ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅನಾಮಿಕಾ

ಕವಿತೆ ಅನಾಮಿಕಾ ಮೋಹನ್ ಗೌಡ ಹೆಗ್ರೆ.‌ ಅವಳು ಮಲಗಿದ್ದಾಳೆಕಣ್ಣಿನಲ್ಲಿ ಕನಸಿನ ಹಸಿವ ತುಂಬಿಒಡಲಿನಲಿ ಮತ್ಯಾವುದೋ ಹಸಿವ ನುಂಗಿಅವಳ ದೇಹದೊಡನೆ ದುಡ್ಡು ಮಾತಾಡುವುದ ಕೇಳಿ… ಒಂದಾನೊಂದು ದಿನದಲ್ಲಿಅವಳು ಮಲಗಿರುವಾಗತೊಟ್ಟಿಲ ತೂಗಿದ ಕೈಗಳುಮಲಗಿದ ಮುದ್ದು ಮುಖಕ್ಕೆಮುತ್ತಿನ ಮಳೆಗೆರೆದ ಮನಸುಗಳುಹೊಸ ಬಟ್ಟೆಯ ಉಡಿಸಿ ಆನಂದಿಸಿದ ಕಣ್ಗಳುಅವಳಿಗೆ ನೆನಪಾಗುತಲೇ ಇಲ್ಲ… ವಿದ್ಯೆ ಬುದ್ದಿಗಳನ್ನು ಕಲ್ಲು ಕಟ್ಟಿ ಮುಳುಗಿಸಿದ್ದಾಳೆಕೆಲವೊಮ್ಮೆ ಇವಳೂ ಏಳದ ಹಾಗೇಮನಸು ಬಯಸದ ಶೃಂಗಾರಕೆ ನಿತ್ಯ ಅಣಿಯಾಗುತಾಳೆಎಲ್ಲೂ ಬೆವರದವರು ಇವಳಲ್ಲಿ ಬಂದು ಬೆವರುವಷ್ಟೂ ಕ್ರೂರತನವಸಹಿಸಿಕೊಂಡು ಅದೊಂದು ವೃತ್ತಿಯೇ ಎನಿಸುವಷ್ಟುಬಲಿತ ಮಾಂಸ ಖಂಡಗಳೇಉಬ್ಬು ತಗ್ಗುಗಳೇ ಅವಳ ಪದೋನ್ನತಿಸ್ವಯಂ ನಿವೃತ್ತಿ ಪಡೆದರೂಉಳಿತಾಯವಾಗಲಿ, ಪಿಂಚಣಿಯಾಗಲಿ ಅವಳ ಪಾಲಿಗಿಲ್ಲ…. ಅನುಕಂಪ, ಬಂಡಾಯ, ಭದ್ರತೆಎಲ್ಲವನ್ನೂ ಮರೆತಿದ್ದಾಳೆ ಅವಳುತನ್ನ ಮೈಯ ಒತ್ತೆಯಿಟ್ಟು ಎಷ್ಟೋ ಅತ್ಯಾಚಾರಗಳ ತಪ್ಪಿಸಿದಾಕೆಸಮಾಜದ ಯಾವುದೋ ಸರಪಳಿಯಅನ್ವರ್ಥಕ ದೇವತೆಯೇ ಅವಳುಗೊತ್ತಿಲ್ಲ ನನಗೆ ಇಂದಿಗೂ ಅವಳ ಹೆಸರೇನೆಂದು….. **************************************

ಅನಾಮಿಕಾ Read Post »

ಇತರೆ, ಪ್ರಬಂಧ

ಪಾರಿಜಾತ ಗಿಡ

ಲಲಿತ ಪ್ರಬಂಧ ಪಾರಿಜಾತ ಗಿಡ ವಿದ್ಯಾ ಶ್ರೀ ಎಸ್ ಅಡೂರ್. ಪಾರಿಜಾತ ಹೂವಿನ ಮರ ಎಂದರೆ ಚಿಕ್ಕಂದಿನಿಂದಲೂ ನನಗೆ ಅದೆಂತದೋ  ಒಂದು  ರೀತಿಯ ಪ್ರೀತಿ.ಅದೊಂದು ದೇವಲೋಕದ ಸುವಸ್ತು, ಕೃಷ್ಣ ತನ್ನ ಮಡದಿ ಸತ್ಯಭಾಮೆಗಾಗಿ ತಂದ ಹೂವು ಎಂದೆಲ್ಲ  ಅರ್ದಂಬರ್ದ ಕಥೆಗಳು ಕಲಸುಮೇಲೋಗರ ವಾಗಿ ಒಂದು ಅಲೌಕಿಕ ಆಕರ್ಷಣೆ ಯಾಗಿ ಬೆಳೆದಿದೆ.             ಕೆಲವು ವರ್ಷಗಳ ಹಿಂದೆ ಎಲ್ಲೋ ನೆಂಟರ ಮನೆಗೆ ಹೋಗಿದ್ದಾಗ ಒಂದು ಗೆಲ್ಲು ಕೇಳಿ ತಂದು ಮನೆಯ ಹಿತ್ತಿಲಲ್ಲಿ ನೆಟ್ಟಿದ್ದೆ. ಕಾಲಮಾನ ಕ್ಕೆ ಅನುಗುಣವಾಗಿ ಅದು ಮಣ್ಣಿನೊಳಗೆ ಬೇರಿಳಿಸಿ, ಚಿಗುರಿ,ನಿಧಾನವಾಗಿ ತನ್ನ ಪಾಡಿಗೆ ಬೆಳೆದು, ಈಗ ಅಗಾಧವಾಗಿ ಹಬ್ಬಿ ನಿಂತಿದೆ. ಸಂಜೆಯಾದರೆ ಸಾಕು ಮೈಯೆಲ್ಲ ಮುತ್ತು ಸುರಿದಂತೆ ಮೊಗ್ಗು ತುಂಬಿಕೊಂಡು ಗಾಳಿಗೆ ತೊಯ್ದಾಡುತ್ತದೆ. ಮುಸ್ಸಂಜೆಯ ವೇಳೆಯಲ್ಲಿ ಮೈಮೇಲೆ ಬೆಣ್ಣೆ ಚೆಲ್ಲಿದಂತೆ, ಮಂಜು ಮುಸುಕಿದಂತೆ, ಹೂವುಗಳೆಲ್ಲಾ ಅರಳಿ ಹೊಳೆಯತೊಡಗುತ್ತವೆ. ಹುಣ್ಣಿಮೆಯ ಮತ್ತು ಅದರ ಆಚೆ ಈಚೆ ಗಿನ ರಾತ್ರಿ ಗಳಲ್ಲಿ ದೇವಲೋಕವೇ ಭೂಮಿಗಿಳಿದಂತೆ ತನ್ನ ಮಂದ ಘಮ ದೊಂದಿಗೆ ಮನಕ್ಕೆ ಮುದ ನೀಡುತ್ತದೆ.             ಹಿಂದೆಲ್ಲ ಮನೆಯ ಹಿತ್ತಿಲಲ್ಲಿ ಇದ್ದ ಈ ಮರ ಈಗ ಕೆಲ ವರ್ಷಗಳ ಹಿಂದೆ ಹಳೆ ಮನೆ ಕೆಡವಿ ಹೊಸ ಮಾಳಿಗೆ ಮನೆ ಕಟ್ಟಿ, ಮಾಳಿಗೆ ಮೇಲೆ ನನಗೊಂದು ರೂಮು ಅಂತ ಮಾಡಿ, ಅದಕ್ಕೊಂದು ಬಾಲ್ಕನಿ ಅಂತ ಮಾಡಿ ಕೊಂಡು,ಸಂಜೆಯ ವೇಳೆಗೆ ಅಲ್ಲಿ ಒಂದು ಕುರ್ಚಿ ಹಾಕಿ ಕೂತರೆ, ಎಲ!ಕೈಗೆಟುಕುವ ದೂರ ದಲ್ಲಿ “ಪಾರಿಜಾತ ಹೂವಿನ ಮರ “.ಆನಂತರದ  ದಿನಗಳಲ್ಲಿ ಅದೆಷ್ಟು ಸಂಜೆ ನಾನು ಅದರ ಸೌಂದರ್ಯ, ಘಮ ಸವಿದಿಲ್ಲ??.ನನ್ನ ರೂಮಿನ ಕಿಟಕಿ ತೆರೆದರೆ ನೇರ ನನ್ನ ಮಂಚಕ್ಕೇ ಕಾಣುವ ಮರ, ಅದೆಷ್ಟು ದಿನ ತನ್ನ ಘಮದಿಂದಲೇ ನನ್ನನ್ನು ಲಾಲಿ ಹಾಡಿ ಮಲಗಿಸಿಲ್ಲ??ನನ್ನ ಅದೆಷ್ಟು ಒಂಟಿ ಸಂಜೆಗಳನ್ನು ನಾನು ಅದರ ಜೊತೆಗೆ ಕಳೆದಿಲ್ಲ??ಲೆಕ್ಕ…….ನನಗೂ ಇಲ್ಲ……ಅದಕ್ಕೂ ಇಲ್ಲ..        ಬೆಳಗಾದರೆ ಸಾಕು, ಸಣ್ಣ ಸಣ್ಣ ಹಕ್ಕಿ ಗಳು  ಅದೇನೋ ದೊಡ್ಡ ಆಲದಮರ ವೇನೋ ಎಂಬಂತೆ, ನನ್ನ ಪಾರಿಜಾತ ಗಿಡದ ಕೊಂಬೆಯಿಂದ ಕೊಂಬೆಗೆ ಹಾರುತ್ತ,ಜಿಗಿಯುತ್ತ ಸಂಭ್ರಮ ಪಡುವಾಗ ಬೆಳ್ಳನೆಯ ಪಾರಿಜಾತ ಹೂವುಗಳು ಹಿಮದ ಮಳೆಯಂತೆ ನೆಲಕ್ಕೆ ಉದುರುವುದ ನೋಡುವುದೇ ಒಂದು ಸೊಬಗು. ನನ್ನ ಬೆಳಿಗಿನ ಅವಶ್ಯ ಕೆಲಸ ಗಳನ್ನು ಪೂರೈಸಿ,ದೇವರ ಪೂಜೆಗೆ ಹೂವು ಕೊಯ್ಯಲು ಹೊರಟು, ಪಾರಿಜಾತ ಮರದ ಅಡಿಗೆ ಬಂದರೆ, ಬೆಳ್ಳನೆಯ ಹೂವಿನ ಹಾಸು ನೆಲದ ತುಂಬೆಲ್ಲಾ…….ಆ ಸುಂದರ ನೋಟ,..ಘಮ..ಮನಸಿಗೆ ನೀಡುವ ಖುಷಿ ಕೋಟಿಕೊಟ್ಟರೂ ಸಿಗದು.                 ಇತ್ತೀಚೆಗೆ ನನ್ನ ಯಜಮಾನರಿಗೆ  ಅಂಗಳ ದೊಡ್ಡದು ಮಾಡುವ ಮನಸ್ಸಾಗಿ, ಮನೆಯ ಸುತ್ತಲ ಗಿಡ ಗಳನ್ನೆಲ್ಲಾ ತೆಗೆಯಬೇಕು ಎಂದುಬಿಟ್ಟರು. ಅವರು ಹೇಳುವಂತೆ ಅದನ್ನು ಕಡಿದು, ಗೆಲ್ಲು ಬೇರೆ ಕಡೆ ಊರಿದರೆ ಇನ್ನೊಂದು ಗಿಡ ತಯಾರಾಗುತ್ತದೆ. ವಿಷಯವೇನೋ ಸರಿ. ಆದರೆ ನಾನು ಹಾಗೆ ಭಾವಿಸಲು ಹೇಗೆ ಸಾಧ್ಯ?? … ಅದರ ಸಾನ್ನಿಧ್ಯ ಕ್ಕೆ ನಾನು ಹೇಗೆ ಚಡಪಡಿಸುತ್ತೇನೋ.ಹಾಗೆಯೇ..ಅದೂ ನನ್ನ ಇರುವಿಕೆಯನ್ನು ಬಯಸುತ್ತದೆ…ಎಂದು ನನಗೆ ಗೊತ್ತಿದ್ದಮೇಲೆ….               ಬದಲಾಗುವ ಜಗತ್ತು, ಕಾಲಮಾನ, ಮನುಷ್ಯನ ನಡುವೆ, ಉದ್ದುದ್ದ…ಅಗಲಗಲ…..ಬೆಳೆದು, ಬಂದು ನನ್ನ ಬಾಲ್ಕನಿ ಬಳಿ ಇಣುಕಲು ಕಲಿತ ಒಂದು ಯಃಕಶ್ಚಿತ್ ‘ಪಾರಿಜಾತ ಗಿಡ ‘ ,ಆಚೆ ಈಚೆ ಹೋಗಲು ಯಾಕೆ ಕಲಿತಿಲ್ಲ!!? ಕಲಿತಿದ್ದರೆ ಸ್ವಲ್ಪ ಬದಿಗೆ ಕರೆದು ಕೂರಿಸಬಹುದಿತ್ತಲ್ಲ, ಎಂದು ಅನಿಸುತ್ತದೆ ನನಗೆ. ಮತ್ತೆ ಅನಿಸುತ್ತದೆ….ಅದರ ಪುಣ್ಯ, ಅದು ಇನ್ನೂ ಪಾರಿಜಾತ ಗಿಡ ವಾಗಿಯೇ ಉಳಿದಿದೆ. ಮನುಷ್ಯನಂತೆ ಬುಧ್ಧಿ ಬೆಳೆದು ಅಸಂಬದ್ಧ ಗಳಲ್ಲಿ ಸಿಕ್ಕಿಹಾಕಿಕೊಂಡಿಲ್ಲ. ಉಳಿದರೂ ಪಾರಿಜಾತ ಗಿಡ ವಾಗಿ ಯೇ…ಅಳಿದರೂ ಪಾರಿಜಾತ ಗಿಡ ವಾಗಿ ಯೇ…             ಮನುಷ್ಯನ ಜೀವನ ತೀರ ವ್ಯಾವಹಾರಿಕ ವಾಗಿ ಉಳಿದಿರುವ, ದಿನಕ್ಕೊಂದು ಐವತ್ತು ಮುಖವಾಡಗಳನ್ನು ಹಾಕಿ ಅಸಲಿಯತ್ತು ಮರೆಮಾಡುವ, ನೈಜತೆಗೆ ಬೆಲೆಯೇ ಇಲ್ಲದ ಇಂದಿನ ಕಾಲಮಾನ ದಲ್ಲಿ “ಪಾರಿಜಾತ ಗಿಡ ,ಪಾರಿಜಾತ ಗಿಡ ವಾಗಿ ಯೇ ಉಳಿದದ್ದು ಅದರ ತಪ್ಪೇ??”ಎಂದು ಯೋಚಿಸತೊಡಗಿದೆ…. ************************************

ಪಾರಿಜಾತ ಗಿಡ Read Post »

ಕಾವ್ಯಯಾನ

ನಿನಗಿಂತ ದೊಡ್ಡವರು…..

ಕವಿತೆ ನಿನಗಿಂತ ದೊಡ್ಡವರು….. ಯಮುನಾ.ಕಂಬಾರ ತುಟಿ ಬಿಚ್ಚದೇ ಬಾಯ್ಮುಚ್ಚಿಕೊಂಡುತೆಪ್ಪಗೆ ಮೌನದಲಿ,ಒಮ್ಮೆ ದುಃಖ ಒಮ್ಮೆ ಸುಖ ಅಟ್ಟಿಸಿಕೊಂಡುಕಾಲ ಹಾಕುವ ಕಾರಣಿಕಳೇ….!!. ಕ್ರೌರ್ಯ , ಕೋಪ ತಾಪಗಳಗರ್ಭದಲ್ಲಿ ಅಡಗಿ ಕುದಿಗೊಂಡರೂಮತ್ತೆ ಮತ್ತೆ ಅದೇ ಮೌನಅದೇ ಶಾಂತಿ ,ಅದೇ ಆ ಸುರಿಯುವ ಕಾಂತಿ !! ನಿನ್ನ ಸಹನೆಗೆ ತಾಳ್ಮೆಗೆಇಲ್ಲ – ಸಾಟಿಇತಿಹಾಸದ ಕತ್ತಲಲ್ಲಿ – ಕರಗಿವೆಸಾವಿರ ಸಾವಿರ ಮರೆಯದ ಮಾಣಿಕ್ಯದ ದೀಪ್ತಿ !! ಆಗಲೂ ಈಗಲೂ ಧುಮ್ಮಿಕ್ಕಿ ಪುಟಿಯುತಿವೆ – ಸಾಯದ ಅಮರ ಅಕ್ಷರಗಳು:” ದುರಾಸೆ ದುಃಖಕ್ಕೆ ಮೂಲಅಹಿಂಸೆ ಬದುಕಿನಸೂತ್ರಕಾಯಕವೇ ಕೈಲಾಸ “. !! ನಿನ್ನ ಕಣ ಕಣದ ಕಣ್ಣಲ್ಲೂಮಿಂಚುವ ದೀಪ್ತಿಗೆನನ್ನ ಮೈ ಮನ ಶರಣಾದ ಹೊತ್ತುಸವಿಯುತ್ತಿರುವೆ – ನಿನ್ನೆದೆಯ ಸಿರಿಯಲಿಒಂದಾಗಿ ಒಂದಾಗಿ – ಹಗಲು ರಾತ್ರಿಗಳ ಮರೆತು !! ನಿನ್ನ ವಿನಹ ಗತಿ ಇಲ್ಲಹೆತ್ತ ಒಡಲುಹೊತ್ತ ಉದರ – ಒಂದೇ ಒಂದೇನಿನಗಿಂತ ದೊಡ್ಡವರು – ಇಲ್ಲ ಇಲ್ಲ ಇಲ್ಲ…!! ******************************

ನಿನಗಿಂತ ದೊಡ್ಡವರು….. Read Post »

ಇತರೆ

ಜಿ. ಪಿ. ರಾಜರತ್ನಂ ಜನ್ಮದಿನ

ಇಂದು ಕನ್ನಡದ ಧೀಮಂತ ಸಾಹಿತಿ ಪ್ರೊ.ಜಿ.ಪಿ.ರಾಜರತ್ನಂ ಅವರು ಜನಿಸಿದ ದಿನ ಬಾಲ್ಯ ‘ಜಿ. ಪಿ. ರಾಜರತ್ನಂ'(೧೯೦೪-೧೯೭೯) ರವರು ಮೂಲತಃ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಇವರ ಪೂರ್ವಜರು ತಮಿಳುನಾಡಿನ “ನಾಗಪಟ್ಟಣ”ಕ್ಕೆ ಸೇರಿದ ತಿರುಕ್ಕಣ್ಣಾಪುರ ಎಂಬ ಅಗ್ರಹಾರದಿಂದ ೧೯೦೬ ರಲ್ಲಿ ಮೈಸೂರಿಗೆ ಬಂದರು. ಹೆಸರಾಂತ ಗುಂಡ್ಲು ಪಂಡಿತ ವಂಶ ದಲ್ಲಿ ಡಿಸೆಂಬರ್ ೦೫, ೧೯೦೪ರಂದು ರಾಮನಗರದಲ್ಲಿ ಜನಿಸಿದರು. ಮೊದಲಿಗೆ ಇವರ ಹೆಸರು ಜಿ.ಪಿ.ರಾಜಯ್ಯಂಗಾರ್ ಎಂದಿತ್ತು. ಇವರು ಲೋಯರ್ ಸೆಕೆಂಡರಿ ಓದುತ್ತಿದ್ದಾಗ ಚೇಷ್ಟೆಗಾಗಿ ಶಾಲೆಯ ಗುಮಾಸ್ತರನ್ನು ಪುಸಲಾಯಿಸಿ ತಮ್ಮ ಹೆಸರನ್ನು ಜಿ.ಪಿ.ರಾಜರತ್ನಂ ಎಂದು ತಿದ್ದಿಕೊಂಡಿದ್ದರು. ತಂದೆ ಆ ಭಾಗದಲ್ಲಿ ಉತ್ತಮ ಶಿಕ್ಷಕರೆಂದು ಹೆಸರು ಮಾಡಿದ್ದ ಜಿ.ಪಿ.ಗೋಪಾಲಕೃಷ್ಣ ಅಯ್ಯಂಗಾರ್. ತಾಯಿಯ ಪ್ರೀತಿ ಇಲ್ಲದೆ ಬೆಳೆದ ರಾಜರತ್ನಂಗೆ, ತಂದೆಯೇ ಎಲ್ಲವೂ ಆಗಿದ್ದರು. ಅಜ್ಜಿಯ ಅಕ್ಕರೆಯಲ್ಲೂ ರಾಜರತ್ನಂ ಬೆಳೆದರು. ತಂದೆ ಬಡ ಮೇಸ್ಟ್ರು. ಸ್ವಾತಂತ್ರ್ಯ ಪೂರ್ವದಲ್ಲೇ (೧೯೩೧ರಲ್ಲಿ) ರಾಜರತ್ನಂ ಎಂ.ಎ (ಕನ್ನಡ)ದಲ್ಲಿ ಮುಗಿಸಿ, ಶಿಶು ವಿಹಾರ ಹಾಗೂ ತಂದೆಯ ಶಾಲೆಯಲ್ಲಿ ಆರಂಭಿಕ ಮೇಸ್ಟ್ರು ಆದರು. ಇದರ ಅನುಭವದ ಫಲವೇ ಮಕ್ಕಳ ಕುರಿತು ಬರೆದ `ತುತ್ತೂರಿ’ ಶಿಶುಗೀತೆ ಸಂಕಲನ ‘. ಕ್ರಮೇಣ ಆ ಕೆಲಸ ತೃಪ್ತವಾಗದೆ ಹೈದರಾಬಾದಿಗೂ ಕೆಲಸ ಹುಡುಕಿ ಹೋಗಿದ್ದುಂಟು. ಅಲ್ಲಿಂದ ನಿರಾಶರಾಗಿ ಬೆಂಗಳೂರಿಗೆ ಬಂದು ಜನಗಣತಿ ಕಛೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರು ರಾಜರತ್ನಂರವರಿಗೆ ‘ಸಾಹಿತ್ಯ ಸೇವೆ’ ಮುಂದುವರೆಸಲು ಉಪದೇಶಿಸಿದರು. ಅದರ ಫಲವೇ ಮುಂದೆ ‘ರಾಜರತ್ನಂ’ ಅವರಿಂದ ‘ಉತ್ತಮ ಸಾಹಿತ್ಯ ನಿರ್ಮಾಣ’ಕ್ಕೆ ದಾರಿಯಾಯಿತು. ಬೌದ್ಧ ಸಾಹಿತ್ಯ ಇಂಥ ಉಪಯುಕ್ತ ಸಾಹಿತ್ಯದಲ್ಲೊಂದು ‘ಮಿಂಚು’. ಮಡದಿಯ ಸಾವಿನಿಂದ ಧೃತಿಗೆಟ್ಟರು ರಾಜರತ್ನಂ ಅವರಿಗೆ ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವುಂಟಾಯಿತು. ಪತ್ನಿ ಲಲಿತಮ್ಮ ಕಾಯಿಲೆ ಬಿದ್ದವರು ಹುಷಾರಾಗಲೇ ಇಲ್ಲ, ವಿಧಿವಶರಾದರು. ಅವರ ನೆನಪು ಹಸಿರಾಗಿದ್ದಾಗಲೇ ಸೀತಮ್ಮ ಅವರ ‘ಬಾಳನಂದಾದೀಪ’ವಾಗಿ ಬಂದರು. ಬದುಕು ಸ್ಥಿರವಾಯಿತು. ಕಷ್ಟ ಕಾರ್ಪಣ್ಯಗಳ ನಡುವೆ ೧೯೩೮ರಲ್ಲಿ ‘ಕನ್ನಡ ಪಂಡಿತ ಹುದ್ದೆ’, ರಾಜರತ್ನಂ ಅವರನ್ನು ಹುಡುಕಿ ಬಂತು. ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿದ್ಯಾರ್ಥಿಗಳ ಲೇಖನಗಳ ಸಂಕಲನ ವಿದ್ಯಾರ್ಥಿ ವಿಚಾರ ವಿಲಾಸ ಪ್ರಕಟಿಸುವುದರ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಾಹಿತ್ಯ ಸೃಷ್ಟಿಯಲ್ಲಿ ಪ್ರೇರಕ ಶಕ್ತಿಯಾದರು. ಪ್ರೊ| ಎ.ಆರ್.ಕೃಷ್ಣಶಾಸ್ತ್ರಿ ಸ್ಥಾಪಿಸಿದ್ದ ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಿ ಅದಕ್ಕೊಂದು ಘನತೆ ತಂದರು. ಜಿ.ಪಿ.ರಾಜರತ್ನಂ, ೧೯೭೬ರಲ್ಲಿ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ೧೯೬೯ರಲ್ಲೇ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿತು. ೧೯೭೮ರಲ್ಲಿ ‘ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ’, ೧೯೭೯ರಲ್ಲಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ರಾಜರತ್ನಂ ಅವರ ಸಾಹಿತ್ಯ ಸೇವೆಗೆ ಎರಡು ಮುಖ. ಒಂದು ಸಾಹಿತ್ಯ ಸೃಷ್ಟಿ, ಎರಡು ಸಾಹಿತ್ಯ ಪರಿಚಾರಿಕೆ. ಕಾವ್ಯನಾಮ “”ಭ್ರಮರ”” ಎಂಬುದು ಇವರ ಕಾವ್ಯನಾಮವಾಗಿತ್ತು. ಕೆಲವು ಪದ್ಯದ ಸಾಲುಗಳು         ಮಕ್ಕಳ ಕವನ ನಾಯಿಮರಿ ನಾಯಿಮರಿ ತಿಂಡಿ ಬೇಕೆ? ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು.. ನಾಯಿಮರಿ ನಿನಗೆ ತಿಂಡಿ ಏಕೆ ಬೇಕು? ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು ನಾಯಿಮರಿ ಕಳ್ಳ ಬಂದರೇನು ಮಾಡುವೆ? ಲೊಳ್ ಲೊಳ್ ಬೊವ್ ಎಂದು ಕೂಗಿ ಆಡುವೆ ಜಾಣಮರಿ ತಾಳು ಹೋಗಿ ತಿಂಡಿ ತರುವೆನು ತಾ ನಿನ್ನ ಮನೆಯ ನಾನು ಕಾಯುತಿರುವೆನು. ಕನ್ನಡ ಪದಗೊಳ್ ಯೆಂಡ ಯೆಡ್ತಿ ಕನ್ನಡ್ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ! ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ ತಕ್ಕೊ! ಪದಗೊಳ್ ಬಾಣ! ಬಗವಂತ ಏನ್ರ ಬೂಮೀಗ್ ಇಳಿದು ನನ್ ತಾಕ್ ಬಂದಾಂತ್ ಅನ್ನು; ಪರ್ ಗಿರೀಕ್ಸೆ ಮಾಡ್ತಾನ್ ಔನು ಬಕ್ತನ್ ಮೇಲ್ ಔನ್ ಕಣ್ಣು! ರತ್ನನ್ ಪರ್ಪಂಚ ಯೇಳ್ಕೊಳ್ಳಾಕ್ ಒಂದ್ ಊರು ತಲೇಮೇಗ್ ಒಂದ್ ಸೂರು ಮಲಗಾಕೆ ಭೂಮ್ತಾಯಿ ಮಂಚ ಕೈ ಯಿಡದೋಳ್ ಪುಟ್ನಂಜಿ ನೆಗನೆಗತ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪರ್ಪಂಚ ಕೃತಿಗಳು ತುತ್ತೂರಿ ರತ್ನನ ಪದಗಳು ಎಂಡಕುಡುಕ ರತ್ನ ನಾಗನ ಪದಗಳು ಬುದ್ಧನ ಜಾತಕಗಳು ಧರ್ಮದಾನಿ ಬುದ್ಧ ಭಗವಾನ್ ಮಹಾವೀರ ಮಹಾವೀರನ ಮಾತುಕತೆ ಕಡಲೆಪುರಿ ಗುಲಗಂಜಿ ಕಂದನ ಕಾವ್ಯ ಮಾಲೆ ರಾಜರತ್ನಂ ತಮ್ಮನ್ನು ತಾವೇ ‘ಸಾಹಿತ್ಯ ಪರಿಚಾರಕ’ ಎಂದು ಕರೆದುಕೊಳ್ಳುತ್ತಿದ್ದರು. ಇದರಿಂದ ಅವರ ಉದ್ದೇಶ ಸ್ಪಷ್ಟವಾಗಿತ್ತು- ಭಾಷಣದ ಮತ್ತು ಕೃತಿ ಪ್ರಕಟಣೆ ಮೂಲಕ ಜನರ ಬಳಿಗೆ ಸಾಹಿತ್ಯ ಕೊಂಡೊಯ್ಯುವುದಾಗಿತ್ತು. ಹೀಗಾಗಿ ‘ಜಿ.ಪಿ.ರಾಜರತ್ನಂ,’ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಂವೇದನೆಯನ್ನುಂಟು ಮಾಡಿದವರು. ವಿದಾಯ  ೧೯೭೯ರ ಮಾರ್ಚ್ ತಿಂಗಳ ೧೩ ರಂದು ನಿಧನರಾದರು. ********************************* ಇಂಗಳಗಿ ದಾವಲಮಲೀಕ

