ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎಂ. ಆರ್. ಅನಸೂಯರವರ ಕವಿತೆಗಳು

ಎಂ. ಆರ್. ಅನಸೂಯರವರ ಕವಿತೆಗಳು ದೇವರ ಲೀಲೆ          ಹಸುಗೂಸಿನ ಮುಗುಳ್ನಗೆ ಕಂಡಾಗ ಪರವಶನಾಗಬಹುದು ದೇವರು ಹಸಿದ ಕಂದಮ್ಮನ ಹೊಟ್ಟೆ ತಣಿದಾಗ ತೃಪ್ತಿ ಪಡಬಹುದು ದೇವ ಹಾಲಿನಂಥ ಮಲ್ಲಿಗೆ ಮೊಗ್ಗು ಬಿರಿದಾಗ ಮನ ಸೋಲಬಹುದು ದೇವರು ಹಸಿರುಟ್ಟ ಮಲೆಗಳ ತಂಬೆಲರು ಸುಳಿದಾಡಿದಾಗ ನಿದ್ರಿಸಬಹುದು ದೇವರು ಜಲಧಾರೆಗಳು ಬಿಳಿ ಮುತ್ತುಗಳ ಚೆಲ್ಲಾಡುವಾಗ ಹೆಕ್ಕಲು ಬರಬಹುದು ದೇವರು ಹೊನಲಲ್ಲಿ ಸ್ಪಟಿಕದಂಥ ಜಲ ಹರಿವಾಗ ನೀರಾಟವಾಡಬಹುದು ದೇವರು ಕಾರ್ಮೋಡಗಳಲಿ ಮಿಂಚು ಕೋರೈಸಿದಾಗ ಕಣ್ಬಿಡಬಹುದು ದೇವರು ವೈಶಾಖದ ಮಳೆಗೆ ಇಳೆ ಘಮ ಹರಡಿದಾಗ ಇಷ್ಟ ಪಡಬಹುದು ದೇವರು ಎಲ್ಲೆಡೆ ಅರಿವಿನ ಬೆಳಕು ಬೀರಿದಾಗ ಖುಷಿ ಪಡಬಹುದು ದೇವರು ಮರೀಚಿಕೆ ಓಡುತ್ತಿದ್ದೇನೆ ಚಾಚಿ ಕೈ ಮುಂದೆ ಪ್ರೀತಿಯ ಗಗನ ಕುಸುಮದ ಹಿಂದೆ ಮರೀಚಿಕೆಯ ಬೆನ್ನತ್ತಿದ ಹಂಬಲಕೆ  ದಣಿವೇ ಇಲ್ಲ ! ಕಿತ್ತಷ್ಟು ಚಿಗುರುವ ಕಳೆ ಪ್ರೀತಿಯ ಸಮೃದ್ಧ ಬೆಳೆಯ ನಿರೀಕ್ಷೆಯಲ್ಲಿ ರೈತನ ಖುಷಿಯಿತ್ತು ಬೆವರಿನ ಬೆಲೆಯ ಕುಸಿತವೇ ನಿಲುಕದ ಪ್ರೀತಿಯಲ್ಲಿ ಕಾಣುತ್ತಿತ್ತು ಒಲವಿನ ಒರತೆ ಉಕ್ಕುವ ಹಂಬಲದ ಭರವಸೆಯಲಿ ಬದುಕಿನ ಗಮನವಿತ್ತು ಆಳಕ್ಕಿಳಿದು ಮರೆಯಾದ ಅಂತರ್ಜಲ ಬಿಸಿಲ್ಗುದುರೆಯಾದ ಪ್ರೀತಿಯ ಬಲ ಮಾಗಿಯ ಎಳೆ ಬಿಸಿಲ ಹಿತವಿದೆ ಮಧುರ ಪ್ರೇಮದ  ಪ್ರತೀಕ್ಷೆಯಲಿ ಶಿಶಿರ ಋತುವಿನ  ಬೋಳು ಮರ ಮರೀಚಿಕೆಯಾದ ಸಾಪೇಕ್ಷ  ಸಾನುರಾಗ ಬೀಳ್ಕೊಡಬೇಕಿತ್ತು ಬೀಳ್ಕೊಡ ಬೇಕಿತ್ತು   ಅಂತಿಮವಾಗಿ ಘನತೆಯಿಂದ ಕಂಡು ಗೌರವದ ಬಾಷ್ಪಾಂಜಲಿಯೊಡನೆ ವಿಧಿ ವಶವಾದವರನ್ನು ಬೀಳ್ಕೊಡಬೇಕಿತ್ತು ನೆನೆದು ನಮ್ಮೊಡನಿದ್ದ  ಕ್ಷಣಗಳ  ಅಗಲಿದವರ  ಆಪ್ತರೊಡನೆ ಕೋರುತ್ತಾ ಚಿರಶಾಂತಿಯ ಚಿರನಿದ್ರಗೆ  ಜಾರಿದವರನ್ನು ಸಾವಿನ ಭಯದ ಕೂಪಕೆ ದೂಕಿರುವ ಅಗೋಚರ  ಸೂತ್ರಧಾರಿ ವೈರಾಣುವಿನ ಮಳೆ ಸೂತ್ರದ ಬೊಂಬೆಯಾದ ಜಗತ್ತು! ಪರಮಾಣುವಿಗೂ ಮೀರಿದ ತಾಕತ್ತು ಕೈಕಟ್ಟಿದ ಬಾಯಿ ಮುಚ್ಚಿದ ಕ್ಷೀಣ ಉಸಿರಾಟದ ಸೂತಕದ ಮನೆಯಾದ ಊರಿನಲ್ಲಿ ಸಾವು ಸಹಾ ಅನಾಥವೇ ! ಬೀಳ್ಕೊಡಬೆಕಿತ್ತು ಗುಣಗಾನದ ಚರಮಗೀತೆಯೊಂದಿಗೆ ಶೂನ್ಯ ನೀರವ ಮೌನದಿ  ಹೊಸಿಲೊಳಗೇ ನಿಂದು ಅಸ್ಪೃಶ್ಯರನ್ನಾಗಿಸಿ ಕಳಿಸಿದೆವು ಸುಡುಗಾಡಿಗೆ ಕೊರೊನಾ ಕಪಿಮುಷ್ಟಿಯಲಿ ಕಾಲನ ಕರೆಗೆ ಓಗೊಟ್ಟು ಪರದೇಶಿ ಸಾವಿಗೆ ಬಲಿಗೀಡಾದವರನ್ನು.   ಪ್ರೀತಿಯೂ – ದ್ವೇಷವೂ ಪ್ರೀತಿ  ಬದುಕಿನ ತವನಿಧಿ ದ್ವೇಷ  ಬದುಕಿನ ಕ್ಷಯ ವ್ಯಾಧಿ  ಪ್ರೀತಿಯಿಂದ ಬದುಕು ವಿಕಸಿತ  ಹಿಗ್ಗುವ ಬದುಕಿನ ಆಡಂಬೊಲ  ದ್ವೇಷದಿಂದ ಬದುಕು ಸಂಕುಚಿತ       ಸಹನೀಯವಾಗದ ಬದುಕು ಸೀಮಿತ     