ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅಗ್ನಿಕುಂಡ

ಕವಿತೆ ಅಗ್ನಿಕುಂಡ ಲಕ್ಷ್ಮೀ ಪಾಟೀಲ್ ಅವರುನಡೆದಸ್ವರ್ಗದದಾರಿಯಲ್ಲಿಅವಳೂಹೆಜ್ಜೆಹಾಕಿಹೊರಟಿದ್ದಾಳೆಅವರುಸ್ವರ್ಗದಿಂದದಾರಿಮಾಡಿಕೊಂಡೇಹುಟ್ಟಿದವರುನಡಿಗೆಸಲೀಸುಅವಳಿಗೊಏರಿಗೆಜೋಲಿತಪ್ಪುತ್ತಿದೆಬದುಕನ್ನೆಲ್ಲಕಣ್ಣಿಟ್ಟುನಡೆದವಳಿಗೀಗಮಂಜುಕವಿದಂತೆಕಣ್ಣಿಗೆಕತ್ತಲೆಆವರಿಸಿದಂತೆನಡಿಗೆನಿಂತುಪಾದಗಳುಕುಸಿದಿವೆಬದುಕಿನಲ್ಲೇನರಕದನೋವುಉಂಡವಳುಸ್ವರ್ಗದಏರಿಗೆಬೆಚ್ಚಿಬಿದ್ದಿದ್ದಾಳೆಇಲ್ಲೇತೆರೆಯಬಾರದೇಒಂದುಕುಂಡಎಂಬಂತೆಕಣ್ಣುಗಳುನಿಸ್ತೇಜಗೊಂಡಿವೆಇವರೆಲ್ಲಸ್ವರ್ಗದಛ್ಹುಮಂತ್ರಗಾಳಿಯಿಂದಬಂದವರುಅದಕ್ಕೇಗಾಳಿಯೊಂದಿಗೆಹೊರಟಿದ್ದಾರೆಹಿಂದೆನೋಡದೆಹುಟ್ಟಿನಮೂಲಸೇರಲುಬೀದಿಗರುಗಳಂತೆಇದ್ದಸ್ವರ್ಗಕ್ಕೋಅಥವಾಇವರೇಕಟ್ಟಿಕೊಳ್ಳುವಇನ್ನೊಂದುಸ್ವರ್ಗಕ್ಕೋ ! ನನಗೂಇಲ್ಲಿನನ್ನಅಗ್ನಿಕುಂಡದಮೋಹಸ್ವರ್ಗನರಕಪಾಪಪುಣ್ಯಗಳಸ್ವತ್ತನ್ನೆಲ್ಲಯಜ್ಞಾಹುತಿಗೊಳಿಸಲುಅಗ್ನಿಕುಂಡಕಾಯುತ್ತಯಾರದೋದೇಹಬೆನ್ನಟ್ಟದಂತೆಕೆಂಡದೊಂದಿಗೆಕೆಂಡವಾಗಲುನನ್ನಾತ್ಮಿಣಿಯೂಸಿದ್ಧಳಾಗಿನಿಂತಿದ್ದಾಳೆಇವರಸ್ವರ್ಗದಲ್ಲಿಮತ್ತೆಭೂಮಿಗೆಬೀಳುವಭಯಮೂಲಪುರುಷಸ್ವರ್ಗದಲ್ಲಿಯೂಸುಖದಿಂದಿರಲಿಲ್ಲಐವರುಗಂಡಂದಿರಆದರದಲ್ಲಿಅಲ್ಲಿಯೂಸೋತರೆಛೆ ! ಪ್ರಮಾದಅಕ್ಷಮ್ಯಅಪರಾಧಶಂತನುಗಂಗೆಯಂತೆವಂಶಕ್ಕೆಮುನ್ನುಡಿಬರೆದುಮತ್ತೊಂದುಮಹಾಭಾರತಕ್ಕೆಕಿಡಿಹೊತ್ತಿಸಬೇಕುಶಾಪಗ್ರಸ್ಥಳಾಗಿಅವತರಿಸಿಗೆದ್ದಗಂಡಸರನೆರಳಾಗಿಮೀಸೆಹೊತ್ತಮುಖಗಳೆಲ್ಲಸೀರೆಯಲ್ಲಿಕವುಚಿಮುಗುಚಿಹೂವಿನಪಕಳೆಮೇಲೆಹಸಿಕಾಮದಗಾಯಬರೆಮೂಡಿಸಿವನವಾಸಯುದ್ಧಕರುಳುಗಳಿಗೆಕತ್ತರಿ.ಭೂಮಿಗೆಬಿದ್ದಸಂಕಟಕ್ಕೆಸಹಿಸುವುದು ಇವರೇಏರಲಿಸುರಲೋಕಸೋಪಾನಇಲ್ಲೊಂದುಭೂದೇವಿಯಅಗ್ನಿಕುಂಡಎದ್ದುಬಿಡಲಿಎಂದಿಗೂಬೇಡಅಪ್ಪನಸೇಡಿನಅಗ್ನಿಕುಂಡ ಓ ! ಮುಂದೆಕಾಯಿದಿರಿಸಿದಸ್ಥಳಕ್ಕೆಗಂಡಂದಿರಭರದನಡೆಸ್ವರ್ಗದಕೌತುಕಹೊತ್ತುಭೂಮೋಹದಾಚೆಭೂಭಾರದಾಚೆಗುರುತ್ವಾಕರ್ಷಣೆಕಳಚುತ್ತಿದೆಕೂಗುಕೆಳದುಆಸೆಹಿಂಗದುಎಲ್ಲೋಸ್ವರ್ಗಸ್ಥಆಕೇಶವಯುಗಪ್ರವೇಶಕ್ಕೆಯುಗಯುಗದತಯಾರಿದೀರ್ಘವಿರಾಮಯುಗಭಾರಕ್ಕೆಭೂದೇವಿ ! ನಿನ್ನಲ್ಲೇನನ್ನಸ್ವರ್ಗತೆರೆದುಬಿಡುಮತ್ತೊಂದುಅಗ್ನಿಕುಂಡಬೆತ್ತಲಾಗಿಬಿದ್ದುಒಪ್ಪಗೊಳ್ಳಲುಮನಭಾರದಸಂಕಟಗಳುಕಿಡಿಕಿಡಿಗಳಸೋಂಕಲುಹೇಗೆಮರೆತೀತುಸೀರೆಅಯ್ಯೋಸೀರೆಯಭಾರತಡೆಯಲಾಗುತ್ತಿಲ್ಲ **********************************************

ಅಗ್ನಿಕುಂಡ Read Post »

ಕಾವ್ಯಯಾನ

ಗಝಲ್

ಗಝಲ್ ರತ್ನರಾಯ ಮಲ್ಲ ಅಂದವನ್ನು ಮುಚ್ಚಿಡಲು ಬಟ್ಟೆಗಳನ್ನು ತರುತಿರುವೆಚಂದವನ್ನು ಹೆಚ್ಚಿಸಲು ಸೀರೆಯನ್ನು ಉಡಿಸುತಿರುವೆ ಅವಯವಗಳ ಇಳಿಜಾರಿನಲ್ಲಿ ಬೆರಳುಗಳು ಸೋಲುತಿವೆಸೌಂದರ್ಯದ ಕೆನೆಯಲ್ಲಿ ಪ್ರೀತಿಯಿಂದ ಅಲೆಯುತಿರುವೆ ಹೇಮವನ್ನು ನಾಚುವ ಕಿವಿಯೋಲೆಗಳನ್ನು ತಂದಿರುವೆಒರಟು ಅಧರಗಳಿಂದ ಕರ್ಣಗಳನ್ನು ಸಿಂಗರಿಸುತಿರುವೆ ಹೃದಯದ ಉದ್ಯಾನದಲ್ಲಿ ಹೂವೊಂದು ಅರಳಿ ನಿಂತಿದೆಹಿಂಬದಿಯಿಂದ ಆಲಂಗಿಸಿ ಲತೆಯನ್ನು ಮುಡಿಸುತಿರುವೆ ತೆಳುವಾದ ಮೈಯ ಕಂಡು ಅರಿವೆಗೂ ತುಸು ಮತ್ಸರ ಮಲ್ಲಿಶೂನ್ಯ ಅಂಗದ ಸೊಬಗಿನಲಿ ನಾನು ಕಳೆದು ಹೋಗುತಿರುವೆ ************************

ಗಝಲ್ Read Post »

ಪುಸ್ತಕ ಸಂಗಾತಿ

ಜಂಜಿ ಡಪಾತಿ ಬೋ ಪಸಂದಾಗೈತಿ!

