ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಗಜಲ್

ಸಿದ್ಧರಾಮ ಕೂಡ್ಲಿಗಿ

Castle windows. Corvin's Castle windows after restoration royalty free stock photo

ಮನದ ದುಗುಡ ಕಳೆಯಲಿಕ್ಕೆ ಇರುವುದೊಂದು ಕಿಟಕಿ

ಜಗದ ತಮವ ತೊಡೆಯಲಿಕ್ಕೆ ಇರುವುದೊಂದು ಕಿಟಕಿ

–

ಅರಿವ ಕುಡಿದು ಎದೆಯ ತೆರೆದು ಮೂಡಿತೊಂದು ಕನಸು

ಬಯಲ ಹಕ್ಕಿ ಮೇಲೆ ಹಾರಲಿಕ್ಕೆ ಇರುವುದೊಂದು ಕಿಟಕಿ

–

ಏನೊಂದೂ ಇರದ ತಾಣದಿಂದ ತೇಲಿ ಬಂತೊಂದು ರಾಗ

ರಾಗದೊಳಗೆ ರಾಗ ಮೂಡಲಿಕ್ಕೆ ಇರುವುದೊಂದು ಕಿಟಕಿ

–

ಸೂರ್ಯ ಚಂದ್ರ ತಾರೆ ಧೂಮಕೇತು ಮತ್ತದೇ ಕಾಲಚಕ್ರ

ಜೀವಸೆಲೆಯ ಸುರುಳಿ ಮೂಡಲಿಕ್ಕೆ ಇರುವುದೊಂದು ಕಿಟಕಿ

–

ನೊಂದು ಬೆಂದು ದಹಿಸಿಕೊಂಡು ಅರಳಿತೊಂದು ಹೂವು

ನೆಲದ ಒಡಲ ಹಾಡು ಕೇಳಲಿಕ್ಕೆ ಇರುವುದೊಂದು ಕಿಟಕಿ

**************************************************

About The Author

Leave a Reply

You cannot copy content of this page

Scroll to Top