ಪ್ರೀತಿಯ ಆಚ್ಛಾದನದಿ ಬದುಕಿನ ಹೂರಣ  ಸುಲಭ ಸಾಧ್ಯವಾಯ್ತು ಬದುಕಿನ ಸಂಕೀರ್ಣ  ದ್ವೇಷದ ಬಾಳಲಿ ವ್ಯರ್ಥ ಕಾಲಹರಣ  ನಮ್ಮದಾಗದ ನಮ್ಮ ಬದುಕು ಅಪೂರ್ಣ ಪ್ರೀತಿ  ಸವಿ ಜಿನುಗುವ ಜೇನು ಗೂಡು ಬದುಕು ಝೇಂಕರಿಸಲಿ ಪ್ರೀತಿಯ ಹಾಡು ದ್ವೇಷ ಧಗೆಯಾವರಿಸಿದ ಇಟ್ಟಿಗೆ ಗೂಡು ನಾವಿಲ್ಲದ ನಮ್ಮದೇ ಬದುಕಿನ ಮಾಡು ಪ್ರೀತಿ ಬದುಕಿಗೆ ಸೊಗವೀವ ಇಂದ್ರಚಾಪ ಭಿನ್ನತೆಯ ಬದುಕಲಿರಲಿ ಪ್ರೀತಿಯ ಲೇಪ ದ್ವೇಷ  ಬದುಕಿಗೆ ಆರದ ಕಿಚ್ಚಿನ ಬೇಗುದಿ ನಾವೇ ಅಟ್ಟಿದ ನಮ್ಮ ಬದುಕಿನ ನೆಮ್ಮದಿ ಪ್ರೀತಿ ಹೃದಯಗಳ ಬೆಸೆವ ಸೇತುವೆ ಹೂವೆತ್ತಿದಂತಾಗುವ ಕಷ್ಟಗಳ ಗೊಡವೆ ದ್ವೇಷ ಮನದ ಬಿರುಕಗಲಿಸುವ ಕಂದಕ ಬಿದ್ದ ಮನಸಾಗುವುದು ಕೂಪ ಮಂಡೂಕ ಪ್ರೀತಿ ಬದುಕಿನ ಚೇತನ ದ್ವೇಷ ಬದುಕಿನ ನಿಪತನ ಅವನು ಪಿಸುಗುಟ್ಟಿದ ಅಲ್ಲೊಬ್ಬ ಹೇಳಿದ ಅವರ  ಹಿರಿಯರು ಎದೆಯಲ್ಲಿ ಅಕ್ಷರ ಬಿತ್ತಿದವರು ಇಲ್ಲೊಬ್ಬ ಘೋಷಿಸಿದ ಅವರ ಪೂರ್ವಜರು ಊರಿಗೆ ಹೆಸರು ತಂದವರು ಮತ್ತೊಬ್ಬ  ಕೂಗಿದ ಅವರ  ಹಿಂದಿನ ತಲೆಮಾರು ಊರನ್ನಾಳಿದ ಪಾಳೇಗಾರರು ಮಗದೊಬ್ಬ ನುಡಿದ ಅವರ ಘನ ವಂಶಜರು ಊರಿಗೆ ವಣಿಕ ಶ್ರೇಷ್ಟರು ಅವನು ಪಿಸುಗುಟ್ಟಿದ ಅವರ ತಾತ ಮುತ್ತಾತಂದಿರು ಊರಾಚೆಯೆ ಬಾಳಿದವರು ನೀವು ಮುಟ್ಟಬಾರದವರು ಊರವರ ಮಲ ಎತ್ತಿದವರು ಹರಿಯ ದರ್ಶನ ಸಿಗದ ಹರಿಜನರು ***************

