ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಬರೆಯಬೇಕಾದ ಹಾಡು…

ಯಾಕೊಳ್ಳಿ ಯ.ಮಾ

Image result for photos of hunger in arts

ಬರೆದು‌ ಮುಗಿಸ ಬೇಕಿದೆ ಗೆಳೆಯ‌
ನಮ್ಮೆದೆಯ ಹಾಡುಗಳ
ಅವು ಅಲ್ಲಿಯೇ ಧಪನ್ ಆಗಲು
ಬಿಡದೆಯೆ!

ಇತಿಹಾಸದ ಯಾವ‌ ಕಾಲ ಘಟ್ಟಕ್ಕೂ
ಆದರ್ಶಗಳಾಗದ
ನಮ್ಮ ನಮ್ಮವರ ಕಥೆಗಳ‌ ಹಿಡಿದು‌
ಕಟ್ಟಬೇಕಿದೆ ಗೆಳೆಯ
ನಮ್ಮ ಒಡಲ ಕುಡಿಗಳಿಗಾದರೂ
ದಾರಿಯಾಗಲೆಂದು

ನಮ್ಮದೇ ಜೀವದ ಹಾಡುಗಳಂತಿರು‌ವ
ಪ್ರೇಮದ ‌ಕಥನಗಳನ್ನಾದರೂ
ಬರೆಯಬೇಕಿದೆ ಗೆಳೆಯ
ಸ್ವಾರ್ಥವಿಲ್ಲದೆ ಪ್ರೀತಿಸುವ ಯಾರಿಗಾದರೂ.
ದಾರಿಯಾಗಲೆಂದು

ಯಾರದೂ ಅನ್ನ ಕಸಿಯದ , ಭೂಮಿಯಲಿ
ಭಾಗ ಕೇಳದ, ಬರೀ ಬೆವರು
ಸುರಿಸುವದಷ್ಟೇ ಅರಿತಿದ್ದ ನಮ್ಮಜ್ಜ
ಮುತ್ತಜ್ಜರ ಕಥೆಗಳ,
ನಾವೂ ಓದುತ್ತ
ನಮ್ಮ ಪಿಳಿಗೆಗೆ ಓದಿ‌ ಹೇಳಬೇಕಿದೆ
ಗೆಳೆಯ,

ನೆನಪಿರಲಿ ಗೆಳೆಯ!
ಇಲ್ಲವಾದರೆ ನಿಜವಲ್ಲದ ಇತಿಹಾಸ
ವಿಜ್ರಂಭಿಸಬಹುದು!
ಪರಂಪರೆಯಷ್ಟೇ ಅಲ್ಲ,

ನಮ್ಮ ಭವಿಷ್ಯವೂ ನಮ್ಮನ್ನು
ಕ್ಷಮಿಸಲಾರದು!

***************************************

About The Author

2 thoughts on “ಬರೆಯಬೇಕಾದ ಹಾಡು…”

Leave a Reply

You cannot copy content of this page

Scroll to Top