ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಒಲವಿನ ಹಾಡು

ವಸುಂಧರಾ ಕದಲೂರು.

Cherry Blossom Tree Beside Black Bridge

ಅನಗತ್ಯ ನಗೆ ಬೀರುತ್ತಾ
ಅವನತ ವದನಳಾಗಿ
ಅನವರತ ಕನವರಿಸಿ
ನಿನ್ನ ಸೇರಬೇಕೇನು?

ಅಂಜದೆ ಅಳುಕದೆ
ಮುನ್ನಡಿ ಇಟ್ಟು ನಿನ್ನ
ಸೇರುವ ನನ್ನ ಎದೆಗಾರಿಕೆ
ನಿನಗೆ ಸೇರದೇನು?

ಸಾಕು ಬಿಡು ನಾನೇನು
ಮೂಕ ಪಶುವೇ?
ನನ್ನ ಪ್ರೇಮವು ನಿನಗೆ
ಮೋಹ ಪಾಶವೇ?

ಒಲವು ಚಿಗುರಲು
ಚಿಗುರಿ ಫಲಿಸಲು
ನೀ ನಲುಮೆ ತೋರು
ನಾ ನೆಲೆಯೂರುವೆ

‘ಒಲವೇ ನಲಿವು; ನಲಿವೇ
ಗೆಲುವು’- ಮಂತ್ರ ಸಾಕಲ್ಲವೇ
ವೇದ ಪುರಾಣದಲೂ ಈ
ನುಡಿಗೆ ಸಾಕ್ಷ್ಯ ಇದೆಯಲ್ಲವೇ

***********************

About The Author

3 thoughts on “ಒಲವಿನ ಹಾಡು”

  1. Yallappa M Yakolli

    ಹೌದು ವೇದಪುರಾಣದಲ್ಲೂ ಇದಕ್ಕೆ ಸಾಕ್ಷಿಯಿದೆ.ನಿಜಕ್ಕೂ ಚಂಧ‌ಕವಿತೆ ಅಭಿನಂದನೆ‌ಮೆಡಮ್

  2. Nagaraj Harapanhalli

    ಸಮಾನತೆ ಹಾಗೂ ಪ್ರೀತಿಯ ಹಂಬಲ ;
    ಹೆಣ್ಣು ಗಂಡಿಗೆ ಒಂದೇ ಸ್ವರೂಪ .ಲಿಂಗಬೇಧ ಪ್ರಶ್ನಿಸುವ ಹಾಗೂ ವೇದ ಪುರಾಣದಲ್ಲಿ ಸಹ ಪಂಚಮವೇದ ಪ್ರೇಮಕ್ಕೆ ಸ್ಥಾನವಿದೆ ಎಂಬ ಧ್ವನಿಯನ್ನು ಕವಯಿತ್ರಿ ಎತ್ತಿದ್ದಾಳೆ…
    ಚೆಂದ ಕವಿತೆ…

Leave a Reply

You cannot copy content of this page

Scroll to Top