ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ

ವಿಶೇಷ ಲೇಖನ ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ ಆಶಾ ಸಿದ್ದಲಿಂಗಯ್ಯ ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರಿವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಗುರುತಿಸ ಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು.  ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳ ಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಇಲ್ಲವೆ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ. ಸುಮಾರು 15 ಕಿ.ಮಿ. ಹಾಗೂ ಶಿರಾಳ ಕೊಪ್ಪದಿಂದ 4 ಕಿ.ಮಿ.ದೂರದಲ್ಲಿದೆ. ಇದೀಗ ಇದು ಪ್ರವಾಸಿ ತಾಣವಾಗಿಯೂ ಪ್ರಸಿದ್ದವಾಗಿದೆ. ಪರರ ಪಾಲಾಗಿದ್ದ ಇಲ್ಲಿರುವ ಕೌಶಿಕ ಮಹಾರಾಜರ ಕೋಟೆ ಹಾಗೂ ಅಕ್ಕನ ದೇವಸ್ಥಾನ ಇರುವ ಜಮೀನನ್ನು ಉಳಿಸಲು ಪ್ರಯತ್ನಿಸಿ, ಹೋರಾಟ ನಡೆಸಿ, ಯಶಸ್ವಿಯಾಗಿದ್ದು ಸಿರಿಗೆರೆಯ ಶ್ರೀಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು. ಇದನ್ನು ಇವರು ಉಳಿಸಿ ಕೊಟ್ಟ ನಂತರ ಸರಕಾರ ಇತ್ತ ಗಮನ ಹರಿಸಿ,ಅದರ ಅಭಿವೃದ್ದಿಗೆ ಮುಂದಾಗಿದೆ. ಇಂತಹ ಉಡುತಡಿಯಿಂದ ಎಲ್ಲವನ್ನೂ ತ್ಯಜಿಸಿ ಹೊರಟ ಅಕ್ಕಮಹಾದೇವಿಯವರು ಮುಂದೆ ಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ ಸಿದ್ಧರಾಮ ಮೊದಲಾದ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡರಲ್ಲದೇ, “ಚನ್ನಮಲ್ಲಿಕಾರ್ಜುನ” ಎಂಬ ಅಂಕಿತ ನಾಮದಲ್ಲಿ ವಚನ ಸಾಹಿತ್ಯಕ್ಕೆ (ಶರಣ ಸಾಹಿತ್ಯ) ತಮ್ಮದೇ ಆದ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದಾರೆ.  ಒಮ್ಮೆ ಅನುಭವ ಮಂಟಪದಲ್ಲಿ ಚರ್ಚೆ ನಡೆಯುತ್ತಿರುವಾಗ ಮಹಾದೇವಿಯ ಆಗಮನವಾಗುತ್ತದೆ. ಆಗ ಮಡಿವಾಳ ಮಾಚಿದೇವರು ಎದ್ದು ನಿಂತು ಬುದ್ಡಿ ಉಡುತಡಿಯ ಮಹಾದೇವಿ ಅಕ್ಕನವರು ಆಗಮಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಆಗ ಬಸವಣ್ಣನವರು ಮಾಚಿದೇವರೇ ಮಹಾದೇವಿ ಯವರನ್ನು ಮರ್ಯಾದೆಯಿಂದ ಕರೆ ತನ್ನಿ ಎಂದು ಹೇಳಲು ಮಾಚಿದೇವರು ಆಕೆಗೆ ನಡೆ ಮುಡಿಯನ್ನು ಹಾಸುತ್ತಾರೆ. ಆಗ ಮಹಾದೇವಿಯು ಮಡಿಯನ್ನು ಸರಿಸಿ ಒಳಗೆ ಬರುತ್ತಾಳೆ. ಅಲ್ಲಿಂದ ಮುಂದೆ ಅಲ್ಲಮಪ್ರಭುದೇವರು ಮತ್ತು ಅಕ್ಕಮಹಾದೇವಿಯ ನಡುವೆ ಈ ರೀತಿ ಸಂಭಾಷಣೆ ನಡೆಯುತ್ತದೆ. ಅಕ್ಕ : ಪ್ರಭುದೇವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ, ಅಲ್ಲಮ : ನಿಲ್ಲು ತುಂಬು ಯೌವನದ ಸತಿ ನೀನು ಇತ್ತಲೇಕೆ ಬಂದೆಯವ್ವ. ಸತಿ ಎಂದರೆ ಮುನಿಯುವರು ನಮ್ಮ ಶರಣರು. ನಿನ್ನ ಪತಿಯ ಹೆಸರ ಹೇಳಿದರೆ ಬಂದು ಕುಳ್ಳಿರು ಅಲ್ಲವಾದರೆ ತೆರಳು ತಾಯೆ. ನಮ್ಮ ಶರಣರ ಸಂಘ ಸುಖದಲಿ ಸನ್ನಿಹಿತವ ಬಯಸುವೆಯಾದರೆ ನಿನ್ನ ಪತಿಯ ಹೆಸರ ಹೇಳಾ, ಎಲೆ ಅವ್ವಾ ಅಲ್ಲವಾದರೆ ನಿನಗೆ ಇಲ್ಲಿ ಸ್ಥಳವಿಲ್ಲ. ಅಕ್ಕ : ಹರನೇ ಗಂಡನಾಗಬೇಕೆಂದು ಅನಂತ ಕಾಲ ತಪಿಸಿದೆ ನೋಡಾ ! ಎನ್ನ ಜನ್ಮ ಜನ್ಮಾಂತರದ ಬಯಕೆ ಆ ಶಿವನೇ ಗಂಡನಾಗಬೇಕೆಂಬುದು ಅದು ಈ ಜನ್ಮದಲ್ಲಿ ಸಿದ್ದಿಸಿದೆ. ಗುರು ನನ್ನನ್ನು ಚನ್ನಮಲ್ಲಿಕಾರ್ಜುನನಿಗೆ ವಿವಾಹ ಮಾಡಿ ಕೊಟ್ಟಿದ್ದಾನೆ. ಗುರುವೇ ತೆತ್ತಿಗನಾದ, ಲಿಂಗವೇ ಮದುವಣಿಗನಾದ, ಆನು ಮದುವಣಗಿತ್ತಿಯಾದೆನು. ಈ ಭುವನವೆಲ್ಲವರಿಯಲು ಅಸಂಖ್ಯಾತರೆನ್ನ ತಾಯಿ ತಂದೆಗಳು, ಕೊಟ್ಟರು ಪ್ರಭುವಿನ ಮನೆಗೆ ಸಾದೃಶ್ಯವಪ್ಪ ವರನನ್ನು ನೋಡಿ, ಇದು ಕಾರಣ ಚೆನ್ನಮಲ್ಲಿಕಾರ್ಜುನನೇ ಗಂಡನೆನಗೆ ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧ ವಿಲ್ಲವಯ್ಯಾ ಪ್ರಭುವೇ. ಅಲ್ಲಮ : ಈ ಮಾತಿನ ಚಮತ್ಕಾರವನ್ನು ನಮ್ಮ ಶರಣರು ಮೆಚ್ಚಲಾರರು ಮಹಾದೇವಿ. ನಿನ್ನ ಚರಿತ್ರೆಯನ್ನು ಲೋಕ ತಿಳಿಯದೆಂದು ಭಾವಿಸಬೇಡ. ಲಗ್ನವಾದ ಕೌಶಿಕನ ಮೇಲೆ ತಪ್ಪನ್ನು ಹೊರೆಸಿ ಅರಮನೆಯನ್ನು ಬಿಟ್ಟು ನಿರ್ವಾಣ ಶರೀರಿಯಾಗಿ ಹೊರಟು ಬಂದಿರುವೆ ಎಂಬ ಮಾತು ನಿಜವೇ ? ಪತಿಯ ಮೇಲೆ ತಪ್ಪನ್ನು ಹೊರಿಸಿ ಬರುವ ಸತೀಧರ್ಮವನ್ನು ಈ ನಮ್ಮ ಶರಣರು ಮೆಚ್ಚಲಾರರು. ಅಕ್ಕ : ನನ್ನ ಮದುವೆಯ ಕತೆಯನ್ನು ಪ್ರಪಂಚ ಹೇಗಾದರೂ ತಿಳಿದು ಕೊಂಡಿರಲಿ. ನಾನು ಮೊದಲಿನಿಂದಲೂ ಚನ್ನಮಲ್ಲಿಕಾರ್ಜುನನಿಗೆ ಮೀಸಲು ಹೆಣ್ಣು. ಸಾವ ಕೆಡುವ ಗಂಡಂದಿರನೆಂದೂ ಬಯಸಿದವಳಲ್ಲ. ಸೀಮೆ ಇಲ್ಲದ ನಿಸ್ಸೀಮ ಚಲುವನಿಗೆ ಮಾತ್ರ ಒಲಿದವಳು. ನನ್ನ ಜೀವನದಲ್ಲಿ ಕೌಶಿಕನ ಪ್ರಸಂಗ ಒಂದು ದೈವ ಕೃಪೆಯಂತೆ ಬಂದಿತಷ್ಟೇ. ಸ್ತ್ರೀಯ ಸೌಂದರ್ಯದ ವ್ಯರ್ಥ ವ್ಯಾಮೋಹವನ್ನು ಬಿಡಿಸಲು ದಿಗಂಬರಳಾಗಿ ಅರಮನೆಯನ್ನು ತ್ಯಜಿಸಿ ಬಂದೆ. ಸೌಂದರ್ಯದ ಹಂಗನ್ನು ಹರಿದೊಗೆದು ಬಂದಂತಹವಳು. ಅಲ್ಲಮ : ನಿನ್ನ ದೇಹದ ಮೋಹ ನಿನಗಿನ್ನು ಹೋಗಿಲ್ಲ, ನಿನ್ನ ಸೌಂದರ್ಯದ ಮೋಹ ನಿನಗಿನ್ನೂ ಉಳಿದಿದೆಯಲ್ಲವೇ? ಅಕ್ಕ : ಇಲ್ಲ, ಆ ಭಾವ ನನಗೆ ಎಳ್ಳಷ್ಟೂ ಉಳಿದಿಲ್ಲ, ಕಾಯ ಕರ್ರನೆ ಕಂದಿದರೇನಯ್ಯ ? ಕಾಯ ಮಿರ್ರನೆ ಮಿಂಚಿದರೇನಯ್ಯ ? ಅಂತರಂಗ ಶುದ್ಧವಾದ ಬಳಿಕ ಚನ್ನಮಲ್ಲಿಕಾರ್ಜುನನಿಗೆ ಒಲಿದ ಅಂಗವು ಹೇಗಿದ್ದರೇನಯ್ಯ ಪ್ರಭುವೇ ? ಅಲ್ಲಮ : ಇದು ಬರಿಯ ಆಡಂಬರದ ಮಾತು, ಮಾತಿನಂತೆ ನಡೆ ಇಲ್ಲದವರನ್ನು ಗುಹೇಶ್ವರ ಲಿಂಗ ಮೆಚ್ಚುವವನಲ್ಲ. ಅಂತರಂಗದ ನಾಚಿಕೆ ಬಹಿರಂಗದಲ್ಲಿ ತಲೆದೋರುತ್ತಿದೆ. ಸೀರೆಯನ್ನಳಿದು ಕೂದಲನ್ನೇಕೆ ಮರೆಮಾಡಿ ಕೊಳ್ಳಬೇಕಾಗಿತ್ತು, ಈ ವರ್ತನೆ ಒಪ್ಪವಲ್ಲ ಗುಹೇಶ್ವರ ಲಿಂಗಕ್ಕೆ. ಅಕ್ಕ : ನಿಜ. ಒಂದರ ಹಂಗನ್ನು ಬಿಟ್ಟು , ಇನ್ನೊಂದರ ಹಂಗನ್ನು ನಾನು ಹೊಂದಿದ್ದೇನೆಂದು ನೀವು ಹೇಳುವ ಮಾತು ನಿಜ. ಆದರೆ ಅದು ನನಗಾಗಿ ಅಲ್ಲ, ನಿಮಗಾಗಿ ಅಂದರೆ ಜನರ ಹಂಗಿಗಾಗಿ ಇದನ್ನು ಅವಲಂಬಿಸಿದ್ದೇನೆ. ಫಲ ಒಳಗೆ ಪಕ್ವವಾದಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು. ಕಾಮನ ಮುದ್ರೆಯ ಕಂಡು ನಿಮಗೆ ನೋವಾದಿತೆಂದು ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ಕಾಡದಿರಣ್ಣ ಚನ್ನಮಲ್ಲಿಕಾರ್ಜುನನ ದೇವರ ದೇವನ ಒಳಗಾದವಳ. ಅಲ್ಲಮ : ಏನೂ ! ಫಲ ಪಕ್ವವಾದಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು ಎಂದೆಯಲ್ಲವೆ ನಾನು ಹೇಳುತ್ತೇನೆ ಕೇಳು, ಸಿಪ್ಪೆ ಒಪ್ಪಗೆಟ್ಟಾಗ ಹಣ್ಣಿನ ರಸ ಕೊಳಕಾಗುತ್ತದೆ ಅದನ್ನಾದರೂ ಮೆಚ್ಚುವುದು ಹೇಗೆ ? ಅಕ್ಕ : ಆ ಹಣ್ಣನ್ನು ನಾನು ಹಾಗೇ ಇಟ್ಟಿಲ್ಲ ಪ್ರಭುವೇ, ಎಂದೋ ಚನ್ನಮಲ್ಲಿಕಾರ್ಜುನನಿಗೆ ಸಮರ್ಪಿಸಿ ಬಿಟ್ಟಿದ್ದೇನೆ. ಅರಿಷಡ್ವರ್ಗಗಳನ್ನಳಿದು ನನ್ನ ದೇಹವನ್ನು ವ್ಯಾಪಿಸಿರುವ ಸಚ್ಛಿದಾನಂದಾತ್ಮಕವಾದ ರಸ ಅದು. ಸಿಪ್ಪೆ ಒಪ್ಪಗೆಟ್ಟರು ಕೊಳೆಯಲಾರದು, ನನ್ನ ಒಳ ಹೊರೆಗೆಲ್ಲವ ನಳಿದು ನನ್ನತನ ಒಂದೂ ಇಲ್ಲವೆಂದು ಎಂದೆಂದೂ ಅಳಿಯದ ಅಮರ ಪವಿತ್ರತೆಯನ್ನು ತಂದು ಕೊಟ್ಟಿದೆ ಪ್ರಭುವೆ. ಅಲ್ಲಮ : ಈ ಬಾಹ್ಯ ಬ್ರಹ್ಮದ ಬೆಡಗನ್ನು ನಾವು ಮೆಚ್ಚುವವರಲ್ಲ. ನಾ ಸತ್ತೆನೆಂದು ಹೆಣ ಕೂಗಿದುದುಂಟೆ ? ಬೈಚಿಟ್ಟ ಬಯಕೆ ಕರೆದುದುಂಟೆ ? ಹೆಪ್ಪಿಟ್ಟ ಹಾಲು ಸಿಹಿಯಪ್ಪುದೇ ? ಈ ಮಾತು ಒಪ್ಪವಲ್ಲ ಗುಹೇಶ್ವರ ಲಿಂಗದಲ್ಲಿ. ಅಕ್ಕ : ಸತ್ತ ಹೆಣ ಕೂಗಿದುದುಂಟು. ಮರೆತು ಒರಗಿ ಕನಸು ಕಂಡು ಅದನ್ನು ಹೇಳುವಲ್ಲಿ ಸತ್ತ ಹೆಣ ಎದ್ದಂತೆ ಆಯಿತು. ಹೆಪ್ಪಿಟ್ಟ ಹಾಲು ಗಟ್ಟಿ ತುಪ್ಪವಾಗಿ ಸಿಹಿಯಾಗಿತ್ತು. ಇದಕ್ಕೆ ತಪ್ಪು ಸಾಧಿಸಲೇಕೆ ಪ್ರಭುವೇ. ಅಲ್ಲಮ : ಅದೂ ಹೋಗಲಿ, ಅರಿಷಡ್ವರ್ಗಗಳಿಂದಲೇ ತುಂಬಿರುವ ಈ ಶರೀರದಲ್ಲಿದ್ದು ಅದನ್ನು ದಾಟಿದ್ದೇನೆ ಎಂದರೆ ಅದನ್ನಾದರೂ ನಂಬುವುದು ಹೇಗೆ ? ಅಕ್ಕ : ಕಾಮನ ಗೆದ್ದ ಠಾವನ್ನು ಹೇಳಬೇಕೆ ಪ್ರಭುವೇ ? ಕಾಮವನ್ನು ಗೆಲ್ಲುವುದಕ್ಕೆ ಆ ಕಾಮ ನನ್ನ ಮನಸ್ಸಿನಲ್ಲಿ ಎಂದೂ ಹುಟ್ಟಿಯೇ ಇಲ್ಲ. ಕೇಳಿ ಅಂಗದ ಭಂಗವ ಲಿಂಗ ಸುಖದಿಂದ ಗೆಲ್ಲಿದೆ. ಜೀವದ ಭಂಗವ ಶಿವಾನುಭವದಿಂದ ಗೆಲ್ಲಿದೆ. ಕರಗದ ಕತ್ತಲೆಯ ಬೆಳಗನ್ನುಟ್ಟು ಗೆಲ್ಲಿದೆ. ಜವ್ವನದ ಹೊರ ಮಿಂಚಿನಲ್ಲಿ ನಿಮ್ಮ ಕಣ್ಣಿಗೆ ಕಾಣುವ ಕಾಮನ ಸುಟ್ಟುರಿಯುವ ಭಸ್ಮವ ನೋಡಯ್ಯ. ಕಾಮನ ಕೊಂದು ಮನಸ್ಸಿಜನಾಗುಳಿದರೆ, ಮನಸಿಜನ ತಲೆ ಬರಹವ ತೊಡೆದೆನು. ಎನ್ನ ಮನಸ್ಸಿಜನ ಜನನಕ್ಕೆ ಅವಕಾಶವನ್ನೇ ಕಲ್ಪಿಸಿಕೊಟ್ಟಿಲ್ಲ. ಇದನ್ನು ತಮ್ಮಂತಹ ಕೆಲವರು ಮಾತ್ರವೇ ಅರ್ಥ ಮಾಡಿ ಕೊಳ್ಳಬಲ್ಲವರು ಪ್ರಭುವೇ. ಅಲ್ಲಮ : ನೋಡಿದೆಯಾ ಬಸವಣ್ಣ, ಮಹಾದೇವಿಯ ಈ ನಿಲುವನ್ನು ಲೋಕಕ್ಕೆ ಪ್ರಕಟ ಮಾಡಬೇಕೆಂದೇ ನಾನು ಇಷ್ಟು ನಿಷ್ಠುರನಾದೆ. ತಾಯೇ ನಿನ್ನ ಜ್ಞಾನ ಘನ, ನಿನ್ನ ವಿರತಿ ಘನ, ನೀನು ವೈರಾಗ್ಯ ನಿಧಿ. ನಿನ್ನನ್ನು ಪಡೆದ ಜಗತ್ತು ಪಾವನ. ಮಾಯೆ ನಿನ್ನ ಮುಟ್ಟಲಿಲ್ಲ, ಮರಹು ನಿನ್ನ ಸೋಂಕಲಿಲ್ಲ, ಕಾಮ ನಿನ್ನ ಕೆಡಿಸಲಿಲ್ಲ, ಮಹಾದೇವಿ ಅಕ್ಕ ನೀನು ವಿಶ್ವ ಸ್ತ್ರೀ ಕುಲದ ಜ್ಯೋತಿ. ದಿಟ್ಟ ಹೆಜ್ಜೆ, ಧೀರ ನುಡಿಯ ತಾಯಿ ನೀನು, ವಿನಯ ವಿಶ್ವಾಸಗಳ ರತ್ನಗಣಿ ನೀನು, ತಾಯೇ ಮಹಾದೇವಿ ನಿನ್ನ ಸ್ತ್ರೀ ಪಾದಗಳಿಗೆ ನಮೋ ನಮೋ ಎಂದೆನು. (ಅಲ್ಲಮಪ್ರಭು ಕೈ ಮುಗಿಯುವರು) ಬಸವಣ್ಣ : ಹೌದು ಪ್ರಭುವೇ, ಈಕೆ ನಮ್ಮೆಲ್ಲರ ಅಕ್ಕ. ನಮಗೆಲ್ಲರಿಗೂ ಗುರುವಾಗಬಲ್ಲ ಯೋಗ್ಯತೆಯುಳ್ಳವಳು. ಅಕ್ಕಮಹಾದೇವಿ ನಿನಗೆ ಶರಣು ಶರಣಾರ್ಥಿ. (ಬಸವಣ್ಣ ನವರು ಕೈಮುಗಿಯುವರು) ಅಕ್ಕ : ತಾವು ಹಾಗೆಲ್ಲಾ ಹೇಳಬಾರದು, ನಿಮ್ಮೆಲ್ಲರ ಕರುಣೆಯ ಶಿಶು ನಾನು, ನಿಮ್ಮೆದುರಿನಲ್ಲಿ ಅತಿ ಚಿಕ್ಕವಳು. ಚನ್ನಬಸವಣ್ಣ : ಇರಬಹುದು, ವಯಸ್ಸು ಅತಿ ಚಿಕ್ಕದೇ ಇರಬಹುದು. ಆದರೂ ನೀನು ಎಲ್ಲರಿಗೂ ಅಕ್ಕನಾಗಬಲ್ಲವಳು ತಾಯಿ. ಮಹಾದೇವಿ ಅಕ್ಕ ಹಿರಿತನ ಕೇವಲ ವಯಸ್ಸಿನಿಂದ ಮಾತ್ರವೇ ಬರುವುದಿಲ್ಲ. ಅಜ ಕಲ್ಪಕೋಟಿ ವರುಷದವರೆಲ್ಲರೂ ಹಿರಿಯರೇ ? ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ ? ನಡು ಮುರಿದು, ತಲೆ ನಡುಗಿ, ಮತಿಗೆಟ್ಟು ಒಂದನಾಡ ಹೋಗಿ ಒಂಭತ್ತನಾಳುವ ಅಜ್ಞಾನಿಗಳೆಲ್ಲರೂ ಹಿರಿಯರೇ ? ;ಅನುವನರಿದು, ಘನವ ಬೆರೆಸಿ, ಹಿರಿದು ಕಿರಿದೆಂಬ ಭೇದವ ಮರೆತು ಕೂಡಲ ಚನ್ನಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ ನಮ್ಮ ಮಹಾದೇವಿಯಕ್ಕಂಗಾಯಿತ್ತು. ಸಿದ್ದರಾಮ : ಅಹುದಹುದು ಮತ್ತೇನು, ಮರಹಿಂಗೆ ಹಿರಿದು ಕಿರಿದುಂಟಲ್ಲದೆ, ಅರಿವಿಂಗೆ ಹಿರಿದು ಕಿರಿದುಂಟೆ ಹೇಳಯ್ಯ ? ಜಾತಂಗೆ ಮರಣದ ಭಯ ಉಂಟಲ್ಲದೆ, ಅಜಾತಂಗೆ ಮರಣದ ಭಯವುಂಟೇ ಹೇಳಯ್ಯ? ಕಪಿಲಸಿದ್ಧ ಮಲ್ಲಿನಾಥನಲ್ಲಿ ಮಹಾದೇವಿಯಕ್ಕನ ನಿಲವಿಂಗೆ ಶರಣೆಂದು ಶುದ್ಧನಾದೆನು ಕಾಣಾ ಚನ್ನಬಸವಣ್ಣ. ಅಕ್ಕ : ಭಕ್ತಿ ಬಂಡಾರಿ ಬಸವಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ. ಬಸವಣ್ಣ : ಶರಣು ತಾಯೇ ಶರಣು ಶರಣು. ಅಕ್ಕ : ಜ್ಞಾನ ನಿಧಿ ಚನ್ನಬಸವಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ. ಚನ್ನಬಸವಣ್ಣ : ಶರಣು ತಾಯೇ ಶರಣು. ಅಕ್ಕ : ಧರ್ಮಯೋಗಿ ಸಿದ್ಧರಾಮಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ. ಸಿದ್ಧರಾಮ : ಶರಣು ತಾಯೇ ಶರಣು. ಅಕ್ಕ : ಎಲ್ಲಾ ಶರಣ ಶರಣೆಯರಿಗೂ ಶರಣು ಶರಣಾರ್ಥಿ. ಎಲ್ಲರೂ : ಶರಣು ತಾಯೇ ಶರಣು ಶರಣು ಎಂದು ಎಲ್ಲಾ ಶರಣರು ನಮಸ್ಕರಿಸುವರು ಆಗ ಬಸವಣ್ಣನವರು ಅಕ್ಕನನ್ನು ಅಂದಿನ ಅನುಭವಮಂಟಪದ ಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ಹೇಳುವರು. ಆಗ ಅಕ್ಕನು ಶರಣರೊಂದಿಗೆ ಕುಳಿತು ಅಂದಿನ ಗೋಷ್ಠಿಯಲ್ಲಿ ಭಾಗವಹಿಸುವಳು. *********************

ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ Read Post »

ಕಾವ್ಯಯಾನ

ಎಂತಹ ಸಮಯವಿದು!!

ಕವಿತೆ ಎಂತಹ ಸಮಯವಿದು!! ಸಂಮ್ಮೋದ ವಾಡಪ್ಪಿ ಪ್ರೀತಿ ವಿಶ್ವಾಸ ಕೂಡಿಟ್ಟವರುಯಾವುದೋ ವಾರ್ಡಿನಲ್ಲಿ ಏಕಾಂಗಿಶ್ವಾಸಕ್ಕಾಗಿ ಎಲ್ಲ ಕಳೆದುಕೊಂಡರುಉಸಿರಿಗಾಗಿ ಕಳೆದು ಹೋದರು ಚೈತ್ರದ ಚಿಲುಮೆಯ ಕಾಲಎಲ್ಲವೂ ಚಿಗುರತಿರಲಿಂದುಬಾಡುತಿವೆ ಸಾವಿರ ಲಕ್ಷಮನೆಗಳಲಿ ರೋದನಗಳಿಂದು ಅವ ಹೋದ ಇವ ಬಂದಏನಾಯಿತು ಕೋವಿಡ್ಡಾ?ಅದೇ ಪ್ರಶ್ನೆ..‌ ಭಯಂಕರ ಉತ್ತರಸಮರವಿದು ಜಗವೆಲ್ಲ ತತ್ತರ ಹಣ ತೆತ್ತರು ಸಿಗದಲ್ಲಅಂದು ಗಿಡ ನೆಡದವಆಮ್ಲಜನಕ ಬೇಡುತಿಹಧಗಧಗಿಸುವ ಸೂರ್ಯ ನಗುತಿಹ ಸಮಯವಿದು ಕಳೆದು ಹೋಗಲಿಕಳೆದು ಹೋದ ನಗು ಮರಳಲಿಮರಳಿನಲಿ‌ ಓಯಾಸಿಸ್ ಸಿಗಲಿವೈರಾಣುವಿನ ಸಂಹಾರವಾಗಲಿ *************************************************

ಎಂತಹ ಸಮಯವಿದು!! Read Post »

ಕಾವ್ಯಯಾನ

ಆಕಾಶದಾವರೆ

ಕವಿತೆ ಆಕಾಶದಾವರೆ ಲಕ್ಷ್ಮೀದೇವಿ ಪತ್ತಾರ ಆಕಾಶಗಂಗೆಯಲ್ಲಿಪ್ರತಿದಿನ ಬೆಳಗಿನ ಜಾವದಲ್ಲಿಅರಳುವದೊಂದು ಅಸದಳದ ತಾವರೆ ಹೂವು ಮುಂಜಾವಿನಲ್ಲಿ ಕೆಂದಾವರೆಮಧ್ಯಾಹ್ನ ನೀಲ್ದಾವರೆಮತ್ತೆ ಸಂಜೆ ಹೊನ್ನದಾವರೆಅಪರಿಮಿತ ಚೆಲುವಿನಅಪರೂಪದ ಹೂವು ಬಗೆ ಬಗೆ ಬಣ್ಣ ಧರಿಸುತಾಮುದಗೊಳಿಸುವ ತಾವರೆಹೊಂಗಿರಣದ ಸುಗಂಧವಎಲ್ಲೆಡೆ ಚೆಲ್ಲಿ ಚೈತನ್ಯ ಉಕ್ಕಿಸುವ ತಾವರೆ ಹೂವು ಯಾರು ಮುಟ್ಟದ ತಾವರೆಯಾರು ಮುಡಿಯದ ತಾವರೆಅರಳಿದರೆ ಭೂರಮೆಗೆ ಬೆಳಗು ಸೊಬಗು ಗೆಲುವು ತರುವ ತಾವರೆ ಹೂ ಜೀವಿಗಳ ಜೀವ ಜೀವನಬಾನಿಗೆ ಶೋಭೆ ಈ ಭಾನುನಮಗಾಗಿ ಹೂವಾಗಿ ಅರಳಿದ ದೇವರುಆದಿತ್ಯನೆಂಬೊ ಅವಿನಾಶಿ ತಾವರೆ ಹೂವು

ಆಕಾಶದಾವರೆ Read Post »

