ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಕ್ರಾಂತಿ ಕಾವ್ಯ ಸುಗ್ಗಿ

ಹೊಸ ವರುಷ

ಅಕ್ಷತಾ ಜಗದೀಶ

Sankranthi – The harvest festival for farmers – Jivabhumi

ಹೊಸ ವರುಷದ ಮೊದಲ ‌ಹಬ್ಬ
ಅದೇನೋ‌ ಉಲ್ಲಾಸ
ಹೊಸದೊಂದು ‌ಚೈತನ್ಯ
ಹೊಸ‌ ಉಡುಗೆ ಉಟ್ಟು
ಮುಡಿ ತುಂಬ‌ ಹೂ ಮುಡಿದು
ಸಖಿಯರೊಡನೆ‌ ಕೂಡಿಕೊಂಡು
ಎಳ್ಳು ಬೆಲ್ಲ ಹಂಚುವ‌ ಹಬ್ಬ
ಬಂದಿದೆ ನೋಡು ಸಂಕ್ರಾಂತಿ
ಹಬ್ಬ…..

ಅಂಗಳದ ತುಂಬ‌ ರಂಗವಲ್ಲಿ ಬಿಡಿಸಿ
ಬಾನಂಗಳದಲ್ಲಿ ಗಾಳಿಪಟ ಹಾರಿಸಿ
ಎತ್ತುಗಳಿಗೆ ಬಣ್ಣ ಹಚ್ಚಿ
ಕಿಚ್ಚು ಹಾಯಿಸುವ ಹಬ್ಬ
ಮರಳಿ ಬಂದಿದೆ ಸಂಕ್ರಾಂತಿ ಹಬ್ಬ..

ದಕ್ಷಿಣದಿಂದ ಉತ್ತರಾಭಿಮುಖವಾಗಿ ಸೂರ್ಯ
ಪಥ ಬದಲಿಸುವ ಮುಹೂರ್ತವೇ
ಮಕರ ಸಂಕ್ರಾಂತಿ
ಈ ಕ್ಷಣವದು ರೈತನ ಮೊಗದಲ್ಲಿ
ಮೂಡಿಸಿದೆ ಸುಗ್ಗಿ ಹಬ್ಬದ
ಕಾಂತಿ..

ಧಾನ್ಯ ಸಿರಿಯನ್ನು ಬರಮಾಡಿಕೊಂಡು
ಎಳ್ಳು ಬೆಲ್ಲದ ಸವಿಯ ಉಂಡು
ಹೊಸ ಪಥದ ಕಡೆಗೆ ಸಾಗಲಿ
ನಮ್ಮ ಪಯಣ
ಬಾಳಲಿ ಮೂಡಲಿ ನಲಿವಿನ
ಚರಣ..
ಆಹಾ! ಸುಗ್ಗಿ ಸಂಭ್ರಮದ ಹಬ್ಬ
ಮರಳಿ ಬಂದಿದೆ ಸಂಕ್ರಾಂತಿ ಹಬ್ಬ…

**********************************

This image has an empty alt attribute; its file name is WhatsApp-Image-2020-12-01-at-10.12.49-PM-832x1024.jpeg

About The Author

Leave a Reply

You cannot copy content of this page

Scroll to Top