ಎಂ. ಆರ್. ಅನಸೂಯರವರ ಕವಿತೆಗಳು Read Post »

ಕಾವ್ಯಯಾನ

ಕಾಂತರಾಜು ಕನಕಪುರ ಅವರ ಕವಿತೆಗಳು

ಕಾಂತರಾಜು ಕನಕಪುರ ಅವರ ಕವಿತೆಗಳು ಜಾತಿ ಹೇವರಿಕೆ ಹುಟ್ಟಿಸುವವಿಕಾರ ವೃಕ್ಷಎಲ್ಲಿರುವುದೋ ಬೇರುಯಾರೂ ಅರಿಯರು…ರೆಂಬೆ-ಕೊಂಬೆಗಳು ಲೆಕ್ಕಕ್ಕೆಸಾವಿರಾರು…! ಅವರವರ ಅನುಕೂಲಕೆಯಾರೋ ನೆಟ್ಟರು…ಯಾರೋ ನೀರಿಟ್ಟರು…ಯಾರೋ ಗೊಬ್ಬರ ಕೊಟ್ಟರು…ಹಲವರು ಕಣ್ಣೀರಿಟ್ಟರು…ಅಂತು ಬೆಳೆದು ನಿಂತಿದೆಉದ್ದಂಡ ವಿಷ ವೃಕ್ಷ…! ಈ ಮರದ ನೆರಳು ನೆರಳಲ್ಲ ಅದುಅನುನಯದಿ ನೇಯ್ದ ಉರುಳುಅನುಕೂಲ ಪಡೆದಿಹರು ಕೆಲವರುಸಿಕ್ಕಿಬಿದ್ದು ನರಳುತ್ತಿರುವರು ಹಲವರು ಇನ್ನಾದರೂ…ನಾವು ಹಿಡಿಯಬೇಕಿದೆಅರಿವಿನಿಂದ ಮಸೆದ ಸಮಾನತೆಯ ಅಸ್ತ್ರವನುಕಡಿದುರುಳಿಸಲು ಜಾತಿಯ ವಿಷ ವೃಕ್ಷವನುಆಗ ಮಾತ್ರ ಆಗಬಹುದು ದೇಶದ ಏಳಿಗೆತಪ್ಪಿದರೆ ನಮ್ಮನ್ನು ಕ್ಷಮಿಸದೆಂದೆಂದೂಮುಂಬರುವ ಪೀಳಿಗೆ… ———————– ನಿನ್ನ ಹಾಗೆಯೇ ಇದೆ ಮನದಣಿಯೆ ನೋಡಿ ಮಣಿದೆತುಟಿ ತಲುಪಿದ ಮಾತುಗಳುಅಲ್ಲಿಯೇ ದಸ್ತಗಿರಿಯಾದವುಆಹಾ…! ಎಷ್ಟೊಂದು ಚೆಲುವು? ಇಬ್ಬನಿಯ ಹನಿಗಳು ನೆತ್ತಿಯಮೇಲೆ ಮುತ್ತಿನಂದದಿ ನಿಂದಿಹವುಕದಪುಗಳಲಿ ರಾತ್ರಿ ಕಂಡ ಕನಸಿನಎಳೆಗಳು ಹಸಿಹಸಿಯಾಗಿಹವು…! ತೀಡುತಲಿದ್ದ ತಂಗಾಳಿಗೆ ಗಂಧವುಬೆರೆತು ಸುತ್ತಲೂ ಹರಡುತಲಿತ್ತುಸೂರ್ಯರಶ್ಮಿಗೆ ಸವಾಲೊಡ್ಡುತಿರುವಪಕಳೆಗಳು ಬೆಳಕಿಗೆ ಬಣ್ಣ ಬಳಿಯುತಲಿದ್ದವು…! ಗಾಳಿಯಲ್ಲಿ ಬೆರತ ಗಂಧವುಬಟ್ಟೆಗಳಲ್ಲಿ ಸಿಕ್ಕಿಬಿದ್ದಿತ್ತುಬೆಳಕಿಗೆ ತೀಡಿದ್ದ ಬಣ್ಣಕಂಗಳಿಗೆ ಮೆತ್ತಿಕೊಂಡಿತ್ತು…! ಮುಟ್ಟಬೇಕೆಂಬ ತುಡಿತವನುಕಷ್ಟಪಟ್ಟು ತಡೆದುಕೊಂಡೆನುಕಣ್ಣಿಗೆ ಮೆತ್ತಿದ ಬಣ್ಣ, ಬಟ್ಟೆಗೆ ಅಂಟಿದ ಗಂಧಮನದೊಳಗಿಳಿದು ಮನೆವರೆಗೂ ಬಂದಿವೆ..! ಥೇಟ್ ನಿನ್ನ ಹಾಗೆಯೇ ಇದೆಅದೋ ಅಲ್ಲಿ ಅರಳಿ ನಿಂತಬೇಲಿ ಮೇಲಿನ ಒಂಟಿ ಹೂ…! ————————— ಗತ ಎಂದೋ ಮೀಟಿದ ಶ್ರುತಿಯ ಜಾಡು ಹಿಡಿದುಇಂದು ವೀಣೆಯೊಂದು ಮಿಡಿಯುತಿರುವುದುಹಳೆಯ ಶ್ರುತಿಯ ಹಾಡಿನ ಮೊನೆಯಿದುಕರುಣೆ ಇರದೆ ಎದೆಯನು ಇರಿಯುತಿರುವುದು ಮರೆತ ನೋವನು ಬಿಡದೆ ಕೆದಕುತಿರುವಹಳೆಯ ಗುರುತಿನ ಹಾಡಿದುಕಾಣದಾವುದೋ ಕೈಯ್ಯಿ ಎಡೆಬಿಡದೆಎದೆಯುರಿಗೆ ತಿದಿಯನು ಒತ್ತುತಿರುವುದು ಇರುವ ಸಂತಸದ ಬನವನುಎದೆಯ ಬೆಂಕಿಯು ದಹಿಸುತಲಿರುವುದುಗತದ ಮೇಲೆನ ಪರದೆ ಸರಿಸಿಕೊಳೆತ ನೆನಪುಗಳ ಕಾಡುತಿರುವುದು ಸತ್ತುಹೋದ ಆತ್ಮದ ಹಾಡಿದುಧುತ್ತನೆದ್ದು ಕಾಡುತಿರುವುದುಗತದ ನೆನಪುಗಳು ಗತಿಸುವವರೆಗೂಕಣ್ಣೀರಿನ ಮಳೆಯನು ಸುರಿಸುವುದನುತಪ್ಪದೆ ಜಾರಿ ಇರಿಸಿರುವುದು *******