ಜಿ. ಪಿ. ರಾಜರತ್ನಂ ಜನ್ಮದಿನ Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ರಾಮಕೃಷ್ಣ ಗುಂದಿ ಆತ್ಮಕತೆ–02 ಗುಂದಿ ಹಿತ್ತಲದಲ್ಲಿ ಕಡ್ಲೆ ಬೇಸಾಯ ಗಂಗಾವಳಿ ನದಿಯ ದಕ್ಷಿಣ ತೀರದಿಂದ ನದಿಯ ಶಾಖೆಯಾಗಿ ಚಿಕ್ಕ ಹಳ್ಳವೊಂದು ಅಗ್ಗರಗೋಣ ಗ್ರಾಮದ ಅಂಚಿನಿಂದ ಹೆಗ್ರೆ ಗ್ರಾಮದವರೆಗೆ ಹರಿದು ಅಗ್ರಗೋಣ ಮತ್ತು ನಾಡುಮಾಸ್ಕೇರಿ ಗ್ರಾಮಗಳ ನಡುವೆ ಗಡಿರೇಖೆಯೊಂದನ್ನು ನಿರ್ಮಿಸಿದೆ. ಹಳ್ಳದ ಇಕ್ಕೆಲದಲ್ಲೂ ವಿಸ್ತಾರವಾದ ಗದ್ದೆಬಯಲು ಹನೇಹಳ್ಳಿಯ ಅಂಚಿನವರೆಗೂ ವ್ಯಾಪಿಸಿದೆ. ಹಳ್ಳದ ಪೂರ್ವ ದಂಡೆಯ ಅಗ್ಗರಗೋಣ ಗ್ರಾಮ ವ್ಯಾಪ್ತಿಯ ಬಯಲಲ್ಲಿ ಒಂದು ಪುಟ್ಟ ದಿನ್ನೆಯಿದೆ. ಹಳ್ಳಕ್ಕೆ ಹತ್ತಿರವಾಗಿ ಎರಡು-ಮೂರು ಗುಂಟೆಯ ಅಳತೆಯಲ್ಲಿ ವಿಸ್ತರಿಸಿಕೊಂಡಿರುವ ಈ ಗುಂದವನ್ನು ಜನರು ವಾಡಿಕೆಯಲ್ಲಿ “ಗುಂದಿಹಿತ್ತಲ” ಎಂದೇ ಗುರುತಿಸುತ್ತಿದ್ದರು. ನನಗೆ ಬುದ್ದಿ ಬಲಿತ ಸಂದರ್ಭದಲ್ಲಿ ನಾನು ಗುಂದಿಹಿತ್ತಲವನ್ನು ನೋಡಿದಾಗ ಎಂಟತ್ತು ತೆಂಗಿನ ಮರಗಳು ಗೊನೆಬಿಟ್ಟು ನಿಂತಿದ್ದವು. ಉಳಿದಂತೆ ಒಂದು ಅಮಟೆ ಮರ, ಎರಡು ಕರವೀರ ಹೂವಿನ ಗಿಡಗಳು, ಬೇಲಿಗುಂಟಿ ಹಾಲುಗಳ್ಳಿಯ ಗಿಡಗಳು ಇದ್ದವು. ತಲೆತಲಾಂತರದಿಂದ ಬಂದ ಮೂರು ಕುಟುಂಬಗಳಲ್ಲಿ ನಾನು ನನ್ನ ವಂಶವಾಹಿನಿಯ ಮೂಲವನ್ನು ಶೋಧಿಸಬೇಕಿತ್ತು… ನಾನು ಮೊದಲ ಬಾರಿಗೆ ನೋಡಿದಾಗ ಗುಂದಿಹಿತ್ತಲಿನಲ್ಲಿ ಸುಕ್ರು , ವತ್ತು,  ಬೇಡು ಎಂಬ ಹಿರಿಯ ಸಹೋದರರು ತಮ್ಮ ಕುಟುಂಬದ ಸದಸ್ಯರೊಟ್ಟಿಗೆ ಎರಡು ಪ್ರತ್ಯೇಕ ಮನೆಗಳಲ್ಲಿ ಅಲ್ಲಿ ನೆಲೆಸಿದ್ದರು. ಈ ಕುಟುಂಬಗಳಿಗೆ ಕಡ್ಲೆಮನೆತನ’ ಎಂಬ ಹೆಸರಿತ್ತು. ಬಹುಶಃ ಇವರ ಕುಟುಂಬದ ಹಿರಿಯರಲ್ಲಿ ಯಾರೋ ಕಡ್ಲೆ ಎಂಬ ಹೆಸರಿನವರಿದ್ದಿರಬೇಕು. ಅವನ ವಂಶಸ್ಥರೆಲ್ಲ ಕಡ್ಲೆಮನೆಮಂದಿ’ ಎಂದೇ ಗುರುತಿಸಿಕೊಂಡಿರಬಹುದು.             ಎರಡೂ ಕುಟುಂಬಗಳಲ್ಲಿ ನಾಲ್ಕು ನಾಲ್ಕು ಗಂಡು ಮತ್ತು ಹೆಣ್ಣು ಮಕ್ಕಳಿದ್ದು ತುಂಬಿದ ಮನೆತನವಾಗಿತ್ತು. ಗುಂದಿಹಿತ್ತಲ’ ಪಿತ್ರಾರ್ಜಿತ ಆಸ್ತಿಯೆಂಬುದನ್ನು ಬಿಟ್ಟರೆ ಈ ಕುಟುಂಬಗಳಿಗೆ ಆದಾಯದ ಮೂಲವೇನೂ ಇರಲಿಲ್ಲ. ಎರಡೂ ಕುಟುಂಬಗಳ ಗಂಡಸರು ಹೆಂಗಸರೆಲ್ಲ ಉಪ್ಪಿನಾಗರದಲ್ಲಿ ಉಪ್ಪು ತೆಗೆಯುವುದು, ಕಲ್ಲುಗಣಿಗಳಲ್ಲಿ ಕಲ್ಲು ತೆಗೆಯುವುದು, ನಾಡವರ ಮನೆಗಳಲ್ಲಿ ಕೃಷಿಕೂಲಿ ಇತ್ಯಾದಿ ಕೆಲಸಗಳಿಂದ ಹೊಟ್ಟೆ ಹೊರೆಯುತ್ತಿದ್ದರು. ಕುಚ್ಚಿಗೆ ಅಕ್ಕಿಯ ಗಂಜಿ ಇಲ್ಲವೆ ರಾಗಿ ಅಂಬಲಿ ಅವರ ಮುಖ್ಯ ಆಹಾರವಾಗಿತ್ತು. ಪಕ್ಕದಲ್ಲಿಯೇ ಇದ್ದ ಹಳ್ಳದಲ್ಲಿ ಗಾಳ ಹಾಕಿ ಅಥವಾ ಬಲೆ ಬೀಸಿ ಬಂದರೆ ಬುಟ್ಟಿ ಬುಟ್ಟಿ ತುಂಬ ಶಾಡಿ, ಕರ್ಶಿ, ಮಡ್ಲೆ, ಗರಗಟ್ಲೆ, ಏಡಿ, ಶೆಟ್ಲಿ ಇತ್ಯಾದಿ ಮೀನುಗಳನ್ನು ಹಿಡಿದು ತರುತ್ತಿದ್ದರು. ಮಳೆಗಾಲದಲ್ಲಿ ಗದ್ದೆ ಬಯಲಲ್ಲೂ ಗದ್ದೆ ಬೆಲಗುಗಳಲ್ಲಿ ಕೂಳಿ ಹಾಕಿ ಕೈಂಜಬ್ಬು’ಗಳನ್ನು ಹಿಡಿದು ತರುತ್ತಿದ್ದರು. ಹೀಗಾಗಿ ಮೀನು ಇತ್ಯಾದಿ ಹಣಕೊಟ್ಟು ಖರೀದಿಸುವ ತಾಪತ್ರಯ ಇರಲಿಲ್ಲ. ಶನಿವಾರ ಪನಿವಾರಗಳಲ್ಲಿ ನಾಡವರ ಹಿತ್ತಲಲ್ಲಿ ಅಥವಾ ಬೇರೆಲ್ಲಾದರೂ ಬೆಳೆದ ಕೆಸುವಿನ ಸೊಪ್ಪು, ನುಗ್ಗೆ ಸೊಪ್ಪುಗಳನ್ನು ತಂದು ಪುಡಿ ಹಾಕಿ ಗಂಜಿಯೊಟ್ಟಿಗೆ ಉಣ್ಣುತ್ತಿದ್ದರು. ಮೂರು ಗುಂಟೆಯಷ್ಟಾದರೂ ಸ್ವಂತ ಆಸ್ತಿ ಹೊಂದಿದ ಕಡ್ಲೆಮನೆತನ ಎಂಬ ಬಿಂಕ ಒಂದುಕಡೆಯಾದರೆ ಕುಟುಂಬದ ಸದಸ್ಯರ ಸಂಖ್ಯೆಯ ಹೆಚ್ಚುಗಾರಿಕೆ ಇನ್ನೊಂದುಕಡೆ. ಒಟ್ಟಾರೆಯಾಗಿ ಸುತ್ತಲ ಗ್ರಾಮಗಳ ಇತರ ಆಗೇರರು ಕಡ್ಲೆಮನೆತನದ ಕುರಿತು ಹಗುರವಾಗಿ ಮಾತನಾಡಲು ಅಂಜುತ್ತಿದ್ದರು. ಇದರೊಡನೆ ಈ ಮನೆತನದ ಕುರಿತು ಒಂದಿಷ್ಟು ಭಯವೂ ಸೇರಿಕೊಳ್ಳಲು ಇನ್ನೊಂದು ಪ್ರಬಲ ಕಾರಣವೂ ಇತ್ತು. ಅದು ಕೋಳಿ ಅಂಕ. ಕಡ್ಲೆ ಮನೆತನದ ಸುಕ್ರು ಮತ್ತು ಬೇಡು ಎಂಬ ಇಬ್ಬರೂ ಹಿರಿಯರಿಗೆ ಕೋಳಿ ಅಂಕದ ಹವ್ಯಾಸವಾಗಿತ್ತು. ಅಲ್ಲದೆ ಈ ಇಬ್ಬರೂ ಕೋಳಿಗಳ ಬಣ್ಣ ಮತ್ತು ಆಕಾರಗಳಿಂದಲೇ ಅವುಗಳ ಸಾಮರ್ಥ್ಯವನ್ನು ಅಳೆಯಬಲ್ಲ ಪ್ರತಿಭೆಯುಳ್ಳವರಾಗಿದ್ದರು. ಅವುಗಳಿಗಾಗಿ ಪ್ರತ್ಯೇಕ ಗೂಡುಗಳನ್ನು ಮಾಡದೆ ತಮ್ಮ ಮಲಗುವ ಅಥವಾ ಅಡಿಗೆ ಕೋಣೆಯ ಒಂದು ಮೂಲೆಯಲ್ಲಿಯೆ ಅಂಕದ ಕೋಳಿಗಳನ್ನು ಕಟ್ಟಿ ಸಾಕುತ್ತಿದ್ದರು. ಹದವಾಗಿ ಬೆಳೆದ ಅಂಕದ ಕೋಳಿಗಳಿಗೆ ಹೋರಾಟದ ತರಬೇತಿ ನೀಡುವುದರಲ್ಲಿ ಅವುಗಳ ಕಾಲಿಗೆ ಕತ್ತಿಕಟ್ಟಿ ಬಿಡುವುದರಲ್ಲಿ, ಗಾಯಗೊಂಡ ಕೋಳಿಗಳ ಗಾಯಕ್ಕೆ ಹೊಲಿಗೆ ಹಾಕಿ ಉಪಚರಿಸುವುದರಲ್ಲಿ ಇಬ್ಬರೂ ನಿಪುಣರಾಗಿದ್ದರು. ಹೀಗಾಗಿ ಸುತ್ತಮುತ್ತ ಎಲ್ಲಿಯೇ ಅಂಕಗಳು ನಡೆಯಲಿ ಸುಕ್ರು ಮತ್ತು ಬೇಡು ಸಹೋದರರು ಅನಿವಾರ್ಯವಾಗಿದ್ದರು. ಅನ್ಯರು ತಮ್ಮ ಕೋಳಿಗಳನ್ನು ಅಂಕಕ್ಕೆ ಒಡ್ಡುವಾಗಲೂ ಇವರನ್ನೆ ಅವಲಂಬಿಸುತ್ತಿದ್ದರು. ಈ ಸಹೋದರರಲ್ಲಿ ಯಾರಾದರೊಬ್ಬರು ತಮ್ಮ ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ ಬೆನ್ನು ನೇವರಿಸಿ ಬಿಟ್ಟರೆ ಅವು ಖಂಡಿತವಾಗಿಯೂ ಗೆದ್ದೇ ಗೆಲ್ಲುತ್ತವೆ ಎಂಬ ನಂಬಿಕೆ ಅವರದ್ದಾಗಿತ್ತು. ಅವರ ಈ ಬಗೆಯ ನಂಬಿಕೆಗೆ ಇನ್ನೂ ಒಂದು ಪ್ರಬಲ ಕಾರಣವೂ ಇತ್ತು. ಅದು ಏನೆಂದರೆ, ಇಬ್ಬರಿಗೂ ಇರುವ ಭೂತ ಬೆಂಬಲ: ಸುಕ್ರು ಮತ್ತು ಬೇಡು ಸಹೋದರರು ಅಂಕದಲ್ಲಿ ಕೋಳಿಗಳನ್ನು ಒಡ್ಡುವ ಮುನ್ನ ಸ್ಮಶಾನದಲ್ಲಿ ಬಂಧಿಯಾಗಿರುವ ತಮ್ಮ ಮನೆತನದ ಹಿರಿಯರ ಪ್ರೇತಾತ್ಮಗಳನ್ನು ಜಾಗೃತಗೊಳಿಸಿ ಬರುತ್ತಿದ್ದರಂತೆ: ಕೋಳಿ ಅಂಕದ ಸೀಸನ್ ಆರಂಭವಾಗುವುದೇ ಗದ್ದೆ ಕೊಯ್ಲಿನ ಬಳಿಕ. ಇಷ್ಟು ಹೊತ್ತಿಗೆ ಅಂಕದ ಕೋಳಿಗಳೂ ಬೆಳೆದು ಯುದ್ಧಕ್ಕೆ ಸಜ್ಜಾದ ಯೊಧರಂತೆ ನಿಗುರಿ ನಿಂತಿರುತ್ತಿದ್ದವು. ಅಂಥ ಸಮಯದಲ್ಲಿ ಸುಕ್ರು ಮತ್ತು ಬೇಡು ಸಹೋದರರು ಅಗ್ರಗೋಣದ ಹೊಲೆವಟ್ರ ಎಂಬ ಗ್ರಾಮ ದೇವತೆಯಲ್ಲಿ ಬಾಗಿಲುಕಟ್ಟಿ’ ಹರಕೆ ಮಾಡಿಕೊಂಡು ಸ್ಮಶಾನದಲ್ಲಿರುವ ತಮ್ಮ ಹಿರಿಯರ ಪ್ರೇತಾತ್ಮಗಳಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅಂಕದಲ್ಲಿ ಕೋಳಿ ಗೆದ್ದು ಬಂದರೆ, ಸೋತ ಕೋಳಿಯ ಮಾಂಸವನ್ನು ಬಂಧು ಬಳಗದೊಂದಿಗೆ ಹಂಚಿ ತಿನ್ನುವ ಮುನ್ನ ಭಯ ಭಕ್ತಿಯಿಂದ ಪ್ರೇತಾತ್ಮಗಳಿಗೆ ಮೀಸಲು ನೀಡುತ್ತಿದ್ದರು. ಈ ರಹಸ್ಯವನ್ನು ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ಹೇಗೋ ತಿಳಿದುಕೊಂಡಿದ್ದರು. ಹೀಗಾಗಿ ಜಾತಿಬಾಂಧವರಾದ ಆಗೇರರು ಮಾತ್ರವಲ್ಲದೆ ಕೋಳಿ ಅಂಕದಲ್ಲಿ ಆಸಕ್ತಿಯಿರುವ ಹಾಲಕ್ಕಿಗಳು, ನಾಮಧಾರಿಗಳು, ನಾಡವರೆಲ್ಲಾ ಕಡ್ಲೆ ಮನೆತನದ ಈ ಸಹೋದರರನ್ನು ಪರಿಣತ “ಜೂಂಜುಕಾರ” ರೆಂದು ವಿಶಿಷ್ಟವಾದ ಗೌರವದಿಂದ ಗುರುತಿಸುತ್ತಿದ್ದರು. ಬೇಡು ಮತ್ತು ಸುಕ್ರು ಇಬ್ಬರಿಗೂ ಕೋಳಿ ಅಂಕದ ಕಾರಣದಿಂದ ಸಿಕ್ಕ ಸಾಮಾಜಿಕ ಗೌರವ ಮತ್ತು ಪಿತ್ರಪ್ರೇತಾತ್ಮದ ಬೆಂಬಲದ ನಂಬಿಕೆ ಯಿಂದಾಗಿ ನಮ್ಮ ಆಗೇರ ಜಾತಿಯಲ್ಲಿ ನಮ್ಮ ಕಡ್ಲೆಮನೆತನಕ್ಕೆ ಒಂದಿಂಚು ಹೆಚ್ಚಿನ ಗೌರವವಿತ್ತು. ಅಗ್ರಗೋಣ, ಹೆಗ್ರೆ, ನಾಡುಮಾಸ್ಕೇರಿ ಮೂರು ಗ್ರಾಮಗಳ ಆಗೇರರೊಡನೆ ಗದ್ದೆ ಬಯಲ ನಡುವಿನ ಗುಂದಿಹಿತ್ತಲದ ಕಡ್ಲೆಮನೆ’ ಕುಟುಂಬದ ಸಂಬಂಧ ಸಹಜವಾಗಿಯೇ ಸೌಹಾರ್ದದಿಂದ ಕೂಡಿತ್ತು. ಜಾತಿ ಕೂಟಗಳು, ಹಬ್ಬ ಹರಿದಿನಗಳು, ಯಕ್ಷಗಾನ ಪ್ರಸಂಗಗಳು (ಬೈಟಕ್) ನಡೆಯುವಾಗ ಮೂರು ಗ್ರಾಮಗಳು ಒಟ್ಟಾಗಿ ಸೇರಿ ಆಚರಿಸಿ ಆನಂದಿಸುತ್ತಿದ್ದವು. ಪರಸ್ಪರ ಕಷ್ಟಸುಖ ಏನೇ ಇದ್ದರೂ ಈ ಮೇಲಿನ ಮೂರೂ ಗ್ರಾಮಗಳ ಆಗೇರರಲ್ಲಿ ಭೇದ ಭಾವವಿಲ್ಲದ ಅನೋನ್ಯತೆ ಸಾಧ್ಯವಾಗಿತ್ತು. ಹಲವಾರು ಬಾರಿ ಗುಂದಿಹಿತ್ತಲಿನ ಕಡ್ಲೆಮನೆ ಸಂಕಷ್ಟಕ್ಕೆ ಸಿಲುಕಿದಾಗ ನೆರೆಯ ಈ ಮೂರು ಗ್ರಾಮದವರೆ ನೆರವಿಗೆ ಬಂದು ನಿಲ್ಲುತ್ತಿದ್ದರು. ಗದ್ದೆ ಬಯಲಿನ ನಟ್ಟನಡುವೆ ಇರುವ ಗುಂದಿಹಿತ್ತಲ ಪ್ರಚಂಡ ಮಳೆಗಾಲದಲ್ಲಿ ಒಂದು ಪುಟ್ಟ ದ್ವೀಪದಂತೆ ಗೋಚರಿಸುತ್ತಿತ್ತು. ಹಳ್ಲದಲ್ಲಿ ನೆರೆ ಬಂದರೆ ಗುಂದಿಹಿತ್ತಲವಿಡೀ ಮುಳುಗಿ ಮರೆಯಾಗಿಬಿಡುವ ಸಂದರ್ಭಗಳೂ ಇರುತ್ತಿದ್ದವು. ಇಂಥ ಸಮಯದಲ್ಲಿ ಅಗ್ಗರಗೋಣ, ಹೆಗ್ರೆ ಅಥವಾ ನಾಡುಮಾಸ್ಕೇರಿಯ ಜಾತಿ ಜನರು ಗುಂದಿಹಿತ್ತಲಿನ ಎರಡೂ ಕುಟುಂಬಗಳನ್ನು ತಮ್ಮಲ್ಲಿಗೆ ಕರೆದೊಯ್ದು ಆಶ್ರಯ ನೀಡುತ್ತಿದ್ದರು. ಹೀಗೆ ನೆರವಾಗುವ ಸಂದರ್ಭದಲ್ಲೂ ಈ ಕುಟುಂಬದ ಘನತೆಗೆ ಕುಂದು ಬಾರದಂತೆ ಗೌರವದಿಂದ ನಡೆಸಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ. ಜೋಡಿ ಸಹೋದರರಲ್ಲಿ ಕಿರಿಯವನು ಬೇಡು. ಮೂವರು ಗಂಡುಮಕ್ಕಳು, ನಾಲ್ಕು ಜನ ಹೆಣ್ಣು ಮಕ್ಕಳ ತಂದೆ. ಮಕ್ಕಳಲ್ಲಿ ಯಾರೂ ಅಕ್ಷರ ಕಲಿಕೆಯಲ್ಲಿ ಆಸಕ್ತಿ ತೋರಿಸಲಿಲ್ಲ. ಮೂಲ ಕಸುಬುಗಳನ್ನು ಆಶ್ರಯಿಸಿ ಮದುವೆ ಮಾಡಿಕೊಂಡು ಬೇರೆ ಬೇರೆ ಊರುಗಳಿಗೆ ಹೋದರು. ಹಿರಿಯವನಾದ ಸುಕ್ರುವಿಗೆ ಇಬ್ಬರು ಹೆಂಡಿರು. ಮೊದಲ ಹೆಂಡತಿ ನಡುವಯಸ್ಸಿನಲ್ಲಿ ತೀರಿಕೊಂಡಳಾದರೂ ಅದಾಗಲೇ ಅವಳಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಎರಡನೆಯ ಹೆಂಡತಿ ಸುಕ್ರುವಿನಿಂದ ಓರ್ವ ಗಂಡುಮಗುವನ್ನು ಪಡೆದಳಾದರೂ ಸಂಸಾರ ನಡೆಸಲಾಗದೇ ಗಂಡ ನಿಂದ ಬೇರೆಯಾಗಿ ತನ್ನ ತವರೂರು ಅಂಕೋಲೆಗೆ ಹೊರಟವಳು ಅಲ್ಲಿಯೇ ನೆಲೆಸಿದ್ದಳು. ಕಡ್ಲೆ ಮನೆತನದ ಸಂಬಂಧದಿಂದ ಹೊರಗೇ ಉಳಿದುಬಿಟ್ಟಳು. ಸುಕ್ರುವಿನ ಹಿರಿಯ ಹೆಂಡತಿಯ ಇಬ್ಬರು ಗಂಡುಮಕ್ಕಳು ಮುರ್ಕುಂಡಿ ಮತ್ತು ಗಣಪು ಹೆಣ್ಣು ಮಕ್ಕಳು ದೇವಿ ಮತ್ತು ನಾಗಮ್ಮ. ಸುಕ್ರುವಿನ ಎರಡನೆಯ ಗಂಡುಮಗ ಗಣಪುವಿನ ಹೊರತಾಗಿ ಉಳಿದ ಮೂವರು ಶಾಲೆ ಕಲಿಯಲು ಆಸಕ್ತಿ ತೋರಿಸಲಿಲ್ಲ. ಆದರೆ ಗಣಪು ಎಂಬ ಹುಡುಗ ಶಾಲೆ ಕಲಿಯಲು ಹಠ ಮಾಡಿದ್ದೇ ಅಪರಾಧವಾಗಿತ್ತು. ಕೂಲಿ ಮಾಡಿದರೆ ತುತ್ತು ಅನ್ನ ಸಿಗುತ್ತದೆ, ಶಾಲೆ ಕಲಿತರೆ ಉಪವಾಸವೇ ಗತಿ ಎಂದು ನಂಬಿದ ಪಾಕಲರ ನಡುವೆ ಅಕ್ಷರದ ಬೆನ್ನು ಹತ್ತಿದ ಗಣಪು ಪಟ್ಟ ಕಷ್ಟ ನಡೆಸಿದ ಹೋರಾಟ ಅಷ್ಟಿಷ್ಟಲ್ಲ! ಅಂದು ಆತ ಆ ಬಗೆಯ ಹೋರಾಟ ನಡೆಸಿ ನಾಲ್ಕು ಕಾಳಿನಷ್ಟಾದರೂ ಅಕ್ಷರಗಳನ್ನು ಆಯ್ದು ತನ್ನ ಜೋಳಿಗೆಯಲ್ಲಿ ತುಂಬಿಕೊಳ್ಳದಿದ್ದರೆ ಇಂದು ನಾನು ಹೀಗಿರುತ್ತಿರಲಿಲ್ಲ. ಏಕೆಂದರೆ ಅಂದು ಅಕ್ಷರ ಪ್ರೀತಿಯಲ್ಲಿ ಅರೆಹೊಟ್ಟೆ ಉಂಡು ಮನೆಯನ್ನೇ ಬಿಟ್ಟು ಹೊರ ನಡೆದ ಛಲಗಾರ ಬೇರೆ ಯಾರೂ ಅಲ್ಲ, ನನ್ನ ತಂದೆ ಗಣಪು ಮಾಸ್ತರ! ಡಾ.ರಾಮಕೃಷ್ಣ ಗುಂದಿಯವರ ಹಳೆಯ ಪೋಟೊಗಳು ********************************************************* ಡಾ.ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ…