ಪುಸ್ತಕಪರಿಚಯ ಜಂಜಿ ಡಪಾತಿ ಬೋ ಪಸಂದಾಗೈತಿ! ಚುಕ್ಕಿ ಬೆಳಕಿನ ಜಾಡುಕಾದಂಬರಿಕರ್ಕಿ ಕೃಷ್ಣಮೂರ್ತಿಛಂದ ಪುಸ್ತಕ. ಇದು ಕಥೆಗಾರ ಕರ್ಕಿ ಕೃಷ್ಣಮೂರ್ತಿ ಅವರ ಮೊದಲ ಕಾದಂಬರಿ. ‘ಮಳೆ ಮಾರುವ ಹುಡುಗ’ ‘ಗಾಳಿಗೆ ಮೆತ್ತಿದ ಬಣ್ಣ’ ಅವರ ಪ್ರಕಟಿತ ಕಥಾಸಂಕಲನಗಳು. ಅರಿಕೆಯಲ್ಲಿ ಕೃಷ್ಣಮೂರ್ತಿ ಅವರು ಹೇಳಿಕೊಂಡಂತೆ ‘ ಜಂಜಿ ಡಂಪಾತಿ’ ಎಂಬ ಅಪ್ರಕಟಿತ ಕಥೆಯೊಂದನ್ನು ಓದಿ ಅವರ ಗೆಳೆಯರು ಕಾದಂಬರಿ ಮಾಡಬಹುದು ಎಂದು ಹೊಳಹು ನೀಡಿದ್ದೇ ಈ ಕೃತಿಯ ಹುಟ್ಟಿಗೆ ಕಾರಣ. ಮಲಯೂ ಭಾಷೆಯ ಶಬ್ದ ಈ ಜಂಜಿ ಡಪಾತಿ. ಅಂದರೆ “ಭರವಸೆ ಪೂರೈಸಿದ್ದೇನೆ” ಎಂದರ್ಥ. ವಲಸೆಯ ಕಥನಗಳ ಪ್ರಕಾರಕ್ಕೆ ಸೇರುವ ಕಾದಂಬರಿಯಿದು. ಇತ್ತೀಚೆಗೆ ವಸುಧೇಂದ್ರ, ಡಾ.ಗುರುಪ್ರಸಾದ್ ಕಾಗಿನೆಲೆ, ಎಂ. ಆರ್. ದತ್ತಾತ್ರಿ ಸೇರಿದಂತೆ ಹಲವರು ಈ ವಿಭಾಗದಲ್ಲಿ ಕೃತಿಗಳನ್ನು ಬರೆದಿದ್ದಾರೆ. ಆದರೆ ಮಲೇಷ್ಯಾದ ಕುರಿತು ಕನ್ನಡದಲ್ಲಿ ಬಂದ ಮೊದಲ ಕಾದಂಬರಿಯಿದು. ಸಹಸ್ರಾರು ಕಿಮೀ ಕ್ರಮಿಸುವ ವಲಸೆ ಹಕ್ಕಿಗಳ ಮಾರ್ಗ ನಿರ್ಣಯವು, ನಕ್ಷತ್ರಗಳ ಜಾಡೂ ಸೇರಿದಂತೆ ಹಲವು ಸಂವೇದನೆಗಳನ್ನು ಆಧರಿಸಿದೆ. ಇದಕ್ಕೆ ಸೂಕ್ತವಾಗಿ ದೇಶ ಕುಲಕರ್ಣಿ ಅವರ ಕವನದ ಸಾಲು ‘ ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು..’ಇದರ ಕೊನೆಯ ಭಾಗ ಈ ಕಾದಂಬರಿಗೆ ಶೀರ್ಷಿಕೆಯಾಗಿದೆ. ನೋಡಿ, ದೇಶ ಕುಲಕರ್ಣಿ ಅವರ ಈ ಕವಿತೆಯು ಕಾದಂಬರಿಯ ಅಪರಿಮಿತ ಸಾಧ್ಯತೆಗಳನ್ನು ಸೂಚ್ಯವಾಗಿ ಹೇಳುತ್ತದೆ. “ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡುಇನ್ನಿಲ್ಲವಾಯಿತೆ ಆ ಹಕ್ಕಿ ಹಾಡುಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆಮುರಿದು ಹೋಯಿತೇ ಈಗ ಆ ಪುಟ್ಟ ಗೂಡು” ಅವಕಾಶ ಸಿಕ್ಕರೆ ಹೊರದೇಶಕ್ಕೆ ಹಾರುವ ಆಸೆಯ ನಿರಂಜನ, ಬೇರಿನ ಹುಡುಕಾಟದಲ್ಲಿ ಇರುವ ಶಣ್ಮುಗರತ್ಮಮ್, ತನ್ನ ಮೂಲದ ಕುರಿತು ಅಭಿಮಾನ ಹೊಂದಿರುವ ದುರೈ; ಹೀಗೆ ಇಲ್ಲಿ ಎಲ್ಲರೂ ಚುಕ್ಕಿ ಬೆಳಕಿನ ಜಾಡಿನಲ್ಲಿದ್ದಾರೆ. ಕುತೂಹಲದ ಕಂದೀಲು ಹಿಡಿದು ಸದ್ಯದ ಸನ್ನಿವೇಶಗಳು ಬದುಕಿನ ಅಸಂಗತತೆಯನ್ನು ಇನ್ನೂ ದಟ್ಟವಾಗಿಸುತ್ತಿರುವ ವಾಸ್ತವದ ಶೋಧವಾಗಿಯೂ ಈ ಕೃತಿ ಕಾಣಿಸುತ್ತದೆ. ಈ ಕಾದಂಬರಿಯ ಮುಖ್ಯ ಪಾತ್ರವಾದ ನಿರಂಜನನನ್ನು ಅತ್ಯುತ್ತಮವಾಗಿ ಕರ್ಕಿಯವರು ಕಡೆದಿದ್ದಾರೆ. ಇವನನ್ನು ಪ್ರತಿನಾಯಕ ಎಂದು ಕರೆಯುವುದು ಸೂಕ್ತವೆನಿಸುತ್ತದೆ. ಆದರೆ ಇಲ್ಲಿ ನಾಯಕನೂ ಇವನೇ! ಇದು ವರ್ತಮಾನದ ಕಟು ಸತ್ಯ ಸಹ ಹೌದು. ಆಫೀಸಿನ ಕೆಲಸದ ಪ್ರಯುಕ್ತ ನಿರಂಜನ ವಿದೇಶಕ್ಕೆ ಹೋದರೆ ಸ್ಟಾರ್ ಹೋಟೆಲಿನಲ್ಲುಳಿದುಕೊಂಡು ಬರುವಾಗ ಅಲ್ಲಿನ ಸೋಪು, ಬ್ರಶ್ಶು, ಬಾಚಣಿಕೆಯನ್ನು ತುಂಬಿಕೊಂಡು ಬರುವ ಮನಸ್ಥಿತಿಯವ. ಪುಕ್ಕಟೆ ಆಸ್ಪತ್ರೆ, ಬಾಡಿಗೆ ಕಾರಿನ ಬಿಲ್ಲನ್ನು ಹೆಚ್ಚು ತೋರಿಸಿ ಕ್ಲೈಮ್ ಮಾಡುವ ಭಾರತದ ಬಹುಸಂಖ್ಯಾತ ಮನಸ್ಥಿತಿಯವನು. ಅದರಲ್ಲಿ ಅವನಿಗೆ ಯಾವುದೇ ಎಗ್ಗುಸಿಗ್ಗಿಲ್ಲ. ಇವಕ್ಕೆಲ್ಲ ಅವನದೇ ಆದ ಸಮರ್ಥನೆಗಳಿವೆ. ಇವು ನಮ್ಮೊಳಗೂ ಇವೆ ಎಂದು ಅನ್ನಿಸದೇ ಇರದು. ಈತ ಹೆಜ್ಜೆ ಹೆಜ್ಜೆಗೂ ಹೇವರಿಕೆಯನ್ನು ಹುಟ್ಟಿಸುತ್ತಾನೆ. ಅತ್ಯಂತ ಸೂಕ್ಷ್ಮವಾದ ಕೃತಿಕಾರ ಮಾತ್ರ ಇಂತಹದೊಂದು ಪಾತ್ರವನ್ನು ಕಡೆತನಕ ಅದೇ ಲಯದಲ್ಲಿ ನಿರ್ವಹಿಸಬಲ್ಲರು. ಮಲೇಷ್ಯಾದ ಕೌಲಾಲಂಪುರದ ಆಸುಪಾಸಿನಲ್ಲಿ ಒಂದು ವಾರದ ಕಾಲ ನಡೆಯುವ ಕಥನವೇ ಈ ಚುಕ್ಕಿ ಬೆಳಕಿನ ಜಾಡು. ತನ್ನ ಕಛೇರಿಯ ಕಾರ್ಯದ ನಿಮಿತ್ತ ಇಲ್ಲಿಗೆ ಆಗಮಿಸುವ ನಿರಂಜನನಿಗೆ ಇಲ್ಲೆ ಒಂದು ನೌಕರಿ ಕಂಡುಕೊಳ್ಳುವ ಆಸೆಯಿರುತ್ತದೆ. ಹಾಗಾಗಿ ಉಳಿದೆರಡು ದಿನಗಳನ್ನು ಕಣ್ಣದಾಸನ್ ಅವರ ಸೋವಿಯ ಹೋಂ ಸ್ಟೇನಲ್ಲಿ ಕಳೆಯುತ್ತಾನೆ. ಆಗಲೇ ಆತ ಪಾಸ್ಪೋರ್ಟ್ ಕಳೆದುಕೊಳ್ಳುವುದು ಮತ್ತು ಕಥೆ ರೋಚಕವಾಗುವುದು.ಮನುಷ್ಯನನ್ನು ಏನೆಲ್ಲ ಘಟನೆ ಮತ್ತು ವಸ್ತುಗಳು ಕಾಡುತ್ತವೆ ಎನ್ನುವುದಕ್ಕೆ ನಿರಂಜನನ ಡಾಂಬರು ಗುಳಿಗೆ ( ನಾಫ್ತಾಲಿನ್ ಮಾತ್ರೆ), ಕಣ್ಣದಾಸನ್ ಜೀವನ,ಶಣ್ಮುಗರತ್ನಮ್ ನ ವಂಶಜರ ಮೂಲದ ಹುಡುಕಾಟ, ದುರೈಯ ನೈಸರ್ಗಿಕ ಕರ್ಪೂರದ ಹುಚ್ಚು ಇಲ್ಲಿ ಸೊಗಸಾದ ಉದಾಹರಣೆಗಳಾಗಿವೆ. ಭೂಮಿಯ ಅಡಿಯ ಸ್ಕ್ಯಾನಿಂಗ್ ಮಾಡುವ ಕೆಲಸ ಮತ್ತು ಅದರ ಯಂತ್ರಗಳನ್ನು ಪೂರೈಕೆ ಮಾಡುವುದು ನಿರಂಜನನ ಕಂಪೆನಿಯ ಕೆಲಸ. ಈಗ ಎಲೆಕ್ಟ್ರಿಕ್ ಕೇಬಲ್, ಗ್ಯಾಸ್ ಲೈನ್, ಓಎಫ್ಸಿ.. ಎನ್ನುತ್ತಾ ಭೂಮಿಯ ಅಡಿಗೆ ಟ್ರಾಫಿಕ್ ಜಾಮಾಗಿದೆ. ಅದನ್ನು ಕಂಡು ಹಿಡಿದು, ಸಮಸ್ಯೆ ನಿವಾರಿಸುವುದು ಅವನ ಕೆಲಸ. ಇದರ ಹಿನ್ನೆಲೆಯಲ್ಲಿ ಒಬ್ಬ ಇವನಿಂದ ನಿಧಿ ಹುಡುಕುವ ಕೆಲಸಕ್ಕೆ ಇವನಿಗೆ ಆಮಿಷ ತೋರಿ ಅಲ್ಲಿ ನಡೆಯುವ ಘಟನೆ ಮಜವಾಗಿದೆ. ಕ್ಯಾಸೆಟ್ ಶ್ರೀಪತಿ, ಜೋಮೋ, ಸಂಗೊಂಗ್ ತಾಸಿ, ಮುರಳೀಧರ, ರೇವತಿ ಪಾತ್ರಗಳು ಕಾದಂಬರಿಯ ಸಣ್ಣ ಸಣ್ಣ ಪ್ರಸಂಗಗಳಲ್ಲಿ ಬಂದು ಹೋದರೂ ಬಹಳ ಹೊತ್ತು ನೆನಪಿನಲ್ಲಿ ಉಳಿಯುತ್ತವೆ. ಸಣ್ಣ ಬುದ್ಧಿಯ, ವಿಪರೀತ ಲೆಕ್ಕಾಚಾರದ ನಿರಂಜನನ ಹೆಜ್ಜೆಯ ಜಾಡನ್ನು ಊಹಿಸುವ ಕೆಟ್ಟ ಕುತೂಹಲವನ್ನು ಓದುಗನಲ್ಲಿ ಸೃಷ್ಟಿಸುವುದರ ಸವಾಲಿನಲ್ಲಿ ಕರ್ಕಿ ಕೃಷ್ಣಮೂರ್ತಿಯವರು ಗೆದ್ದು, ಕಾದಂಬರಿಯ ಕ್ಯಾನ್ವಾಸಿಗೆ ಹಿಗ್ಗಿರುವ ಕೌಶಲ್ಯವು ಸ್ಪಷ್ಟವಾಗಿ ಗೋಚರಿಸುತ್ತದೆ. ಆ ಮೂಲಕ ಕಾದಂಬರಿಯ ಗೆಲುವೂ ಆಗಿದೆ. ಮಲೇಷ್ಯಾದ ಇಂಡಿಯನ್ಸ್ ಅದರಲ್ಲೂ ತಮಿಳರ ಬದುಕು ಮತ್ತು ಸಂಕಟಗಳು, ಭೂಮಿಪುತ್ರರೆಂದು ಕರೆದುಕೊಳ್ಳುವ ಮಲಯೂ ಜನಾಂಗ,ಅಲ್ಲಿನ ಚೀನಿಯರು, ಅಲ್ಲಿಯೂ ತಿಕ್ಕಾಟ ಮಾಡಿಕೊಳ್ಳುವ ಶ್ರೀಲಂಕಾದ ಸಿಂಹಳೀಯರು ಮತ್ತು ತಮಿಳರು, ‘ಒರಾಂಗ್ ಅಸ್ಲಿ’ ಎಂಬ ಬುಡಕಟ್ಟು ಜನಾಂಗ ಹೀಗೆ ಮಲೇಷ್ಯಾದ ಪ್ರಾದೇಶಿಕ ಚಿತ್ರಣ ಈ ಕೃತಿಯಲ್ಲಿ ಚೆನ್ನಾಗಿ ಮೂಡಿಬಂದಿದೆ. ಕೇವಲ ಎರಡು ನೂರು ರೂಪಾಯಿಗಳಲ್ಲಿ ಮಲೇಷ್ಯಾ ದೇಶದ ಪ್ರವಾಸ ಮತ್ತು ನವಿರಾದ ಕಾದಂಬರಿಯ ಓದು ನಮ್ಮದಾಗಲಿದೆ.******************************************************* ಡಾ. ಅಜಿತ್ ಹರೀಶಿ

