ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ರತ್ನರಾಯಮಲ್ಲ

Broken paper hearts on white background

ನಿನ್ನಯ ಬಾಹುಗಳಲ್ಲಿ ಇರುಳನ್ನು ಕಳೆಯುತಿರುವೆ ಹಗಲು ಕಾವಲಿಗಿದೆ
ಮಧುಬನದ ರಸಮಂಚವನು ಜೋಡಿಸುತಿರುವೆ ಹಗಲು ಕಾವಲಿಗಿದೆ

ಸಂಪ್ರದಾಯದ ಜೋಳಿಗೆಯಲ್ಲಿ ಪ್ರೇಮವನ್ನು ಬಂಧಿಸಿಡಬೇಡ ಚೆಲುವೆ
ನಿನ್ನ ಮಡಿಲಲಿ ಚಂದದ ಚುಕ್ಕಿಗಳನು ಎಣಿಸುತಿರುವೆ ಹಗಲು ಕಾವಲಿಗಿದೆ

ಪ್ರೀತಿಯ ರಸಸ್ವಾದ ಮುಗಿಯದ ಪಾಕ ಮಧುಶಾಲೆ ಅಡಗಿದೆ ನಿನ್ನೊಳಗೆ
ನಿನ್ನಯ ಒಲವಿನ ಕೊಳದಲಿ ಈಜು ಕಲಿಯುತಿರುವೆ ಹಗಲು ಕಾವಲಿಗಿದೆ

ನಿನ್ನ ಕೈ ಬಳೆಯ ಝೇಂಕಾರಕೆ ಮನದ ಕತ್ತಲ ಕೋಣೆಯು ಹೊಳೆಯುತಿದೆ
ನಿನ್ನಯ ಸಾಂಗತ್ಯದಲಿ ರಸಸವಿ ಅನುಭವಿಸುತಿರುವೆ ಹಗಲು ಕಾವಲಿಗಿದೆ

ಅನುರಾಗದ ಕಡಲಲಿ ಮುತ್ತುಗಳನ್ನು ಅರಸುತಿರುವನು ‘ಮಲ್ಲಿ’ ಹುಚ್ಚನಂತೆ
ಮಿದುವಾದ ಶುಚಿ ಗರ್ಭಗುಡಿಯನು ಪ್ರವೇಶಿಸುತಿರುವೆ ಹಗಲು ಕಾವಲಿಗಿದೆ

**************************************

About The Author

Leave a Reply

You cannot copy content of this page

Scroll to Top