ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತರಹಿ ಗಜಲ್

ನಯನಾ ಜಿ.ಎಸ್.ರ ಗಜಲ್ ಸಾನಿಮಿಶ್ರಾ

ವಿಜಯಲಕ್ಷ್ಮಿ ಕೊಟಗಿ

ಮೇಘ ವಿಹಂಗಮ ಮೋಡಿಗೆ ಮರುಳಾಗಲು ವಧುವಾದಳು ವಸುಧೆ!
ಹನಿ ಇಬ್ಬನಿಗಳು ಇಳೆಯ ಬಳಸಿ ಸಿಂಗರಿಸಲು ವಧುವಾದಳು ವಸುಧೆ!

ಬೆಳ್ಳಕ್ಕಿ ಹೂಡಿದ ರಥಸಂಚರಣದಿ ವರುಣನ ರಸಿಯ ಮೆರವಣಿಗೆ
ವರ್ಷದ ಸುರಗಿಧಾರೆ ತನುವಾವರಿಸಲು ವಧುವಾದಳು ವಸುಧೆ!

ಹೊನ್ನಕಿರಣಗಳ ಹೂಮುತ್ತಿಗೆ ಮೊಲ್ಲೆಯ ಉನ್ಮಾದದ ಘಮ
ರಸಿಕತೆಯ ಆಲಿಂಗನದಿ ಪುಳಕಿತವಾಗಲು ವಧುವಾದಳು ವಸುಧೆ!

ಸದಾ ಬಹಾರ್ ಗಂಧದೊಡತಿಗೆ ಹರಿದ್ವರ್ಣದ ಭವ್ಯ ಸ್ವಾಗತ
ಸಿರಿ ಸಮೃದ್ಧಿಯ ಒಲವ ಒಸಗೆಗೆ ಮೀಸಲು ವಧುವಾದಳು ವಸುಧೆ!

ಶ್ರಾವಣದ ತುಷಾರದಲಿ ಗಂಗೆಪೂಜೆ ತವರ ಬಾಗೀನ ಕನ್ಯೆಗೆ
ಅಂಬರನ ವರಿಸುವ ಹಂಬಲದಿ ಕುಲವತಿ ವಧುವಾದಳು ವಸುಧೆ

**********************

About The Author

3 thoughts on “ತರಹಿ ಗಜಲ್”

  1. ತರಹೀ ಗಜಲ್ ಚನ್ನಾಗಿದೆ, ಆದರೆ ಮಕ್ತಾದ ಸಾನಿ ಮಿಸ್ರಾದಲ್ಲಿ ಕಾಫಿಯಾ ತಪ್ಪಾಗಿದೆ ಗಮನಿಸಿ

  2. ಹೌದು ಗೊತ್ತಾಯ್ತು.ಧನ್ಯವಾದ ನಿಮಗೆ. ಸರಿಪಡಿಸುವೆ.

    ಹಂಬಲಿಸಿಹಳು ಕುಲವತಿ ಅಂಬರನ ವರಿಸಲು ವಧುವಾದಳು ವಸುಧೆ!

Leave a Reply

You cannot copy content of this page

Scroll to Top