Read Post »

ಕಾವ್ಯಯಾನ

ಬೆಳಗಬೇಕಾದರೆ..!

ಕವಿತೆ ಬೆಳಗಬೇಕಾದರೆ..! ಸುಮನಸ್ವಿನಿ. ಎಂ ನೋವ ನುಂಗಲು ಹಿಂಜರಿಯದೇಘರ್ಷಿಸಿಕೊಳ್ಳಬೇಕುಬೆಳಕ ಹೊತ್ತಿಸಬೇಕಾದರೆ… ಸುಟ್ಟುಕೊಳ್ಳುವ ಅಂಜಿಕೆಯಿಲ್ಲದೇನಿರ್ಭಯ ಗೀರಿಕೊಳ್ಳಬೇಕುಬೆಳಗಬೇಕಾದರೆ… ಕರಗಿಹೋಗಲು ಕಳವಳಗೊಳದೇಪ್ರಾಂಜಲ ದಹಿಸಬೇಕುಪ್ರಜ್ವಲಿಸಬೇಕಾದರೆ… ಬೂದಿಯಾಗಲು ಹೆದರದೇಹೊತ್ತಿ ಉರಿಯಬೇಕುಬೆಳಕಾಗಬೇಕಾದರೆ… ಮಾಯವಾಗೋ ಭಯವ ಮೀರಿನಿರಂತರ ಧಗಧಗಿಸಬೇಕುಶಾಶ್ವತ ಮಿನಗುತಿರಬೇಕಾದರೆ… ******************************************

