಗಳು ಪ್ರಕಾಶ್ ಸಿಂಗ್ ರಜಪೂತ್ ರವರ ಪಾರದರ್ಶಕ ವ್ಯಕ್ತಿತ್ವವನ್ನು ಪ್ರೀತಿಸುತ್ತ ಸನ್ಮಾನಿಸಿವೆ, ಗೌರವಿಸಿವೆ!!        ವೃತ್ತಿ ಹೊಟ್ಟೆಯನ್ನು ತುಂಬಿಸಿದರೆ ಪ್ರವೃತ್ತಿ ಹೃದಯದ ಹಸಿವನ್ನು ನೀಗಿಸುತ್ತದೆ. ಅಂತೆಯೇ ವ್ಯಕ್ತಿ ಹವ್ಯಾಸದಲ್ಲಿ ತನ್ನ ದಣಿವನ್ನು ಮರೆಯುತ್ತಾನೆ. ಈ ನೆಲೆಯಲ್ಲಿ ಗಜಲ್ ಗೋ ಪ್ರಕಾಶ್ ಸಿಂಗ್ ರಜಪೂತ್ ರವರ ಗಜಲ್ ಭಾವ ದೀಪ್ತಿಯ ಚಲನೆ ನಿರಂತರವಾಗಿ ಸಾಗುತ್ತಿದೆ. ಹಿಂದಿ, ಉರ್ದು ಗಜಲ್ ತೋಟಗಳಲ್ಲಿ ಸುಳಿದಾಡಿ ಆಕರ್ಷಿತರಾದ ಇವರು ತಮ್ಮ ಗಜಲ್ ಗಳಲ್ಲಿ ಭಾವಯಾನಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತ, ಸಂಗೀತಕ್ಕೆ ಅಳವಡಿಸುತ್ತ ಬಂದಿದ್ದಾರೆ. ಕೇವಲ ತಮ್ಮ ಗಜಲ್ ಗಳನ್ನು ಮಾತ್ರ ಹಾಡದೇ, ಇನ್ನಿತರರ ಗಜಲ್ ಗಳನ್ನು ಹಾಡಿ ಸಂಭ್ರಮಿಸುವುದು ಅವರ ಸಕಾರಾತ್ಮಕ ವ್ಯಕ್ತಿತ್ವದ ಕೈಗನ್ನಡಿಯಾಗಿದೆ! ಗಜಲ್ ಎಂದರೆ ಅಂತರಂಗ ಅನಾವರಣಗೊಳಿಸುವ ಧ್ಯಾನಸ್ಥ ಸ್ಥಿತಿ. ಇದು ಆಡಂಬರದ ಡಂಗುರ ಸಾರುವ ದುಡಿಯಲ್ಲ, ಇದೊಂದು ಮನಸ್ಸಿಗೆ ಮುದ ನೀಡುವ ಢಮರುಗ. ಮಧ್ಯರಾತ್ರಿಯಲ್ಲೂ ಮನದ ಸ್ಮೃತಿಯಲ್ಲಿ ನೇಸರನನ್ನು ಮೂಡಿಸುವ ಗಜಲ್ ಹೃದಯದ ಬಡಿತವಾಗಿದ್ದು, ಕಲಾರಸಿಕರನ್ನು ತನ್ನ ತೆಕ್ಕೆಯಲ್ಲಿ ಹಿಡಿದುಕೊಂಡು ವಿಶ್ವಪರ್ಯಟನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇದೊಂದು ಭಾವಪೂರ್ಣ ಕಾವ್ಯ ಪ್ರಕಾರ!! “ಅವಳ ನಗೆ ಮುತ್ತು ನಾನು ಸಂಗ್ರಹಿಸಬೇಕು ಪಾಲಿನಲ್ಲಿ ಬಂದ ಪಾತ್ರ ನಾ ವಹಿಸಬೇಕು” ಎನ್ನುವ ಮತ್ಲಾ ಬಯಕೆಗಳ ಜೊತೆ ಜೊತೆಗೆ ಕರ್ಮ ಸಿದ್ಧಾಂತವನ್ನು ಅರುಹುತ್ತಿದೆ. ನಗೆ ಮುತ್ತು ಸಂಗ್ರಹಿಸುವ ಕಾರ್ಯಕ್ಕೆ ತೊಡಗಿರುವ ಮನವು ‘ಪಾಲಿಗೆ ಬಂದದ್ದು ಪಂಚಾಮೃತ’ ಎನ್ನುವ ಸ್ಥಿತಪ್ರಜ್ಞೆಗೆ ಅಂಟಿಕೊಂಡಿರುವುದು ಮನದಟ್ಟಾಗುತ್ತದೆ. ಪ್ರೀತಿಯ ದಾರಿಯಲ್ಲಿ ಎರಡು ಕವಲುಗಳು ಇರುವುದನ್ನು ಈ ಷೇರ್ ಸೂಚ್ಯವಾಗಿ ದಾಖಲಿಸುತ್ತದೆ. ‘ಮುತ್ತು ಸಂಗ್ರಹಿಸಿದರೆ’ ಶೃಂಗಾರ, ‘ಪಾಲಿನಲ್ಲಿ ಬಂದ ಪಾತ್ರ’ ಎಂಬುದು ವಿಪ್ರಲಂಭ ಶೃಂಗಾರವನ್ನು ಪ್ರತಿಧ್ವನಿಸುತ್ತಿದೆ. “ಯಾರು ತಂದೆ, ಯಾರು ತಾಯಿ, ಬಾಳಲು ಬೇಕು ರೂಪಾಯಿ ಹೊಟ್ಟೆ ತುಂಬಾ ಜೀವ ಬೇಡಿದೆ, ನುಂಗಲು ರಾಗಿಯ ಮುದ್ದಿ“ ಎನ್ನುವ ಈ ಷೇರ್ ಜೀವನದ ಆಯಾಮಗಳ ಜೊತೆಗೆ ಬಾಳಿನ ಅಂತಿಮ ದರ್ಶನವನ್ನು ಮಾಡಿಸುತ್ತದೆ. ಇಲ್ಲಿಯ ಮಿಸರೈನ್ ಸಂವಾದ ರೂಪದಲ್ಲಿ ಮೂಡಿ ಬಂದಿವೆ. ಈ ಜಗದೊಳಗೆ ಎಲ್ಲ ಸಂಬಂಧಗಳ ರಿಂಗ್ ಮಾಸ್ಟರ್ ದುಡ್ಡು ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಹಸಿದ ಒಡಲಿಗೆ ಬೇಕಾಗಿರುವುದು ತುತ್ತು ಅನ್ನ ಮಾತ್ರ!! ಈ ಕಾರಣಕ್ಕಾಗಿಯೇ ದುಡ್ಡನ್ನು ಉಪ್ಪಿಗೆ ಹೋಲಿಸಲಾಗಿದೆ.           ಮನುಷ್ಯನ ಬದುಕೆನ್ನುವುದು ಕೊಳಲಿನ ನಾದದಂತೆ, ನುಡಿಸಲು ಬಂದರೆ ಅದುವೇ ಗೆಲುವು, ಇಲ್ಲದಿದ್ದರೆ….! ಈ ಮಾತು ನಮ್ಮ ಗಜಲ್ ಅಮೃತವರ್ಷಿಣಿಗೂ ಅನ್ವಯವಾಗುತ್ತದೆ. ಗಜಲ್ ರಚನೆಯೆಂದರೆ ಗಾಢವಾದ ಮೌನದೊಳಗಿನ ಕಲರವ, ತಪಸ್ಸಿನೊಳಗಿನ ಪ್ರವಚನ ; ನಿದ್ದೆಯಲ್ಲಿನ ಸೂಪ್ತಾವಸ್ಥೆಯಂತೆ. ಗಜಲ್ ಗೋ ಪ್ರಕಾಶ್ ಸಿಂಗ್ ರಜಪೂತ್ ರವರ ಗಜಲ್ ಗಾನಯಾನ ದಣಿವರಿಯದ ಪಾರಿವಾಳದಂತೆ ಆಗಸದಲ್ಲಿ ರೆಕ್ಕೆ ಬಿಚ್ಚಿ ಹಾರಾಡಲಿ ಎಂದು ಹೃನ್ಮನದಿ ಶುಭ ಕೋರುತ್ತೇನೆ. “ಎಲ್ಲ ಕೆಲಸ ಹೂವೆತ್ತಿದಂತೆ ಹಗುರವಾಗೋದು ಕಷ್ಟ ಮನುಷ್ಯರಾಗಿ ಹುಟ್ಟಿದವರಿಗೂ ಮನುಷ್ಯರಾಗೋದು ಕಷ್ಟ!”                          –ಮಿರ್ಜಾ ಗಾ0ಲಿಬ್ ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಮ್ಮೆ ನಿಮ್ಮ ನೆಚ್ಚಿನ ಗಜಲ್ ಉಸ್ತಾದರೊಂದಿಗೆ ನಿಮ್ಮ ಮುಂದೆ ಪ್ರತ್ಯಕ್ಷನಾಗುವೆ. ಅಲ್ಲಿಯವರೆಗೂ ಧನ್ಯವಾದಗಳು… ಡಾ. ಮಲ್ಲಿನಾಥ ಎಸ್. ತಳವಾರ ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Read Post »