ಕಾಂತರಾಜು ಕನಕಪುರ ಅವರ ಕವಿತೆಗಳು Read Post »

ಕಾವ್ಯಯಾನ

ಪುಷ್ಪಾ ಮಾಳ್ಕೊಪ್ಪ ಮಿತ – ಹಿತ ಜಗವ ಬೆಳಗುವ ಬಂದುಬಾಲ ಭಾನುವು ಎಂದುಮುತ್ತಿಕ್ಕಲಪ್ಪುದೇನೊ |ತಮವ ಸರಿಸುವುದೆಂದುಜ್ವಲಿಪ ದೀಪವನೆಂದುಮುಟ್ಟಲಪ್ಪುದೇನೊ || ಗಂಗೆ ಯಮುನೆರನ್ನುಕೊಳೆಯ ತೊಳೆಯುವರೆಂದುಅಂಗಳಕೆ ತಪ್ಪುದೇನೊ |ತಪವು ನೇಮಾದಿಗಳುಸನ್ಯಾಸಿಗಲ್ಲದೆಸಂಸಾರಿಗಪ್ಪುದೇನೊ || ಮೈಗೆ ವ್ಯಾಧಿಯು ಎಂದುಮನೆಯ ಮದ್ದೆಂದುಮದ್ದಿಂದೆ ಮರವ ಮಾಡ್ಪುದೇನೊ |ಹಸೆಯು ಹಿತವೆಂದುಹಗಲು ಇರುಳೆರಡುಮಲಗಲಪ್ಪುದೇನೊ || ಮನೆಯ ಮಾಳಿಗೆಯುಸೋರುತಿಹುದೆಂದುಬಂಧುಗಳನೊಡನಿಪ್ಪುದೇನೊ |ಮಮತೆ ಇಹುದೆಂದುಮನುಜ ಮಡಿದರೂಮಡಗಲಪ್ಪುದೇನೊ ||

Read Post »

ಇತರೆ

ಸ್ವಾತಂತ್ರ ಮತ್ತು ಸಮಾನತೆಯ ಗಾಂಧೀಜಿಯ ದೃಷ್ಟಿಕೋನ

ಗಾಂಧೀಜಿ ಮಾನವವತಾವಾದಿಗಳು ಎಲ್ಲ ಜೀವಿಗಳ ಬಗ್ಗೆ ಕಾಳಜಿಯನ್ನೂ ಹೊಂದಿದ್ದರು. ವೈರಿಯನ್ನು ಪ್ರೀತಿಸುವುದು ಎಂಬ ಗುಜರಾತಿ ಗಾದೆಮಾತಿನ ಪ್ರಭಾವ ಅವರ ಮೇಲೆ ಇತ್ತು. ವಿಶ್ವ ಮಾನವರೆಲ್ಲ ಒಂದು. ವಿಶ್ವವೆಲ್ಲ ಒಂದು ಎಂಬ ಅವರ ವೈಚಾರಿಕತೆ ಗ್ರೀನ್ ಮತ್ತು ಬೊಸಂಕ್ಯೂಟ್ (ಃosಚಿಟಿqueಣ) ಅವರನ್ನು ಹೋಲುತ್ತದೆ ಎಂದು ಹೇಳುವರು.