ಬೆಳಗಬೇಕಾದರೆ..! Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗ ರಂಗೋಲಿ -೨  ‘ಸಿರಿ’ ತುಂಬಿದ ಬಾಲ್ಯ ಒಂದು ಭಾವನಾ ಲೋಕದ ಹೊಸಿಲಿನ ಒಳಗೆ ರಂಗು ರಂಗಾದ ಕಲ್ಪನಾಲೋಕ ಶೃಂಗಾರಗೊಂಡು ಕೂತಿತ್ತು. ಅಲ್ಲಿ ನಿತ್ಯ ನರ್ತನ ವಿಲಾಸ. ನನ್ನಲೊಳಗೆ ” ಸಿರಿ” ಎಂಬ ಪ್ರೀತಿ ಅರಳಿದ ಪ್ರಕ್ರಿಯೆಗೆ ಮೂಲ ಬಿತ್ತನೆಯಿದು.  ಹಾಂ..ಸಿರಿ!. ಹೌದು..ಸ್ತ್ರೀ ಕುಲಕ್ಕೆ ಪ್ರತಿಭಟನೆಯ ದಾರಿಯನ್ನು ತೋರಿಸಿಕೊಟ್ಟ, ಪುರುಷ ಪ್ರಧಾನ ಸಮಾಜದ ವಿರುದ್ಧ ಬಂಡಾಯ ಸಾರಿದ ಹಳ್ಳಿಯ ಹೆಣ್ಣಿನ ಆತ್ಮವಿಶ್ವಾಸದ ಪ್ರತೀಕ. ಸ್ತ್ರೀತ್ವವನ್ನು ಅರಿವಿನ ನೆಲೆಯಲ್ಲಿ  ಗ್ರಹಿಸಬೇಕಾದ ಒತ್ತಾಯವನ್ನು ತಿಳಿಸಿದ ಇಲ್ಲಿನ ಮಣ್ಣಿನಲ್ಲಿ ಮೂಡಿಬಂದ ಶಕ್ತಿ ಸ್ವರೂಪಿಣಿ. ಮನವು ಮತ್ತೆ ಅಲ್ಲಿಗೆ ಓಡುತ್ತಿದೆ. ಅದು ಹುಚ್ಚು ಅಮಲಿನ ಹೊಳೆ…ಆ ಸಿರಿಯ ಪಾದದ ಬಳಿಗೆ. ಬನ್ನಿ! ,ಹೀಗೆ ಬನ್ನಿ!! ಇದೋ ನೋಡಿ ನನ್ನೂರಿನ ಜಾತ್ರೆ, ಉತ್ಸವ.  ನಿಮಗೆ ನಾನು ಸಿರಿಯನ್ನು ತೋರಿಸುವೆ. ನಾನು ಸಿರಿಯನ್ನು ಮೊದಲು ಕಂಡದ್ದೂ ಅಲ್ಲೇ. ಆಗ ನನ್ನದು ಬಾಲ್ಯ ಸಹಜ ಆಟದ ಉತ್ಸಾಹ,  ಕುತೂಹಲ, ಅಚ್ಚರಿಗಳು ಬೆರೆತುಕೊಂಡ ವಯಸ್ಸು. ನಮ್ಮೂರಲ್ಲಿ ಚಂದ್ರನ ಹುಣ್ಣಿಮೆ ಸಂಭ್ರಮವೂ ಸಿರಿ ಜಾತ್ರೆಯೂ ಜತೆ ಜತೆಗೆ. ಊರಿನ ದೇವರ ಉತ್ಸವ  ಜನಜೀವನ ತುಂಬಾ ಬಣ್ಣವೋ ಬಣ್ಣ. ಆ ಹುಣ್ಣಿಮೆಯ ರಾತ್ರಿ ವರ್ಷದ ಬೇರೆ ಹುಣ್ಣಿಮೆ ಇರುಳಿನಂತಲ್ಲ. ಊರ ಮಣ್ಣಿನ ಕಣಕಣದಲ್ಲಿ ಮೊಳಕೆಗೊಳ್ಳುತ್ತವೆ ಹೆಣ್ಣು ಹೃದಯಗಳು. ಬಲಿಯುತ್ತದೆ ಆತ್ಮಸಮ್ಮಾನದ ಕೂಗು.  ಅನಾವರಣಗೊಳ್ಳತ್ತಲೇ ಹೋಗುತ್ತದೆ ಆ ಸುಪ್ತ ಮನಸ್ಸು. ಮನಸ್ಸಿನ ಒಳಪದರದಲ್ಲಿ ಹುಗಿದಿಟ್ಟ ದುಗುಡ ದುಮ್ಮಾನ, ನಿರಾಸೆ, ಹತಾಶೆ, ಆಸೆ, ಈಡೇರದ ಕನಸು, ಆ ಬೆಳದಿಂಗಳ ಸ್ಪರ್ಶಕ್ಕೆ ಬುಳಬುಳ ಎಂದು ಮನಸ್ಸಿನಾಚೆ ಆ ದೇವಾಲಯದ ಎದುರಿನ ಬಯಲು ಗದ್ದೆಗೆ ಹರಿದು ಬಗೆಬಗೆಯ ಆಕಾರ ತಾಳುತ್ತದೆ. ರೋಷ, ಸಿಟ್ಟು,ಆರ್ಭಟ, ಹೂಂಕಾರ, ನಿರ್ವಿಕಾರತೆ ಬಗೆಬಗೆಯಾಗಿ ನವರಸ ಪಾಕ ಹೊಯ್ದಂತೆ. ಹೆಂಗಸರು ಸಿರಿಯಾಗಿ ಅರಳುತ್ತಾರೆ.  ಆಗೆಲ್ಲ ಹೆಂಗಸರ ಈ ನಡೆ, ಅದಕ್ಕೆ ಕಾರಣಗಳು ಅರ್ಥ ಆಗುವ, ಅಥವಾ ಆಲೋಚನೆಗಳು ಆ ದಿಕ್ಕಿನತ್ತ ಒಂದಿಷ್ಟೂ ತಿರುಗುವಷ್ಟು ಬುದ್ಧಿ ಬಲಿತಿರಲಿಲ್ಲ. ಹುಣ್ಣಿಮೆಯ ಮುನ್ನ ದಿನವೇ ನಾವು ಮಕ್ಕಳು ಸಂಭ್ರಮವನ್ನು ಮೈ ಮನಸ್ಸಿಗೆ ಹೊಯ್ದುಕೊಂಡಂತೆ ಓಡಾಟ ಆರಂಭಿಸುತ್ತಿದ್ದೆವು. ಹೊಸ ಅಂಗಿ, ಅದರ ಹೊಸತನದ  ಪರಿಮಳ ಮೂಸಿ ಮೂಸಿ ನೋಡಿ ಗೆಳತಿಯರ ಮನೆಗೆ ಓಡುವುದು. ಅಲ್ಲಿ ಅವಳ ಫ್ರಾಕ್,ಅದರ ಬಣ್ಣವನ್ನು  ಹೀರಿಕೊಂಡ ಮನಸ್ಸು ಮತ್ತೆ ಓಟವನ್ನು ಮುಂದುವರೆಸುತ್ತದೆ. ಕೊನೆಗೆ ನಾಲ್ಕೈದು ಮಂದಿ ಒಂದೆಡೆ ಸೇರಿ ಹೊಸ ಜಂಭದಲ್ಲಿ ದೇವಾಲಯದ ಸಮೀಪ ಹೋಗುವುದು. ದೇವಾಲಯದ ಎದುರಿನ ಗದ್ದೆ, ಆ ರಸ್ತೆಗಳಲ್ಲಿ ಗಸ್ತು ತಿರುಗುವ ಕಾಯಕ.  ಜಾತ್ರೆಗೆ ಎರಡು ದಿನ ಇದೆ ಎನ್ನುವಾಗ  ರಾಶಿರಾಶಿ ಗೊರಬುಗಳು ಮಾರಾಟಕ್ಕೆ ಬರುತ್ತಿದ್ದವು. ರೈತರು ಮಳೆ ಬಿಸಿಲಲ್ಲಿ ತೋಟ-ಗದ್ದೆಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಇದನ್ನು ತಲೆಗೆ ಧರಿಸಿ ಬೆನ್ನಿಗೆ ಇಳಿಬಿಡುವ ತೆರೆದ ಜನಪದ ಜಾಕೆಟ್ಟು ಇದು.  ಉತ್ಸವದ ಸಮಯದಲ್ಲಿ ಲಾರಿ ಲಾರಿಗಳಲ್ಲಿ ಈ ಗೊರಬುಗಳು ಬರುತ್ತಿದ್ದವು. ನಮಗೆ ಈ ಲಾರಿಗಳನ್ನು ಹಾಗೂ  ತುಂಬಿಕೊಳ್ಳುವ ಗೊರಬುಗಳ ರಾಶಿ ಇವನ್ನು ಎಣಿಕೆ ಮಾಡುವುದೇ ಅತ್ಯಂತ ಖುಷಿ ಕೊಡುವ ಸಂಗಾತಿಯಾಗಿತ್ತು. ಮತ್ತೆ ಹೊಸ ಲಾರಿ ಬಂದರೆ ಮೊದಲಿನಿಂದ ಲೆಕ್ಕ ಶುರು. ಗೊರಬುಗಳ ಲೆಕ್ಕಾಚಾರದಿಂದ  ಮುಂದೆ ಬಂದರೆ ನಮಗೆ ಕಾಣುವುದು ನಿರ್ಮಾಣ ಹಂತದ ಸಂತೆ ಅಂಗಡಿಗಳು, ಜಾತ್ರೆಗೆ ಬಂದ ಸರ್ಕಸ್ ನ  ಇನ್ನೂ ಜೋಡಣೆಯಾಗದ ಉಪಕರಣಗಳು, ಬೋನಿನೊಳಗಿನ ಪ್ರಾಣಿಗಳು, ಸೊಂಟ ಕೈ ಕಾಲು ಬಿಡಿ ಬಿಡಿಯಾಗಿ ಬಿದ್ದ ವಿವಿಧ ಬಗೆಯ ಆಟದ  ಯಂತ್ರಗಳು, ಮಕ್ಕಳಾಟದ ಸಾಮಾನುಗಳು. ಡೇರೆಯೊಳಗೆ ಕೂತಿರುವ ಬೆಂಚು, ಟೇಬಲ್. ಮರುದಿನ ರಾತ್ರಿ ಆ ಜಾಗ ಮಸಾಲೆ ದೋಸೆ ಪರಿಮಳ ಬರುವ ಹೋಟೇಲ್ ಆಗಿರುತ್ತದೆ. ಗೋಣಿ ಚೀಲದಲ್ಲಿ ಕೂತ ಪ್ಲಾಸ್ಟಿಕ್, ಸ್ಟೀಲ್ ಪಾತ್ರೆಗಳು. ಮುಚ್ಚಿದ ದೊಡ್ಡ ಪ್ಲಾಸ್ಟಿಕ್ ಹೊದಿಕೆಯೊಳಗೆ ಮುಸುಗುಡುವ ಅಪರಿಚಿತ ವಸ್ತುಗಳು. ಅವುಗಳ ಬಗ್ಗೆ ಅತೀವ ಕುತೂಹಲ, ಚರ್ಚೆಯಾಗುತ್ತ ಎಲ್ಲವನ್ನೂ ಕಣ್ಣು,ಬಾಯಿ ಬಿಟ್ಟು ನೋಡುತ್ತಾ, ಕತ್ತಲು ನಮ್ಮ ಸುತ್ತಲೂ ಆವರಿಸುವುದನ್ನು ನೋಡಿ ಮನೆಗೆ ಓಡುತ್ತಿದ್ದೆವು. ಹುಣ್ಣಿಮೆಯ ದಿನ ಎಳೆಯ ಮನಸ್ಸುಗಳಿಗೆ ಸಂಭ್ರಮ, ಕುತೂಹಲ, ಆಸಕ್ತಿ. ದೊಡ್ಡವರಲ್ಲಿ ಮಕ್ಕಳ ಪ್ರಶ್ನೆ!  “ಎಷ್ಟು ಹೊತ್ತಿಗೆ ಜಾತ್ರೆ ಶುರು?”. ಉತ್ತರ ಸಿಕ್ಕರೂ ಮತ್ತದೇ ಪ್ರಶ್ನೆ. ಸಂಜೆ ಅವಸರದಲ್ಲಿ ಸಿಕ್ಕಿದ್ದು ಒಂದಷ್ಟು ಮುಕ್ಕಿ ಜಾತ್ರೆಗೆ ಜಾಗವಾದ ಗದ್ದೆಗೆ ಹಾಜಾರಾತಿ ಕೊಡುತ್ತಿದ್ದೆವು. ಆಗಲೇ ವಾದ್ಯಗಳು, ಪಾಡ್ದನದ ನಾದ ಕಿವಿ ತುಂಬುತ್ತಿತ್ತು. ” ನಾರಾಯಣ ಓ ನಾರಾಯಿಣೋ ಓ..ಓ..ಆ..ಆ.. ಇನಿ ಯೆನ್ನ ಪಡಿಸಂಪಗೆ ಓ ಈರ್ ಪತ್ತಲೆ ಬೆರಮ್ಮಣಂದ್ ಪನ್ಪೋಲ್ ಆಲ್ ದಾರು  ಆಲ್..ಓ….ಓ…” ಜನ ತುಂಬುತ್ತಿದ್ದರು. ಅದು ಸಿರಿ ಜಾತ್ರೆ. ಎಲ್ಲಿ ನೋಡಿದರೂ ಹೆಂಗಳೆಯರು. ಒತ್ತೊತ್ತಾಗಿ ಕೂತು, ನಿಂತು, ಮುಡಿ ಕೆದರಿ ಏನನ್ನೋ ಮೆಲು ಧ್ವನಿಯಲ್ಲಿ ಮಣಮಣಿಸುತ್ತಿದ್ದರು. ಸಣ್ಣನೆಯ ಆಲಾಪದಂತೆ ಪಾಡ್ದನ ಆರಂಭಗೊಳ್ಳುತ್ತಿತ್ತು. “ಡೆನ್ನ ಡೆನ್ನ ಡೆನ್ನನಾ…ಓ..