ಜಂಜಿ ಡಪಾತಿ ಬೋ ಪಸಂದಾಗೈತಿ! Read Post »

ಕಾವ್ಯಯಾನ

ನಿಲ್ಲದಿರು ದೂರ

ಕವಿತೆ ನಿಲ್ಲದಿರು ದೂರ ಜಯಶ್ರೀ.ಭ.ಭಂಡಾರಿ ಉಸಿರ ಉಸಿರಲಿ ನಿನ್ನದೆ ಹೆಸರುನೆನಪ ಮೆರವಣಿಗೆಯದು ಹಸಿರುಅರಿತು ಬೆರೆತ ನವನೀತದ ಮೊಸರುಕನಸಕಂಗಳಲಿ ತುಂಬಿದೆ ಉಸಿರು ದೂರದಲಿ ನೀನಿದ್ದರೂ ಇಲ್ಲ ಅಂತರ..ಹುಚ್ಚು ಪ್ರೀತಿಯದು ತೀರದ ದಾಹಕಡಲ ಅಲೆಗಳಾಗಿವೆ ಆಸೆಗಳುಬಂದು ಬಿಡು ತಾಳಲಾರೆ ಈ ವಿರಹ ನೋವ ನಿನ್ನ ಸನಿಹ ಬೇಕೆನಗೆ ನಿರಂತರಬಯಕೆಗಳ ರಂಗೋಲಿಗೆ ರಂಗಾಗುಬಾ ಗೆಳೆಯನೆ ಸಹಿಸಲಾರೆ ಅಂತರಜೊನ್ನಮಳೆ ಜೇನಹೊಳೆ ನೀನಾಗು ಕತ್ತಲೆಯ ಸರಿಸು ಹರಸು ಬಾಬೆಳಕಾಗಿ ಹೃದಯ ಮೀಟು ಬಾಪ್ರೀತಿಯ ಮಹಲಿನ ಅರಸನೆ ಬಾಅಂತರ ಸಾಕು ನಿರಂತರವಾಗಿ ಬಾ ಮುದ್ದುಮಾತಿನ ಮೋಹಗಾರನೆಗೆಜ್ಜೆಸದ್ದಿಗೆ ಮರುಳ ಮಾಯಗಾರನೆಮನದ ರಿಂಗಣಕೆ ಮೆಲ್ದನಿಯಾದವನೆಎದೆಯ ತಲ್ಲಣ ಅರಿತವನೆಶಮನಮಾಡು ಬಾ ನಿರಂತರ ಈ ಹೂ ಸದಾ ನಿನ್ನ ಪೂಜೆಗೆ ಒಲುಮೆಸಿರಿಯೆಅಂತರ ಸಾಕಿನ್ನುಬಾಳದಾರಿಯಲಿ ಅನವರತ ಬೇಕಿನ್ನುನಿಲ್ಲದಿರು ಸಖನೆ ದೂರದೂರ. ****************************