ಕಾವ್ಯಯಾನ

ಕಾವ್ಯ ಸಂಗಾತಿ ನಮ್ಮಮ್ಮ ಹೀಗಿದ್ದಳು ಡಾ.ಸುರೇಖಾ ರಾಠೋಡ್ ಯಾವ ಭೂಮಿಗೆಯಾವ ಬೆಳೆ ಬರುತ್ತದೆಂದುಯಾವ ಬೀಜ ಬಿತ್ತಬೇಕೆಂದುನೆಲ ಎಷ್ಟುಹಸಿಯಾಗಿರಬೇಕೆಂದುತಿಳಿದಿರುವನಮ್ಮಮ್ಮ ಭೂವಿಜ್ಞಾನಿ ಏನಲ್ಲ ಯಾವ ಸಮಯಕ್ಕೆಯಾವ ಮಳೆಗೆಯಾವ ಬೆಳೆಬಿತ್ತಬೇಕೆಂದು,ಎಷ್ಟು ಗೊಬ್ಬರ,ಯಾವ ಗೊಬ್ಬರಹಾಕಬೇಕೆಂದುತಿಳಿದಿರುವನಮ್ಮಮ್ಮ ಬೆಳೆ ವಿಜ್ಞಾನಿಯಾಗಿರಲಿಲ್ಲ ಯಾವ ಬೀಜಎಷ್ಟು ದಿನಕ್ಕೆಮೊಳಕೆ ಒಡೆಯುವುದೆಂದು,ಯಾವ ಸಮಯಕ್ಕೆಕಳೆ ತಗೆಯಬೇಕೆಂದು,ಯಾವ ಸಮಯಕ್ಕೆನೀರು ಹಾಯಿಸಬೇಕೆಂದುತಿಳಿದಿರುವನಮ್ಮಮ್ಮ ಸಹಜ ಮನುಷ್ಯಳಾಗಿದ್ದಳು ಯಾವಾಗ ಮಳೆ ಬಂದರೆಬೆಳೆ ಚೆನ್ನಾಗಿಬೆಳೆಯತ್ತ,ಯಾವಾಗ ಮಳೆ ಬಂದರೆಬೆಳೆ ಹಾಳಾಗತ್ತೆ,ಯಾವಾಗ ಬೆಳೆಗೆರೋಗ ಬರತ್ತೆಂದು,ರೋಗಕ್ಕೆ ಯಾವಔಷಧಿಸಿಂಪಡಿಸಬೇಕೆಂದುತಿಳಿದಿರುವನಮ್ಮಮ್ಮ ಪದವೀಧರೆಯಾಗಿರಲಿಲ್ಲ ನಮ್ಮಮ್ಮ ಅಕ್ಷರಕಲಿಯದೇಕೃಷಿ ಕಲಿತಿರುವಭೂಮಿಯೇ ಆಗಿದ್ದಳು…..————————–

Read Post »

You cannot copy content of this page

Scroll to Top