ಓ..”  ಆ ಎಳೆ ಹಿಡಿಯುವುದೇ ಖುಷಿ. “ನಾರಾಯಿಣ ಓ ನಾರಾಯಿಣೋ… ಓ..ಓ…ಓ..ಆ… ಆಹ್ಹ..ಹ್ಃ..ಹ್ಹ..ಓ..ಓ..ಸ್ಹ್ ಉ…” ನಾವು ಜನರ ಗುಂಪಿನಲ್ಲಿ ತೂರಿಕೊಳ್ಳುತ್ತ ಒಬ್ಬಬ್ಬ ಸಿರಿಯ ಬಳಿಗೂ ಹೋಗಿ ನಿಂತಿರುತ್ತಿದ್ದೆವು. ಚಂದ್ರನ ಒಡೆತನ ತುಂಬಿದಂತೆ,  ಬೆಳದಿಂಗಳು ಚೆಲ್ಲಿದ ನಶೆಗೆ, ಮನಕಡಲು ಅಲೆಯೆದ್ದು  ಹೆಂಗಳೆಯರ ಕೊರಳಿಗೆ ಶಕ್ತಿ ತುಂಬಿಕೊಳ್ಳುತ್ತದೆ. ಉಸಿರಿಗೆ ಹೊಸ ಆಯಾಮ..ಕಣ್ಣು ಸಹಜತೆಯ ಮಿತಿಯಾಚೆಗೆ ಚಾಚಿ  ಯಾವುದೋ ಉನ್ಮಾದ, ನಿಂತಲ್ಲಿ ಭಾರವಾಗುವ ಹೆಜ್ಜೆ,  ತೇಲುವ ದೇಹ. ಪಿಸು ನುಡಿಯಂತೆ ,ನಿಧಾನವಾಗಿ ನಾಭಿಯಾಳದಿಂದ ಹೊರಬರುವ ಧ್ವನಿ ಕ್ರಮೇಣ ತನ್ನ ಮೃದುತ್ವ ಕಳಕೊಂಡು ಏರುಧ್ವನಿಯಾಗುತ್ತದೆ. ಕಣ್ಣಲ್ಲಿ ಉನ್ಮಾದ , ಶಾಂತ ವಾಗಿರುವ ಸ್ವರ ಅದರಾಚೆಗೆ ನಡೆದು ಯಾವುದೋ ಅನಾಮಿಕ ಭಾವ.‌ ನಾವು ಹೊಟ್ಟೆಯೊಳಗೆ ಭೀತಿ ಅದುಮಿಟ್ಟು ಅದನ್ನೂ ಮೀರಿದ ಕುತೂಹಲದಿಂದ ಇಣುಕುತ್ತಿದ್ದೆವು.  “ನಾರಾಯಿಣೊ..ನಾರಾಯಿಣೋ “ ಅವರ ಪ್ರತೀ ಹಾವ ಭಾವ ನನ್ನೊಳಗೆ ಅಚ್ಚಾಗುತ್ತಿತ್ತು. ಕೈಯಲ್ಲಿ ಆಯುಧದಂತೆ ಹಿಡಿದಿರುವ ಹಿಂಗಾರ ಹೂ. ಮುಖದ ಇಕ್ಕಡೆ, ಹಿಂದುಗಡೆ ಕೆದರಿ ಹರಡಿಕೊಂಡ ಮುಡಿ, ಉಸಿರಿನ ಏರಿಳಿತಕ್ಕೆ ಸರಿಯಾಗಿ ಧ್ವನಿಸುವ ಆ ಆಳದ ಸ್ವರ, ಆಗಾಗ ತಲೆಗೂದಲನ್ನೇ ಕಣ್ಣಿಗೆ ಮುಖಕ್ಕೆ ಅಡ್ಡವಾಗಿ ಹಿಡಿದು ಬಿಕ್ಕುವ ಪರಿ, ಹಿಂಗಾರವನ್ನು ಆಗಾಗ ಸಮಾಧಾನದಿಂದ,ಮತ್ತೆ ರೋಷದಿಂದ ಮುಖದ ಮೇಲೆಯೇ ಬಡಿಯುತ್ತ ಕೈಗಳನ್ನು ಅದೇ ರಭಸದಲ್ಲಿ ಹಿಂದೆ ಮುಂದೆ ಆಡಿಸುತ್ತ ಸಣ್ಣನೆ ಹೆಜ್ಹೆ ಹಾಕಿ ಕುಣಿವ, ಆವೇ ಶದಲ್ಲಿ ಹಿಂಗಾರ ಹೂವಿನೊಂದಿಗೆ ಮೇಲಕ್ಕೆ ಹಾರುವ, ನವ ನಶೆಯು ಮೈಯ ಕೋಶ ಕೋಶಗಳಲ್ಲೂ ತುಂಬಿಕೊಂಡು ಎದೆಯನ್ನು ಆಲಾಪದೊಂದಿಗೆ ಪ್ರಾಣದ ಜೊತೆಗೆ ಆಟವಾಡುವಂತೆ ಆಡಿಸುವ ಅವರ ಆ ಪರಿ. ಎದುರುಗಡೆ ದೀನರಾಗಿ ನಿಲ್ಲುವ ಆ ‘ಸಿರಿ’ ರೂಪೀ ಹೆಂಗಳೆಯರ ಮನೆಯವರು. ಅವರ ಕಣ್ಣಿನಾಳದ ಭಯದ ಜೊತೆಜೊತೆಗೆ ತುಂಬಿಕೊಂಡ ಭಕ್ತಿ. ಎಲ್ಲವನ್ನೂ ಬಹಳ ಆಸಕ್ತಿಯಿಂದ ಗಮನಿಸುವ ನನ್ನೊಳಗೂ ಅಂತಹುದೇ ಅದಾವುದೋ ಅಪರಿಚಿತ ಭಾವ ಶಕ್ತಿ ಸಂಚಯಿಸುತ್ತಿತ್ತು. ಎಲ್ಲಿ ಎದುರಿನ ಸಿರಿ ಜೋರಾಗಿ ಒಮ್ಮೆ ಕಿರುಚಿದಳೋ ಡವಗುಡುವ ಎದೆಯನ್ನು ಅಂಗೈಯಲ್ಲಿ ಒತ್ತಿ ಹಿಡಿದು ನಿಂತ, ದಪ್ಪ ದಪ್ಪ ಕಾಲುಗಳ ಸಂದಿಯಲಿ ನೂರಿಕೊಳ್ಳುತ್ತ ಮತ್ತೊಬ್ಬ ‘ಸಿರಿ’ಯ ಕಡೆ ಓಡುತ್ತಿದ್ದೆ. ಅಲ್ಲಿ  ಒಬ್ಬೊಬ್ಬ ‘ಸಿರಿ’ಯ ಬಳಿಯೂ ಒಂದು ಕಥೆ ತೆರೆದುಕೊಂಡು  ಆ ಮಣ್ಣಿಗೆ ಬಿದ್ದು ಆವಿಯಾಗುತ್ತಿತ್ತು. ಹೆಣ್ಣು ತನ್ನ ಕಥೆಯನ್ನು ಒಳ ಚಿಪ್ಪಿನಿಂದ ಹರಿದು ತೆಗೆದು  ತಾನು  ಕಳಚಿಕೊಂಡಂತಹ ನಿರಾಳತೆಗೆ ಒಳಗಾಗುತ್ತಿದ್ದಳೇನೋ. ಮತ್ತೆ ನಾಳೆಗಳು ಅದೇ ಕಥೆಗಳ ಮುನ್ನುಡಿ ಬರೆಯಲಾರದೇ?. ಈ ಯೋಚನೆ ಆಗ ಬರುವುದು ಸಾಧ್ಯವೇ ಇರಲಿಲ್ಲ. ಅದು ಮಕ್ಕಳ ಮನಸ್ಸು. ಸ್ವಚ್ಛ ಖಾಲಿ ಕಾಗದ. ಏನು ಕಂಡೆನೋ ಅಷ್ಟೇ ಅಚ್ಚಾಗುತ್ತಿತ್ತು. ಹೊಸದನ್ನು ಕಾಣುವ ಸಂಭ್ರಮಕ್ಕೆ ಇಲ್ಲಿ ಹಸಿವು. ಬಲು ಆಸಕ್ತಿ, ಕುತೂಹಲ, ಅಚ್ಚರಿಯಿಂದ ಆ ಕಥೆಗಳನ್ನು ನನ್ನೊಳಗೆ ಬರಮಾಡಿಕೊಳ್ಳುತ್ತಿದ್ದೆ. ಎಲ್ಲವೂ ಕೆಳವರ್ಗದ, ಬಡವರ, ಹಳ್ಳಿಯಲ್ಲಿ ಗದ್ದೆ, ತೋಟಗಳಲ್ಲಿ ದುಡಿವ ಹೆಣ್ಣುಮಕ್ಕಳ, ಹೆಂಗಸರ ಹರಳುಗಟ್ಟಿದ ನೋವುಗಳು, ‘ಸಿರಿ’ರೂಪದಲ್ಲಿ ಕರಗುತ್ತಿತ್ತು. ಒಳಗಿರುವ ಭಗವಂತ ಅವರಿಗೆ ಮೂರ್ತ,ಅಮೂರ್ತ ಸಾಕ್ಷಿ. ಪ್ರತಿ ಹೆಣ್ಣು ಮನಸ್ಸೂ ಅಂತರಂಗದ ಭಾವ ಹೊರತೆಗೆದು ಆಟವಾಡಿದಂತೆ. ಆಕೆ ತನಗಾಗುತ್ತಿರುವ ಅನ್ಯಾಯಕ್ಕೆ ಹಾವಿನಂತೆ ಭುಸುಗುಡುತ್ತಾಳೆ, ಕಣ್ಣನ್ನು ಉರುಟುರುಟಾಗಿ ರಪರಪನೆ ತಿರುಗಿಸಿ ಎದುರಿನವರ ಬಲವನ್ನೇ ಉಡುಗಿಸುತ್ತಾಳೆ. ಆಕ್ರೋಶದಲ್ಲಿ ಒಮ್ಮೆಲೆ ಕಿಟಾರನೆ ಕಿರುಚುತ್ತಾಳೆ. ಒಳಕೋಪಕ್ಕೆ ಕೈಯಲ್ಲಿ ಹಿಡಿದ ಹಿಂಗಾರ ಪರಪರ ಹೊಡೆದುಕೊಳ್ಳುತ್ತಾಳೆ. ಪ್ರಶ್ನಿಸುತ್ತಾಳೆ. ಸಹಜ ಬದುಕಿನ ಪಾತ್ರಗಳು ಇಲ್ಲಿ ಅದಲು ಬದಲಾದಂತೆ. ಎಲ್ಲ ಬಗೆಯ ಭಾವಾಭಿವ್ಯಕ್ತಿಗೆ ಇಲ್ಲಿ ಮುಕ್ತ ವೇದಿಕೆ. ಮುಂದೆ ಹೋದರೆ ಸುಸ್ತಾಗಿ ಒರಗಿರುವ ‘ಸಿರಿ’ಯರು. ಅಕ್ಷತೆ ಚೆಲ್ಲಿದಂತೆ ಎಲ್ಲೆಡೆ ಬಿದ್ದಿರುವ ಹಿಂಗಾರದ ಹೂಗಳು. ದೇಗುಲದ ಪ್ರಾಂಗಣದೊಳಗೆ  ಬರಬೇಕು. ಅಲ್ಲಿ ಸುತ್ತ ಚಾವಡಿಯಲ್ಲಿ ಸಿಂಗಾರಗೊಂಡು ಬಿಳಿ ಝರಿ ಲಂಗ ಮಲ್ಲಿಗೆ ಹೂ ಮುಡಿದು ಅಲಂಕರಿಸಿ ಕೂತ ಹೆಣ್ಣು ಮಕ್ಕಳು. ಗರ್ಭಗುಡಿಗೆ ಒಂದು ಪ್ರದಕ್ಷಿಣೆಗೊಂಡು ಎದುರು ಬಂದರೆ ಸೇವಂತಿಗೆ, ಮಲ್ಲಿಗೆ, ಕೇಪುಳ ರಾಶಿ ರಾಶಿ ಹೂಗಳು, ಕುಂಕುಮ, ಊದುಬತ್ತಿ, ಅರಶಿನ ಗುಪ್ಪೆ ಗುಪ್ಪೆಯಾಗಿ  ಕೂತಿರುತ್ತಿದ್ದವು.  ಒಳಗಡೆ ಅಲಂಕಾರಗೊಂಡ ಊರ ದೇವರು ವೀರಭದ್ರ. ಉರಿಯುತ್ತಿರುವ ಹಣತೆಗಳು. ಅರೆಬರೆ ನಮಿಸಿ. ಮತ್ತೆ ಹೊರಗೆ ಓಟ. ಅಲ್ಲಿ ಸುತ್ತ ವಿವಿಧ ದೈವದೇವರುಗಳು. ವ್ಯಾಘ್ರಮುಖೀ ಚಾಮುಂಡಿ. ಇಲ್ಲಿ ನೋಡಬೇಕು ಥೇಟು ಹುಲಿಯ ಹಾವಭಾವ ತೋರುವ ಗಂಡು ಸಿರಿ. ಹುಲಿ ಆರ್ಭಟದಲ್ಲಿ ಆವೇಶಗೊಳ್ಳುವ ಗಂಡಸರು.  ಅಂದು ಕಾಣುತ್ತಿದ್ದುದೇ  ಸಿರಿ ಲೋಕ.  ಅದು ಬಾಲಕಿಯ ಮನಸ್ಸಿನ  ಪುಟ್ಟ ಕಣ್ಣೊಳಗೆ ಹಲವು ಪಾತ್ರ ರೂಪ,ಸ್ವರ, ಅಚ್ಚಾಗಿ ರಂಗ  ‘ಸಿರಿ’ ಪ್ರಪಂಚ ಬೀಡು ಬಿಟ್ಟಿತ್ತು. ************************************************************ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.