ಇತರೆ

ಮಕ್ಕಳ ಹಕ್ಕು,ಮೊದಲ ಹುಡುಗ

ಲೇಖನ ಮಕ್ಕಳ ಹಕ್ಕು,ಮೊದಲ ಹುಡುಗ ಅಂಜಲಿ ರಾಮಣ್ಣ ಈ ಸಂಪರ್ಕ ಸಂಖ್ಯೆಯೊಡನೆ ಮಾತು ನಿಂತು ಮೂರು ತಿಂಗಳಾಗಿತ್ತೇ?! ಗಮನಕ್ಕೇ ಬರಲಿಲ್ಲವಲ್ಲ. ಎಂದುಕೊಳ್ಳುತ್ತಲೇ ಬಂದಿದ್ದ ಆಡಿಯೋ ಸಂದೇಶವನ್ನು ತೆರೆದೆ “ ಲೇ ಲೇ ರಾಮಣ್ಣನ ಮಗಳೇ. . .” ಎಂದು ರಾಗವಾಗಿ ಹಾಡಿದ್ದ ಅವನು. ಆ ರಾಗಕ್ಕೆ ತಾಳವಾಗುವ ಮನಸ್ಸು ಇರಲಿಲ್ಲ. ಆದರೆ ಉತ್ತರಿಸುವುದು ಬೇಕಾಗಿತ್ತು. ಪ್ರಾಮಾಣಿಕವಾಗಿ ಹೇಳಿದೆ “ ಪಾಪ ಆ ಹುಡುಗಿ ಹತ್ತಿರ ಸೆಕ್ಶನ್ 94ರಲ್ಲಿ ಹೇಳಿರುವ ಯಾವ ದಾಖಲೆಯೂ ಇಲ್ಲ. ಏನು ಮಾಡೋದು ಅಂತ ಯೋಚಿಸ್ತಿದ್ದೀನಿ” ಎಂದೆ.  ಪ್ರತಿ ಬಾರಿಯಂತೆ ಈಗ ಅವನು ಸಿಡುಕಲಿಲ್ಲ. “ನೀನೊಂದು ಗೂಬೆ’ ಎಂದು ದೂರಲಿಲ್ಲ. “ನಿನ್ನಿಂದ ರೊಮ್ಯಾಂಟಿಕ್ ಮಾತು impossible” ಎಂದು ಬೈಯಲಿಲ್ಲ. ಸಮಾಧಾನದಿಂದ “ಓಹ್ ಹೌದಾ. . .” ಎನ್ನುತ್ತಲೇ ಒಂದೆರಡು ಸಲಹೆಗಳನ್ನು ಕೊಟ್ಟ. ಸಲೀಂ ನನ್ನ ಜೀವದ ಅವಿಭಾಜ್ಯ ಅಂಗ. ಜೀವನವನ್ನು ಹಂಚಿಕೊಂಡವ. ಅಮೇರಿಕೆಯಲ್ಲಿ ಇದ್ದಾನೆ. ನಮ್ಮಿಬ್ಬರದು ಹುಟ್ಟಿದಾರಭ್ಯ ಏತಿ ಎಂದರೆ ಪ್ರೇತಿ ಎನ್ನುವ ಬಂಧ. ನನ್ನ ಯಾವ ಗುರಿಗಳೂ ಅವನದಲ್ಲ. ಅವನ ಯಾವ ಕನಸುಗಳೂ ನನ್ನನ್ನು ರೋಮಾಂಚನ ಗೊಳಿಸಿದ್ದೇ ಇಲ್ಲ. ಕಲ್ಪನೆಗಳನ್ನೂ ನಮ್ಮಿಬ್ಬರ ಸಾಮ್ಯತೆಯೇ ಇಲ್ಲ. ಅವನದ್ದು ಬೆಳಗ್ಗೆ ಒಂಭತ್ತರಿಂದ ಸಂಜೆ ಐದಕ್ಕೆ ನಿಗಧಿಗೊಂಡ ಶೈಲಿ. ನನ್ನದು ಹಿಡಿದ ಕೆಲಸ ಮುಗಿಸಿ, ತಕ್ಷಣವೇ ಮತ್ತೊಂದನ್ನು ತೆರೆದಿಟ್ಟುಕೊಂಡು ಕೂರುವ ಹೊತ್ತುಗತ್ತು ಇಲ್ಲದ ಅಭಿರುಚಿ. ಅಗಾಧ ವ್ಯತ್ಯಯಗಳಲ್ಲೂ ನನ್ನನ್ನು ಹುಚ್ಚನಂತೆ ಪ್ರೀತಿಸುತ್ತಾನೆ ಅವ. ಒಂದಷ್ಟು ವರ್ಷಗಳಿಂದ ಅವನ ಎಲ್ಲಾ ಮಾತುಗಳಿಗೂ ನನ್ನ ಉತ್ತರ ಮಕ್ಕಳ ನ್ಯಾಯ ಕಾಯಿದೆಯ ಸೆಕ್ಶನ್‍ಗಳೇ ಆಗಿರುತ್ತಿತ್ತು. ಇತ್ತ ಕಡೆಯಿಂದ ಹಂಚಿಕೆ ಎಂದರೆ POCSO ಕಾಯಿದೆಯ ಅರ್ಥೈಸುವುಕೆಯೇ ಆಗಿರುತ್ತತ್ತು. ಸಾಹಿತ್ಯ ಎಂದರೆ ಬಾಲ ಕಾರ್ಮಿಕ ನಿಷೇಧ ವಿಷಯ. ಕಣ್ಣೀರು ಎಂದರೆ ಬಾಲ್ಯ ವಿವಾಹದ ಪ್ರಕರಣಗಳು ನಗು ಎಂದರೆ ಮಕ್ಕಳು ನನಗೆ ಕೊಟ್ಟ ’ಪ್ರೇಮಪತ್ರಗಳು’. ಇವೆಲ್ಲವನ್ನೂ ಮೀರದ ಮಾತುಗಳು ಎಂದರೆ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ.  ಹೇಳಿದ ಹೇಳಿದ ಹೇಳುತ್ತಲೇ ಇದ್ದ ಬುದ್ಧಿ ಮಾತನ್ನು. ಇವೆಲ್ಲವನ್ನೂ ಮೀರಿದ ಬದುಕು ಇದೆ ಎಂದು ನನಗೆ ಉಪದೇಶಿಸುತ್ತಿದ್ದ. ನನಗೋ ಇವುಗಳೇ ಬ್ರಹ್ಮಾಂಡ. ಪಾಪ ಅವನ ತಾಳ್ಮೆ ಕೈಕೊಟ್ಟಿತ್ತು. ಎಂಟು ತಿಂಗಳಿಂದ ಮಾತು ಕಡಿಮೆ ಮಾಡಿದ್ದ. ಮೂರು ತಿಂಗಳಿಂದ ಫೋನ್ ಸಂದೇಶಗಳನ್ನೂ ಬಂದು ಮಾಡಿದ್ದ. ನನ್ನ ಗಮನಕ್ಕೇ ಬಂದಿರಲಿಲ್ಲ ಎನ್ನುವುದು ಅಹಂಕಾರ ಎನಿಸಿದರೂ ಸತ್ಯ. ಅರೆ, ಈ ಬಾರಿ ಇವನು ಯಾಕೆ ಸಿಟ್ಟಾಗುತ್ತಿಲ್ಲ ಎನ್ನುವ ಗುಮಾನಿಯಿಂದಲೇ ಮಾತು ಮುಂದುವರೆಸಿದೆ. ಈ ವರ್ಷದ ಮಕ್ಕಳ ಸ್ನೇಹಿ ಸಪ್ತಾಹಕ್ಕೆ ಸಂಯೋಜಿಸಿದ್ದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದಾಗಲೂ ಉತ್ಸಾಹ ತೋರುತ್ತಿದ್ದ. ಹದಿಮೂರು ವರ್ಷದ ಆ ಹುಡುಗಿ ತುಂಬು ಗರ್ಭಿಣಿ ಸಾವು ಬದುಕಿನ ನಡುವೆ ಹೋರಾಡಿ ಮಗು ಕಳೆದುಕೊಂಡ ಘಟನೆಯನ್ನು ಹೇಳಿದಾಗಲೂ “ಸಾಕು ಮಾಡು ಗೋಳು” ಎನ್ನಲಿಲ್ಲ ಅವ. ಹತ್ತೊಂಬತ್ತೇ ವರ್ಷದ ಹುಡುಗ ತಾನು ಪ್ರೀತಿಸಿದವಳನ್ನು ಓಡಿಸಿಕೊಂಡು ಬಂದು ಮಕ್ಕಳ ನ್ಯಾಯ ಮಂಡಳಿಯ ಎದುರು ಆಪಾದಿತನಾಗಿ ನಿಂತಿದ್ದ ವಿಷಯ ಹೇಳಿದಾಗ “ಅಯ್ಯೋ ಪಾಪ” ಎಂದ. “ತನ್ನ ತಂದೆ ಕುಡಿದು ಬಂದು ಕಾಟ ಕೊಡುತ್ತಾನೆ. ತನಗೆ ರಕ್ಷಣೆ ಕೊಡಿ” ಎಂದು ರಾತ್ರಿ ಹನ್ನೆರಡು ಗಂಟೆಗೆ ಮನೆ ಬಿಟ್ಟು ಬಂದು ಕದ ತಟ್ಟಿದ ಹದಿನಾರರ ಬಾಲೆಯ ಕಥೆ, ಶಾಲೆಯಲ್ಲಿ ಟೀಚರ್ ತುಂಬಾ ಹೊಡೆಯುತ್ತಾರೆ ಎಂದು ಅಳುತ್ತಿದ್ದ ಎಂಟರ ಪೋರನ ಮಾತು ಯಾವುದಕ್ಕೂ ಅವನ ಆಸಕ್ತಿ ಕಡಿಮೆ ಆಗಲೇ ಇಲ್ಲ. ನನ್ನ ಅನುಮಾನ ಈಗ ಮಿತಿ ಇರದ ಆಶ್ಚರ್ಯವಾಗಿ ತಿರುಗಿತ್ತು. ಕೊನೆಗೂ ಬಾಯಿಬಿಡಿಸಿದೆ ಅವನ ಬದಲಾದ ಚರ್ಯೆಯ ಕಾರಣವನ್ನು! ಈಗ ಅವನು ಮಕ್ಕಳ ಹಕ್ಕುಗಳ ಬಗ್ಗೆ ಒಂದು ವರ್ಷದ ಡಿಪ್ಲೊಮಾ ತರಬೇತಿಗೆ ಸೇರಿದ್ದಾನೆ. ಅಮೇರಿಕೆಯಲ್ಲಿನ ಬೀದಿ ಮಕ್ಕಳ ಜೊತೆ ಸಂಪರ್ಕಕ್ಕೆ ಬಂದು ಅವರಿಗೆ ಮಾರ್ಗದರ್ಶಿ ಆಗಿದ್ದಾನೆ. ವಿಚ್ಚೇಧನ ಪಡೆದ ಕುಟುಂಬದ ಮಕ್ಕಳ ಮಾನಸಿಕ ಸ್ಥಿತಿಗೆ ಸ್ನೇಹಿತನಾಗಿ ಕೆಲಸ ಮಾಡುತ್ತಿದ್ದಾನೆ. ಅಪ್ರಾಯಸ್ಥ ಗರ್ಭಧಾರಣೆಯ ಕೆಡುಕುಗಳನ್ನು ಹರೆಯಕ್ಕೆ ತಿಳಿ ಹೇಳುವ ಗುರು ಆಗಿದ್ದಾನೆ. ಅವನು ಸೆಕೆಂಡ್ ಇನ್ನಿಂಗ್ನ್ಸ್‍ನಲ್ಲಿ ಜೀವನದ ಟೆಸ್ಟ್ ಮ್ಯಾಚ್ ಆಡಲು ಕಣಕ್ಕಿಳಿದಿದ್ದಾನೆ. ಅದಕ್ಕೇ ಅವನೀಗ ಹಗುರವಾಗಿದ್ದಾನೆ , ನನ್ನೊಡನೆ ನಿಜಾರ್ಥದಲ್ಲಿ ರೊಮ್ಯಾಂಟಿಕ್ ಆಗಿದ್ದಾನೆ! ಮಕ್ಕಳಿಗೆ ದೊರಕಲೇ ಬೇಕಾದ ಬದುಕನ್ನು ದಕ್ಕಿಸಿಕೊಡಲು ನಾನು ಇನ್ನೂ ದೂರ ಸಾಗಬೇಕಿದೆ ಜನ್ಮಜನ್ಮಗಳಲ್ಲಿ. ಆದರೆ ಸಲೀಂಗೆ ನಿಜದ ಬದುಕನ್ನು ಅರ್ಥ ಮಾಡಿಸಿಕೊಟ್ಟ ಸಾಧಕಳಾಗಿದ್ದೇನೆ. ಮಕ್ಕಳ ಪರವಾಗಿ ದನಿ ಎತ್ತಿ ನನ್ನ ಮೊದಲ ಹುಡುಗ ನನ್ನನ್ನು ಅಮ್ಮ ಮಾಡಿದ್ದಾನೆ.  ಜಗತ್ತು ಆತಂಕದ ಪರಿಸ್ಥಿತಿಯಿಂದ ಹೊರಬರಬಹುದು ಎನ್ನುವ ಬೆಳಕಿನ ಕಿರಣ ಮೂಡಿದೆ. ಒಂದು ಸಣ್ಣ ಕನಕನ ಕಿಂಡಿ ಮಕ್ಕಳ ಬದುಕಿನಲ್ಲಿ ವಿಶ್ವರೂಪಿ ಬದಕನ್ನು ತೆರೆದಿಡಿಲಿ ಎನ್ನುವ ಆಶಯ ಈ ದಿನದ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಚರಣಾ ದಿನಕ್ಕೆ. ****************** ಚಿತ್ರ ಮತ್ತು ಲೇಖನ ಕೃಪೆ:ಅಸ್ಥಿತ್ವ ಲೀಗಲ್ ಬ್ಲಾಗ್ ಸ್ಪಾಟ್.ಕಾಂ

