ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕ್ರಾಂತಿಯ ಕಹಳೆ

ಸುಜಾತಾ ರವೀಶ್

110 Girl Woman & Flowers ideas | art, illustration art, beautiful art

ಹೆಣ್ಣೆಂದೇಕೆ ಬೀಳುಗಳೆವಿರಿ ಎಂದರು 
ಅಂದಿನ ಕಾಲದಲ್ಲೇ ಸಂಚಿ ಹೊನ್ನಮ್ಮ 
ಇಪ್ಪತ್ತೊಂದನೇ ಶತಮಾನವೇ ಬಂದರೂ 
ಗಂಡು ಮಕ್ಕಳ ವ್ಯಾಮೋಹ ತಗ್ಗಿಲ್ಲವಮ್ಮ 

ವಿಜ್ಞಾನದ ಪ್ರಗತಿಯ ಉಪಯೋಗಿಸುವರು 
ಹೆಣ್ಣು ಭ್ರೂಣ ಪತ್ತೆಗಾಗಿ ಕ್ರೂರ ಹತ್ಯೆಗಾಗಿ 
ಮನೆ ಬೆಳಗುವ ತಾಯಿ ತಂಗಿ ಹೆಂಡತಿ ಮಗಳು 
ವನಿತೆಯ ವಾತ್ಸಲ್ಯದ ಪ್ರತಿರೂಪವೆಂದೇ ಮರೆವರು

ಕಾಲವಷ್ಟೇ ಮುಂದುವರೆದಿದೆ ಆದರೂ 
ಶೋಷಣೆಯ ನಾನಾರೂಪ ನಡೆದಿದೆ ಅವ್ಯಾಹತ
ಭಾವನಾತ್ಮಕ ಸಾಮಾಜಿಕ ಆಂತರಿಕ ಬಾಹ್ಯ 
ಎಲ್ಲ ಕಡೆಗಳಿಂದಲೂ ನಿತ್ಯ ನಿರಂತರ ದಹ್ಯ

ಇದೀಗ ಬಂದಿದೆ ಅವಶ್ಯಕತೆ ಬದಲಾವಣೆಯ
ಮೂಕೆತ್ತುಗಳಂತೆ ಸಹಿಸಿಕೊಳ್ಳಲು ಇಲ್ಲ ಸಮಯ ಕಂಬನಿಯ ಸುರಿಸೆವು ಕಾಲ್ಹಿಡಿದು ಬೇಡೆವು
ಆದರೆಂದೂ ನಮ್ಮ ಕಾಲೊರಸು ಮಾಡೆ ಬಿಡೆವು

ಬನ್ನಿ ಭಗಿನಿಯರೇ ಈಗಲಾದರೂ ಒಂದಾಗೋಣ 
ಪ್ರೀತಿ ತ್ಯಾಗದ ಹೆಸರಿನ ಬಲಿದಾನ ನಿಲ್ಲಿಸೋಣ 
ಸಮಾನ ಹಕ್ಕು ಅವಕಾಶಕ್ಕಾಗಿ ಹೋರಾಡೋಣ
ಗೋಸುಂಬೆಗಳ ಸುಳ್ಳು ಮುಖವಾಡ ಕಳಚೋಣ  

ಮೊಳಗಬೇಕಾಗಿದೆ ತ್ವರಿತದಲಿ ಕ್ರಾಂತಿಯ ಕಹಳೆ
ಕಂಡು ಕೊಳ್ಳಬೇಕಾಗಿದೆ  ಅಸ್ತಿತ್ವವ ಪ್ರತಿ ಮಹಿಳೆ
ಪಡೆಯಬೇಕಾಗಿದೆ ಸ್ವಾತಂತ್ರ್ಯದ ಹೊಸ ಅಸ್ಮಿತೆ ನಡೆಯಬೇಕಾಗಿದೆ ಕ್ರಾಂತಿ ನವಪಥ  ಹಿಡಿಯುತೆ

***************************

About The Author

1 thought on “ಕ್ರಾಂತಿಯ ಕಹಳೆ ”

  1. ಸಂಪಾದಕರಿಗೆ ಪ್ರಕಟಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು

    ಸುಜಾತಾ ರವೀಶ್

Leave a Reply

You cannot copy content of this page

Scroll to Top