Read Post »

ಕಾವ್ಯಯಾನ

ಮಾರುವೇಷ

ಕವಿತೆ ಮಾರುವೇಷ ಪ್ರೊ.  ಚಂದ್ರಶೇಖರ ಹೆಗಡೆ ಪಾತಾಳದಿಂದೆದ್ದು ಭೋಂಕನೆಬೇಟೆಯಾಡುವ ವಿಧಿಯೇಶ್ವಾನದಲ್ಲಡಗಿ ಹೊಟ್ಟೆ ಹೊರೆವಹಂಗಿನರಮನೆಯ ವಾಸವೇಕೆ ?ವಾಹನದೊಳಗಿಳಿದು ಬಲಿ ಬೇಡುವಭಿಕ್ಷಾಟನೆಯ ಡಾಂಭಿಕತೆಯೇಕೆ ?ಹೃದಯದೊಳಪೊಕ್ಕು ನಿಲ್ಲಿಸುವಮೋಸದ ಮಾರುವೇಷವೇಕೆ ? ಹೊರಬಂದು ಎದುರಾಗಿಬಿಡು ಒಮ್ಮೆನಿಜರೂಪ ಸತ್ಯ ನಾಮವ ತಳೆದುಕಣ್ತುಂಬಿಕೊಳ್ಳಲಿ ಜಗವು ಮೊರೆದುಪ್ರಾರ್ಥಿಸಿದಣಿವಿಲ್ಲದ ಕಾಯಕಕೆ ಶರಣುಶರಣೆಂದೆನುತ!ಎದೆಯೊಳಗಿನ ದಯೆ ಕರುಣೆಗಳಹುಡುಕಿ ಕೊರಗುತ ಯಾರಿಗೂ ಜಗ್ಗದ ಭೀಮಬಲವೆಲ್ಲಿಯದು ?ವಶ ಮಾಡಿಕೊಳ್ಳುವ ಅವಲೋಕಿನಿಯೆಲ್ಲಿಯದು ?ಬಿಡುವ ಬಾಣದ ತುದಿಗೆಎಂದೂ ನೀಗದ ಹಸಿವಿನೊಡಲುಎಲ್ಲಿ ಬರಿದಾಗುವುದೋ ಇಂದುಯಾವ ತಾಯಿಯ ಮಡಿಲು ಪಯಣ ಹೊರಟವರ ಮನದಲ್ಲೊಂದುನಿತ್ಯ ಅಳುಕುಯಾರಿಗೆ ಗೊತ್ತು ನಿನ್ನೊಳಗಿನವಂಚನೆಯ ಹುಳುಕುಕಾಣದ ಲೋಕದೊಳಗೇಕೆ ಬಯಲಾಟತೊರೆದುಬಿಡಬಾರದೇ ಹೇಗಾದರೂಕೊಂಡೊಯ್ಯುವೆನೆಂಬ ಹಠ ಜೀವನ ಪ್ರೀತಿಯೊಂದಿಗೆ ನಿನ್ನದೆಂದಿಗೂ ವ್ಯರ್ಥ ಕದನಅಸುರರೆಂಬುವರಿಲ್ಲ; ಕಾಣುವುದೆಲ್ಲೆಡೆಗೆನಿನ್ನದೇ ಅಟ್ಟಹಾಸದ ವದನಲೋಕವೆಲ್ಲವೂ ವಿರೋಧಿ ಬಣಹೀಗಳೆಯಬಾರದೆಂದರೂ ನಿನ್ನಬಿಡದು ಹೆಣೆದ ಚಕ್ರವ್ಯೂಹದ ದರ್ಶನ ************************

ಮಾರುವೇಷ Read Post »

ಕಾವ್ಯಯಾನ

ಶಾಯರಿ

ಶಾಯರಿ ಭಾರತಿ ರವೀಂದ್ರ ಕಾಡಿಗೆ ಕಣ್ಣುಗಳನ್ನಮುದ್ದಿಸಲಿ ಹ್ಯಾಗೆ ಹೇಳು, ನನ್ನೊಡತಿಕರಿ ಮೋಡ ಕೋಪಿಸಿಕೊಂಡುಸುರದಾವ ಪ್ರವಾಹ ಬಂದಾಂಗ. ಬಂದರ ಬರಲೇಳುಸಾವಿರ ಸಂಕಟಗಳಸುರಿ ಮಳಿನಿನ್ನ ಪಿರೂತಿ ಸಾಥ್ಇರುವಾಗ ನಂಗ್ಯಾಕೆ ಭೀತಿ ******************************************

ಶಾಯರಿ Read Post »

