ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇ-ಬುಕ್ ಬಿಡುಗಡೆ

ಮೂಚಿಮ್ಮ” ಕಥಾಸಂಕಲನ ಬಿಡುಗಡೆಯ ಕಾರ್ಯಕ್ರಮ

ಕನ್ನಡದ ಯುವ ತಲೆಮಾರಿನ ಭರವಸೆಯ ಕಥೆಗಾರರಾಗಿ ಹೊರಹೊಮ್ಮುತ್ತಿರುವ ಡಾ.ಅಜಿತ್ ಹರೀಶಿ ಅವರ “ಮೂಚಿಮ್ಮ” ಕಥಾ ಸಂಕಲನ ಇಬುಕ್, ಆಡಿಯೋ ಬುಕ್ ಹಾಗೂ ಮುದ್ರಿತ ರೂಪದಲ್ಲಿ ಮೈಲ್ಯಾಂಗ್ ಪ್ರಕಾಶನ ಹೊರ ತಂದಿದೆ. ಅದರ ಬಿಡುಗಡೆ ಕಾರ್ಯಕ್ರಮ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ.ರವೀಂದ್ರ ಭಟ್ಟರು ಕನ್ನಡಕ್ಕೆ ಅಜಿತ್ ಒಬ್ಬ ಸೂಕ್ಷ್ಮ ಬರಹಗಾರರಾಗಿ ದಕ್ಕುತ್ತಿದ್ದಾರೆ. ಅವರ ಕೃತಿಗಳು ಇನ್ನಷ್ಟು ಸಮಾಜಮುಖಿಯಾದ ತಲ್ಲಣಗಳಿಗೆ ಕನ್ನಡಿ ಹಿಡಿಯುವಂತೆ ರೂಪುಗೊಳ್ಳಲಿ ಅನ್ನುವ ಆಶಯ ವ್ಯಕ್ತಪಡಿಸಿದರು. ಇನ್ನೊಬ್ಬ ಅತಿಥಿ ಸಾಹಿತಿ ಶ್ರೀ ಜೋಗಿಯವರು ಮಾತನಾಡಿ ಕನ್ನಡಕ್ಕೆ ಹೊಸ ಓದುಗರನ್ನು ಕರೆತರುವ ಯುವ ಬರಹಗಾರರು ಹೆಚ್ಚಬೇಕು. ಅಜಿತ್ ಅವರ ಕೃತಿಗಳಲ್ಲಿ ಆ ಸತ್ತ್ವವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಲೇಖಕ ಅಜಿತ್ ಹರೀಶಿ ಹಾಗೂ ಮೈಲ್ಯಾಂಗ್ ಸಂಸ್ಥೆಯ ಮುಖ್ಯಸ್ಥರಾದ ಪವಮಾನ್ ಅಥಣಿ ಅವರು ಹಾಜರಿದ್ದರು.

ಮೂಚಿಮ್ಮ ಪುಸ್ತಕ ಇಬುಕ್, ಆಡಿಯೋ ಮತ್ತು ಪ್ರಿಂಟ್ ಮೂರೂ ಆವೃತ್ತಿಯಲ್ಲಿ www.mylang.in ಮೂಲಕ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಿಮ್ಮ,
ವಸಂತ ಶೆಟ್ಟಿ,
ಮೈಲ್ಯಾಂಗ್ ಬುಕ್ಸ್ ಪರವಾಗಿ
ಬೆಂಗಳೂರು
+91-9986026994
vasant@mylang.in

********************************************************

About The Author

Leave a Reply

You cannot copy content of this page

Scroll to Top