ಸ್ವಾತಂತ್ರ ಮತ್ತು ಸಮಾನತೆಯ ಗಾಂಧೀಜಿಯ ದೃಷ್ಟಿಕೋನ Read Post »

ಕಾವ್ಯಯಾನ

ಯಕ್ಷ ಪ್ರಶ್ನೆ

ಕಾವ್ಯಯಾನ ಯಕ್ಷ ಪ್ರಶ್ನೆ ನೇತ್ರ ಪ್ರಕಾಶ್ ಹಲಗೇರಿ ದಿನೇ ದಿನೇ ನನ್ನಸಾವಿರಾರು ಪ್ರಶ್ನೆಬೆಳೆಸಿದ ಪರಿಯೇಬೇರೆ ನನ್ನಮ್ಮ ಇಂದಿನ ನನ್ನ ಬದುಕೇಬೇರೆ ಭಿನ್ನಾವಿಭಿನ್ನ !ಸಂಸ್ಕೃತಿ ಸಂಸ್ಕಾರಗಳೇಮೌಢ್ಯಗಳಿಲ್ಲಿ ಕೇಳಿನ್ನ ಸರಿ ತಪ್ಪು ನೈತಿಕ ನೈಮಿತ್ತಿಕನೆಲೆಗಟ್ಟನ್ನು ಕಲಿಸಿದೆ ನೀನುತಿಳಿ ಹೇಳಿದ್ದನ್ನು ಕಲಿತೆ ನಾನುಪೂಜೆ ಪುನಸ್ಕಾರ ಬೇಡವೇನು!? ದೇವರು ದಿಂಡರು ಶಾಸ್ತ್ರಸಂಪ್ರದಾಯಗಳೆಲ್ಲ ಗೊಡ್ಡುಈ ಜನರಂತೆ ಬದುಕಲಾಗುತ್ತಿಲ್ಲಏಕೆ ಹೀಗೆ ಪ್ರಪಂಚ ಅರ್ಥವಾಗುತ್ತಿಲ್ಲ! ನೇರಕ್ಕೆ ನೇರ ಖಾರಕ್ಕೆ ಖಾರಸರಿ ಕಾಣದ ವರ್ತನೆಗಳ ಖಂಡನೆಸಹಿಸಲಾಗದ ಮನ ಮಂಡನೆಹೊಂದಿಕೆ ಎಷ್ಟು ಕಷ್ಟವಮ್ಮ!? ನಿನ್ನ ಮತ್ತು ನೀ ಕಲಿಸಿದಮಾನ ಮರ್ಯಾದೆಯೇ ಬೇರೆಲೋಕದ ಅಪಾರ ನಿದಿಯಲ್ಲಿ ಅಡಗಿದೆಯೆ? ಗೌರವಧಾರೆ? ಇನ್ನೂ ಮಿಕ್ಕಿದೆ ನನ್ನಮ್ಮನಲ್ಲಿಕೇಳುವ ಯಕ್ಷ ಪ್ರಶ್ನೆ ಮಂಡಲಪ್ರಶ್ನೆಗೆ ಪ್ರಶ್ನೆಯೇ ಉತ್ತರಗಳೇ ಹೌಹಾರಿ ಬದುಕುತ್ತಿರುವೆ ಅಮ್ಮ ನೀ ಹೇಳು ಉತ್ತರ ನನ್ನ ಯಕ್ಷಾತೀತ ಪ್ರಶ್ನೆಗಳಿಗೆ ಕಾತರ!? ***************************

ಯಕ್ಷ ಪ್ರಶ್ನೆ Read Post »

You cannot copy content of this page

Scroll to Top