ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಕ್ಕಮಹಾದೇವಿ ಜನುಮದಿನದ ವಿಶೇಷ

ಗಜಲ್

ಪ್ರಭಾವತಿ ಎಸ್ ದೇಸಾಯಿ

ಮಾಯಾ ಮೋಹದ ಬಟ್ಟೆಯನು ಕಳಚಿ ಎಸೆದವಳು
ವೈರಾಗ್ಯದ ಬಟ್ಟೆಯನು ಅರಸುತ್ತಾ ಹೊರಟವಳು

ಅರಮನೆಯ ವೈಭವದ ಸುಖ ದಿಕ್ಕರಿಸಿದವಳು
ಭವದ ಸುಳಿಗೆ ಸಿಲುಕದೆ ಬಯಲಲಿ ಒಂದಾದವಳು

ಹಸಿವು ತೃಷೆ ಭಾದೆಗಳನು ಕಪೂ೯ರದಂತೆ ದಹಿಸಿದವಳು
ಅಂಗ ಚೇಷ್ಟೆ ಕಾಮ ಕ್ರೋಧ ಗಳ ಕವಚ ಕಳಿಚಿದವಳು

ಜಗ ನಿಮಿ೯ಸಿದ ಮೌಢ್ಯ ಬೇಲಿಯನು ದಾಟಿದವಳು
ಸ್ತ್ರೀ ಸಂಕುಲನಕೆ ಆತ್ಮಸ್ಥೈರ್ಯ ತುಂಬಿದವಳು

ಶರಣ ಸಮೋಹದಲಿ ಅಗ್ರ ರತ್ನವಾಗಿ ಬೆಳಗಿದವಳು
ನಿರಾಕಾರನ ಪಡೆಯಲು ಸರ್ವವನು ತ್ಯಜಿಸಿದವಳು

ಅಲ್ಲಮನ ಪ್ರಶ್ನೆಗೆ ಉತ್ತರಿಸಿ ಲೋಕ ಗೆದ್ದವಳು
ಸಾವಿಲ್ಲದ ಕೇಡಿಲ್ಲದ ಚೆಲುವನನು ಮೆಚ್ಚಿದವಳು

ಬೆಟ್ಟ ಹಳ್ಳ ಕಣವೆ ಗಳ ದಾಟುತ್ತಾ ಮುನ್ನಡಿದವಳು
ಬಯಲ”ಪ್ರಭೆ”ಯ ಅರಸುತ್ತಾ ಕದಳಿಗೆ ನಡೆದವಳು

**********************************************

About The Author

Leave a Reply

You cannot copy content of this page

Scroll to Top