ನಿಲ್ಲದಿರು ದೂರ Read Post »

ಕಾವ್ಯಯಾನ

ಸಂತೆಯಲಿ

ಕವಿತೆ ಸಂತೆಯಲಿ ವಿ.ಎಸ್.ಶಾನಬಾಗ್ ಸಂತೆಯಲಿಕೆಲವರು ಕೊಳ್ಳಲು ಬರುತ್ತಾರೆಕೆಲವರು ನೋಡಲು ಕೊಳ್ಳುತ್ತಾರೆಸಂತೆಗೆ ಗೋಡೆಗಳು ಇಲ್ಲ ಆದ್ದರಿಂದ ಎಲ್ಲಅಂಗಾಂಗಗಳ ಮಾತು ಖುಲ್ಲ ಮಹಿಳೆಯರು ಹಳೆಯಮಾತಿನಹೊಸ ಚರ್ಯೆ ಚರ್ಚೆ ಸ್ವಪಾಕಸುಕ್ಕುಗಳ ಅಡಗಿಸಿ ಮನೆಯಲಿ ಸ್ವಪಾತ್ರಗಂಡನ ಚಮತ್ಕಾರ ನೂಡಲ್‌ ನಂತಹಪರಿಹಾರಗರತಿಯರನ್ನು ತರಗತಿಗೆ ಕಳುಹಿಸಿಪಿಸುಮಾತಿನಲ್ಲಿ ದ್ವಿಪಾತ್ರಹೌಹಾರಿಸಿದ ಚಿತ್ರ ಪುರುಷರು ಸಂತೆಯಲ್ಲಿಹೆಂಡತಿ,ಬಡ್ತಿ,ಲೋನುಅನುಕಂಪಕ್ಕೆ ಕಾಯುವಶೋಷಿತರು ಪೆಗ್ ನಲ್ಲಿಮೀಟೂ ಕಥಾಸರಣಿ ಯುವಕರುಸಂಜೆ ಸಂತೆಯಲಿ ಸಂದವರು, ಪ್ರೀತಿಯಲಿ ದುಶ್ಯಂತರುಮಾತು ಬೇಡದ ಬರೀ ಸೂಚನೆವಿವರಣೆ, ಹಕ್ಕಿಯಂತೆ ಹಾರಿ ಮಾತು ಮತ್ತೇನೋ ಆದ ಬವಣೆಕೇಳದ ಕಿವಿಗೆ ಹೇಳದ ಬಾಯಿ ನೋಡದ ಕಣ್ಣುಮಾರುವವರ ಎದೆಯಿಂದ ಕೊಳ್ಳುವವರ ಕಣ್ಣ ಹೊರಗೆಯಾರದೋ ಹೊಂಡಕ್ಕೆ ಯಾರದೋ ಮಣ್ಣುಕೀ (ಎಲ್ಲಿದೆ ಹುಡುಕಿ)ಇಲ್ಲದೆ ಮರೆತ ಬಾವುಟಹಾರುತ ಪಟಪಟ ಕವಿಗಳುಸಂತೆಯಲಿ ಸಿಗುವುದು ಕವಿತೆಗೆ ಬದಲಾದ ರೂಪ,ಅನುಭವ ಕಾಡದು ಬರೆ ಅಳಲಿನ ಸ್ವಗತ ರೂಪ?ಅವೇ ಕವಿತೆಗಳು ಪುರವಣಿಗೆಗಳಲಿ ತದ್ರೂಪಮಾತಿನಲ್ಲಿ ವಿಮರ್ಶೆ ಯಾಕೋ ಮೌನ ಕವಿಗೆಕವಿಗೋಷ್ಟಿಯಲಿ ಕವಿಗಳು ಮಂಚದಲಿಸಂತೆಯಲಿ ಓದಿದ ಕವಿತೆಗಳುಹಾರಿಹೋದವುಗಂಗೆಯ ಎಂಟನೇ ಮಗುವಿನಂತೆವಾಟ್ಸಾಪ್ ಕವಿಗಳ ಗುಂಪನ್ನು ಅರಸಿ ಸಂತೆ ಅಮೂರ್ತ ನಿಂತಂತೆಸಂಜಯನ ಕಣ್ಣಂತೆ ************************

ಸಂತೆಯಲಿ Read Post »