ಮಕ್ಕಳ ಹಕ್ಕು,ಮೊದಲ ಹುಡುಗ Read Post »

ಇತರೆ

ಸಮಾಜ ಚಿಕಿತ್ಸಕ ಡಾ. ಜಗದೀಶ್

ನೆನಪು  ಸಮಾಜ ಚಿಕಿತ್ಸಕ ಡಾ. ಜಗದೀಶ್ ಬಿ.ಡಿ.ಎಸ್. ಎಂಡಿಎಸ್   ಈಗ ನಿಮ್ಮ ಬಳಗಕ್ಕೆ ನಿಮ್ಮ ಸೇವೆಯೊಂದೆ ನೆನಪು…. ಅರಸೀಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಂತವೈದ್ಯರಾಗಿದ್ದ ಡಾ. ಜಗದೀಶ್, ಇಲ್ಲಿನ ಆಸ್ಪತ್ರೆಯಲ್ಲಿ ‘ಹಲ್ಲು ಡಾಕ್ಟರ್’ ಎಂದೇ ಪ್ರಸಿದ್ಧ. ಇವರು ವೈದ್ಯರಷ್ಟೇ ಅಲ್ಲದೆ, ಸಾಮಾಜಿಕ ಚಿಕಿತ್ಸಕರೂ, ಸ್ನೇಹಜೀವಿಯೂ ಆಗಿದ್ದರು. ಬಹಳಷ್ಟು ವರ್ಷಗಳ ಕಾಲ ಅರಸೀಕೆರೆಯಲ್ಲಿಯೇ ವೈವಿಧ್ಯ ಚಟುವಟಿಕೆಗಳಲ್ಲಿ ತೊಡಗಿ ನಿವೃತ್ತಿ ನಂತರ ಮೈಸೂರು ಸೇರಿದರು. ನಾನು ಬೆಂಗಳೂರು ವಾಸಿಯಾದೆ. ಅರಸೀಕೆರೆಯಲ್ಲಿದ್ದಷ್ಟು ಕಾಲ ನನ್ನ ಜೊತೆಯಲ್ಲಿ ಸಮಾಜಮುಖಿ ವಿಜ್ಞಾನ ಚಳುವಳಿಗೆ ಜೊತೆಯಾದ ಡಾ. ಜಗದೀಶ್, ನಾವೊಂದಿಷ್ಟು ಗೆಳೆಯರು ಅರಸೀಕೆರೆ ವಿಜ್ಞಾನ ಕೇಂದ್ರ ಸ್ಥಾಪಿಸಿದಾಗ ಅದರ ಅಧ್ಯಕ್ಷರಾಗಿ ತಮ್ಮ ವೃತ್ತಿ ಬದುಕಿನ ಮಧ್ಯೆ ಬಿಡುವಿನ ವೇಳೆಯಲ್ಲಿ ಕ್ರಿಯಾಶೀಲರಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಬೆಂಬಲ ನೀಡಿ ಸಕ್ರೀಯರಾಗಿದ್ದರು. ಖಾಸಗಿಯಾಗಿ ವೈದ್ಯ ವೃತ್ತಿಯಲ್ಲಿ ತೊಡಗಿ ಹಣಗಳಿಸುವ ಸಾಕಷ್ಟು ಅವಕಾಶಗಳು  ಅವರಿಗಿದ್ದವು . ವಿಭಿನ್ನ ಹವ್ಯಾಸದ ಗುಂಗು ಹಿಡಿಸಿಕೊಂಡ ಅವರು ಸದಾ ನಮ್ಮ ಜೊತೆ ಚಾರಣ, ನಕ್ಷತ್ರವೀಕ್ಷಣೆ, ಪಕ್ಷಿವೀಕ್ಷಣೆ, ಮೊದಲಾದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ನಾವು ತೆರಳಿದ ಕಡೆಯೆಲ್ಲಾ ನಮ್ಮೊಂದಿಗೆ ಹೊರಡುತ್ತಿದ್ದರು. ಬಿಸಲೇ ಅರಣ್ಯ, ಎಡಕುಮೆರಿ, ಕೆಮ್ಮಣ್ಣುಗುಂಡಿ ಮುಂತಾದ ಪಶ್ಚಿಮಘಟ್ಟಗಳ ಚಾರಣಕ್ಕೆ ನಾವು ವಿದ್ಯಾರ್ಥಿಗಳು, ಸ್ನೇಹಿತರೊಂದಿಗೆ ಹೊರಡಲು ಯೋಜಿಸಿದಾಗ ಹೆಗಲಿಗೆ ಒಂದು ಕ್ಯಾಮೆರ, ಒಂದು ಟಾರ್ಚು, ಬೈನಾಕ್ಯುಲರ್, ರೆಕಾರ್ಡರ್, ಸಕಲ ಸಾಮಗ್ರಿಗಳೊಂದಿಗೆ ತಾವೂ ಅಣಿಯಾಗುತ್ತಿದ್ದರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಎಲ್ಲವನ್ನೂ ವಿವರಿಸುತ್ತ, ಮಕ್ಕಳ ಅಚ್ಚುಮೆಚ್ಚಿನ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸೂಕ್ತ ತಂಗುವ ವ್ಯವಸ್ಥೆ ಇಲ್ಲದಿದ್ದರೂ ಎಲ್ಲೆಂದರಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾ ಜತೆಗೂಡುತ್ತಿದ್ದರು. ನಮ್ಮ ವಿಜ್ಞಾನ ಕೇಂದ್ರ ಹೆಸರಿಗಷ್ಟೇ ವಿಜ್ಞಾನ ಕೇಂದ್ರವಾಗಿದ್ದರೂ , ಸಾಹಿತ್ಯ, ರಂಗಭೂಮಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳಗೊಳ್ಳುತ್ತಿದ್ದವು. ವರ್ಷವಿಡೀ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಾನು ದಿಢೀರೆಂದು ಆಯೋಜಿಸಲು ಯೋಚಿಸುತ್ತಿದ್ದೆ.  ಸಾಹಿತ್ಯಾಸಕ್ತನಾಗಿ ಇಂತಹ ಕಾರ್ಯಗಳನ್ನು ಎಷ್ಟೋ ಬಾರಿ ಏಕಮುಖಿಯಾಗಿ ತೀರ್ಮಾನ ಕೈಗೊಂಡು ನಂತರ ಡಾಕ್ಟರರಿಗೆ ತಿಳಿಸಿದರೂ ಅವರು ಬೇಸರಪಟ್ಟುಕೊಳ್ಳದೇ ನಗುತ್ತಲೇ ‘ಎಸ್ ಬಾಸ್’ ಎಂದು ಒಪ್ಪಿಬಿಡುತ್ತಿದ್ದರು. ಇಂತಹ ಕಾರ್ಯಕ್ರಮಕ್ಕೆ ಹಣದ ಅಗತ್ಯ ಉಂಟಾದಾಗ ಊರಿನ ಶ್ರೀಮಂತ ದಾನಿಗಳಿಂದ ಹಣ ಸಂಗ್ರಹಿಸಲು ಇವರನ್ನೇ ಮುಂದುಮಾಡುತ್ತಿದ್ದೆ. ಒಮ್ಮೆಯೂ ಬೇಸರಪಟ್ಟುಕೊಳ್ಳದೇ ಈ ಚಟುವಟಿಕೆಗಳಿಗೆ ಹಣ ಸಂಗ್ರಹಿಸುತ್ತಿದ್ದರು. ತಾವು ಕೆಲವೊಮ್ಮೆ ಮುಂಚೂಣಿಯಲ್ಲಿದ್ದುಕೊಂಡು , ಮತ್ತೆ ಕೆಲವೊಮ್ಮೆ ಹಿನ್ನೆಲೆಯಲ್ಲಿ ನಿಂತು ಪ್ರೋತ್ಸಾಹಿಸುತ್ತಿದ್ದರು. ನಾನು ನಾಟಕ ಅಕಾಡೆಮಿ ಸದಸ್ಯನಾಗಿದ್ದಾಗ ಗ್ರಾಮೀಣ ಪ್ರತಿಭೆಗಳನ್ನ ಒಟ್ಟುಗೂಡಿಸಿ ‘ಮಹಾಮಾಯಿ’ ನಾಟಕವನ್ನು ನಿರ್ಮಿಸಲು ರಂಗತರಬೇತಿ ಶಿಬಿರ ಆಯೋಜಿಸಿದಾಗ ಜಗದೀಶ್ ನೀಡಿದ ಸಹಾಯವನ್ನು ಮರೆಯಲಾರೆ.  ಅಷ್ಟೇ ಅಲ್ಲ, ರೈತಸಂಘ, ದಲಿತಸಂಘದ, ಗೆಳೆಯರನ್ನ ಇವರ ಬಳಿ ಕಳಿಸಿದಾಗ ಅವರಿಗೆ ವಿಶೇಷ ಆಸಕ್ತಿಯಿಂದ ಹಲ್ಲಿನ ಚಿಕಿತ್ಸೆ ನೀಡಿ ಮಾರ್ಗದರ್ಶನ ಮಾಡುತ್ತಿದ್ದರು. ಬೇರೆ ಬೇರೆ ರೀತಿಯ ರೋಗಗಳಿಂದ ಬಳಲುವ ರೋಗಿಗಳಿಗೂ ಇವರು ತಮಗೆ ಪರಿಚಿತವಿದ್ದ ಡಾಕ್ಟರುಗಳನ್ನು ಸಂಪರ್ಕಿಸುವಂತೆ ಹೇಳಿ ಅವರಿಗೂ ಸಹಕಾರ ನೀಡುತ್ತಿದ್ದರು. ವಿದ್ಯಾರ್ಥಿಗಳು, ಸಹಾಯ ಕೇಳಿ ಬಂದವರು ಯಾರೂ ಬರಿಗೈಯಲ್ಲಿ ಹಿಂದಿರುಗಿಲ್ಲ. ನಮ್ಮ ನಂತರ ನಮ್ಮ ಶಿಷ್ಯರು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಕಾರ ಅಪೇಕ್ಷಿಸಿ ಹೋದಾಗ ಅವರಿಗೂ ಸಹಾಯ ಹಸ್ತ ಚಾಚಿದ್ದುಂಟು. ಶಾಲೆಗಳಲ್ಲಿ ‘ಹಲ್ಲಿನ ತಪಾಸಣೆ ಶಿಬಿರ’ಗಳನ್ನು ಏರ್ಪಡಿಸಿ ಮಕ್ಕಳಿಗೆ ಉಚಿತವಾಗಿ ಪೇಸ್ಟ್, ಬ್ರಶ್ ವಿತರಿಸುತ್ತಿದ್ದರು. ಅರಸೀಕೆರೆ ತಾಲೂಕಿನ ಯಾವುದೇ ಎನ್.ಎಸ್.ಎಸ್. ಕ್ಯಾಂಪುಗಳಿಗೆ ಇವರೇ ಸಂಪನ್ಮೂಲ ವ್ಯಕ್ತಿಗಳು. ದಂತಕ್ಷಯ, ಮೌಡ್ಯಗಳ ವಿರುದ್ಧ, ಸೂರ್ಯ-ಚಂದ್ರಗ್ರಹಣಗಳಂದು ವೈಜ್ಞಾನಿಕ ಸತ್ಯವನ್ನು ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸುತ್ತಾ ವಿವರಿಸುತ್ತಿದ್ದರು. ಪ್ರೊಫೆಸರ್ ಎಂ.ಡಿ.ಎನ್. ಒಮ್ಮೆ ಜಗದೀಶರನ್ನು ಭೇಟಿಯಾದಾಗ ‘ನಿಮ್ಮಂತವರು ರೈತರ ಪರವಾಗಿ ಯೂರೋಪ್ ಪ್ರವಾಸಕ್ಕೆ ಬರಬೇಕು’ ಎನ್ನುತ್ತಾ ಆಹ್ವಾನಿಸಿದ್ದರು. ಯಾವುದೇ ಯೋಚನೆ ಮಾಡದೇ ನಮ್ಮ ಜೊತೆ ಯೂರೋಪ್ ಪ್ರವಾಸಕ್ಕೆ ಬಂದೇಬಿಟ್ಟರು.  ಸಿಟ್ಟು ಬಂದಾಗ ಇವರು ಆಡುವ ಮಾತುಗಳು ತೀರಾ ಅತಿರೇಕವೆಂದರೆ ಮುನಿಸಿಕೊಂಡ ಮಗುವಿನಂತೆ ಇರುತ್ತಿತ್ತು. ವ್ಯಕ್ತಿತ್ವ ಸದಾ ಸೀದಾ. ಇವರ ಸರಳತೆ , ಮೃದುತ್ವ, ಮಿತ ಭಾಷಿಕತೆ, ನಮ್ಮ ಜೊತೆ ಬೆರೆಯುವ ಗುಣ ಎಲ್ಲವೂ ವಿಶೇಷ. ನನ್ನಂತಹ ಒರಟನ ಜೊತೆ ಹೆಗಲಾಗಿ ಇವರು ಇದ್ದದ್ದು ನನಗೆ ಇಂದಿಗೂ ಸೋಜಿಗ. ಸದಾ ನಗುಮೊಗದ ಯಾವುದೇ ತಕರಾರುಗಳಿಲ್ಲದೆ ಜೀವಿಸಿದ ನೀವು ಇನ್ನಿಲ್ಲ ಎಂಬುದನ್ನು ನಂಬಲಾಗದು. ನಿಮ್ಮ ನೆನಪು ಮಾತ್ರ ಈಗ ನಮ್ಮೊಂದಿಗೆ. ಅಂತಿಮ ನಮನಗಳು ಡಾಕ್ಟರ್. ******************************************                                                              ಡಾ. ಎಚ್.ಆರ್ .ಸ್ವಾಮಿ

