ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಶಶಿಕಾಂತೆ

Lunar Eclipse

ಸಂಜೆಯನ್ನು ಸರಿಸಿ ಇರುಳು ಕಾಲಿಟ್ಟಿದೆ‌ ತಡಮಾಡಬೇಡ ಸಖಿ
ಜಾಜಿಹೂ ನಮಗಾಗಿ ಘಮಲು ಹರಡಿದೆ ತಡಮಾಡಬೇಡ ಸಖಿ

ನನ್ನಂತರಂಗದಲ್ಲಿ ನಿನ್ನ ರತಿರೂಪ ತುಂಬಿ ಕಾಡುತಿದೆ
ನಿನ್ನ ಕಣ್ಣಲಿ ನನ್ನನ್ನೆ ಕಾಣ ಬೇಕೆನಿಸಿದೆ ತಡಮಾಡಬೇಡ ಸಖಿ

ನಿನ್ನ ಅಪರೂಪದ ಮುಗುಳ್ನಗೆ ನನ್ನನು ಮರುಳುಮಾಡಿದೆ
ನಿನ್ನ ನಗುವ ನಶೆಯಲಿ ನಾ ತೇಲಬೇಕಿದೆ ತಡಮಾಡಬೇಡ ಸಖಿ

ಕಣ್ಮುಚ್ಚಿ ನನ್ನರಸಿಯ ಧ್ಯಾನಿಸಿ ಹೃದಯ ಪುಳಕಗೊಂಡಿದೆ
ತುಟಿಗಳು ನಿನ್ನ ಪ್ರೀತಿಮುದ್ರೆ ಬಯಸಿದೆ ತಡಮಾಡಬೇಡ ಸಖಿ

ಶಶಿ ಮೋಡದಲ್ಲಿ ಮರೆಯಾಗುವುದಕ್ಕೆ ಮನ ಕಾಯುತಿದೆ
ತನುಮನ ಬೆಸೆದು ಜಗ ಮರೆಯಬೇಕಿದೆ ತಡಮಾಡಬೇಡ ಸಖಿ

***********************************************

About The Author

2 thoughts on “ಗಜಲ್”

Leave a Reply

You cannot copy content of this page

Scroll to Top