ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು

ಗೃಹಬಂಧ

ರೇಶ್ಮಾ ಗುಳೇದಗುಡ್ಡಾಕರ್

Locked Door Stock Photo, Picture And Royalty Free Image. Image 963082.

ಕರೋನಾ ಎಂಬ ಅಂತಕದ ಅಲೆ ಹೊತ್ತು ಬಂದ ವರ್ಷ ಇಗ ಕಳೆಯುವ ದಿನದಲ್ಲಿ ನಾವು ಇದ್ದೇವೆ .ಹೊಸ ವರ್ಷದ ಬಳಿ ಸಾಗುತ್ತಾ ಇದ್ದೇವೆ . ಆಪಾರ ಭರವಸೆಗಳೊಂದಿಗೆ

ಇಡೀ ಭೂಮಂಡಲವನ್ನೆ ತಲ್ಲಣಿಸಿದ ವರ್ಷವಿದು .ನಾವು ಕಂಡು ಕೇಳಿರದ ಸಂಗತಿಗಳು ನಮಗೆ ಎದುರಾದವು .ಸಂಕ್ರಾಮಿಕ ರೋಗದ ಅಬ್ಬರ ಓದಿದ್ದೆವು .ಅದರಲ್ಲೂ ಬಂಕಿಮ ಚಂದ್ರ ಚಟರ್ಜಿ ಅವರ ಆನಂದ ಮಠ ಓದಿದಾಗ ಸಂಕ್ರಾಮಿಕ ರೋಗದ ಕ್ರೂರ ,ಭೀಕರ , ಓದುಗರಿಗೆ ದರ್ಶನ ನೀಡುತ್ತದೆ ಮನಕಲಕುವಂತೆ ಎಳೆ ಎಳೆಯಾಗಿ ಬದುಕಿನ ಮಜಲುಗಳನ್ನು ವಿಸ್ತಾರಿಸುತ್ತದೆ .ಆನಂದ ಮಠ ಪುಸ್ತಕ ದಲ್ಲಿರುವಂತೆ ಯೇ .ನಾವು  ದಿನಗಳು ಅನುಭವಿಸಿದೆವು ಅದನ್ನು ಅನುಭವಿಸುತ್ತಲೇ ಆನಂದಮಠ ಓದಿದೆ .ಅದು ಬೇರೆ ವಿಚಾರ .

    ಈ ಗೃಹಬಂಧ ಎಂಬ ‌ವಿಶೇಷ ಶಬ್ದದ ಅರಿವು – ಆಳ‌.ಅದರ ಸೌಂದರ್ಯ ಎಲ್ಲವು ಸ್ತೂಲವಾಗಿ ಪರಿಚಯವಾದವು”  ಸ್ವತಂತ್ರ್ಯ ” ಎಂಬ ಪದ ಬಹಳ ಕಾಡಿತು .

  ಇದು ಎಲ್ಲರಿಗು ಒಂದೇ ವಿಧವಾದ ಅನುಭವ ನೀಡಿಲ್ಲ ಈ ವರ್ಷ .ವಿಧ ವಿಧವಾದ ಅನುಭವದ ಬುತ್ತಿ ಎಲ್ಲರ ಬಳಿಯು ಇದೆ .

ಕೊಡಿ ಬಾಳುವ ಹಂಚಿತಿನ್ನುವ , ಕ್ಷಣ  ಕೆಲವರಿಗಾದರೆ ,ಹಸಿವಿನಿಂದ ಒದ್ದಾಡಿದ  ದಿನಗಳು ಹಲವರಿಗೆ , ಅರಾಮ್ ಅಗಿ ಮನೆಯಲ್ಲೆ ಕುಳಿತು ಕೆಲಸ ಮಾಡಿ ಪಗಾರ ಎಣಿಸಿದರೆ , ಇದ್ದ ಪುಟ್ಟ ಕೆಲಸವೂ ಕಳೆದುಕೊಂಡು ಲಕ್ಷಗಟ್ಟಲೇ ಕಾರ್ಮಿಕರು ತಮ್ಮ ಸ್ವಗ್ರಾಮಕ್ಕೆ ಮರಳಿದರು ಸಗರೂಪಾದಿಯಲ್ಲಿ ….

