ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕವಿತೆ

ನೀನು

ಸಂತೆಬೆನ್ನೂರು ಫೈಜ್ನಟ್ರಾಜ್

Seedling, Gardening, Greenhouse, Chilli

೧
ನೀನು ಎದುರಿರಬೇಕಿತ್ತು
ಕಪಾಳ ನೆನೆಯುತ್ತಿರಲಿಲ್ಲ ಇಷ್ಟು
ಮನಸಾರೆ ನಕ್ಕು ಯಾವ ಕಾಲವೋ!

೨
ಬರಿ ಇದ್ದರೆ ಸಾಕಿತ್ತು ನೀನು
ಕಣ್ಣ ಸನ್ನೆಯಲ್ಲೇ ಆ ಮಾತು ಎದೆಗಿಳಿದು
ನಾನು ಇನ್ನಷ್ಟು ಮನುಷ್ಯನಾಗುತ್ತಿದ್ದೆ!

೩
ನೀನಿಲ್ಲ ಅಂತ ಅನ್ನಿಸಿಲ್ಲ
ನಾನಿದ್ದೇನಲ್ಲಾ….ಜೀವಂತ
ಅಂದರೆ ನೀ ಎದೆಗೂಡಲ್ಲಿ ಬಂಧಿ?

೪
ನೀ ನೆಟ್ಟ ಪ್ರೀತಿ ಬಳ್ಳಿ ಒಣಗಲು
ಬಿಡಲಾರೆ ವರ್ಗಾವಣೆ ಮಾಡುತ್ತಾ ಹೋಗಲು
ಕಲಿಯಬೇಕಿದೆ ಒಲವ ನಿನ್ನಂತೆ!

೫
ಅಪ್ಪ ಹೋದರೆಂದು ನೀನೂ ಎದ್ದು ಹಿಂದೆಯೇ ಹೋದೆ
ನಾವೆಂಬುದು ಏನಿದ್ದರೂ ಖಾಲಿ ….. ನೀನು ಎದೆ ಮರದ ಟೊಂಗೆಯ ಒಂಟಿಸ್ವರದ ಕೋಗಿಲೆ…. ಅಮ್ಮ!!!

*************************

About The Author

Leave a Reply

You cannot copy content of this page

Scroll to Top