ಇತರೆ

ಪ್ರೇಕ್ಷಕ ಪರಂಪರೆಯ ಅನ್ನದಾತರು

ಲೇಖನ ಪ್ರೇಕ್ಷಕ ಪರಂಪರೆಯ ಅನ್ನದಾತರು ಮಲ್ಲಿಕಾರ್ಜುನ ಕಡಕೋಳ ಯಶಸ್ವಿ ನಾಟಕವೊಂದರ ಕುರಿತು ಮಾತಾಡುವಾಗ ಎಂಥವರಿಗೂ ಆಧುನಿಕ ರಂಗಭೂಮಿ ಸಂದರ್ಭದಲ್ಲಿ ನಿರ್ದೇಶಕ ಪರಂಪರೆಯತ್ತ ಆದ್ಯಗಮನ. ಹಾಗೇನೆ ವೃತ್ತಿರಂಗಭೂಮಿ ಸಂದರ್ಭದಲ್ಲಿ ನಟನ ಪರಂಪರೆಯದು ಧುತ್ತನೆ ನೆರವಿಗೆ ನಿಲ್ಲುವ ನಿಲುವು. ನಮ್ಮ ಪ್ರೊಸಿನಿಯಮ್ ಥಿಯೇಟರ್ ಪ್ರದರ್ಶನಗಳು ಪ್ರೇಕ್ಷಕರೆಂಬ ಐಕಾನ್ ಗಳ ಮೂಲಕವೇ ಸಾಂಸ್ಕೃತಿಕ ಮೌಲ್ಯ ಗಳಿಸಿವೆಯೆಂಬ ದ್ಯಾಸವೇ ಇರಲ್ಲ. ಅಷ್ಟು ಮಾತ್ರವಲ್ಲದೇ ರಂಗಸಂಸ್ಕೃತಿಯ ಅಭಿವೃದ್ಧಿ ಹಾಗೂ ವಿಕಾಸದ ಸಾಧ್ಯತೆಯ ಕ್ಷಿತಿಜ ವಿಸ್ತಾರಗೊಳ್ಳುವುದೇ ಪ್ರೇಕ್ಷಕ ಪ್ರಭುಗಳಿಂದ. ಇಂತಹ ಮಹತ್ತರ ಸಂಗತಿಗಳನ್ನೇ ನೇಪಥ್ಯಕ್ಕೆ ಜರುಗಿಸುವ ಜಾಣ ಕೆಲಸ ಕೆಲವು ರಂಗಪಂಡಿತರು ಎಸಗುತ್ತಾರೆ. ಅಷ್ಟೇಯಾಕೆ ಕೆಲವೊಮ್ಮೆ ಹ್ಯಾವಕ್ಕೆ ಬಿದ್ದಂತೆ ನಿರ್ದೇಶಕ ಹಾಗೂ ನಟನಾ ಪರಂಪರೆ ಕುರಿತೇ ಹೆಚ್ಚು ಹೆಚ್ಚು ಚರ್ಚೆಯ ಒಣಪಾಂಡಿತ್ಯ ಮೆರೆಯುತ್ತಾರೆ. ಸಿನೆಮಾ, ನಾಟಕ, ಭಾಷಣ, ಪುಸ್ತಕ ಇತರೆ ಎಲ್ಲ ಸಾಂಸ್ಕೃತಿಕ ಜ್ಞಾನಶಿಸ್ತು ಪ್ರದರ್ಶನಗಳ ಕುರಿತು ನಿಕಷದ ಚಿಂತನೆಗಳು ಅಭಿವ್ಯಕ್ತಿಯ ಸ್ವರೂಪ ಪಡೆದುಕೊಳ್ಳುವಾಗ ಪ್ರೇಕ್ಷಕ, ಕೇಳುಗ, ಓದುಗ ಸಹೃದಯತೆಯ ಮಹತ್ವದ ಸ್ಥಾನವನ್ನು ಅಲಂಕರಿಸುತ್ತಾನೆಂಬುದು ಮರೆಯಲಾಗದು. ನಮ್ಮ ಪರಂಪರಾಗತ ಸಂಕಥನ ಪಾಠ್ಯಗಳಲ್ಲಿ ಇದೆಲ್ಲ ಉಲ್ಲೇಖನೀಯ ವಿಷಯ . ಅದರಲ್ಲೂ ವಿಶೇಷವಾಗಿ ವೃತ್ತಿರಂಗಭೂಮಿಯಲ್ಲಿ ಹಲವು ಸಾಂಸ್ಕೃತಿಕ ಪರಂಪರೆಗಳು ಶಿಖರಪ್ರಾಯದ ಉಲ್ಲೇಖಿತ ಮಟ್ಟದಲ್ಲಿವೆ. ಅಲ್ಲಿ ಪ್ರಮುಖವಾಗಿ ನಟನಾ ಪರಂಪರೆ, ರಂಗ ಸಂಗೀತ ಪರಂಪರೆ, ರಂಗಸಜ್ಜಿಕೆಗಳ ಪರಂಪರೆಗಳು ಆಕರ ಸ್ಥಾನ ಪಡಕೊಂಡಿವೆ. ಅಷ್ಟೇ ಮಹತ್ವದ ಮತ್ತೊಂದು ಪರಂಪರೆ ಅಲ್ಲಿದೆ. ಅದುವೇ ಸಹೃದಯ ಪ್ರೇಕ್ಷಕ ಪರಂಪರೆ. ಎಷ್ಟೋ ಬಾರಿ ವೃತ್ತಿರಂಗಭೂಮಿಯ ನಾಟಕಗಳಲ್ಲಿ ಪ್ರೇಕ್ಷಕ ಅದೆಂತಹ ಮಹತ್ವ ಪಡೆದುಕೊಳ್ಳುತ್ತಾನೆಂದರೆ, ಕಲಾವಿದರು ನಾಟಕದ ನಡುವೆಯೇ ಪ್ರೇಕ್ಷಕರೊಂದಿಗೆ ಸಂಭಾಷಣೆಗೆ ಇಳಿಯುವ ಸನ್ನಿವೇಶಗಳು ಸ್ವಾಭಾವಿಕವಾಗಿ ಸೃಷ್ಟಿಯಾಗುತ್ತವೆ. ವೃತ್ತಿ ರಂಗದ ನಟನಟಿಯರು ಯಾವುದೇ ಮಡಿವಂತಿಕೆ ಇಲ್ಲದೇ ಕಾಕಾ, ಅಣ್ಣಾ, ಮಾಮಾ ಅಂತ ಪ್ರೇಕ್ಷಕರೊಂದಿಗೆ ಸಂಬೋಧನೆಗೆ ತೊಡಗುವ ಸಂದರ್ಭೋಚಿತ ಸನ್ನಿವೇಶಗಳು ನಗೆಗಡಲ ಜಳಕ ಮಾಡಿಸುತ್ತವೆ. ಇನ್ನು ಕಲಾವಿದರಿಂದ ಸುಪರ್ ಹಿಟ್ ಡೈಲಾಗ್ ಕೇಳಿದೊಡನೆ, ಅಂತಹದ್ದೇ ಮನಮೆಚ್ಚುಗೆಯ ರಂಗಸಂಗೀತ ಕೇಳಿದಾಗ ಸಂತುಷ್ಟರಾದ ಪ್ರೇಕ್ಷಕರು ಸಿಳ್ಳು, ಚಪ್ಪಾಳೆಗಳ ಸುರಿಮಳೆಗೈಯ್ಯುತ್ತಾರೆ. ಅದು ಅಷ್ಟಕ್ಕೆ ತಮಣಿಯಾಗದೇ ಪ್ರೇಕ್ಷಕಾಂಗಣದ ಸಂತಸ ಸಂಭ್ರಮದ ಎಲ್ಲೆ ಮೀರಿ ಒನ್ಸ್ ಮೋರ್ ಎಂದು ಭಾವ ಪರವಶರಾಗಿ ಜೋರಾಗಿ ಕೂಗುತ್ತಾರೆ. ಅವರ ಮೆಚ್ಚುಗೆಯ ಕೂಗಿಗೆ ಗೌರವತೋರಿ ಮತ್ತದೇ ಹಾಡು, ಡೈಲಾಗ್ ಮರುಕಳಿಸುತ್ತವೆ. ಹೀಗೆ ಕಲಾವಿದರು ಮತ್ತು ಪ್ರೇಕ್ಷಕರ ನಡುವೆ ಅಪರೂಪದ ರಂಗಸಂಸ್ಕೃತಿಯೊಂದರ ಸಂಪ್ರೀತಿಯ ಸಂವಾದ, ಸಂವಹನವೇ ಏರ್ಪಡುತ್ತದೆ. ವರನಟ ಡಾ. ರಾಜಕುಮಾರ ಅವರು ವೃತ್ತಿರಂಗಭೂಮಿಯ ರಂಗಮೌಲ್ಯ ಮೆರೆದ ಪ್ರಾತಃಸ್ಮರಣೀಯರು. ಅಂತೆಯೇ ಅವರು ಪ್ರೇಕ್ಷಕ ಪ್ರಭುಗಳಿಗೆ ಅಭಿಮಾನಿ ದೇವರುಗಳೆಂತಲೇ ಕರೆದು ಗೌರವ ತೋರುತ್ತಿದ್ದರು. ಮಾಸ್ಟರ್ ಹಿರಣ್ಣಯ್ಯನವರು ಯಾವತ್ತೂ ಪ್ರೇಕ್ಷಕರನ್ನು ಅನ್ನದಾತರೆಂದೇ ಬಾಯ್ತುಂಬಾ ಅಂತಃಕರಣ ತುಂಬಿ ಪ್ರೀತ್ಯಾದರ ತೋರುತ್ತಿದ್ದರು. ಏಣಗಿ ಬಾಳಪ್ಪ ಹಾಗೂ ಇನ್ನು ಕೆಲವು ಕಂಪನಿಗಳಲ್ಲಿ ಪ್ರೇಕ್ಷಕರಿಗೆ ಶರಣು ಹೇಳುವ ಸನ್ನಿವೇಶಗಳು ರಂಗಪ್ರಯೋಗದಂತೆ ಮಹತ್ವದ ಸ್ಥಾನ ಗಳಿಸಿದ್ದವು. ಕ್ಯಾಂಪ್ ಮಾಡಿದ ಊರುಗಳಲ್ಲಿ ಆಯ್ದ ಪ್ರೇಕ್ಷಕರಿಗೆ ಗೌರವಪಾಸ್ ನೀಡಿ ನಾಟಕಕ್ಕೆ ಆಮಂತ್ರಿಸುವ ಪದ್ಧತಿಯೇ ಇತ್ತು. ವೃತ್ತಿ ರಂಗಭೂಮಿಯ ಆರಂಭದ ಅಂದಿನಿಂದ ಇಂದಿನವರೆಗೂ ಒಂದೂವರೆ ಶತಮಾನ ಕಳೆದರೂ ಪ್ರೇಕ್ಷಕ ಮಹಾಶಯರ ಮೇಲಿನ ಗೌರವ, ಪ್ರೀತಿ, ವಿಶ್ವಾಸ ದಿನೇ ದಿನೇ ಹೆಚ್ಚುತ್ತಲೇ ಬಂದಿದೆ. ಅದೊಂದು ಅಮೂಲ್ಯ ಪರಂಪರೆ ಮಾತ್ರವಾಗಿ ಬೆಳೆಯದೇ ರಂಗಸಂಸ್ಕೃತಿಯ ಅನನ್ಯತೆಯಾಗಿ ಬೆಳೆಯುತ್ತಲೇ ಮುನ್ನಡೆ ಸಾಧಿಸಿದೆ. ಇಂತಹ ಸಹೃದಯ ಪರಂಪರೆ ಆಧುನಿಕತೆಯ ಬೇರೊಂದು ರಂಗಪ್ರಕಾರಗಳಲ್ಲಿ ಹುಡುಕಿದರೂ ನಮಗೆ ಕಾಣಸಿಗುವುದಿಲ್ಲ. ಪ್ರಾರಂಭಿಸಲ್ಪಟ್ಟ ನಾಟಕ ಇನ್ನೊಂದು ಮಹತ್ವದ ಸನ್ನಿವೇಶದೊಂದಿಗೆ ಮಂಗಲ ಹಾಡುತ್ತದೆ. ಯಾವತ್ತೂ ನಮ್ಮನ್ನು ಪ್ರೋತ್ಸಾಹಿಸಿ ನಮಗೆ ಅನ್ನ ನೀಡುತ್ತಿರುವ ತಂದೆ ತಾಯಿ ಸ್ವರೂಪಿ ಅನ್ನದಾತ ಪ್ರೇಕ್ಷಕ ಮಹಾಪ್ರಭುಗಳ ಅಡಿದಾವರೆಗಳಿಗೆ ಪೊಡಮೊಟ್ಟು…. ಎಂಬ ಸವಿನಯ ಪ್ರಾರ್ಥನೆಯ ಮಾತುಗಳು ಲೆಕ್ಚರ್ ಸೀನ್ ಎಂಬ ನುಡಿಗಟ್ಟಿನೊಂದಿಗೆ ಇವತ್ತಿಗೂ ಎಲ್ಲಾ ನಾಟಕ ಕಂಪನಿಗಳು ಪ್ರೇಕ್ಷಕ ಪರಂಪರೆಗೆ ಗೌರವಿಸುವ ಪರಿಪಾಠಗಳನ್ನು ತಪ್ಪದೇ ಪರಿಪಾಲಿಸುತ್ತಾ ಬಂದಿವೆ. ಇದು ರಂಗಸಂಸ್ಕೃತಿಯ ಮಹೋನ್ನತ ಪ್ರೇಕ್ಷಕ ಪರಂಪರೆಗೆ ಸಲ್ಲುವ ಗೌರವ **************************

