ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಸಾವಿನ ಆರ್ಭಟ

ಡಾ.ಜಿ.ಪಿ.ಕುಸುಮ

ನಮ್ಮ
ಮುಂಬಯಿ ಆಸ್ಪತ್ರೆಗಳು
ಮತ್ತೆ ಮತ್ತೆ
ಸಾವಿನ ಮಾರಕ ತುಳಿತಗಳನ್ನು
ಸದ್ದು ಗದ್ದಲವಿಲ್ಲದೆ
ಸ್ವೀಕರಿಸುತ್ತಿವೆ.
ಅಂಬುಲೆನ್ಸ್ ಗಳ ಚೀತ್ಕಾರಕ್ಕೆ
ನಡುಗುತಿಹ ನಗರದೊಳಗೆ
ನಿಗಿನಿಗಿ ಕೆಂಡದೊಳು ಬೇಯುವ
ಸ್ಮಶಾನಗಳು
ಮೂಕವಾಗಿವೆ.

ಬೆಡ್ಡುಗಳ ತೆರೆದೊಡಲಲಿ
ಉಸಿರಿಲ್ಲದವರಲ್ಲಲ್ಲಿ
ಹೂಡಿದ್ದಾರೆ ಡೇರೆ.
ಗೋಡೆಗಳನ್ನು ಕಟ್ಟಿದವರೆಲ್ಲ
ಕೆಡವುವ ಮುನ್ನವೇ
ಮಣ್ಣಲ್ಲಿ ಮಣ್ಣಾಗಲೂ
ಸಾಲಲಿ ಸರಿಯುತ ತೆರಳುತಿಹರು
ಸುಟ್ಟು ಸುಟ್ಟು
ಬೆಂಕಿಯೂ ಸೋತಿದೆ.
ಸಾಲು ಕೊನೆಯಿಲ್ಲದೆ ಕೊರಗಿದೆ.

ಜೀವಿತದ ಕೊನೆಯ ಕ್ರಿಯೆ
ಕ್ರಿಯೆಯಾಗದೆ
ಮನುಷ್ಯನು ಮನುಷ್ಯನ ಕೆಲಸಕ್ಕೆ
ಬಾರದೆ
ಸಂಸ್ಕೃತಿ, ಸಂಸ್ಕಾರಗಳ ಕೈ ಹಿಡಿಯಲೂ
ಆಗದೆ
ಹೊರಡುತ್ತವೆ ಹೃದಯಗಳು
ಮಾತೂ ಆಡದೆ.
ಚಕಾರವೆತ್ತದೆ ಸಾಗಿದೆ
ಆಸ್ಪತ್ರೆಯ ಹೊರಗೆ ಕಂಬನಿಯ ನದಿ
ಒಳಗೆ ಹೆಣಗಣತಿಯ ತರಾತುರಿ.

*******************************

About The Author

2 thoughts on “ಸಾವಿನ ಆರ್ಭಟ”

  1. Vishwanath B Puthran

    Nice KAVANA which tells how the human being is incapable to stop the people from death due to MAHAMAARI ” covid- 19 “

Leave a Reply

You cannot copy content of this page

Scroll to Top