ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇನಿಯ

ಅಕ್ಷತಾ ಜಗದೀಶ

This image has an empty alt attribute; its file name is WhatsApp-Image-2020-12-01-at-10.12.49-PM-832x1024.jpeg

Image result for photos of love in art

ಪ್ರೇಮದ ಕಡಲಾಚೆ ಇಚೆಗಿನ
ದಡದೊಳು ಮೂಡಿದ ನಮ್ಮ ‌ಪ್ರೇಮ..
ಈಗ ಒಂದೇ ‌ದೋಣಿಯೊಳು ಕುಳಿತು
ಸಾಗಬೇಕೆನಿಸುತಿದೆ …
ಈ‌ ನಮ್ಮ ಪಯಣ…

ವಿಶಾಲ ಕಡಲಿನಂತೆ‌ ನಿನ್ನ ‌ಪ್ರೇಮ
ಅಪರಿಮಿತ…
ನಿನ್ನ ‌ಬಾಹುಬಂಧನದೊಳು ನಾನಾಗಿಹೆ
ಮೂಕ ವಿಸ್ಮಯ….
ಬಾಳೆಂಬ ಪ್ರೀತಿಯ ದೋಣಿಗೆ
ಇನಿಯನೇ ನೀನಾಗು ನಾವಿಕ
ನಿನ್ನ ಮಾತಿನ ಅಲೆಯೊಳು
ಮೌನವಾಗಿ ಸಾಗುವೆ ನಾ ನಿರಂತರ..

ಸ್ನೇಹದ ಈ ಅನುಬಂಧ..
ಪ್ರೇಮದ ಬಂಧವಾಯ್ತು..
ನನ್ನ ‌ಕನಸಿನ ಲೋಕ
ನಿನ್ನಿಂದ ನನಸಾಯ್ತು…
ಸೆರೆ ಹಿಡಿದೆ ಕಣ್ಣಲ್ಲೇ…
ಕಡಲಾಳದ ಮುತ್ತಿನ ಹಾಗೆ..
ನನ್ನ ನಾಳೆಯ ಬಾಳಿಗೆ
ನೀನಾದೆ ಮಾಸದ ಹಣತೆ..

***********************************

About The Author

Leave a Reply

You cannot copy content of this page

Scroll to Top