ಪ್ರೇಕ್ಷಕ ಪರಂಪರೆಯ ಅನ್ನದಾತರು Read Post »

ಕಾವ್ಯಯಾನ

ಕಾಪಿಟ್ಟು ಕಾಯುತ್ತಾಳೆ

ಕವಿತೆ ಕಾಪಿಟ್ಟು ಕಾಯುತ್ತಾಳೆ ಶ್ರೀವಲ್ಲಿ ಶೇಷಾದ್ರಿ ಋತು ಋತುವಿಗೊಂದೊಂದು ಹೊಸತುಹೆಚ್ಚುಗಾರಿಕೆಯ ಬಿಚ್ಚಿಡುತ್ತಾಳೆ,ಅಚ್ಚರಿ ಹುಟ್ಟಿಸಿಬೆಚ್ಚಿಸುವ ಈಹುಚ್ಚಿಪೆಚ್ಚಾಗಿಸುತ್ತಾಳೆ ಹುಚ್ಚುಗಳ ಹೆಚ್ಚಿಸಿಮನದಿಚ್ಚೆಗಳ ಅಚ್ಚು ಹಾಕಿಸಿಟ್ಟುರಚ್ಚೆ ಹಿಡಿದು ಅಚ್ಚು ಮೆಚ್ಚಾಗಿಕೊಚ್ಚಿ ಹೋಗದ ಹಾಗೆ ಬಚ್ಚಿಟ್ಟುಕಾಪಿಟ್ಟು ಕಾಯುತ್ತಾಳೆ ಬೆಚ್ಚಗೆ ಕಳಚಿಟ್ಟ ಪೊರೆ ಮತ್ತೆ ಹಸಿರು ಕೊನರಿಹಸಿ ಕರಗ ಮಣ ಭಾರ ಹೊತ್ತುಚೀರಿ ಹಾರಿ ಮೇಲೆರಗೊ ಹನಿಯರಭಸ ಭರಿಸಿ ಝಾಡಿಸಿ ತೂರಿಎಲ್ಲೆ ಇರದೆಡೆ ಹರಿದು ಬರಿಯರಾಡಿಯನ್ನಪ್ಪಿ ಒಪ್ಪಿ ಮುತ್ತಿಕ್ಕಿ ದಿನ ರಾತ್ರಿಯಾಟಕ್ಕೆ ಅದರಿ ಬೆದರಿಗರಿ ಕೆದರಿ ಮತ್ತೊಮ್ಮೆ ಹೂವಾಗುತ್ತಾಳೆ ಬಟ್ಟ ಬಯಲಿನಲಿ ದೃಷ್ಟಿ ತಾಗುವ ಹಾಗೆಪರಿಪರಿಯ ನಿಲುವಾಭರಣ ಪೇರಿಸಿಹೆಜ್ಜೆಗೊಂದು ಗೆಜ್ಜೆ ಎದೆ ಛಲ್ಲೆನ್ನಿಸಿಬೆಳಕು ಬೆಳದಿಂಗಳ ಕಲಕಿ ಕುಲುಕಿತಿಂಗಳ ತಿಳಿಗೊಳವ ಮುಳುಗಿ ತೇಲಿಸಿಅಳುವ ಕಡಲಿಗೆ ನಗೆ ದೋಣಿ ಹಾಯಿಸಿಏನೂ ಅರಿಯದೆ ಮಂಜು ಮುಸುಕಿನಲಿಎಲ್ಲೊ ದಿಟ್ಟೆ ನೆಟ್ಟು ನಿಲ್ಲುವ ಈ ಹುಚ್ಚಿ. *******************************

ಕಾಪಿಟ್ಟು ಕಾಯುತ್ತಾಳೆ Read Post »

