ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜ಼ಲ್

ಅಮರೇಶ ಎಂಕೆ

Image result for photos of love eyes in aarts

ಎನ್ನೆದೆಯ ಮರುಭೂಮಿಯಲ್ಲಿ ನಿನ್ನೊಲವಿನ ಓಯಾಸಿಸ್ ಕೇಳುತ್ತಿದ್ದೆ
ನೀ ಮರೆತಿದ್ದರೆ ಮರಳಾಗಿ ಬಿಸಿಲಿಗೆ ಸವೆದು ಹುಡಿಯಾಗಿ ಹೋಗುತ್ತಿದ್ದೆ

ಎನ್ನ ಬದುಕಿನಲ್ಲಿ ಎತ್ತರದ ಸ್ಥಾನ ಖಾಲಿ ಇಲ್ಲ ನೀನು ಆವರಿಸಿರುವಾಗ
ನಡೆದ ಹೆಜ್ಜೆ ಗುರುತನು ಅಳಿಸಿ ಹೋಗಿದ್ದರೆ ನೆನಪಾಗಿ ಉಳಿಯುತ್ತಿದ್ದೆ

ಬಣ್ಣ ಬಣ್ಣದ ಚಿಟ್ಟೆಯ ಚಿಕ್ಕ ಚಿಕ್ಕ ರೆಕ್ಕೆ ಬಡಿತ ಹೃದಯದ ಬಡಿತವಾಗಿದೆ
ಸಹಿಸದೆ ಕಪ್ಪು ಚುಕ್ಕಿ ಜೀವನದಲ್ಲಿ ಜಾಗ ಕೇಳಿದ್ದರೆ ಕುರೂಪಿ ಆಗುತ್ತಿದ್ದೆ

ಆ ಮುಗುಳುನಗುವು ಅಳಿಯದೆ ಉಳಿದುಬಿಟ್ಟಿದೆ ಕಣ್ಣರೆಪ್ಪೆಯ ಒಳಗೆ
ಕನಸಾಗಿ ಕ್ಷಣಮಾತ್ರದಲ್ಲಿ ಕಾಣೆಯಾಗಿದ್ದರೆ ಅಪಜಯ ಹೊಂದುತ್ತಿದ್ದೆ

‘ಅಮರ’ಪ್ರೇಮಕ್ಕೆ ನಿನ್ನೆಸರನ್ನೇ ಮರುನಾಮಕರಣ ಮಾಡಬೇಕೆನಿಸಿದೆ
ನಡೆವ ದಾರಿಗೆ ದೀಪವಾಗದಿದ್ದರೆ ಕತ್ತಲೆಯಲ್ಲಿ ಗುರಿ ಸೇರದೆ ಕೊರಗುತ್ತಿದ್ದೆ

****************************************

About The Author

Leave a Reply

You cannot copy content of this page

Scroll to Top