ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಸ್ವೀಕರಿಸುವೆಯಾ?

ಚಂದ್ರು ಪಿ ಹಾಸನ್

macro shot photography of red and white heart ornament

ಇಂದ್ರನ ಬನದಲ್ಲಿ ಅರಳಿದ
ಓ ಅಂದದ ಚೆಂದದ ಹೂವೆ
ಚಂದ್ರನ ಬರುವಿಕೆಗೆ ಕಾದಿರುವೆಯಾ?

ಚಿಟ್ಟೆಗಳು ಒಟ್ಟೊಟ್ಟಾಗಿ ಒಮ್ಮೆಲೆ
ಹಿಗ್ಗುತಲಿ ನುಗ್ಗುತಿರಲಿ ಬಗ್ಗದೆ
ಮುಖ ಮರೆಮಾಚಿ ನಿಂತೆಯಾ?

ಮುಂಜಾವ ಭಾಸ್ಕರನು ಬೆಳ್ಳಿರಥವೇರಿ
ಚೆಲ್ಲಿಹನು ಅವನ ಹೊನ್ನ ಬೆಳಕನ್ನು
ಚೆಲುವ ತೋರದೆ ಹೋಗುವೆಯಾ?

ರವಿ ರಶ್ಮಿಯನ್ನು ಸ್ವೀಕರಿಸದೆ
ತಮವನ್ನೇ ತನ್ನಲ್ಲಿ ಆವರಿಸಿಕೊಂಡು
ಯಾರಿಗಾಗಿ ಅರಳುತ್ತಿರುವೆಯಾ?

ನನಗಾಗಿ ನೀ ಕಾದಿದ್ದರೆ ಸಾಕು
ಬೇರೇನು ನಿನ್ನಿಂದ ಬೇಡೆನಗೆ
ಪ್ರೀತಿಗಾಗಿ ಹುಡುಕಿದೆ ನೀಡುವೆಯಾ?

ನೆಲೆಸುವೆ ಹೃದಯದಲ್ಲಿ ಸ್ವೀಕರಿಸುವೆಯಾ?

********************************

About The Author

4 thoughts on “ಸ್ವೀಕರಿಸುವೆಯಾ?”

Leave a Reply

You cannot copy content of this page

Scroll to Top