ಸಮಾಜ ಚಿಕಿತ್ಸಕ ಡಾ. ಜಗದೀಶ್ Read Post »

ಕಾವ್ಯಯಾನ

ಯಾತನೆ

ಕವಿತೆ ಯಾತನೆ ಲಕ್ಷ್ಮೀ ಮಾನಸ ಚಿತಾಗಾರದ  ಚಿತ್ರಣ,ಮನದಲ್ಲಿ ಮರುಕಳಿಸಲು,ಎದೆಯಲ್ಲಿ ಬಿರುಗಾಳಿಬೀಸಿ,ತಾರೆಗಳ ಕಾಣುತಲಿವೆ ,ಬಣ್ಣ ಮಾಸಿದ ಪಕ್ಷಿಗಳು,ಕಿಟಕಿಗಳ ಚಿಕ್ಕ  ಸಂದಿನಲ್ಲಿ.., ಲೋಕದ  ತುಂಬೆಲ್ಲಾಪರದೆಗಳು,ಮಾಸಿದ  ಚಿತ್ತಾರಗಳು,ಮುಗಿಲು ಮುಟ್ಟುತ್ತಲಿವೆ ,ಚೀತ್ಕಾರಗಳು,ಮಂಜಿನ  ಮಹಲುಗಳಲ್ಲಿ,ಕಾಂಚಾಣದ ಮಡಿಲಲ್ಲಿನ,ನಂಜಿಲ್ಲದ ವಾಯುವಿಗಾಗಿ.., ಸುಟ್ಟ ವಾಸನೆಬೀರುತಲಿವೆ,ಚಿತೆಯೇರಿದ ಮನಗಳು,ಬೂದಿಯ ಸ್ಪರ್ಶಿಸಲುಚಡಪಡಿಸುತಿವೆ,ಕಾಲವಾದ ನೆನಪುಗಳಲ್ಲಿ,ಮುಳುಗಿ ಮೇಲೇಳುವುದಕ್ಕೋ …?ಮೇಲೇಳದೆ  ಮುಳುಗುವುದಕ್ಕೋ….?   ಚಿ0ತೆಯಲ್ಲಿ ದಹಿಸುತಿವೆ,ಬಾಳಿನ ನಾಳೆಗಳು ,ಬಿರುಗಾಳಿಯಲ್ಲಿಹಾರಬಯಸುತಿರೆ..,ಬೆಚ್ಚನೆಯ ಮನೆಯಲ್ಲೂ,ಮುಳ್ಳಾಗಿ ಚುಚ್ಚುತ್ತಿವೆ,ಮೆತ್ತನೆಯ ಗಾದಿಗಳು ,ಅರುಣೋದಯದ ಹಂಬಲದಲ್ಲಿ…….. ******************************************************* ,    ….. *******************

ಯಾತನೆ Read Post »

ಕಾವ್ಯಯಾನ

ಮಹಾದೇವಿ ಅಕ್ಕ

ಕವಿತೆ ಮಹಾದೇವಿ ಅಕ್ಕ ಡಾ.ಕೆ.ಶಶಿಕಾಂತ ಬರೀ ಹಗಲಭ್ರಮೆಯೊಳಗಿನಈ ಜಗಕೆ,ನಿನ್ನಬೆತ್ತಲೆತನದ್ದೇ ಚಿಂತೆ….ತನ್ನ ಬೆತ್ತಲ ಬದುಕಿನಅರಿವು ಇದ್ದರಲ್ಲವೇ…ಬಟ್ಟೆ ಹೊದ್ದಿಸಲಾಗದನಿನ್ನ ದಿಗಂಬರತನವತಿಳಿಯಲು… ಬೋಳು ಗುಡ್ಡದಂತೆಬರೀ ಮಂಡೆ ಬೋಳಾದಈ ಹಿರಿಯರ ಲೋಕದಲ್ಲಿಹುಡುಕುತ್ತಲೇ ಇದೆ ಈ ಜಗಮೋಟು ಮರಗಳ ಗುಂಪಿನಲ್ಲಿಚಿಗುರೊಡೆದ ಗಿಡವನರಸುವಂತೆಬರಡಾಗಿರುವ ಭಾವದಲಿಬಯಲ ಚೆಲುವ ಚೆನ್ನನ…. ಮರವೇ ಮರುಗುವಂತೆಗರಗರ ಸುತ್ತಿದ್ದಾಯ್ತು ,ನೀರೇ ಕಲಕುವಂತೆಮುಳುಮುಳುಗಿಮಿಂದದ್ದಾಯ್ತು ,ಅರ್ಥವನರಿಯದಗಿಳಿಯಂತೆ ನುಡಿದುತನ್ನ ಹಿರಿಮೆಯ ಸೊಲ್ಲುದನಿಯಿಲ್ಲದಾಯ್ತು,ತಲೆಮಾರುಗಳ ಕಾಲಚೆನ್ನನನು ಕಾಣದಾಯ್ತು… ದೃಢವಲ್ಲದ ಹೊಟ್ಟೆಗಾಗಿಮೃಡನನು ಗುರಿಮಾಡಿಹೇಮಕಾಮದ ಇಚ್ಛೆಗೆಚೆನ್ನನರಿವ ಮನಕೆ ಕಿಚ್ಚಿಟ್ಟುಕದಳಿಯ ದಾರಿಯರಿಯದೇದಿಕ್ಕೆಟ್ಟ ಬದುಕಿಗೆಸಾವ ವಿದ್ಯೆಯನರುಹಿದಮಹದ ಗುರು ಮಹಾದೇವಿ…. ಹರಕೆ ಕಾಣಿಕೆಗಳಿಡದಜೀವಕೋಟಿಯನಿರಿಯುವನೂರುದೇವತೆಗಳಈ ಲೋಕದಲ್ಲಿ,,ಬಿಲ್ವಬೆಳವಲಗಳಸಂದೇಹವ ಬಿಡಿಸಿಟ್ಟುಬಾಳೆಮಾವುಗಳಿಗೆನೀರೆರೆದು ಸಲಹಿದವನಕುರುಹನು ತೆರೆದಿಟ್ಟುಜಗವ ಪೊರೆದಮಹಾತಾಯಿನೀನಲ್ಲವೇ ಅಕ್ಕ… ಸತ್ತು ಅಳಿವ ಕೌಶಿಕನವಸ್ತು ನಾನಲ್ಲೆಂದುಸಾವಿಲ್ಲದ ಗಂಡನಿಗೊಲಿದಸಾವಿರದ ಚೆಲುವೆ ನೀನಕ್ಕ ನಾಮ ರೂಪಗಳನಳಿದಸೀಮೆ ಗಡಿಗಳನಳಿದಬಸವನ ಈ ಕಲ್ಯಾಣದಸುಳಿಗಾಳಿ ನೀನಕ್ಕ ಚಳಿಮಳಿ ಸೋಂಕದವಸ್ತ್ರ ಹೊದೆಯಲರಿಯದಬೆಳಕಿನ ದಿಗ್ ದಿಗಂಬರನೀನಲ್ಲವೇ ಅಕ್ಕ. ಜಗದ ಕತ್ತಲೆ ಕಳೆದಬಾಳ ಕದಳಿಯಜ್ಯೋತಿಯಾಗಿಇಹದ ಜೀವಕೆದೀವಿಗೆಯಾದಚೆನ್ನನ ಬೆಳಕು ನೀನೇ ಅಕ್ಕ.ಚೆನ್ನನ ಬೆಳಕು ನೀನೇ ಅಕ್ಕ ****************************

ಮಹಾದೇವಿ ಅಕ್ಕ Read Post »

You cannot copy content of this page

Scroll to Top