ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ದಾಖಲೆಗಳಿವೆ

ವಸುಂಧರಾ ಕದಲೂರು

Quarry, Lost Place, Tools

ಸುಧಾರಕರನು ಹುಚ್ಚರೆಂದು
ಕರೆದು ಥಳಿಸಿದುದಕೆ, ಕೂಡು
ರಸ್ತೆಗಳ ನಡುವಲ್ಲಿ ಹೀಗಳೆದು
ಕಲ್ಲುತೂರಿ ಕಟುನುಡಿ ಮಳೆಗರೆದು,
ತೋಯಿಸಿ ನೋಯಿಸಿದುದಕೆ.

ಗಾಸೀಪು ತೂಪಾಕಿಗಳ ತೂಫಾನು
ಸಿಡಿಸಿ ಗಡೀಪಾರು ಮಾಡಿಸಿ; ಗುಲ್ಲೆಬ್ಬಿಸಿ ಗಲ್ಲಿಗೇರಿಸಿ, ಗುಂಪುಗುಂಪಾಗಿ ಗುಟ್ಟು ಮಾಡಿ; ಒಳಸಂಚು ಮಾಡಿ ಮೂಲೆ ಗುಂಪಾಗಿಸಲು ಕಾರ್ಯ ಗೇಯ್ದದದಕೆ.

ಇದರ ನಡುವೆಯೂ ಅವರು, ಅವರ ವರ್ತಮಾನಗಳಲಿ ದಂತಕತೆಗಳಾಗಿ, ಭವಿಷ್ಯತ್ತಿನಲಿ ಹುತಾತ್ಮರಾಗಿ ಇತಿಹಾಸದ ಪುಟಗಳಲಿ ಮಹಾತ್ಮರಾಗಿ ಸೇರಿಹೋದುದಕೆ ಸಾಕ್ಷ್ಯಗಳಿವೆ..

********************************************

About The Author

Leave a Reply

You cannot copy content of this page

Scroll to Top