ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

 ಮುಂದಿನ ಪೀಳಿಗೆಗೂ

ಡಾನವೀನ್ ಕುಮಾರ ಎ.ಜಿ

Abstract watercolor wavy painting with beautiful seaside colour tones, artistic details, closeup. Modern contemporary art on white backdrop for wallpapers, templates, flyers, layouts, posters, cards.

ಒಂದೊಮ್ಮೆ ನಾ
ನಡೆಯುತ್ತಿರುವಾಗ ಒಬ್ಬನೇ !
ಕಂಡೆ ಅಲ್ಲಲ್ಲಿ
ಕೊಳೆತುನಾರುವ ಹೊಲಸು ತುಂಬಿದ
ಮನದ ಮಾತಿನ ಜನರನ್ನ //

ಅಧಿಕಾರದಾಸೆಗೆ, ಕರಜೋಡಿಸದ
ಕರುಣಾ ಹೀನರು.
ಉಪಕಾರದ ಉಪದೇಶ ನೀಡುವ
ಡೋಂಗಿತನದವರು,
ಕೈಬಾಯಿ, ಕಚ್ಚೆಹರುಕ ನಾಟಕಕಾರರು//

ಸಹೋದರರೇ ತಲೆಹಿಡುಕರು !
ವಂಚಕರು, ಬಂಧು ಬಳಗದವರು
ಹತ್ತಿರದಲ್ಲೆ ಇರುವ ಮೋಸಗಾರರು
ಒಳಗೊಳಗೇ ದ್ವೇಷಕಾರುವವರು
ಜೊತೆಜೊತೆಯಲಿದ್ದು ವೈಷಮ್ಯ ತೋರುವರು ! //

ಅಕ್ಷರ ಲೋಕದ ಜ್ಞಾನವಂತ ಪಂಡಿತರು
ಸಮಾಜದ ಚುಕ್ಕಾಣಿ ಹಿಡಿದವರು
ಬೋಧಕರು , ವೈದ್ಯರು, ಆಡಳಿತಗಾರರು
ಸ್ವಾಥ೯ಕ್ಕೆ ತಮ್ಮತನವ ಮಾರಿಕೊಂಡಿಹರು//

ಬರಬೇಕು,ಬದಲಾಗಬೇಕು
ಬರುಯ ಭ್ರಮೆಯು ಕಲ್ಪನೆಯು !
ಬಾಯಿ ಮಾತಿನ ಬಡಿವಾರವು
ಸರ್ವರೋಳಗೆ ಜಗದೊಳಗೆ
ಇದೇ ಸತ್ಯ ಇಂದು- ಮುಂದಿನ ಪೀಳಿಗೆಗೂ ! //


About The Author

10 thoughts on “ಮುಂದಿನ ಪೀಳಿಗೆಗೂ”

  1. ಶ್ರೀ ಫಕ್ಕೀರಪ್ಪ ಕಮದೋಡ

    ಅತಿ ಉತ್ತಮ ಕವನ ಸರ್.
    ನೈಜತೆಯ ಅನಾವರಣ….. ಪ್ರತಿಬಿಂಬವೂ……

  2. ತುಂಬಾ ಅರ್ಥಗರ್ಭಿತ. ಸುತ್ತಮುತ್ತಲಿನ ಕೊಳೆಯನ್ನು ತೊಳೆಯುವ ಒಂದು ಕಿರುಪ್ರಯತ್ನ.

  3. ವಾಸ್ತವದ ಸತ್ಯವನ್ನು ಅದ್ಭುತವಾಗಿ ಬಿಚ್ಚಿಟ್ಟಿದ್ದಿರಿ ಗುರುಗಳೆ.

Leave a Reply

You cannot copy content of this page

Scroll to Top