ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ರತ್ನರಾಯಮಲ್ಲ

ಸಾವಿಗೆ ಮಾನದಂಡವಿಲ್ಲ ಜನಾಬ್
ಬಾಳಿಗೆ‌ ಸಿದ್ಧಸೂತ್ರಗಳಿಲ್ಲ ಜನಾಬ್

ಅಸ್ತಿತ್ವವು ಬೇಕು ಜೀವನ ಸಾಗಿಸಲು
ಅನುಕರಣೆಗೆ ಉಳಿಗಾಲವಿಲ್ಲ ಜನಾಬ್

ಹೊಗಳಿಕೆ-ತೆಗಳಿಕೆ ಬಿಳಿ ಮೋಡಗಳು
ಕಾಲಮಾನವು ಶಾಶ್ವತವಿಲ್ಲ ಜನಾಬ್

ಬದುಕಿಗೆ ನಾವೆ ಹೆಗಲು ಕೊಡಬೇಕು
ಉಡುದಾರ ಉಳಿಯುವುದಿಲ್ಲ ಜನಾಬ್

ಯೋಚನೆಗಳು ಭಾರವಾಗದಿರಲಿ ‘ಮಲ್ಲಿ’
ಪ್ರೀತಿಯೊಂದೆ ಅಳಿಯುವುದಿಲ್ಲ ಜನಾಬ್

*********************

About The Author

1 thought on “ಗಜಲ್”

Leave a Reply

You cannot copy content of this page

Scroll to Top