ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಸಿದ್ದರಾಮ ಹೊನ್ಕಲ್

I love you - made of flowers, petals and leaves.  royalty free stock image

ನಿನ್ನ ನೋಟ ಬಲು ಹಿತ ನೀಡಿದೆ ನೀ ಕಾಡಿಸುತ್ತ ಕೂಡಬೇಡ
ದಿನಗಳು ದೀರ್ಘವಾಗಿಹವು ಆ ಮಾತನೇ ನೀ ಮುತ್ತಾಗಿಸಬೇಡ

ನನ್ನ ಕಣ್ಣ ರೆಪ್ಪೆಗಳು ಕಣ್ಢೀರ ಬಿಸಿಗೆ ಕಣ್ಣೀರು ಮಿಡಿದಿವೆ
ಕಲ್ಲು ಹೃದಯವಲ್ಲ ನಿನ್ನದು ಇಷ್ಟು ಕಠೋರ ನಟನೆಬೇಡ

ಬೀಸುವ ತಂಗಾಳಿ ಸೂರ್ಯಚಂದ್ರರ ಸಹಜತೆ ಬೇಡವೆ
ಜಗಕೆ ಬಂದವರಿಗೆಲ್ಲ ಒಂದೊಂದು ಬವಣೆ ನೀ ಚಿಂತಿಸಬೇಡ

ನಾನೊಂದು ತೀರ ನೀನೊಂದು ತೀರವೆಂದು ನೊಂದೆಯಲ್ಲಾ
ಮಧ್ಯೆ ಹರಿವ ಪ್ರೇಮದ ಹರಿವು ತಿಳಿಯದೇ ನೀ ಇರಬೇಡ

ಇಂದಲ್ಲಾ ನಾಳೆ ವಜ್ರಲೇಪಿತ ಕುಸುಮ ಸುಖದಿ ಅರಳಿತು
ಕಳವಳಿಸದಿರು ಏಲೇ ಮನವೇ ಹತಾಶದಿ ನೀ ಸೋಲಬೇಡ

ಮಧುರ ಪ್ರೇಮವಿಲ್ಲದೇ ಈ ಜೀವಕೆ ಜೀವನ ಬೇಕೆ ಸಾಕಿ
ಹೊನ್ನು’ಲಕ್ಷ ಭಾವತುಂಬಿ ಪ್ರೀತಿ ದಕ್ಕದ ಫಕೀರ ಆಗಿಸಬೇಡ

**********************************

About The Author

2 thoughts on “ಗಜಲ್”

  1. ಪ್ರೀತಿ ದಕ್ಕಿದ ಫಕೀರ ಆಗಿಸಬೇಡ !
    ಭಾವ ಪೂರ್ಣ ಸಾಲುಗಳು

Leave a Reply

You cannot copy content of this page

Scroll to Top