ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಅಕ್ವೇರಿಯಮ್ ಮತ್ತು ಚಿತ್ರ

ವಿಶ್ವನಾಥ ಎನ್. ನೇರಳಕಟ್ಟೆ

Lionfish, Underwater, Fish, Swimming

ತೇಲುತ್ತಿರುವ ನೀರಿನಲ್ಲಿ
ಈಜಾಡುತ್ತಿರುವ ಮೀನಿನ
ಚಿತ್ರ ಬಿಡಿಸಿದ ಕಲಾವಿದನೊಬ್ಬ
ಎದೆ ತಟ್ಟಿಕೊಂಡ ಹೆಮ್ಮೆಯಿಂದ

ದಿಟ್ಟಿಸುತ್ತಾ ಎದುರಿಗಿದ್ದ ಅಕ್ವೇರಿಯಮ್ ಮೀನು
ಸಂತಸದಿಂದ ಹೇಳಿಕೊಂಡ-

‘ಇದೇ ಅದು, ಅದೇ ಇದು,
ವ್ಯತ್ಯಾಸವಿಲ್ಲ ಒಂಚೂರು’

ಸಂತೃಪ್ತಿಯಿಂದ ಊರೆಲ್ಲಾ ಸುತ್ತಾಡಿ
ಮನೆಗೆ ಬಂದವನಿಗೆ ಅಚ್ಚರಿ
ಈಗ ಮೀನಿಲ್ಲ ಅಕ್ವೇರಿಯಮ್‍ನಲ್ಲಿ
ಬಂದು ಕುಳಿತಿದೆ ಅದು ಅವನ ಚಿತ್ರದೊಳಗೆ

ವಿಚಾರಿಸಿದಾಗ ಮೀನು ಹೇಳಿದ್ದು ಇಷ್ಟು-
‘ಅಕ್ವೇರಿಯಮ್‍ಗಿಂತ ನಿನ್ನ ಚಿತ್ರವೇ ಹಿತವಾಗಿದೆ
ಏಕೆಂದರೆ, ಇದರಲ್ಲಿ ಕಲಾತ್ಮಕತೆಯಿದೆ’

*****************

About The Author

Leave a Reply

You cannot copy content of this page

Scroll to Top