  ತಮ್ಮ ಹಸು ಮಕ್ಕಳ ಕಟ್ಟಕೊಂಡು ..

       ಇನ್ನು ವಿದ್ಯಾರ್ಥಿಗಳು  ಮುಗಿಯಲಾರದ ರಜೆ ಸಿಕ್ಕರು ಆಡಲು ಅಂಗಳ ಇಲ್ಲ !

ಮುಚ್ಚಿದ ರಸ್ತೆ ಬದಿಯ ಅಂಗಡಿಗಳು ,ಹಲವರ ಬಾಯಿ ಕೆಟ್ಟಿತು ..!  ಹೀಗೆ ಅನೇಕ ಸಂಗತಿಗಳು ಎದುರಾದವು ಜೊತೆಗೆ .

 ಈ ವರ್ಷ ಮತ್ತೊಂದು ಸಂತಸದ ಸುದ್ದಿ ಹಬ್ಬಿಸಿತು ಸರಕಾರಿ ಶಾಲೆಗಳತ್ತ  ಪೋಷಕರು ಮುಖಮಾಡಿದರು ! ಎಂಬುದು .

ಆದರೆ ಇನ್ನು ಶಿಕ್ಷಣ ಯಕ್ಷ ಪ್ರಶ್ನೆ ಯಾಗಿ ಉಳಿದಿದೆ…..

      ಈ ಕರೋನ ಕಲಿಸಿದ ಪಾಠ ಹಲವು ಭೋದಿಸಿದ ತತ್ವ ಹಲವು  .ಬದುಕಿಗೆ ಪ್ರೀತಿ ಬೇಕೇ ಹೊರತು ಹಣ ,ಅಧಿಕಾರ ಅಲ್ಲ ಎಂಬ ಸ್ಪಷ್ಟ ನೀತಿ ತುಸು  ಹೆಚ್ಚಾಗಿಯೇ ತಿಳಿಸಿದೆ .

ಮುಂದಿನ ದಿನಗಳು ಕರೋನಾ ಮತ್ರ ಅಲ್ಲ ನಮ್ಮೊಳಗಿನ

ಅಪಾರವಾದ ಈರ್ಷೆಯ ಪರ್ವತ ವು ಮರೆಯಾಗಿ ಹೋಗಲಿ ಎಂಬ ಬಹುದೊಡ್ಡ  ಭರವಸೆ ಇದೆ !  ಈ ನವ ವರ್ಷದಲ್ಲಿ .

ಮರೆತ ಕೆಲಸ ಮಾಡುವಂತೆ , ಕನಸುಗಳು ಸಾಕಾರಗಳ್ಳುವಂತೆ ಜಡವಾದ ಮನಕ್ಕೆ ನವ ಚೈತನ್ಯವ ನೀಡಲಿ  ಎಂದು ಮುಂಬರುವ ವರ್ಷವನ್ನು  ನಾವು ಸ್ವಾಗತಿಸ ಬೇಕಿದೆ ಸರಳವಾಗಿ .

***************************************

About The Author

1 thought on “ಗೃಹಬಂಧ”

  1. ನಿಮ್ಮ ಮಾತು ಸತ್ಯ.. ಕೊರೋನಾ ಕಲಿಸಿದ ಪಾಠ ಮರೆತರೂ ಮರೆಯಲಾಗದು.
    ನೂತನ ವರುಷದಾರಂಭ ಹೊಸ ಭರವಸೆಗಳೊಂದಿಗೆ ಶುರುವಾಗಲಿ☺️

Leave a Reply

You cannot copy content of this page

Scroll to Top