ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ನೀ ಹೇಳೆ ಬಾಲೆ

ಸುವಿಧಾ ಹಡಿನಬಾಳ

Close-up Photo of Pink Petaled Flowers

ಅಂಬರಕೆ ಮಲ್ಲಿಗೆಯಂತೆ
ಮನೆಗೆ ನಗೆ ಬೆಳಕು ನೀನು
ಬೆಳದಿಂಗಳ ಬಾಲೆ ಎನ್ನಲೆ

ಬಿದ್ದಲ್ಲಿ ಚಿಗುರುವ ಗರಿಕೆ ಹುಲ್ಲಂತೆ
ಮನವ ತಣಿಸುವ ಅಭಿಮಾನದ
ಮಾನಿನಿ ನೀನು ಏನೆಂದು ಕರೆಯಲೆ

ಎದೆಯೊಳಗೆ ಸಹಸ್ರ ವೇದನವ
ಬಚ್ಚಿಟ್ಟು ಸಂತೈಸುವವಳು ನೀನು
ಕರವೆತ್ತಿ ಮುಗಿಯಲೆ

ತೊಟ್ಟಿಲು ತೂಗುವವಳು ನೀ
ಮಮತೆಯ ಮೊದಲ್ಗುರು ನೀ
ಅವಕಾಶ ಸಿಕ್ಕರೆ ಆಕಾಶಕ್ಕೆ
ಜಿಗಿಯುವೆ ನೀ
ನಮಗೆಲ್ಲ ಗುರು ನೀನೆ
ನಿನಗಾರು ಮಹಾಗುರು
ಹೆಣ್ಣಲ್ಲದೆ ಮತ್ತಿನ್ನಾರು
ನಿನಗೆ ಸರಿಸಮನಾರು
ನೀ ಬಾನು ಭುವಿಯ ಹಾಗೆ
ವಿಶಾಲ ವಿಸ್ತಾರ ಶರಧಿಯ ಹಾಗೆ
ನಿನ್ನ ಹಾಗೆ ಯಾರಿಲ್ಲ
ನಿನಗೆ ಹೋಲಿಕೆ ಇಲ್ಲ
ಏನೆಂದು ಕರೆಯಲಿ
ನೀ ಹೇಳು ಬಾಲೆ.

*****************************

About The Author

2 thoughts on “ನೀ ಹೇಳೆ ಬಾಲೆ”

  1. Sunil S Gavade

    ತುಂಬಾ ಚೆನ್ನಾಗಿದೆ. ನೀ ಹೇಳು ಏನೆಂದು ಕರಿಯಲಿ ಓ ಬಾಲೆ ? ಸ್ತ್ರೀ ಗೆ ಸ್ತ್ರೀ ಯೇ ಸಾಟಿ . ಮಹಿಳಾ ದಿನಾಚರಣೆ ಶುಭಾಶಯಗಳು. ಅಕ್ಕಯ್ಯಾ ಸೂಪರ್

Leave a Reply

You cannot copy content of this page

Scroll to Top