ಇತರೆ

ಕೊಂಕಣಿ ಕವಿ ಪರಿಚಯ

ಕೊಂಕಣಿ ಕವಿ ಪರಿಚಯ ಜೊಸೆಫ್ ಸಿದ್ದಕಟ್ಟೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಗ್ರಾಮದ ಶ್ರೀ ಜೊಸೆಫ್ ಸಿದ್ದಕಟ್ಟೆಯವರು ಮಂಗಳೂರಿನ ಕಾರ್ಮೆಲ್ ಚರ್ಚಿನ ಫಾದರ್ ಆಗಿ ಸೇವೆ ಸಲ್ಲಿಸುತಿದ್ದಾರೆ. ಬಹಳ ಚಿಕ್ಕ ವಯಸ್ಸಿನಿಂದಲೇ ಬರವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡು, ಕೊಂಕಣಿಯ ಯುವ ಕವಿ ಜೊಸಿ ಸಿದ್ದಕಟ್ಟೆ ಎಂಬ ಕಾವ್ಯನಾಮದಿಂದ ಅತ್ಯಂತ ಪ್ರಭಾವಶಾಲಿಯಾಗಿ ಹೊರಹೊಮ್ಮಿದ್ದಾರೆ. ಕಿಟಾಳ್ ಪತ್ರಿಕೆಯ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ “ಕಿಟಾಳ್ ಯುವ ಪರಸ್ಕಾರ್” 2011 ರಲ್ಲಿ, ಇನ್ನೊಂದು ಪ್ರತಿಷ್ಠಿತ ಪ್ರಶಸ್ತಿಯಾದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ್, 2013 ರಲ್ಲಿ ಜೊಸಿ ಸಿದ್ದಕಟ್ಟೆಯವರಿಗೆ ಲಭಿಸಿದೆ. ಸಾಹಿತ್ಯ ರಚನೆಗಳು: “ಪಾವ್ಸಾದೋಣು” ಕವಿತಾ ಸಂಕಲನ (2008) “ಮೋರಾನ್ ಸಾಂಡ್ಲೆಲಿ ಪಾಕಾಂ” ಕವಿತಾ ಸಂಕಲನ (2011) “ಉಜ್ಯಾ ತುಜ಼ೆ ವೇಂಗೇಂತ್” ಕವಿತಾ ಸಂಕಲನ (2015) ಯೂಟರ್ನ್ ( ಅಂಕಣ ಬರಹಗಳ ಸಂಕಲನ) ಕಾಜುಲೊ ( ನ್ಯಾನೋ ಕತೆಗಳ ಸಂಕಲನ) ಕಲ್ವಾರಿರ್ ರಾಜಿ ಸಂಧಾನ. ಇವಿಷ್ಟೂ ಪುಸ್ತಕಗಳು ಪ್ರಕಟಗೊಂಡು ಓದುಗ ವಲಯದೊಳಗೆ ಪ್ರಸಿದ್ಧಿಯನ್ನು, ಅಪಾರ ಮನ್ನಣೆಯನ್ನು ಪಡೆದಿವೆ. ನಾಟಕ ರಚನೆ , ನಿರ್ದೇಶನಗಳಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಫಾ| ಜೊಸಿ ಸಿದ್ದಕಟ್ಟೆಯವರು ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ  ಕೈಯಾಡಿಸಿ ಪರಿಣಿತಿಯನ್ನು ಪಡೆದಿದ್ದಾರೆ. ಉದಾ: ಹೈಕು, ಗಝಲ್, ಇತ್ಯಾದಿ. ಜೊಸಿ ಸಿದ್ದಕಟ್ಟೆಯವರ ಎರಡು ಕವಿತೆಗಳು ನಿಮ್ಮ ಓದಿಗಾಗಿ: ಮೊರಾನ್ ಸಾಂಡ್ಲಲಿಂ ಪಾಕಾಂ – ಕುಮೆರಿಂತ್ ಮೊರಾನ್ ಸಾಂಡ್ಲಲಿಂ ಪಾಕಾಂ ಆರಾವ್ನ್ ಆರಾವ್ನ್ ಹಾಡ್ಲಿಂ ಥೊಡಿಂ ಧಾಕ್ಟಿಂ, ಕಾಂಯ್ ಥೊಡಿಂ ವ್ಹಡ್ಲಿಂ ಆನಿ ತಾಣಿಂಚ್ ಆಮ್ಚಿಂ ಮನಾಂ ಫೊಡ್ಲಿಂ ಬಬ್ಲಾನ್ ಏಕ್ ಪಾಕ್ ಚೊರುನ್ ವೆಲೆಂ ಮಿತ್ರಾಂಕ್ ದಾಕವ್ನ್ ಹರ್ಧೆಂ ಫುಲಂವ್ಕ್ ಬಯ್ಯಾನ್ ವಿಚಾರಿನಾಸ್ತಾಂ ಲಿಪಯ್ಲೆಂ ಏಕ್ ಬುಕಾಪಾನಾಂ ಇಡ್ಯಾಂತ್ ಪಿಲಾಂ ಕಾಡುಂಕ್ ದಾಟ್ಟುಕೀ ಏಕ್ ಜಾಯ್ ಆಸ್ಲೆಂ ಚಾಂಪ್ಯಾವನಾಂತ್ ಆಪೊವ್ನ್ ಗುಪ್ತಿಂ ‘ತಾಕಾ’ ದೀವುಂಕ್ ವರದಕ್ಕ ವಿಚಾರಿ ಮ್ಹಣ್ ಮಾಮ್ಮಿನ್ ದಿಲೆಂ ಕಿಸ್ಣಾಚ್ಯಾ ಮಾತ್ಯಾಕ್ ಖೊವಂವ್ಕ್ ಮಾಗೀರ್ ಉರಲ್ಲಿಂ ಮ್ಹಾಕಾ ಮೊಡ್ಕುರಿಂ ಆನಿ ರಡ್ಕುರಿಂ ಖಂಯ್ಚ್ಯಾ ಕರ್ಮಾಕ್? ಕೊಣೆಂ ಫಾರ್ಲಿಂ, ಕೊಣೆಂ ಲಿಪಯ್ಲಿಂ ತಾಚೆರ್ ಸೊಧ್ ಹಾಂವೆಂ ಚಲಯ್ಲೊ ‘ಹಾಂವೆಂ ಹಾಡಲ್ಲಿಂ ಪಾಕಾಂ ತುಮಿ ಕಶಿಂ ಚೊರ್ಲಿಂ?’ ಬಯ್ಯಾ ಹಾಸ್ಲೆಂ ‘ಹಾಡಲ್ಲಿಂ ವ್ಹಯ್, ಪುಣ್ ಮೊರಾನ್ ಸಾಂಡ್ಲಲಿಂ!’ ದೊಳ್ಯಾ ಖಾಂಚಿಂತ್ಲಿಂ ದುಕಾಂ ಪುಸುನ್ ಭಾಯ್ರ್ ಯೆತಾನಾ ಬೋಳ್ ರುಕಾರ್ ಭಿಜಲ್ಲೊ  ಕಾವ್ಳೊ ಆಂಗ್ ಪಾಪ್ಡುಂಕ್ ಲಾಗ್ಲೊ ಥೆಂಬೆ ಉಸಾಳ್ಳೆಚ್ ತೊ ಸುಶೆಗಾತ್ ಉಬ್ಲೊ -ಜೊ. ಸಿ. ಸಿದ್ದಕಟ್ಟೆ “ನವಿಲು ತೊರೆದ ಗರಿಗಳು” ಬಯಲಲ್ಲಿ ನವಿಲು ತೊರೆದ ಗರಿಗಳನ್ನು ಆರಿಸಿ ಆರಿಸಿ ತಂದಿದ್ದೆ. ಕೆಲವು ಚಿಕ್ಕವು, ಇನ್ನು ಕೆಲವು ದೊಡ್ಡವು, ಆಮೇಲೆ .. ಅವೇ ನಮ್ಮ ಮನಗಳನ್ನು ಒಡೆದವು. ಬಬ್ಲು ಒಂದು ಕದ್ದೊಯ್ದ ಅವನ ಗೆಳೆಯರಿಗೆ ತೋರಿಸಿ ಎದೆ ಉಬ್ಬಿಸಲು, ಅಕ್ಕ ಕೇಳದೆ ಎತ್ತಿಟ್ಟಳು ಪುಸ್ತಕದ ನಡುವೆ ಮುಚ್ಚಿಟ್ಟು ಮರಿ ಮಾಡಲು, ಅಣ್ಣನಿಗೂ ಒಂದು ಗರಿ ಬೇಕಿತ್ತು ಸಂಪಿಗೆ ವನದ ಮರೆಯಲ್ಲಿ “ಅವಳಿಗೆ” ಕೊಡಲು, ವರದಕ್ಕ ಕೇಳಿದರೆಂದು ಅಮ್ಮ ಕೊಟ್ಟಳು ಅವರ ಕೃಷ್ಣನ ತಲೆಗೆ ಸಿಕ್ಕಿಸಲು, ಇನ್ನು ನನಗೆ ಉಳಿದದ್ದು ಬರೀ ಹರಿದವು ಮತ್ತು ಮುರಿದವು …. ಯಾವ ಕರ್ಮಕ್ಕೆ?? ಯಾರ‍್ಯಾರೋ  ಮುಚ್ಚಿಟ್ಟರು, ಎತ್ತಿಟ್ಟರು, ಕದ್ದೊಯ್ದರು.. ಜೋರಾಗಿ ಗದರಿಸಿದೆ ಕೋಪ ತಡೆಯದೆ “ನಾನು ತಂದ ಗರಿಗಳವು.. ಹೇಗೆ ಕದ್ದಿರಿ ನೀವು?” ಅಕ್ಕ ನಗುತ್ತ… “ನೀನು ತಂದಿದ್ದು ಹೌದು.. ಆದರೂ… ನವಿಲು ತಾನೇ ತೊರೆದಿದ್ದು..?” ಕಣ್ಣಂಚಿನ ದುಃಖವನ್ನು ಒರೆಸಿ ಹೊರಗೆ ಬಂದಾಗ ಬೋಳು ಮರದಲ್ಲಿ ಕೂತ ಕಾಗೆಯೊಂದು ಪಟಪಟನೆ ರೆಕ್ಕೆ ಬಡಿಯುತ್ತ ಹನಿಗಳುದುರಿಸಿ ಹಾರಿಹೋಯಿತು…. ನಿರಾಳವಾಗಿ. —ಶೀಲಾ ಭಂಡಾರ್ಕರ್. ರಾಜಿನಾಮೊ ಪಿಕ್ಕಾಸ್ ಆನಿ ಖೊರೆಂ ನವ್ಯಾನ್ ಡ್ಯೂಟೆಕ್ ಹಾಜಿರ್ ಜಾಲಿಂ, ಫುಲಾ ತೊಟಾಂತ್. ಡ್ಯೂಟೆಕ್ ಲಾಗ್‍ಲ್ಲ್ಯಾ ಪಿಕ್ಕಾಸಾನ್ ಮೋವ್ ಆಸ್ಲೆಕಡೆ ಖೊಂಡುಂಕ್ ಸುರು ಕೆಲೆಂ ಖೊಂಡ್ಚ್ಯಾ ಹುಮೆದಿನ್ ಆಡ್ ಮೆಳ್‍ಲ್ಲೊ ಉದ್ಕಾ ಪೈಪ್‍ಯೀ ಉಕ್ಲುನ್ ಘಾಲೊ ದುಸ್ರೆದಿಸಾ ‘ಚತ್ರಾಯೆಸಂಗಿಂ’ ಪಿಕ್ಕಾಸಾಕ್ ಮುರೊ ಖೊಂಡುಂಕ್ ‘ಡ್ಯೂಟಿ’ ಘಾಲಿ, ಎಕೆಕ್ ಘಾಸಾಕೀ ದಾಂತಾಥಾವ್ನ್ ಕಿಟಾಳಾಂ ಉಸ್ಳೊನ್ ಹಿಂಸಾ ಜಾತಾಲಿ, ತಿತ್ಲ್ಯಾಕ್‍ಚ್ ಪಿಕ್ಕಾಸಾನ್ ‘ರಾಜಿನಾಮೊ’ ದಿಲೊ. ಪಿಕ್ಕಾಸಾನ್ ಖೊಂಡುನ್ ಗೆಲ್ಲೆಕಡೆ ಖೊರ್‍ಯಾಕ್ ಡ್ಯೂಟಿ ಲಾಗ್ಲಿ ಮಾತಿ ವೊಡ್ಚಿ, ಹದಾ ಕರ್‍ಚಿ ಮ್ಹೆಳೆಂ ಶೆಣ್ ವೊಡುನ್ ಘಾಲ್ಚೆಂ.. ತಿಕಾಯ್ ಹಿಂಸಾ ಜಾತಾಲಿ ತೆಂ ವಾತಾವರಣ್‍ಚ್ ನಾಕಾ ಆಸ್ಲೆಂ.. ತರೀ, ಆಪ್ಣಾಕುಶಿಕ್‍ಚ್ ಯೇವ್ನ್ ಪಡ್ಚ್ಯಾ ಮೆಳ್ಯಾಮದೆಂಯ್ ಖೊರೆಂ ರಾವ್ಲೆಂ, ‘ಗುಲೊಬಾಚ್ಯಾ ಪರ್ಮಳಾಕ್ ಲಾಲೆವ್ನ್’ ರಾಜಿನಾಮೆ ಹಾರೆ ಮತ್ತು ಗುದ್ದಲಿಗಳೆರಡೂ ಹೊಸದಾಗಿ ಡ್ಯೂಟಿಗೆ ಸೇರಿದವು ಹೂವಿನ ತೋಟದೊಳಗೆ. ಡ್ಯೂಟಿಯಲ್ಲಿ ತೊಡಗಿದ ಹಾರೆಯು ಮೆತ್ತಗಿರುವಲ್ಲಿ ಅಗೆಯಲು ಆರಂಭಿಸಿತು. ಅಗೆಯುವ ಹುಮ್ಮಸ್ಸಿನಲ್ಲಿ ಅಡ್ಡ ಬಂದ ನೀರಿನ ಪೈಪನ್ನೂ ಬಗೆದು ಹಾಕಿತು. ಮರುದಿನ ಮತ್ತೆ ಹಾರೆಗೆ ಎಚ್ಚರದಿಂದ ಕೆಲಸಮಾಡಲು ಎಚ್ಚರಿಸಿ ಕಲ್ಲಿರುವ ಕಡೆ ಅಗೆಯುವ ಡ್ಯೂಟಿ ಬಿತ್ತು. ಒಂದೊಂದು ತುತ್ತಿಗೊಂದೊಂದು ಕಿಡಿಗಳು ಹಲ್ಲಿನಿಂದ ಸಿಡಿಯುವಾಗ ಭಾರೀ ಹಿಂಸೆ ಅನಿಸಿತು. ಅಷ್ಟಕ್ಕೇ ಹಾರೆಯು ರಾಜಿನಾಮೆ ಕೊಟ್ಟಿತು. ಹಾರೆ ಅಗೆದು ಹೋಗಿದ್ದ ಕಡೆ ಈಗ ಗುದ್ದಲಿಯ ಡ್ಯೂಟಿ ಬಂತು. ಮಣ್ಣು ಅಗೆಯುವುದು ಹದಗೊಳಿಸುವುದು, ಸೆಗಣಿ ಹಾಕಿ ಮಟ್ಟ ಮಾಡುವುದು. ಅದಕ್ಕೂ ಹಿಂಸೆಯೇ ಇದು. ಈ ವಾತಾವರಣವೇ ಬೇಡ ಅನಿಸುತಿತ್ತು. ಆದರೂ.. ತನ್ನ ಬುಡಕ್ಕೆ ಬಂದು ಅಂಟುವ ಗಲೀಜಿನ ನಡುವೆಯೂ ಗುದ್ದಲಿ ಅಲ್ಲಿಯೇ ನಿಂತಿತ್ತು.. “ಗುಲಾಬಿಯ ಪರಿಮಳದ ಹಂಬಲದಿಂದ” ಕನ್ನಡಕ್ಕೆ: ಶೀಲಾ ಭಂಡಾರ್ಕರ್. ——————————————————— ಫೋಟೊ ಆಲ್ಬಂ ***************************************************************** ಚಿತ್ರ-ಬರಹ ಶೀಲಾ ಭಂಡಾರ್ಕರ್

