ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಮರುಳಸಿದ್ದಪ್ಪ ದೊಡ್ಡಮನಿ

red and white heart shape illustration

ನಿನ್ನ ಹೆಜ್ಜೆ ಗುರುತು ಮಣ್ಣಿನ ಹುಡಿಯಲಿ ಅಳುಕಿದೆ ಸಾಕಿ
ಎದೆಯ ದಾರಿಯಲಿ ನಡೆದು ಬದುಕು ತುಂಬಿ ತುಳುಕಿದೆ ಸಾಕಿ

ಒಲವಿನ ಪರಿಮಳ ಒಡೆದ ಕನ್ನಡಿ ಚೂರಿಗೆ ಮುತ್ತಿಕ್ಕಿದೆ ನೋಡು
ಉಸಿರ ಬಸಿದು ಕನಸು ಕಟ್ಟಿ ಕಾಲು ಹಾದಿ ಸಾಗಲು ನರಳುತಿದೆ ಸಾಕಿ

ಭಾವ ಬಯಲಿಗೆ ಬೆಸುಗೆ ಹಾಕಿ ಮೌನ ಮನೆ ಮಾಡಿದೆ
ಬಾಹು ಬಂಧನದಿ ಬಂಧಿಯಾಗುವ ಹೊಸ ಕನಸು ಚಿಗುರುತಿದೆ ಸಾಕಿ

ಕಮರಿದ ಆಸೆ ಹಸಿರಾಗಿ ಉಸಿರ ಸೂಸಲು ಬಂದಿದೆ
ಒಳಗಿನ ಗಾಯ ಮಾಯುವ ಮುನ್ನ ಪ್ರತಿ ಬಿಂಬ ಕಾಡುತಿದೆ ಸಾಕಿ

ಮರುಳನೆದೆಯ ಹಾಸಿಗೆಯಲಿ ನಕ್ಷತ್ರದ ಬೆಳಕು ಹರಡಿ ಚಿತ್ತಾರ ಚೆಲ್ಲಿವೆ
ಹುಡಿ ತುಳಿದ ಪಾದಕೆ ಮಲ್ಲಿಗೆ ಹಾಸಿ ಮನವು ನಗುತಿದೆ ಸಾಕಿ

********************

About The Author

1 thought on “ಗಜಲ್”

Leave a Reply

You cannot copy content of this page

Scroll to Top