ವಾರದ ಕತೆ

ಸ್ನೇಹ

ವಾರದ ಕಥೆ ಸ್ನೇಹ ಜ್ಯೋತಿ ಡಿ ಭೊಮ್ಮಾ ಮದುವೆಯಾಗಿ ಮುವತೈದು ವಸಂತಗಳನ್ನು ಜೊತೆಯಲ್ಲಿ ಕಳೆದ ನಿರ್ಮಲಾ ಮತ್ತು ಮೂರ್ತಿ ದಂಪತಿಗಳಿಗೆ ಈಗ ಬದುಕಿನ ಎಲ್ಲಾ ಜವಾಬ್ದಾರಿ ಮುಗಿಸಿ ನಿರಮ್ಮಳವಾಗಿ ಬದುಕು ಸಾಗಿಸುವ ಸಮಯ.ಮಗನ ಮತ್ತು ಮಗಳ ಮದುವೆ ಮಾಡಿ ಅವರನ್ನು ಒಂದು ದಡಕ್ಕೆಸೇರಿಸಬೇಕಾದರೆ ಜೀವನದ ಸಮಯವೆಲ್ಲ ಮುಡುಪಾಗಿಡಬೇಕಾಯಿತು. ಈಗ ನಿವೃತ್ತಿ ಜೀವನ ನಡೆಸುತ್ತಿರುವ ಅವರಿಗೆ ಎಲ್ಲವೂ ಒಮ್ಮೆಲೆ ಖಾಲಿಯಾದ ಅನುಭವ,ಯಾವದರಲ್ಲೂ ಉತ್ಸಾಹವಿಲ್ಲ.ಇಷ್ಟು ದಿನ ನೌಕರಿ ಹಣಗಳಿಕೆ ಪ್ರತಿಷ್ಠೆ ಮಕ್ಕಳ ವಿದ್ಯಾಭ್ಯಾಸ ಮದುವೆಗಳ ಜವಾಬ್ದಾರಿಗಳೆಲ್ಲ ಒಂದೋಂದಾಗಿ ಮುಗಿಯುತ್ತಿದ್ದಂತೆ ಜೀವನದಲ್ಲಿ ನಿರಾಶೆ ಕಾಡತೊಡಗಿತು.ಸಮಕಾಲಿನ ಗೆಳೆಯರಿದ್ದರು ಎಲ್ಲರೂ ಸಮಯ ಮತ್ತು ವಯಸ್ಸಿನ ಹೊಡೆತಕ್ಕೆ ಸಿಲುಕಿದವರೆ ಹೆಚ್ಚು ಕಡಿಮೆ ಎಲ್ಲರ ಪರಿಸ್ಥಿತಿಯು ಇದೆ. ಆದರೆ ನಿರ್ಮಲಾರ ವಿಷಯ ಹಾಗಲ್ಲ ಅವಳು ಯಾವಾಗಲೂ ಚೈತನ್ಯದ ಚಿಲುಮೆಯೆ.ಮಕ್ಕಳು ದೂರ ಇದ್ದರೂ ಕೊರಗದೆ ತನಗಾಗೆ ದೊರೆತ ಸಮಯವನ್ನು ಆನಂದದಿಂದ ಕಳೆಯುವರು.ಇಬ್ಬರೆ ಇರುವ ಮನೆಯಲ್ಲೂ ಕೆಲಸಗಳಿಗೆನು ಕೊರತೆಯೆ ,ಕಸ ಮುಸುರೆ ಪೂಜೆ ಹಬ್ಬಗಳು ವ್ರತ ,ಕಾಲೋನಿಯ ಗೆಳತಿಯರೊಂದಿಗೆ ಕಿಇಟಿ ಪಾರ್ಟಿ ಗಳಲ್ಲೆ ಕಾಲದ ಪರಿವಿಲ್ಲದೆ ಬದುಕುವವರು.ಅವರದು ಉತ್ಸಾಹ ಭರಿತ ಜೀವನ.ಚೈತನ್ಯದ ಇನ್ನೊಂದು ಹೆಸರೆ ಹೆಣ್ಣಲ್ಲವೆ.ಇತ್ತೀಚೆಗೆ ಪತಿ ಮಂಕಾಗುತ್ತಿರುವದನ್ನ ಗಮನಿಸಿದ ನಿರ್ಮಲಾ ,ಅವರನ್ನೂ ಚೇತೋಹಾರಿಯನ್ನಾಗಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಲೆ ಇದ್ದರು .ಯೌವನದಲ್ಲಿ ಅವರ ರಸಿಕತೆಯ ಅನುಭವವಿದ್ದ ನಿರ್ಮಲಾಗೆ ಪತಿ ಈಗ ಮಂಕಾಗಿರುವದು ಸಹಿಸಲಾಗುತ್ತಿಲ್ಲ. ಒಂದು ದಿನ ಬೆಳಗಿನ ವಾಯುವಿಹಾರ ಮುಗಿಸಿ ಮನೆಗೆ ಬಂದ ದಂಪತಿಗಳಿಗೆ ಮೂರ್ತಿಯ ಮೊಬೈಲ್ ಕರೆ ಬರಮಾಡಿಕೊಂಡಿತು.ಒಳಗಿನ ಫೋನ್ ತಂದು ಪತಿಗೆ ಕೊಟ್ಟ ನಿರ್ಮಾಲರು ಒಳಗಿನ ಉಳಿದ ಕೆಲಸಗಳ ಕಡೆ ಗಮನ ಹರಿಸಿದರು.ಮೊಬೈಲ್ ಮೇಲಿನ ಅನ್ ನೋನ್ ನಂಬರ್ ನೋಡಿ ಹಲೋ ಎಂದ ಮೂರ್ತಿಯವರಿಗೆ ಆ ಕಡೆಯಿಂದ ಹಲೋ ಎಂಬ ಹೆಣ್ಣಿನ ದನಿ ಕೇಳಿಸಿತು. ಗುರುತು ಸಿಗದೆ ಯಾರು..! ಎಂಬ ದನಿಗೆ ಆ ಕಡೆಯಿಂದ ಮೌನವೆ ಉತ್ತರವಾಯಿತು.ಕೇಳಿಸಲಿಕ್ಕಿಲ್ಲ ಎಂದು ಮೂರ್ತಿ ಯವರು ಯಾರು ಎಂದು ಜೋರಾಗಿ ಕೇಳಿದರು. ನಾನು ರೇವತಿ.  ಯಾರು ಎಂಬುದು ನೆನಪಿಗೆ ಬಾರದೆ ಮೂರ್ತಿ ಕ್ಷಣಕಾಲ ಮೌನವಾದರು.ಮತ್ತೆ ಅತ್ತಲಿಂದ ದ್ವನಿ ,ನೆನಪಾಗಲಿಲ್ಲವೆ..ಇಲ್ವಲ್ಲ , ಆ ಹೆಸರಿನವರಾರು ನೆನಪಿಗೆ ಬರುತ್ತಿಲ್ಲ ಎಂಬ ಮೂರ್ತಿ ಯ ಉತ್ತರಕ್ಕೆ ಅತ್ತಲಿಂದ ನಿಟ್ಟುಸಿರೆ ದ್ವನಿಯಾಯುತು.ಸ್ನೇಹ ಚಿರಾಯು ಅಲ್ವೆ ,ಮರೆಯುವದುಂಟೆ ಎಂಬ ದ್ವನಿಯಲ್ಲಿನ ಆರ್ದ್ರತೆ ಗುರುತಿಸಿದ ಮೂರ್ತಿಯವರು ಆಶ್ಚರ್ಯ ಸಂತೋಷದಿಂದ  ರೇವತಿನಾ ..ಎಂಬ ಉದ್ಗಾರ ತೆಗೆದರು. ತಮ್ಮ ಕಾಲೇಜಿನ ದಿನಗಳ ಸಹಪಾಠಿ.ಇಬ್ಬರು ಒಂದೇ ಕಾಲೇಜಿನಲ್ಲಿ ಓದಿದವರು , ಆಕರ್ಷಣೆ ಯು ಪ್ರೇಮವೆಂದೆ ನಂಬುವ ವಯಸ್ಸದು.ಇಬ್ಬರ ಮದ್ಯ ಒಂದು ಆತ್ಮೀಯ ಬಾಂದ್ಯವ್ಯ ಬೆಸೆದಿರುವದು ಇಬ್ಬರು ಅರಿತಿದ್ದರು.ತಮ್ಮ ತಮ್ಮ ಮನೆಯ ಕಟ್ಟುಪಾಡುಗಳ ಅರಿವಿದ್ದ ಇಬ್ಬರೂ ಯಾವದೇ ರೀತಿಯಲ್ಲಿ ಮುಂದುವರೆಯುವ ಧೈರ್ಯ ಮಾಡದೆ ಒಂದು ಮಧುರ ಸ್ನೇಹ ಬಾಂದವ್ಯ ಮುಂದುವರೆಸಿಕೊಂಡು ಹೋಗಿದ್ದರು.ಮನಸ್ಸುಗಳು ಒಂದಾಗಿದ್ದರು ಕುಟುಂಬದ ತೀರ್ಮಾನ ಮೀರುವ ಧೈರ್ಯ ಇಬ್ಬರಿಗೂ ಇರಲಿಲ್ಲ. ಕಾಲೇಜಿನ ದಿನಗಳು ಮುಗಿದು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಕೆಲಸ  ಹುಡುಕಿಕೊಂಡು ಮನೆಯವರು ನಿರ್ದರಿಸಿದವರೊಡನೆ ಮದುವೆಯಾಗಿ ತಮ್ಮ ತಮ್ಮ ಜವಾಬ್ದಾರಿಗಳಿಗೆ ಹೆಗಲು ಕೊಟ್ಟರು.ಜೀವನದ ಜಂಜಡಗಳಲ್ಲಿ ಹಿಂದಿನ ಮಧುರ ಸ್ನೇಹದ ನೆನಪು ಕ್ರಮೇಣವಾಗಿ ಮಾಸಿತ್ತು. ಇಷ್ಟು ವರ್ಷಗಳ ನಂತರ ಹೀಗೆ ಹಠಾತ್ ಅಗಿ ರೇವತಿಯ ಕರೆ ಮೂರ್ತಿಯವರಲ್ಲಿ ಒಂದು ಪುಳುಕ ಮೂಡಿಸದೆ ಇರಲಿಲ್ಲ.ಇಬ್ಬರು ಮಾತಾಡಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಭೆಟಿಯಾಗುವ ತಿರ್ಮಾನದಿಂದ ಪೋನ್ ಡಿಸ್ ಕನೆಕ್ಟ್ ಮಾಡಿದ್ದರು. ಪತಿಗಾಗಿ ಕಾಫಿ ತಂದ ನಿರ್ಮಲಾ ಗಂಡನ ನಗುಮೊಗ ನೋಡಿ ಯಾರೆಂದು ಕೇಳಲು ,ಮೂರ್ತ ಯವರು ತಮ್ಮ ಸಹಪಾಠಿ ರೇವತಿ ಮತ್ತು ಅವಳ ಪ್ರತಿ ಆವಾಗ ತಮಗಿದ್ದ ಆಕರ್ಷಣೆ ಮತ್ತು ಎ‌ರಡು ಕುಟುಂಬಗಳ ಸಂಪದ್ರಾಯಗಳ ಬಗ್ಗೆ ಬಹಳ ಹೊತ್ತು ಮಾತಾಡಿದರು.ತಾವು ಭೆಟಿಯಾಗುವ ವಿಷಯವು ತಿಳಿಸದೆ ಇರಲಿಲ್ಲ. ಜಡತ್ವ ಕಳೆದು ಪತಿಯಲ್ಲಿ ಮೂಡಿದ ಉತ್ಸಾಹ ಕಂಡು ಬೆರಗಾದ ನಿರ್ಮಲಾ ಪತಿಯ  ಸಂತೋಷದಲ್ಲಿ ತಾವು ಭಾಗಿಯಾಗುತ್ತ ಕೀಟಲೆ ಮಾಡದೆ ಇರಲಿಲ್ಲ.ಪತಿಯನ್ನು  ಎಂದೂ  ಅನುಮಾನದ ದೃಷ್ಟಿಯಿಂದ ನೋಡಿದ್ದೆ ಇಲ್ಲ.ಪ್ರೀತಿಯ ಭದ್ರ ಬುನಾದಿಯೆ ನಂಬಿಕೆಯಲ್ಲವೆ..ಆ ನಂಬಿಕೆಯೆ ಅವರಿಬ್ಬರ ಅನ್ಯೋನ್ಯತೆ ಗೆ ಕಾರಣ. ಮನೆಯಿಂದ ಸ್ವಲ್ಪ ದೂರವಿರುವ ಒಂದು ರೆಸ್ಟೋರೆಂಟ್ ನಲ್ಲಿ ಕಾಯುತ್ತ ಕುಳಿತರು ಮೂರ್ತಿ ಯವರು.ದೂರದಲ್ಲಿ ಒಂದು ಸ್ತ್ರೀ ಆಕ್ರತಿ ನಿಧಾನವಾಗಿ ಬರುತ್ತಿರುವದು ಕಾಣಿಸಿತು. ಅವಳು ಅದೆ ರೆಸ್ಟೋರೆಂಟ್ ಗೆ ಬಂದು ಆ ಕಡೆ ಈ ಕಡೆ ನೋಡುವ ನೋಟದಿಂದ ಅವಳೆ ರೇವತಿ ಎಂದರಿತ ಮೂರ್ತಿ ಅವಳನ್ನು ಸಮೀಪಿಸಿದರು. ಎನು! ಇಷ್ಟು ದಪ್ಪ ಆಗಿದ್ದಿಯಾ.ಗುರುತೆ ಸಿಗಲಿಲ್ಲ ಎಂದರು ,ಮುಖದ ತುಂಬಾ ನಗು ತುಂಬಿಕೊಂಡು. ನೀನೆನು ಕಡಿಮೆಯೆ..ಮೂರು ಸುತ್ತು ದಪ್ಪಗಾಗಿದ್ದಿಯಾ..ಆಗದೆ ಎನು ಬಿಸಿ ಬಿಸಿ ಮಾಡಿ ಹಾಕುವ ಹೆಂಡತಿ ಇರುವಾಗ ,ಎಂಬ ಮಾತಿಗೆ ಇಬ್ಬರೂ ಮನದುಂಬಿ ನಕ್ಕರು. ಇಷ್ಟು ವರ್ಷಗಳ ನಂತರ ಅದೇಗೆ ನೆನಪು ಬಂತು ಎಂಬ ಮೂರ್ತಿ ಯ ಮಾತಿಗೆ ,ಮನಸ್ಸು ಮುದಗೊಳಿಸುವ ನೆನಪುಗಳು ಬೆಚ್ಚಗೆ ಎದೆಯಲ್ಲಿ  ಕಾಪಿಟ್ಟುಕೊಂಡರೆ ಮಾತ್ರ ಜೀವನ ಹಗುರ.  ಎಂದಳು ರೇವತಿ. ನಂತರದ ಮಾತುಕತೆಯಲ್ಲ ಅವಳ ಗಂಡ ಮಕ್ಕಳು ಮನೆ  ಎಡೆಗೆ ಹೊರಟಿತು.ಮಕ್ಕಳು ದೊಡ್ಡವರಾಗಿ ಬೇರೆ ದೇಶಗಳಲ್ಲಿ ತಮ್ಮ ನೆಲೆ ಕಂಡುಕೊಂಡ ಮೇಲೆ ತಂದೆ ತಾಯಿಗಳಿಗೆ ಒಂಟಿತನವಲ್ಲದೆ ಮತ್ತೆನು ಕಾಡಲು ಸಾದ್ಯ..ಜೀವನದ ಜಂಜಡಗಳೆಲ್ಲ ಮುಗಿದು ಮೂರ್ತಿ ಯವರು ಅನುಭವಿಸಿದ ಶೂನ್ಯವನ್ನೆ ರೇವತಿಯು ಅನುಭವಿಸಿರುವಳು.ಮೊದಲಿನಿಂದಲೂ ಯಾರೋಂದಿಗೂ ಬೆರೆಯದ ಎಕಾಂತ ಪ್ರೀಯಳವಳು. ಪತಿ ತನ್ನ ಸ್ನೇಹಿತರ ವಲಯದಲ್ಲಿ ಪಾರ್ಟಿ ಟೂರ್ ಗಳಲ್ಲಿ ನಿವ್ರತ್ತಿ ಜೀವನ ಎಂಜಾಯ್ ಮಾಡುವವರು. ಹೀಗಾಗಿ ರೇವತಿ ತನ್ನ ವಲಯದಲ್ಲಿ ಎಕಾಂಗಿಯಾಗಿದ್ದಳು. ಪ್ರತಿಯೊಬ್ಬ ವ್ಯಕ್ತಿಯೂ ಬದುಕಿನ ಜವಾಬ್ದಾರಿಗಳು ಯಾವಾಗ ಮುಗಿಯುವವೊ ಎಂದು ಹಂಬಲಿಸುವನು.ಮುಗಿದ ಮೇಲೆ ಮತ್ತದೆ ಶೂನ್ಯ. ನಮ್ಮ ಅವಶ್ಯಕತೆ ಯಾರಿಗೂ ಇಲ್ಲ ಎಂಬ ಕೊರಗು.ಇಳಿವಯಸ್ಸಿನಲ್ಲಿ ಗಂಡ ಹೆಂಡತಿಗೆ ಹೆಂಡತಿ ಗಂಡನಿಗೆ  ಅನಿವಾರ್ಯ. ಯಾರೆ ಒಬ್ಬರು ಮುಂದಾದರೂ ಮತ್ತದದೇ ಒಂಟಿತನ.ಮತ್ತು ಮಕ್ಕಳು ಸೊಸೆಯಂದಿರೊಡನೆ ಹೊಂದಾಣಿಕೆ ಬದುಕು.ಜೀವನ ಇಷ್ಟೆ. ಪ್ರತಿಯೊಬ್ಬರೂ ಜೀವನದ ಒಂದಿಲ್ಲೊಂದು ಕಾಲಘಟ್ಟದಲ್ಲಿ ಒಂಟಿತನ ಅನುಭವಿಸುವವರೆ.ಕಳೆದ ಸವಿ ನೆನಪುಗಳು ಮಾತ್ರ ಎಂದುಗೂ ಅಮರ. ಮೂರ್ತಿ ತಮಗರಿವಿಲ್ಲದೆ ಹಿತವಾಗಿ ರೇವತಿಯ ಕೈ ಅದುಮಿದರು.ಸ್ನೇಹದ ಅಭಯ ಹಸ್ತ ಚಾಚುತ್ತ ,ಸವೆಸಬೇಕಾದ ದಾರಿ ಎಲ್ಲಿವರೆಗಿದೆಯೋ ಯಾರಿಗೆ ಗೊತ್ತು.ಬದುಕು ಇರುವವರೆಗೂ ಜಡವಾಗಿ ಬದುಕದೆ ಉತ್ಸಾಹ ಭರಿತವಾಗಿ ಬದುಕೋಣ ಎಂದರು.ಮಂಕು ಸರಿದು ರೇವತಿಯ ಕಣ್ಣಲ್ಲೂ ಹೊಸ ಮಿಂಚು ಮೂಡಿತು.ಮರೆಯಾದ ಸ್ನೇಹ ಮತ್ತೆ ದೊರಕಿದ್ದಕ್ಕೆ ಮನ ಹಗುರವಾಯಿತು.ತನ್ನ ಭಾವನೆಯೊಂದಿಗೆ ಬೆಸೆದಿರುವ ಒಂದು ಜೀವವೂ ತನ್ನಂತೆ ನಿಷ್ಕಲ್ಮಷ ಸ್ನೇಹ ಬಯಸುತ್ತದೆ ಎಂದು ತಿಳಿದು ಮನ ಹಗುರಾಯಿತು. ಅವರು ಎಷ್ಟೋ ಹೊತ್ತು ತಮ್ಮ ಸಂಸಾರದ ಮಾರಾಡಿದರು.ಮೂವತೈದು ವರ್ಷ ಹಿಂದೆ ಹೋಗಿ ಮತ್ತೊಮ್ಮೆ ಕಾಲೇಜಿನ ಸಹಪಾಠಿಗಳಾದರು.ಅಷ್ಟರಲ್ಲಿ ರೇವತಿಯ ಮೊಬೈಲ್ ರಿಂಗಾಯಿತು.ಸ್ಕ್ರೀನ್ ಮೇಲಿನ ಪತಿಯ ಹೆಸರು ನೋಡಿ ಮುಗುಳು ನಗುತ್ತ ,ಇವತ್ತು ನನಗೆ ಬರುವದು ಹೊತ್ತಾಗುತ್ತೆ ,ನೀವು ಊಟ ಮಾಡಿಬಿಡಿ.ಕಾಲೇಜಿನ ಗೆಳೆಯರೊಬ್ಬರು ಸಿಕ್ಕಿದ್ದಾರೆ ಬಹಳ ಮಾಡುವದಿದೆ ಎಂದಳು ನಗುತ್ತ.ಆ ಕಡೆಯಿಂದ ಮಾತುಗಳು ಮುಗಿದ ಮೇಲಾದರೂ ನನ್ನ ನೆನಪಿಸಿಕೋ ನಿನಗಾಗೆ ಕಾಯುತ್ತಿರುವ ಅನಾಥ ಒಬ್ಬನಿದ್ದಾನೆಂದು ಎಂದರು ನಗು ಬೆರೆತ ದನಿಯಲ್ಲಿ. ಸ್ನೇಹದ ಕಡಲು ಮತ್ತೆ ಹರಿಯಿತು.ಜಡತ್ವದ ಬದುಕಲ್ಲಿ ಉತ್ಸಾಹ ಮೂಡಿತು. *********************************************

ಸ್ನೇಹ Read Post »

You cannot copy content of this page

Scroll to Top