ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಗೆಜ್ಜೆನಾದ

ಅಕ್ಷತಾ ಜಗದೀಶ್

Fresh rain drops on green leaves. Closeup photo of fresh rain drops on green leaves after summer rain royalty free stock photography

ಸಾವಿರ ಸಾಲಿನ ಪದಗಳಲಿ
ಅಡಗಿ ಕುಳಿತವಳು….
ಯಾರಿಗೂ ಕಾಣದಂತೆ
ನಾ ಬರೆವ ಕವನಗಳಲಿ ಮೂಡುತಿರುವಳು……..

ಕವನದ ಸಾಲುಗಳು
ಅವಳ ಗೆಜ್ಜೆಯನಾದದ
ಹೆಜ್ಜೆಯ ಗುರುತುಗಳು..
ಹಾಡಿನ ಪಲ್ಲವಿಯೂ
ಅವಳು ಬಿರುವ ಕಿರುನಗೆಯೂ….
ಆಕೆಯ‌ ಸಿಹಿ ಮುತ್ತುಗಳೇ..
ಮಳೆಯ‌ ಆ ತುಂತುರು ‌ಹನಿಗಳು..

ಬಾನಲ್ಲಿ ಬಂದು‌ ಹೋಗುವ
ಕಾಮನಬಿಲ್ಲಿನಂತೆ ನೀನು..
ಬಣ್ಞಬಣ್ಣದ ನೆನಪು ಬಿತ್ತಿ ಹೋದೆಯೇನು….?

ನನ್ನ ಹಾಡಿನ‌ ಅಂತರಾಳ ಅವಳು
ನನ್ನ ಬಾಳಿನ ಒಡತಿ ಇವಳು..
ಹಾಡಿಗೆ ಸ್ಪೂರ್ತಿಯಾಗಿ….
ಪದಗಳಿಗೆ ಭಾವವಾಗಿ…
ನನ್ನೊಡನೆ ಸೇರು‌ ಮೆಲ್ಲಗೆ..

*********************************

About The Author

1 thought on “”

Leave a Reply

You cannot copy content of this page

Scroll to Top