ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ವೀರಅಮರಸುತೆ

Art Prints Martin His Kindness Buy Paintings Innu Art Gallery

ಮನದೊಳಗಿನ ಕಿಚ್ಚಿನಿಂದ ದೀಪ ಹೊತ್ತಿಸಬೇಡ ಗೆಳೆಯ
ನಿರ್ಮಲ ಜ್ಯೋತಿ ಬೆಳಗಿಸು ಅಶಾಂತಿಯ ಕದವ ತಟ್ಟಬೇಡ ಗೆಳೆಯ

ಇನ್ನೆಷ್ಟು ದಿನ ಹಗೆಯ ಸಾಧಿಸುವೆ ಹೊಗೆಯ ಹೊತ್ತಿಸುವೆ
ಶರಣಾಗು ಸ್ನೇಹಕೆ ‌ಕರಿನೆರಳ ಗತವನು ಮರುಕಳಿಸಬೇಡ ಗೆಳೆಯ

ಇರುವ ಸೇತುವೆಯ ಬೀಳಿಸುವೆ ಮನಸ್ಸು ದೂರ ಮಾಡುವೆ ಏಕೆ
ಬಂಧ ಬೆಸೆಯುವ ನಾವು ಅಡ್ಡಗೋಡೆ ಕಟ್ಟಬೇಡ ಗೆಳೆಯ

ತೋರಿಕೆಗೆ ಹಣತೆ ಎಣ್ಣೆಯಾಗೋಣ ಎಂಬ ಜಂಭವೇಕೆ
ಶಮಭಾವಬತ್ತಿಯಾಗಿ ಬೆಳಕ ಬೆಳಗುವ ಬಿರುಗಾಳಿ ಬೀಸಬೇಡ ಗೆಳೆಯ

ಸಕಲರ ಬಾಳಿಗೆ ಭಾಗ್ಯಜ್ಯೋತಿಯಾಗುವ ಬಯಕೆ ಎನಗೆ ಸಾಕಿ
ನಂದಾದೀಪಕೆ ತೈಲವಾಗುವ ಪ್ರೀತಿ ಪ್ರಣತಿಯ ಒಡೆದು ಹಾಕಬೇಡ ಗೆಳೆಯ

************************************************************************

About The Author

Leave a Reply

You cannot copy content of this page

Scroll to Top