ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ತೂರಾಡುತಿದೆ ದೀಪ

ಶಾಂತಲಾ

lotus brass oil lamp lotus brass oil lamp lamps of kerala stock pictures, royalty-free photos & images

ತೂರಾಡುತಿದೆ ದೀಪ
ತೋರಿ ತೋರಿ
ತೂರಾಡುತಿದೆ ದೀಪ
ತೂಗಿ ತೂಗಿ

ಉಸಿರಿಕ್ಕಿ ಒಂದೆಡೆ
ಉಸಿರ ಹುಡುಕುತ
ಕಡೆಗೆ ಉಸಿರು
ಕೊಸರಾಡಿ
ಕೊನೆಉಸಿರ ಕರೆಯುತ
ದೀಪ
ತೂರಾಡುತಿದೆ ದೀಪ
ತೋರಿ ತೋರಿ
ಕತ್ತಲೆಗೆ ಕನಸೆಂದು
ಬೆಳಕುತಾ ನಿಹೆನೆಂದು
ಉರಿದುರಿದು ಕರಗಿಹುದು
ನಿಸ್ವಾರ್ಥ ದೀ ದೀಪ

ತೂರಾಡುತಿದೆ ದೀಪ
ತೋರಿ ತೋರಿ
ತೂರಾಡುತಿದೆ ದೀಪ
ತೂಗಿ ತೂಗಿ

ತುತ್ತು ಅನ್ನವನಿಕ್ಕಿ
ಪ್ರೀತಿ ಮೈಮನವಾಗಿ
ಮುತ್ತಿಕ್ಕಿ ಮೈಮರೆತು
ಬರಿದೆ ಬತ್ತಲೆಯಾಗಿ
ಕತ್ತಲೆಯ ಹುಡುಕುತಿದೆ

ತೂರಾಡುತಿದೆ ದೀಪ
ತೋರಿ ತೋರಿ
ಮಣ್ಣಹಣತೆಯ ದೀಪ
ಕನಸುಗಳ ಕುಡಿ ದೀಪ
ಉತ್ಸಹಕೆ ಉತ್ಸಹವು
ಈ ಹೊನ್ನ ದೀಪ

ತೂರಾಡುತಿದೆ ದೀಪ
ತೋರಿ ತೋರಿ

ಹೊಳೆವ ಕಣ್ಗಳ ದೀಪ
ಮುದ್ದು ಮುಖದಾ ದೀಪ
ದಿಟ ದಟ್ಟ ಧೈರ್ಯ
ಸಾಹಸದ ಸಂತಸದ
ದೀಪಾ
ಸೊರಗಿ ಶರಣಾಗುತಿದೆ
ಕರಗಿ ನೀರಾಗುತಿದೆ
ಕ್ಷಣಿಕತೆ ನೆನಪಿಸುತ
ಮೆರೆಯುತಿದೆ
ಪ್ರೀತಿಯಲಿ
ಕಾಂತಿಯಲಿ ದೀಪ

ತೂರಾಡುತಿದೆ ದೀಪ
ತೋರಿ ತೋರಿ

ನಿಶ್ಶಬ್ಧ ನಿರಾಳ
ನಿಸರ್ಗದಾ ಸ್ವರವು
ಆಳದಲಿ ಅಂತ್ಯದಲಿ
ನಿರಾಡಂಬರದಲಿ
ಪಸರಿಸುತ
ಪ್ರೇಮವನು
ಕರಗಿತನ್ನಲಿ ತಾನು

ತೂರಾಡುತಿದೆ ದೀಪ
ತೋರಿ ತೋರಿ

ಕ್ಷಣಿಕ ಬದುಕದು ದೀಪ
ಕತ್ತಲೆಯ ಕರೆಯುತಿದೆ
ಮರು ಹುಟ್ಟು
ಮರು ಬೆಳಕು
ಮರು ಬೆಳಕು
ಕತ್ತಲು
ಬೆಳಕ ಕಣ್ಣಿಗೆ
ತೋರಿ
ಬಯಲ ಬೆಳಕಲಿ
ದೀಪ ಬಯಲಾಗತಿದೆ
ದೀಪ,

ತೂರಾಡುತಿದೆ ದೀಪ
ತೋರಿ ತೋರಿ

*****************

About The Author

Leave a Reply

You cannot copy content of this page

Scroll to Top