ಕೊಂಕಣಿ ಕವಿ ಪರಿಚಯ Read Post »

ಕಾವ್ಯಯಾನ

ರುಬಾಯಿಗಳು

ರುಬಾಯಿಗಳು ಪ.ನಾ.ಹಳ್ಳಿ.ಹರೀಶ್ ಕುಮಾರ್ ೧. ಮಂಕುತಿಮ್ಮನಾಗು ಕೂಡಿಡುವುದು ಬಿಡು ಜಿಪುಣನೆಂಬ ಹೆಸರು ತಪ್ಪೀತು.ಓದಿ ಜ್ಞಾನಿಯಾಗು, ಅಜ್ಞಾನಿಯೆಂಬ ಹಣೆಪಟ್ಟಿ ತಪ್ಪೀತು.ಎಲ್ಲರೊಡನೆ ಒಂದಾಗಿ ಡಿವಿಜಿಯ ಮಂಕುತಿಮ್ಮನಾಗು,ರೌರವ ನರಕ ಲೋಕದ ದರ್ಶನವಾದರೂ ತಪ್ಪೀತು. ೨.ಕರ್ಮ ಹುಲಿಯ ಹೊಟ್ಟೆಯೊಳಗುಟ್ಟಿ ಹುಲಿಯಾದೆವುಹಸುವಿನೊಟ್ಟೆಯೊಳಗುಟ್ಟಿ ಹಸುವಾದೆವುಮನುಷ್ಯನ ಹೊಟ್ಟೆಯೊಳಗುಟ್ಟಿದಾ ಕರ್ಮಕ್ಕೆ,ಹಿಂದೂ ಕ್ರೈಸ್ತ ಜೈನ ಮುಸಲ್ಮಾನರೆಂದಾದೆವು **************************

ರುಬಾಯಿಗಳು Read Post »

ಕಾವ್ಯಯಾನ

ಕೆಂಡದ ಕೋಡಿ

ಕೆಂಡದ ಕೋಡಿ ವಿಶಾಲಾ ಆರಾಧ್ಯ ಬೆಳದಿಂಗಳಿನ ರಂಗೋಲಿಯಲೂಚಿತ್ತದಲಿ ನೆತ್ತರಿನ ಚಿತ್ರಗಳು ಮೂಡಿಕತ್ತಲ ಗರ್ಭಕ್ಕಿಳಿದು ಬಸಿರಾಗುತ್ತವೆಸೂಜಿಯ ಮೊನೆಯಲ್ಲಿ ಹುಟ್ಟಿದಮತ್ಸರದ ಕನಸುಗಳುದ್ವೇಷದ ಕೋರೆಹಲ್ಲಿನೊಡನೆಕತ್ತಿಯ ಝಳಪಿನ ತಾಳದಲಿನರ್ತಿಸಲು ಹವಣಿಸುತ್ತವೆ!! ಪಕ್ಷಗಳ ದಾಟಿ ಮಾಸದಮಾಸಗಳಲಿ ಇಣುಕಿ ಕಣ್ಣಲ್ಲೇಕೆಂಡದ ಕೊಂಡ ನಿಗಿನಿಗಿಸಿಮಿನುಗಿ ಮನದ ರಸವನುಕೊತಕೊತನೆ ಕುದಿಸಿ ನಾನುನೀನಿನಮೇಲು ಕೀಳಿನ ಧರ್ಮಾಧರ್ಮದತುಪ್ಪವ ಸುರಿಸಿ ಅಗ್ನಿಗೊಂಡವಮತ್ತೆ ಬಾನ ಕೊನೆವರೆಗೂ ಉರಿಸಿಧಗಧಗಿಸುವ ಹುಚ್ಚು ಕೋಡಿಹರಿಯುತ್ತದೆ!! ಏರಿಯ ದಾಟಿದ ಮತ್ಸರದ ಝರಿಕೊರಳ ಸೀಳೆ ಕಿರುದನಿಗೂಎಡೆಗೊಡದೆ ನೆತ್ತರು ಹರಿದಾಡುತ್ತದೆಆ ನೆತ್ತರಲೇ ಕಾರ್ಕೋಟ ಬೀಜಗಳುಮೊಳಕೆಯೊಡೆಯುತ್ತವೆ ಮತ್ತೆ ಮತ್ತೆ

ಕೆಂಡದ ಕೋಡಿ Read Post »

You cannot copy content of this page

Scroll to Top